ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರಾ ಅವರು ಕಾರು ಉತ್ಪಾದನೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಮಾತನಾಡಿದ್ದು, ಭಾರತೀಯ ಆಟೋ ಉದ್ಯಮಕ್ಕೆ ಸೆಮಿಕಂಡಕ್ಟರ್ ಕೊರತೆಯು ಸಾಕಷ್ಟು ಹಿನ್ನಡೆ ಉಂಟುಮಾಡುತ್ತಿರುವ ಬಗೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಮಹೀಂದ್ರಾ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಯ ವಿತರಣೆ ಆಗುತ್ತಿರುವ ವಿಳಂಬದ ಬಗೆಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದ್ದು, ನಾನು ಕೂಡಾ ಎಕ್ಸ್‌ಯುವಿ700 ಎಸ್‌ಯುವಿ ಮಾದರಿಗಾಗಿ ಕಾಯುತ್ತಿರುವುದಾಗಿ ಟ್ವಿಟರ್ ನಲ್ಲಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೊಸ ಕಾರಿಗೆ ಹೆಚ್ಚಿನ ಬೇಡಿಕೆಯಿದ್ದರೂ ಕೂಡಾ ಕಾರು ಉತ್ಪಾದನೆಗೆ ಮುಖ್ಯವಾಗಿ ಬೇಕಿರುವ ಸೆಮಿಕಂಡಕ್ಟರ್ ಕೊರತೆಯು ಕಾರು ವಿತರಣೆ ಹೆಚ್ಚಿಸಲು ಅಡ್ಡಿ ಉಂಟು ಮಾಡುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಎಕ್ಸ್‌ಯುವಿ700 ಮಾದರಿಯು ಇದುವರೆಗೆ ಸುಮಾರು 1.10 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ ಬುಕಿಂಗ್ ಪಡೆದುಕೊಂಡಿದ್ದು, ಕಂಪನಿಯು ಪ್ರತಿ ತಿಂಗಳು ನಾಲ್ಕರಿಂದ ನಾಲ್ಕೂವರೆ ಸಾವಿರ ಯುನಿಟ್ ಮಾತ್ರ ವಿತರಣೆ ಮಾಡುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಹೀಗಾಗಿ ಹೊಸ ಎಕ್ಸ್‌‌ಯುವಿ700 ಖರೀದಿ ಬಯಸುವ ಗ್ರಾಹಕರು ಕನಿಷ್ಠ ಒಂದೂವರೆ ವರ್ಷಗಳ ಕಾಯಬೇಕಿದ್ದು, ಬುಕಿಂಗ್ ಮಾಡಿರುವ ಗ್ರಾಹಕರು ಆನಂದ್ ಮಹೀಂದ್ರಾ ಅವರನ್ನು ಟ್ವಿಟರ್ ಮೂಲಕ ಹೊಸ ಕಾರಿನ ಉತ್ಪಾದನೆ ಹೆಚ್ಚಳಕ್ಕೆ ಮನವಿ ಮಾಡುತ್ತಿದ್ದಾರೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಆದರೆ ಉತ್ಪಾದನೆ ಹೆಚ್ಚಳಕ್ಕೆ ಮುಖ್ಯವಾಗಿ ಬೇಕಿರುವ ಸೆಮಿಕಂಡಕ್ಟರ್ ಪೂರೈಕೆಯಲ್ಲಿನ ನಿಧಾನಗತಿಯ ಕುರಿತು ಸಂಭಾವ್ಯ ಗ್ರಾಹಕರಿಗೆ ಮಾಹಿತಿ ಹಂಚಿಕೊಂಡಿದ್ದು, ವ್ಯಯಕ್ತಿಕ ಬಳಕೆಗಾಗಿ ನಮ್ಮ ಕುಟುಂಬ ಸಹ ಬುಕಿಂಗ್‌ನೊಂದಿಗೆ ಹೊಸ ಕಾರು ಖರೀದಿಗಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಆನಂದ್ ಮಹೀಂದ್ರಾ ಅವರು ಕಂಪನಿಯ ಮುಖ್ಯಸ್ಥರಾದರೂ ಸಹ ತಮ್ಮ ವ್ಯಯಕ್ತಿಯ ಬಳಕೆ ಮಾದರಿಗಾಗಿ ಸಾಮಾನ್ಯ ಗ್ರಾಹಕರಂತೆಯೇ ಬುಕಿಂಗ್ ಮೂಲಕ ಹೊಸ ಕಾರನ್ನು ಖರೀದಿಸುತ್ತಿದ್ದು, ಸೆಮಿಕಂಡಕ್ಟರ್ ಪೂರೈಕೆ ಹೆಚ್ಚಳವನ್ನು ಎದುರುನೋಡುತ್ತಿದ್ದಾರೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಕೋವಿಡ್ ನಂತರ ಆರ್ಥಿಕ ಬೆಳವಣಿಗೆ ಸುಧಾರಿಸುತ್ತಿರುವುದರಿಂದ ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆ ಆಟೋ ಉದ್ಯಮಕ್ಕೆ ಭಾರೀ ಹೊಡೆತ ನೀಡುತ್ತಿದ್ದು, ಹೊಸ ತಂತ್ರಜ್ಞಾನ ಪ್ರೇರಿತ ವಾಹನಗಳ ಉತ್ಪಾದನೆಗೆ ಅವಶ್ಯವಾಗಿರುವ ಎಲೆಕ್ಟ್ರಾನಿಕ್ ಚಿಪ್(ಸೆಮಿಕಂಡಕ್ಟರ್) ಕೊರತೆಯು ಜಾಗತಿಕ ಆಟೋ ಉದ್ಯಮದ ಮೇಲೆ ವ್ಯತರಿಕ್ತ ಪರಿಣಾಮ ಬೀರುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಎಲೆಕ್ಟ್ರಾನಿಕ್ ಚಿಪ್ ಕೊರತೆಯಿಂದಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಪ್ರಮುಖ ವಾಹನ ಉತ್ಪಾದನಾ ಕಂಪನಿಗಳಿಗೂ ಬಿಸಿ ತಟ್ಟಿದ್ದು, ಪ್ರಮುಖ ವಾಹನಗಳ ಉತ್ಪಾದನಾ ಪ್ರಮಾಣವು ಗಣನೀಯವಾಗಿ ಇಳಿಕೆಯಾಗಿರುವುದು ಆಟೋ ಉತ್ಪಾದನಾ ಕಂಪನಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಚೀನಿ ಮಾರುಕಟ್ಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದುಗೊಳ್ಳುತ್ತಿದ್ದ ಎಲೆಕ್ಟ್ರಾನಿಕ್ ಚಿಪ್ ಪ್ರಮಾಣವನ್ನು ಕಡಿತಗೊಳಿಸಿರುವುದರಿಂದ ಇತರೆ ದೇಶಗಳಲ್ಲಿನ ಉತ್ಪಾದನಾ ಲಭ್ಯತೆ ಆಧರಿಸಿ ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯೂ ಹೆಚ್ಚಳವಾಗುತ್ತಿದ್ದು, ಎಲೆಕ್ಟ್ರಾನಿಕ್ ಚಿಪ್‌ಗಳಿಲ್ಲದೆ ಪ್ರಮುಖ ಕಾರು ಕಂಪನಿಯು ಉತ್ಪಾದನಾ ಪ್ರಮಾಣವನ್ನು ಕಡಿತಗೊಳಿಸುತ್ತಿವೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಎಲೆಕ್ಟ್ರಾನಿಕ್ ಚಿಪ್ ಇಲ್ಲದೆ ಕಾರಿನ ಪ್ರಮುಖ ಎಲೆಕ್ಟ್ರಾನಿಕ್ ಸಾಧನಗಳನ್ನು ಜೋಡಿಸಲು ಸಾಧ್ಯವೇ ಇಲ್ಲ ಎನ್ನಬಹುದು. ಹೊಸ ಕಾರಿನಲ್ಲಿರುವ ಡಿಸ್ ಪ್ಲೇ, ಸ್ಪೀಕರ್, ಸ್ಟ್ಯಾಬಿಲಿಟಿ ಕಂಟ್ರೋಲ್, ಲೈಟಿಂಗ್ ಕಂಟ್ರೋಲ್, ಆಟೋ ಫೋಲ್ಡಿಂಗ್ ಒಆರ್‌ವಿಎಂ, ಡಿಜಿಟಲ್ ಕೀ ಮತ್ತು ಕಾರ್ ಕನೆಕ್ಟ್ ಫೀಚರ್ಸ್ ಸೇರಿ ಪ್ರಮುಖ ತಾಂತ್ರಿಕ ಸಾಧನಗಳು ಕಾರ್ಯನಿರ್ವಹಿಸಲು ಸೆಮಿ ಕಂಡಕ್ಟರ್ ಅವಶ್ಯವಾಗಿವೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಕೋವಿಡ್ ಪರಿಣಾಮ ಬಿಡಿಭಾಗಗಳ ಪೂರೈಕೆಯ ಸರಪಳಿಯಲ್ಲಿ ಆಗಿರುವ ಸಮಸ್ಯೆಯೇ ಎಲೆಕ್ಟ್ರಾನಿಕ್ ಚಿಪ್ ಕೊರತೆಗೆ ಪ್ರಮುಖ ಕಾರಣವಾಗಿದ್ದು, ಆಟೋ ಉತ್ಪಾದನಾ ಕಂಪನಿಗಳಿಗೆ ಪೂರೈಕೆಯಾಗಬೇಕಿದ್ದ ಹೆಚ್ಚಿನ ಪ್ರಮಾಣದ ಎಲೆಕ್ಟ್ರಾನಿಕ್ ಚಿಪ್ ಸ್ಟಾಕ್ ಇದೀಗ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ಗಳು ಹಾಗೂ ಇತರೆ ಎಲೆಕ್ಟ್ರಾನಿಕ್ ಸಾಧನ ಉತ್ಪಾದನೆಗೆ ಹೆಚ್ಚಿನ ಮಟ್ಟದಲ್ಲಿ ಪೂರೈಕೆಯಾಗುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಹೀಗಾಗಿ ಎಲೆಕ್ಟ್ರಾನಿಕ್ ಚಿಪ್ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬವು ವಿಶ್ವಾದ್ಯಂತ ಪ್ರಮುಖ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದ್ದು, ಭಾರತದಲ್ಲೂ ದಿನಂಪ್ರತಿ ಸಾವಿರಾರು ಕಾರುಗಳನ್ನು ಉತ್ಪಾದಿಸುವ ಪ್ರಮುಖ ಕಾರುಗಳ ಉತ್ಪಾದನೆ ಪ್ರಮಾಣದಲ್ಲಿ ಕಳೆದ ಒಂದು ವರ್ಷದಿಂದಲೂ ಸತತ ಸಮಸ್ಯೆ ಉಂಟುಮಾಡುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಎಲೆಕ್ಟ್ರಾನಿಕ್ ಚಿಪ್ ಅಗತ್ಯ ಪ್ರಮಾಣದ ಸ್ಟಾಕ್ ಇಲ್ಲದಿರುವ ಕಾರಣಕ್ಕೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳು ಕನಿಷ್ಠ ಉತ್ಪಾದನಾ ಪ್ರಕ್ರಿಯೆ ಕೈಗೊಳ್ಳುತ್ತಿದ್ದು, ಇದೇ ಕಾರಣಕ್ಕೆ ಮಹೀಂದ್ರಾ ಕಂಪನಿಯು ಕೂಡಾ ಎಕ್ಸ್‌ಯುವಿ700 ಉತ್ಪಾದನೆಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಇದಕ್ಕಾಗಿ ಮಹತ್ವದ ನಿರ್ಧಾರ ಪ್ರಕಟಿಸಿರುವ ಮಹೀಂದ್ರಾ ಕಂಪನಿಯು ಚಿಪ್ ಕೊರತೆಯ ಕಾರಣಕ್ಕೆ ಉತ್ಪಾದನೆಯನ್ನು ಕಡಿತ ಮಾಡದೆ ಚಿಪ್ ಲಭ್ಯತೆ ಆಧಾರದ ಮೇಲೆ ಹೊಸ ಕಾರಿನ ಕೆಲವು ಫೀಚರ್ಸ್‌ಗಳನ್ನು ಕೈಬಿಟ್ಟು ಹೊಸ ಕಾರನ್ನು ಮಾರಾಟವನ್ನು ಮುಂದುವರಿಸುತ್ತಿದ್ದು, ಕೈಬಿಡಲಾದ ಫೀಚರ್ಸ್‌ಗಳನ್ನು ಸೆಮಿಕಂಡಕ್ಟರ್ ಪೂರೈಕೆ ಸುಧಾರಿಸಿದ ನಂತರ ಉನ್ನತೀಕರಿಸುವುದಾಗಿ ಗ್ರಾಹಕರಲ್ಲಿ ಮನವಿ ಮಾಡಲಾಗುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಮಾಹಿತಿಗಳ ಪ್ರಕಾರ ಮಹೀಂದ್ರಾ ಕಂಪನಿಯು ಹೊಸ ಕಾರಿನಲ್ಲಿ ಎರಡನೇ ಕೀ ಆಯ್ಕೆಯನ್ನು ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ತೆಗೆದುಹಾಕಲಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಕೈಬಿಡಲಾದ ಫೀಚರ್ಸ್‌ಗಳನ್ನು ಅಪ್‌ಡೇಟ್ ಮಾಡುವುದಾಗಿ ಗ್ರಾಹಕರ ಮನವಿ ಮಾಡುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಇನ್ನು ಹೊಸ ಕಾರು ಬಿಡುಗಡೆಯ ನಂತರ ಇದುವರೆಗೆ ಬರೋಬ್ಬರಿ 1.10 ಲಕ್ಷ ಯುನಿಟ್‌ಗಳಿಗೆ ಬುಕ್ಕಿಂಗ್ ಪಡೆದುಕೊಂಡಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಆಕರ್ಷಕ ಬೆಲೆಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಎಕ್ಸ್‌ಯುವಿ700 ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.13.18 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 24.58 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ.

ಆನಂದ್ ಮಹೀಂದ್ರಾ ಕೂಡಾ ಈ ಹೊಸ ಕಾರು ಖರೀದಿಗಾಗಿ ಹಲವು ತಿಂಗಳಿನಿಂದ ಕಾಯುತ್ತಿದ್ದಾರಂತೆ!

ಹೊಸ ಕಾರಿನಲ್ಲಿ ಕಂಪನಿಯು 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ನೀಡಿದ್ದು, 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 420-ಎನ್ಎಂ ಟಾರ್ಕ್(6-ಸ್ಪೀಡ್ ಎಂಟಿ),450-ಎನ್ಎಂ ಟಾರ್ಕ್(6-ಸ್ಪೀಡ್ ಎಟಿ) ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ.

Most Read Articles

Kannada
English summary
Mahindra and mahindra chairman anand mahindra waiting for xuv700 delivery
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X