ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಭಾರತದಲ್ಲಿ ವಾಹನಗಳನ್ನು ಮಾಡಿಫೈ ಮಾಡುವುದು ಕಾನೂನು ಬಾಹಿರ. ವಾಹನಗಳನ್ನು ಮಾಡಿಫೈ ಮಾಡಿರುವವರು ಪೊಲೀಸರ ಕೈಗೆ ಸಿಕ್ಕಿ ಬಿದ್ದರೆ ದಂಡ ತೆರುವುದು ಖಚಿತ. ಸುಪ್ರೀಂ ಕೋರ್ಟ್ ಆದೇಶದನ್ವಯ ಕಾರುಗಳ ವಿಂಡೋಗಳಲ್ಲಿ ಸನ್ ಫಿಲ್ಮ್ ಅಳವಡಿಸುವಂತಿಲ್ಲ. ಪೊಲೀಸರು ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಲೇ ಇದ್ದರೂ ಕೆಲವರು ತಮ್ಮ ಕಾರುಗಳಲ್ಲಿರುವ ಸನ್ ಫಿಲ್ಮ್ ಗಳನ್ನು ತೆಗೆದೇ ಇಲ್ಲ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ನೀಡಿದ್ದು, ಕಾರುಗಳಲ್ಲಿ ಅಳವಡಿಸಿರುವ ಸನ್ ಫಿಲ್ಮ್ ಗಳನ್ನು ತೆಗೆದು ಹಾಕಲು 60 ದಿನಗಳ ಕಾಲಾವಕಾಶ ನೀಡಿದೆ. ಈ ಗಡುವಿನೊಳಗೆ ಕಾರು ಮಾಲೀಕರು ಸನ್ ಫಿಲ್ಮ್ ಅನ್ನು ತೆಗೆದು ಹಾಕಬೇಕು. ಇಲ್ಲದಿದ್ದರೇ ಸನ್ ಫಿಲ್ಮ್ ಹೊಂದಿರುವ ವಾಹನಗಳನ್ನು ಜಪ್ತಿ ಮಾಡುವಂತೆ ಮದ್ರಾಸ್ ಹೈಕೋರ್ಟ್ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಆದೇಶ ನೀಡಿದೆ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಕಾರುಗಳಲ್ಲಿ ಸನ್ ಫಿಲ್ಮ್ ಬಳಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಈಗ ಮದ್ರಾಸ್ ಹೈಕೋರ್ಟ್ ಸಹ ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಇತ್ತೀಚಿಗೆ ಗುಜರಾತ್ ನಲ್ಲಿ ಸನ್ ಫಿಲ್ಮ್ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಹಲವಾರು ಜನರು ತಮ್ಮ ಕಾರುಗಳ ವಿಂಡೋ ಹಾಗೂ ಗಾಜುಗಳ ಮೇಲೆ ಸನ್ ಫಿಲ್ಮ್ ಅಳವಡಿಸುತ್ತಾರೆ. ಇಂತಹ ಕಾರುಗಳ ವಿರುದ್ಧ ಸೂರತ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಸೆಪ್ಟೆಂಬರ್ 2 ರಂದು ಆರಂಭವಾದ ಈ ವಿಶೇಷ ಕಾರ್ಯಾಚರಣೆ ಸೆಪ್ಟೆಂಬರ್ 6 ರಂದು ಕೊನೆಗೊಂಡಿತು. ಈ ಕಾರ್ಯಾಚರಣೆಯಲ್ಲಿ ಒಟ್ಟು 2,531 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕಾರುಗಳ ಕಿಟಕಿ ಹಾಗೂ ಗಾಜುಗಾಲ ಮೇಲೆ ಸನ್ ಫಿಲ್ಮ್ ಅಳವಡಿಸಲಾಗಿತ್ತು. ಸೂರತ್ ಪೊಲೀಸರು ಆ ಕಾರುಗಳ ಮಾಲೀಕರಿಗೆ ಪೊಲೀಸರು ದಂಡವನ್ನು ಸಹ ವಿಧಿಸಿದ್ದಾರೆ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ವರದಿಗಳ ಪ್ರಕಾರ ಸೂರತ್ ಪೊಲೀಸರು ಒಟ್ಟು ರೂ. 12.65 ಲಕ್ಷಗಳನ್ನು ದಂಡದ ಮೂಲಕ ಸಂಗ್ರಹಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳ ಆದೇಶದ ಮೇರೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೂರತ್‌ನ ಹಲವು ಕಾರು ಮಾಲೀಕರು ತಮ್ಮ ಕಾರುಗಳಲ್ಲಿರುವ ಸನ್ ಫಿಲ್ಮ್ ಗಳನ್ನು ತೆಗೆದು ಹಾಕಿಸುವ ತರಾತುರಿಯಲ್ಲಿದ್ದಾರೆ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಈ ವಿಶೇಷ ಕಾರ್ಯಾಚರಣೆ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಈ ಕಾರ್ಯಾಚರಣೆ ನಡೆದ ಐದು ದಿನಗಳಲ್ಲಿ, ಪೊಲೀಸರು ಸನ್ ಫಿಲ್ಮ್ ಹೊಂದಿರುವ 2,531 ಕಾರುಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಆ ಕಾರುಗಳ ಮಾಲೀಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಸನ್ ಫಿಲ್ಮ್ ಹೊಂದಿರುವ ಕಾರುಗಳ ವಿರುದ್ಧ ನಮ್ಮ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಹೇಳಿದರು.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಈ ವಿಶೇಷ ವಾಹನ ಕಾರ್ಯಾಚರಣೆಯನ್ನು ಇತ್ತೀಚಿಗೆ ನಡೆದ ಅಪಘಾತದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿತ್ತು ಎಂಬುದು ಗಮನಾರ್ಹ. ಅಪಘಾತ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ಅಪಘಾತದಲ್ಲಿ ಭಾಗಿಯಾಗಿದ್ದ ಕಾರಿನಲ್ಲಿ ಸನ್ ಫಿಲ್ಮ್ ಅಳವಡಿಸಲಾಗಿತ್ತು. ಇದರಿಂದ ಪೊಲೀಸರಿಗೆ ಕಾರಿನ ಒಳಗಿದ್ದವರನ್ನು ಸರಿಯಾಗಿ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಇದರಿಂದ ಅಪಘಾತವೆಸಗಿದ ಕಾರು ಚಾಲಕ ತಪ್ಪಿಸಿ ಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಸೂರತ್ ನಗರ ಪೊಲೀಸರು ಸನ್ ಫಿಲ್ಮ್ ಅಳವಡಿಸಿರುವ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಭಾರತದಲ್ಲಿ ಸನ್ ಫಿಲ್ಮ್ ಬಳಕೆಯನ್ನು ನಿಷೇಧಿಸಲಾಗಿದೆ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಕಾರುಗಳ ಒಳಗೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಸನ್ ಫಿಲ್ಮ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸನ್ ಫಿಲ್ಮ್ ಹೊಂದಿರುವ ಕಾರುಗಳ ಒಳಗೆ ಏನಾಗುತ್ತದೆ ಎಂಬುದು ಹೊರಗಿರುವವರಿಗೆ ತಿಳಿಯುವುದಿಲ್ಲ. ಸನ್ ಫಿಲ್ಮ್ ಬಳಕೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ವರದಾನವಾಗಿತ್ತು ಎಂದು ಹೇಳಬಹುದು.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ಸಮಾಜ ಘಾತುಕರು ಕಾರುಗಳಲ್ಲಿ ಸನ್ ಫಿಲ್ಮ್ ಅಳವಡಿಸಿಕೊಂಡು ಹೆಚ್ಚು ಹೆಚ್ಚು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಕಾರುಗಳಲ್ಲಿ ಸನ್ ಫಿಲ್ಮ್ ಬಳಕೆಯನ್ನು ನಿಷೇಧಿಸಿತು. ಆದರೂ ಹಲವಾರು ಜನರು ಇನ್ನೂ ಸನ್ ಫಿಲ್ಮ್‌ಗಳನ್ನು ಬಳಸುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.

ಕಾರುಗಳಲ್ಲಿರುವ ಸನ್ ಫಿಲ್ಮ್ ತೆಗೆಯುವಂತೆ ಆದೇಶ ನೀಡಿದ ಹೈಕೋರ್ಟ್

ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಸಹ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ 2019 ರ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆಯ ಅನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಕೆಲವೊಮ್ಮೆ ಸಂಚಾರಿ ಪೊಲೀಸರು ವಿಧಿಸುವ ದಂಡದ ಮೊತ್ತವೇ ವಾಹನಗಳ ಬೆಲೆಗಿಂತ ಹೆಚ್ಚಾಗಿರುತ್ತದೆ ಎಂಬುದು ಗಮನಾರ್ಹ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Madras high court orders traffic cops to remove sun film from cars details
Story first published: Friday, September 17, 2021, 19:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X