ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಹೈಪರ್‌ಲೂಪ್ ತಂತ್ರಜ್ಞಾನವು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮುಂಬೈ ಟು ಪುಣೆ ನಡುವೆ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆ ಜಾರಿಯಾಗಲಿದೆ.

By Praveen

ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್‌ಲೂಪ್ ತಂತ್ರಜ್ಞಾನವು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮುಂಬೈ ಟು ಪುಣೆ ನಡುವೆ ಹೈಪರ್‌ಲೂಪ್ ಹೈ ಸ್ಪೀಡ್ ರೈಲು ಯೋಜನೆ ಜಾರಿಯಾಗಲಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ವಿಶ್ವದಲ್ಲೇ ಅತ್ಯಂತ ವೇಗವಾಗಿ ಚಲಿಸಬಲ್ಲ ರೈಲು ವ್ಯವಸ್ಥೆ ಎಂಬ ಹಿರಿಮೆಗೆ ಪಾತ್ರವಾಗುವ ಉದ್ದೇಶ ಹೊಂದಿರುವ ಹೈಪರ್‌ಲೂಪ್ ರೈಲು, ವಿಶ್ವದಲ್ಲೇ ಮೊದಲ ಸಂಚಾರವನ್ನು ಮುಂಬೈ ಮತ್ತು ಪುಣೆ ನಡುವೆ ನಡೆಸುವ ಸಾಧ್ಯತೆ ಇದೆ.

Recommended Video

New Maruti Swift Launch: Price; Mileage; Specifications; Features; Changes
ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಇಂಥದ್ದೊಂದು ರೈಲು ಸಂಚಾರ ವ್ಯವಸ್ಥೆ ಆರಂಭಿಸುವ ಕುರಿತು ಸಾಧ್ಯಾಸಾಧ್ಯತೆ ಬಗ್ಗೆ ಮಹಾರಾಷ್ಟ್ರ ಸರ್ಕಾರ ಮತ್ತು ಹೈಪರ್‌'ಲೂಪ್‌'ನ ಮಾತೃಸಂಸ್ಥೆ ವರ್ಜಿನ್ ಗ್ರೂಪ್, ಭಾನುವಾರ ಒಪ್ಪಂದಕ್ಕೆ ಸಹಿ ಹಾಕಿವೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಇದರ ಮೊದಲ ಹಂತವಾಗಿ ಆಯ್ದ ಮಾರ್ಗದಲ್ಲಿ ಮಾದರಿ ಟ್ರ್ಯಾಕ್ ನಿರ್ಮಿಸಲಾಗುವುದು. ಈ ರೈಲು ವ್ಯವಸ್ಥೆ ಸಾಧ್ಯವಾದ್ರೆ ಹಾಲಿ ಮುಂಬೈ ಮತ್ತು ಪುಣೆ ನಡುವೆ ಸಂಚಾರಕ್ಕೆ ಇರುವ ಅವಧಿ 3 ಗಂಟೆಯಿಂದ 20 ನಿಮಿಷಕ್ಕೆ ಇಳಿಯಲಿದೆ. ಈ ಯೋಜನೆಗೆ ಸದ್ಯ 3.5 ಲಕ್ಷ ಕೋಟಿ ರು.ವೆಚ್ಚವಾಗುವ ನಿರೀಕ್ಷೆ ಇದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಹೈಪರ್ ಲೂಪ್ ಹೈ ಸ್ಪೀಡ್ ರೈಲು ಯೋಜನೆ ವಿಚಾರವಾಗಿ ಕೇಂದ್ರದ ಜೊತೆ ಮಾತುಕತೆ ನಡೆಸಿರುವ ವರ್ಜಿನ್ ಗ್ರೂಪ್ ಸಂಸ್ಥಾಪಕ ಬಿಬಾಬ್ ಗ್ಯಾಬ್ರಿಯಲ್, ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಮಹತ್ತರ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಇನ್ನು 2013ರಲ್ಲಿ ಟೆಸ್ಲಾ ಸ್ಥಾಪಕರಾಗಿರುವ ಎಲಾನ್ ಮಸ್ಕ್ ಮೊದಲ ಬಾರಿಗೆ ಹೈಪರ್ ಲೂಪ್ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದರು. ಆದ್ರೆ ಇದೀಗ ಹೈಪರ್ ಲೂಪ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಜಗತ್ತಿನ ಪ್ರಮುಖ ದೇಶಗಳು ಯೋಜನೆ ರೂಪಿಸುತ್ತಿವೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಇನ್ನೊಂದು ಪ್ರಮುಖ ವಿಚಾರವೇನೆಂದರೆ ಹೈಪರ್ ಲೂಪ್ ಸ್ಪೀಡ್ ರೈಲು, ವಿಮಾನಗಿಂತಲೂ ಅತಿ ವೇಗವಾಗಿ ಸಂಚರಿಸುತ್ತದೆ. ಹೀಗಾಗಿ ಯೋಜನೆ ಜಾರಿಗೆ ಬಂದಲ್ಲಿ ಪುಣೆ ಟು ಮುಂಬೈ ಹಾಗೂ ಬೆಂಗಳೂರು ಟು ಚೆನ್ನೈ ಪ್ರಯಾಣ ಕೆಲವೇ ನಿಮಿಷದಲ್ಲಿ ಸಾಧ್ಯವಾಗಲಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ವಿಮಾನ, ರೈಲು, ಹಡಗು ಮತ್ತು ಬಸ್ ಸಾರಿಗೆ ನಂತರ ಹೈಪರ್ ಲೂಪ್ ಅನ್ನು ಭವಿಷ್ಯದ 5ನೇ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿಸಲಾಗಿದೆ. ಹೀಗಾಗಿ ಬೃಹತ್ ನಗರಗಳಲ್ಲಿ ಹೈಪರ್ ಲೂಪ್ ತಂತ್ರಜ್ಞಾನ ಜಾರಿಯಾದಲ್ಲಿ ಖಂಡಿತವಾಗಿಯೂ ಯಶಸ್ವಿಯಾಗಲಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಇನ್ನೊಂದು ಪ್ರಮುಖ ವಿಚಾರವನ್ನು ನಾವು ತಿಳಿದುಕೊಳ್ಳಲೇಬೇಕು. ಯಾಕೇಂದ್ರೆ ಇದೊಂದು ಅತ್ಯಂತ ಕಡಿಮೆ ವೆಚ್ಚದಾಯಕ ಯೋಜನೆಯಾಗಿದ್ದು, ಹೈ ಸ್ಪೀಡ್ ರೈಲು ಯೋಜನೆಗಿಂತ 10 ಪಟ್ಟು ಖರ್ಚು ಕಡಿಮೆ ಎಂದರೆ ನೀವು ನಂಬಲೇಬೇಕು.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಕಡಿಮೆ ಭಾರದ ಸ್ಟೀಲ್ ಟ್ಯೂಬ್‌ನಲ್ಲಿ ಲಗತ್ತಿಸಲಾಗಿರುವ ಪೊಡ್ ಎನ್ನುವ ಕ್ಯಾಪ್ಸುಲ್ ಮುಖಾಂತರ ಈ ಹೈ ಸ್ಪೀಡ್ ರೈಲು ಸಂಚರಿಸಲಿದ್ದು, ನಿಮಗೆ ಪ್ರಯಾಣದ ಆಯಾಸವೇ ಆಗುವುದಿಲ್ಲ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಇನ್ನು ಭೂಕಂಪಗಳಂತಹ ನೈಸರ್ಗಿಕ ವಿಪತ್ತುಗಳನ್ನು ಎದುರಿಸ ಬಲ್ಲ ಆತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿರುವ ಹೈಪರ್ ಲೂಪ್, ಕ್ಯಾಪ್ಸುಲ್‌ಗಳ ಮೂಲಕ ಪರಸ್ಪರ ಸಂಘರ್ಷಣೆಯಾಗದಂತೆ ನೋಡಿಕೊಳ್ಳಲಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಪ್ರತಿ ಪೊಡ್ ನಡುವೆ 8 ಕಿಲೋ ಮೀಟರ್ ಅಂತರವಿರಲಿದ್ದು, ಒಂದು ಪೊಡ್‌ನಿಂದ ಇನ್ನೊಂದು ಪೊಡ್‌ಗೆ ಕೇವಲ 30 ಸೆಕೆಂಡುಗಳಷ್ಟೇ ವ್ಯತ್ಯಾಸವಿರಲಿದೆ. ಜೊತೆಗೆ ಸೋಲಾರ್‌ನಿಂದಲೇ ನಿಯಂತ್ರಿಸಲ್ಪಡುವ ಹೈಪರ್‌ಲೂಪ್ ರೈಲು, ಗಂಟೆಗೆ 1100 ಕೀ.ಮೀ ವೇಗದಲ್ಲಿ ಚಲಿಸಲಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಮಹತ್ತರ ಯೋಜನೆ ಕುರಿತು ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿರುವ ರೈಲ್ವೆ ಸಚಿವ ಸುರೇಶ್ ಪ್ರಭು, ಯೋಜನೆಯ ಜಾರಿ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿಯೇ ಯೋಜನೆ ಜಾರಿ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಈ ಬೃಹತ್ ಯೋಜನೆಯ ಹೈಪರ್ ಲೂಪ್ ಹಳಿ ನಿರ್ಮಾಣಕ್ಕೆ ಪ್ರತಿ ಕಿಲೋ ಮೀಟರ್‌ಗೆ 50 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಅಂದಾಜಿಸಲಾಗಿದೆ. ಪ್ರತಿಯೊಂದು ಪೊಡ್‌ನಲ್ಲಿ 28ರಿಂದ 40 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದ್ದು, ದಿನ ಒಂದಕ್ಕೆ 67 ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುವ ಯೋಜನೆಯಿದೆ.

ಸದ್ಯದಲ್ಲೇ ಮುಂಬೈ-ಪುಣೆ ನಡುವೆ ದೇಶದ ಮೊದಲ ಹೈಪರ್‌ಲೂಪ್ ರೈಲು..

ಒಂದು ವೇಳೆ ವೇಳೆ ಹೈಪರ್ ಲೂಪ್ ಯೋಜನೆ ಭಾರತದಲ್ಲಿ ನನಸಾದ್ದಲ್ಲಿ ಮುಂಬೈ ಟು ಪುಣೆ ಮತ್ತು ಬೆಂಗಳೂರು ಟು ಚೆನ್ನೈ ನಡುವಿನ ಪ್ರಯಾಣದ ಸಮಯ ಕೇವಲ 30 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಜೊತೆಗೆ ಭಾರತದಲ್ಲಿ ಜನಪ್ರಿಯತೆ ಕೂಡಾ ಪಡೆಯಲಿದೆ.

Most Read Articles

Kannada
Read more on hyperloop technology
English summary
Maharashtra government has signed Mumbai- Pune hyperloop projetc agreement with Virgin Group.
Story first published: Monday, February 19, 2018, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X