ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸಲು ಹಲವಾರು ಕಂಪನಿಯ ಬಸ್ಸುಗಳಿವೆ. ಈ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಕೆಲವು ಬಸ್ಸುಗಳಲ್ಲಿ ಪ್ರಯಾಣಿಕರಿಗೆ ಎಸಿ, ಸ್ಲೀಪರ್ ಸೌಲಭ್ಯ ನೀಡುವ ಭರವಸೆ ನೀಡಿ ಅವುಗಳ ದರವನ್ನು ವಸೂಲಿ ಮಾಡಲಾಗಿರುತ್ತದೆ.

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಹೀಗೆ ಪ್ರಯಾಣಿಕರಿಂದ ದರವನ್ನು ವಸೂಲಿ ಮಾಡುವ ಕೆಲವು ಸಂಸ್ಥೆಯ ಬಸ್ಸುಗಳು ಕಡೆಗೆ ತಾವು ತಿಳಿಸಿದ ಸೌಲಭ್ಯವನ್ನು ನೀಡುವುದಿಲ್ಲ. ಸೌಲಭ್ಯಗಳು ದೊರೆಯುತ್ತವೆಂದು ಹಣ ಪಾವತಿಸುವ ಪ್ರಯಾಣಿಕರು, ಅವುಗಳು ಸಿಗದೇ ಇದ್ದಾಗ ಗೊಣಗಾಡಿಕೊಂಡು ಸುಮ್ಮನಾಗುತ್ತಾರೆ.

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಇನ್ನು ಕೆಲವರು ಸೌಲಭ್ಯ ನೀಡದ ಬಸ್ಸುಗಳ ಮೇಲೆ ಕೇಸ್ ಹಾಕಿ ಪಾಠ ಕಲಿಸುತ್ತಾರೆ. ಈಗ ಇಂತಹುದೇ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಸತೀಶ್ ರತನ್‍‍ಲಾಲ್ ದಯಾಮರವರು ಈ ವರ್ಷದ ಜುಲೈ 12ರಂದು ತಮ್ಮ ಸ್ನೇಹಿತನ ಜೊತೆ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಶಿವಶಶಿ ಬಸ್ಸಿನಲ್ಲಿ ಔ‍‍ರಂಗಬಾದಿಗೆ ಹೊರಟಿದ್ದಾರೆ.

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ದಯಾಮರವರ ಮೊಬೈಲ್ ಫೋನಿನಲ್ಲಿ ಚಾರ್ಜ್ ಇರದ ಕಾರಣ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಚಾರ್ಜಿಂಗ್ ಪಾಯಿಂಟ್ ನೀಡುವಂತೆ ಬಸ್ಸಿನ ಕಂಡಕ್ಟರ್ ಅನ್ನು ಕೇಳಿಕೊಂಡಿದ್ದಾರೆ. ಆದರೆ ಬಸ್ಸಿನ ಕಂಡಕ್ಟರ್ ಪ್ರತಿಕ್ರಿಯೆ ನೀಡಿಲ್ಲ.

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ನಂತರ ದಯಾಮರವರಿಗೆ ಈ ಬಸ್ಸಿನಲ್ಲಿ ಚಾರ್ಜಿಂಗ್ ಪಾಯಿಂಟ್ ಇಲ್ಲದಿರುವುದು ಕಂಡು ಬಂದಿದೆ. ಇದರ ಜೊತೆಗೆ ಬಸ್ಸಿನ ಏರ್ ಕಂಡಿಷನ್ ಸಹ ಕಾರ್ಯನಿರ್ವಹಿಸುತ್ತಿರಲಿಲ್ಲ. ದಯಾಮರವರಿಗೆ ಬಸ್ಸಿನವರು ಮೋಸ ಮಾಡಿರುವುದು ಕಂಡು ಬಂದಿದೆ.

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ತಕ್ಷಣವೇ ಅವರು ಬಸ್ಸಿನ ಕಂಡಕ್ಟರ್ ಹಾಗೂ ಡ್ರೈವರ್‍‍ನನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಲು ಬಸ್ಸಿನಲ್ಲಿರುವ ಕಂಪ್ಲೇಂಟ್ ರಿಜಿಸ್ಟರ್ ನೀಡುವಂತೆ ಕೇಳಿದ್ದಾರೆ. ಆದರೆ ಕಂಡಕ್ಟರ್ ಹಾಗೂ ಡ್ರೈವರ್ ಇಬ್ಬರೂ ಈ ರಿಜಿಸ್ಟರ್ ಅನ್ನು ದಯಾಮರವರಿಗೆ ನೀಡಿಲ್ಲ.

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಬಸ್ ತಮಗೆ ಮೋಸ ಮಾಡಿರುವುದನ್ನು ಅರಿತ ದಯಾಮರವರು ಜಾಲ್ನ ಜಿಲ್ಲಾ ಗ್ರಾಹಕ ನ್ಯಾಯಲಯಕ್ಕೆ ದೂರು ಸಲ್ಲಿಸಿದ್ದಾರೆ. ತಮಗೆ ಆದ ತೊಂದರೆಗೆ ಹಾಗೂ ಮಾನಸಿಕ ಹಿಂಸೆಗೆ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ದಯಾಮರವರು ತಮ್ಮ ದೂರಿನಲ್ಲಿ ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಯ ಜಾಹೀರಾತಿನಲ್ಲಿ ಸಂಸ್ಥೆಯ ಬಸ್ಸುಗಳಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಹಾಗೂ ಎ‍‍ಸಿ ಸೌಲಭ್ಯವನ್ನು ನೀಡುವುದಾಗಿ ತಿಳಿಸಿ ಅವುಗಳಿಗೆ ದರ ವಿಧಿಸಲಾಗಿತ್ತೆಂದು ತಿಳಿಸಿದ್ದರು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಆದರೆ ಈ ಸೌಲಭ್ಯಗಳಿಗಾಗಿ ಹಣ ಪಡೆದರೂ, ಈ ಸೌಲಭ್ಯಗಳನ್ನು ನೀಡಿಲ್ಲವೆಂದು ದೂರಿನಲ್ಲಿ ತಿಳಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಮಹಾರಾಷ್ಟ್ರದ ಜಾಲ್ನ ಜಿಲ್ಲಾ ಗ್ರಾಹಕ ನ್ಯಾಯಲಯವು ರೂ.5,000ಗಳನ್ನು ದಯಾಮರವರಿಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಚಾರ್ಜಿಂಗ್ ಸೌಲಭ್ಯ ನೀಡದ ಬಸ್ಸಿಗೆ ಬಿತ್ತು 5,000 ದಂಡ

ಜಾಹೀರಾತಿನಲ್ಲಿ ಈ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿ, ನಂತರ ನೀಡದೇ ಇರುವ ಕಾರಣಕ್ಕೆ ದಂಡ ವಿಧಿಸುತ್ತಿರುವುದಾಗಿ ತಿಳಿಸಿದೆ. ಜಾಲ್ನದ ಬಸ್ ಡಿಪೋ 30 ದಿನಗಳ ಒಳಗೆ ದಯಾಮರವರಿಗೆ ಪರಿಹಾರದ ಹಣವನ್ನು ನೀಡಬೇಕೆಂದು ಗ್ರಾಹಕ ನ್ಯಾಯಲಯವು ಆದೇಶ ನೀಡಿದೆ.

Most Read Articles

Kannada
English summary
Maharashtra govt bus passenger gets rs5000 compensation for not having ac and mobile charging in bus - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more