ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಹೆದ್ದಾರಿಯಲ್ಲಿ ವೇಗ ಹೆಚ್ಚಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ಈ ಅಧಿಸೂಚನೆಯಲ್ಲಿ, ಹೆದ್ದಾರಿಗಳಲ್ಲಿ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸಬಹುದು ಎಂದು ಹೇಳಲಾಗಿತ್ತು. ಮದ್ರಾಸ್ ಹೈಕೋರ್ಟ್ 2018 ರ ಏಪ್ರಿಲ್ 6 ರಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದು ಪಡಿಸಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಹೆದ್ದಾರಿಯಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 120 ಕಿಮೀಗಳಿಗೆ ಹೆಚ್ಚಿಸುವ ಅಧಿಸೂಚನೆಗೆ ಸಂಬಂಧಿಸಿದಂತೆ ಹೈ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇದರಲ್ಲಿ ನ್ಯಾಯಾಲಯವು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದರೂ ವಾಹನಗಳ ವೇಗ ಹೆಚ್ಚಳಕ್ಕೆ ಅವಕಾಶ ನೀಡುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಕಳೆದ ಕೆಲವು ವರ್ಷಗಳಿಂದ ವಾಹನಗಳ ಎಂಜಿನ್ ತಂತ್ರಜ್ಞಾನ ಹಾಗೂ ರಸ್ತೆ ಮೂಲ ಸೌಕರ್ಯದಲ್ಲಿ ಗಣನೀಯ ಸುಧಾರಣೆಯಾಗಿದ್ದರೂ, ರಸ್ತೆ ಸುರಕ್ಷತಾ ನಿಯಮಗಳನ್ನು ಇನ್ನೂ ಸಂಪೂರ್ಣವಾಗಿ ಪಾಲಿಸುತ್ತಿಲ್ಲ. ಈ ನಿಯಮಗಳ ಪಾಲನೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿ ಅಂಶಗಳ ಪ್ರಕಾರ ರಸ್ತೆ ಅಪಘಾತಳಿಗೆ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡುವುದೇ ಪ್ರಮುಖ ಕಾರಣವೆಂದು ಹೇಳಲಾಗಿದೆ. ರಸ್ತೆ ಅಪಘಾತಗಳಿಗೆ ಅತಿ ವೇಗವೇ ಪ್ರಮುಖ ಕಾರಣ ಎಂದು ತಿಳಿದಿರುವ ನಾವು ರಸ್ತೆಗಳಲ್ಲಿ ಜನರ ಸುರಕ್ಷತೆ ಬಗ್ಗೆ ರಾಜಿ ಮಾಡಿಕೊಳ್ಳುವ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ನ್ಯಾಯಪೀಠ ಹೇಳಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಇದನ್ನು ಹೇಳಿದ ನಂತರ ನ್ಯಾಯಾಲಯವು 2018ರ 6 ರಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದು ಪಡಿಸಿತು. ದಂತ ವೈದ್ಯರೊಬ್ಬರು ಅತಿಯಾದ ವೇಗದಿಂದ ಗಾಯಗೊಂಡಿದ್ದರು ಈ ಪ್ರಕರಣದ ಬಗ್ಗೆ ಉಲ್ಲೇಖಿಸಿದ ಹೈ ಕೋರ್ಟ್ ಅವರ ಬೆನ್ನು ಹುರಿಗೆ ಗಂಭೀರ ಗಾಯವಾಗಿದ್ದು ತನ್ನ ಜೀವನದುದ್ದಕ್ಕೂ ಅವರು ಇತರರ ಮೇಲೆ ಅವಲಂಬಿತರಾಗಬೇಕಾಗಿದೆ ಎಂದು ಹೇಳಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಮದ್ರಾಸ್ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಿಸಿಕೊಂಡು ಆರ್ಟಿಕಲ್ 226 ರ ಅಡಿಯಲ್ಲಿ ಈ ಅಧಿಸೂಚನೆಯನ್ನು ರದ್ದು ಪಡಿಸಿ ಮಹತ್ವದ ತೀರ್ಪು ನೀಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ 2019 ರಲ್ಲಿ ದೇಶದಲ್ಲಿ ಒಟ್ಟು 4,49,002 ರಸ್ತೆ ಅಪಘಾತಗಳು ವರದಿಯಾಗಿವೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಈ ಪೈಕಿ 3,19,028 ಅಂದರೆ 71% ನಷ್ಟು ರಸ್ತೆ ಅಪಘಾತಗಳು ವಾಹನಗಳ ಅತಿ ವೇಗದಿಂದ ಸಂಭವಿಸಿವೆ. ಪ್ರತಿ ವರ್ಷ ದೇಶದಲ್ಲಿ ಸುಮಾರು 1.5 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಪ್ರಮಾಣವು ವಿಶ್ವದಲ್ಲೇ ಅತಿ ಹೆಚ್ಚು. ರಸ್ತೆ ಅಪಘಾತಗಳಲ್ಲಿ ಗಂಭೀರ ಗಾಯಗಳಿಂದಾಗಿಯೇ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಹೆಚ್ಚಿನ ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಸಂಭವಿಸುತ್ತವೆ. ಕಳಪೆ ರಸ್ತೆ ವಿನ್ಯಾಸ, ಅಜಾಗರೂಕ ಚಾಲನೆ, ಸಂಚಾರ ನಿಯಮಗಳ ಉಲ್ಲಂಘನೆ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣಗಳಾಗಿವೆ. ಅಂಕಿ ಅಂಶಗಳ ಪ್ರಕಾರ ತಮಿಳುನಾಡಿನಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತವೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ತಮಿಳುನಾಡಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಅಪಘಾತ ಪೀಡಿತ ತಾಣಗಳು ಅಥವಾ ಬ್ಲಾಕ್ ಸ್ಪಾಟ್ ಗಳಿವೆ.ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಅಪಘಾತ ಸಂಭವಿಸುವ ಪಟ್ಟಿಯಲ್ಲಿ ಪಶ್ಚಿಮ ಬಂಗಾಳವು ಎರಡನೇ ಸ್ಥಾನದಲ್ಲಿದ್ದರೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ತಿದ್ದುಪಡಿ ಮಾಡಿ 2019ರಲ್ಲಿ ಜಾರಿಗೊಳಿಸಲಾದ ಹೊಸ ಮೋಟಾರು ವಾಹನ ಕಾಯ್ದೆಯು ಸಹ ಸಂಚಾರ ನಿಯಮಗಳ ಉಲ್ಲಂಘನೆಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸುತ್ತದೆ. ಹೊಸ ಮೋಟಾರು ವಾಹನ ಕಾಯ್ದೆಯು ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗಿದೆ ಎಂದು ಕೇಂದ್ರ ಸಾರಿಗೆ ಇಲಾಖೆ ಹೇಳಿಕೊಂಡಿದೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಕೇಂದ್ರ ಸಾರಿಗೆ ಇಲಾಖೆಯು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಬಿಡುಗಡೆಯಾಗುವಎಲ್ಲಾ ವಾಹನಗಳಿಗೆ ಕೆಲವು ಮಾನದಂಡಗಳನ್ನು ನಿಗದಿ ಪಡಿಸಿದೆ. ಈಗ ಬಿಡುಗಡೆಯಾಗುತ್ತಿರುವ ಎಲ್ಲಾ ವಾಹನಗಳು ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಮಾನದಂಡಗಳ ಅನುಸಾರವಾಗಿಯೇ ತಯಾರಾಗುತ್ತಿವೆ.

ವಾಹನಗಳ ಗರಿಷ್ಠ ವೇಗದ ಮಿತಿಯ ಅಧಿಸೂಚನೆಯನ್ನು ರದ್ದು ಪಡಿಸಿದ ಹೈ ಕೋರ್ಟ್

ಈ ಮಾನದಂಡಗಳಲ್ಲಿ ಸುರಕ್ಶತಾ ಫೀಚರ್ ಗಳ ಕಡ್ಡಾಯ ಅಳವಡಿಕೆಯು ಸಹ ಸೇರಿದೆ. ಕೇಂದ್ರ ಸರ್ಕಾರವು ಇನ್ನು ಮುಂದೆ ಬಿಡುಗಡೆಯಾಗುವ ಎಲ್ಲಾ ಕಾರುಗಳಲ್ಲಿ ಕಡ್ಡಾಯವಾಗಿ ಫ್ರಂಟ್ ಏರ್ ಬ್ಯಾಗ್ ಗಳನ್ನು ನೀಡಬೇಕೆಂದು ವಾಹನ ತಯಾರಕ ಕಂಪನಿಗಳಿಗೆ ಸೂಚಿಸಿದೆ. ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Madras high court quashes vehicles speed limit increase notification details
Story first published: Wednesday, September 15, 2021, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X