ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಾಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಹಣ ಇದ್ದವರಿಗೆ ವಾಹನ ಕೊಳ್ಳುವುದು ಸುಲಭದ ವಿಚಾರ. ಆದ್ರೆ ಮಧ್ಯವರ್ಗದವರಿಗೆ ಒಂದು ವಾಹನ ಖರೀದಿಸುವಾಗ ಆಗುವ ಹಣಕಾಸಿನ ಅಡಚಣೆ ಅಷ್ಟಿಷ್ಟಲ್ಲ. ಸರಿ, ಹೇಗೋ ಮಾಡಿ ಹಣ ಹೊಂದಿಸಿ ತಮ್ಮ ಕನಸಿನ ವಾಹನ ಖರೀದಿ ಮಾಡಿದ್ರು ಅದಕ್ಕೂ ನೆಮ್ಮದಿ ಇಲ್ಲ. ಯಾಕೆಂದ್ರೆ ಡೀಲರ್ಸ್‌ಗಳ ಮೋಸದ ವ್ಯಾಪಾರವು ವಾಹನ ಖರೀದಿಸುವುದೇ ತಪ್ಪು ಎನ್ನುವಂತೆ ಮಾಡಿ ಬಿಡುತ್ತೆ. ಇಲ್ಲೂ ಕೂಡಾ ನಡೆದಿದ್ದು ಅದೇ.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಹೊಸ ವಾಹನ ಖರೀದಿಸುವಾಗ ಇನ್ಮುಂದೆ ನೀವು ಹತ್ತು ಬಾರಿ ಯೋಚಿಸಿ ವ್ಯವಹಾರ ಮಾಡುವುದು ಒಳಿತು. ಇಲ್ಲವಾದ್ರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ಕಾರು ಖರೀದಿ ಮಾಡಿ ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನೆಲ್ಲಾ ಯಾಕೆ ಹೇಳ್ತಾ ಇದೀವಿ ಅಂದ್ರೆ, ಚಂಡಿಘರ್‍‍ನಲ್ಲಿರುವ ಮಹೀಂದ್ರಾ ಡೀಲರ್‍‍ಗಳು ತುಕ್ಕು ಹಿಡಿದಿದ್ದ ಕಾರನ್ನು ಗ್ರಾಹಕನಿಗೆ ಮಾರಾಟ ಮಾಡಿದ್ದಾರೆ.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಹೌದು, ಸೆಪ್ಟೆಂಬರ್ 10, 2017 ರಂದು ಗುರ್‍‍ಮೈಲ್ ಸಿಂಗ್ ಸೆಖೊನ್ ಎಂಬಾತ, ಹರ್‍ಬಿರ್ ಆಟೋಮೊಬೈಲ್ ಪ್ರೈವೆಟ್ ಲಿಮಿಟೆಡ್ ಎಂಬ ಅಧಿಕೃತ ಮಹೀಂದ್ರಾ ಡೀಲರ್‍‍ನ ಬಳಿ ರೂ. 13.77 ಲಕ್ಷ ನೀಡಿ ಹೊಸ ಸ್ಕಾರ್ಪಿಯೋ ಎಸ್‍ಯುವಿ ಕಾರನ್ನು ಖರೀದಿ ಮಾಡಿದ್ದರು. ಕಾರು ಖರೀದಿ ಮಾಡಿದ ಮರು ದಿನವೇ ಕಾರಿನ ಬ್ಲೋವರ್ ಕಂಟ್ರೋಲರ್ ಕೆಲಸ ಮಾಡುತ್ತಿರಲಿಲ್ಲ.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಇದನ್ನು ಅರಿತ ಗುರ್‍‍ಮೈಲ್ ತಕ್ಷಣವೇ ಕಾರನ್ನು ಡೀಲರ್‍‍ನ ಬಳಿ ತೆಗೆದುಕೊಂಡು ಹೋಗಿ ಸರಿ ಮಾಡಿಕೊಡಲು ಕೇಳಿದಾಗ, ಅವರು ಮಾಡಿಕೊಡ್ಡುತ್ತೇನೆ ಎಂದು ಹೇಳಿದ್ದು, ತೀರ ಮಾಲೀಕನು ಡೆಲಿವರಿ ಪಡೆದ ನಂತರ ಕೂಡಾ ಇದೇ ತೊಂದರೆಯನ್ನು ಅನುಭವಿಸುತ್ತಿದ್ದರು.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಕೆಲವು ದಿನಗಳ ನಂತರ ಗುರ್‍‍‍ಮೈಲ್ ಕಾರನ್ನು ವಾಶಿಂಗ್‍‍ಗಾಗಿ ನೀಡಲು ಹೋದಾಗ ಅಲ್ಲಿನ ಸಿಬ್ಬಂದಿ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ತುಕ್ಕು ಹಿಡಿದ್ದಿದ್ದ ರೂಫ್ ಅನ್ನು ಗಮನಿಸಿದ್ದು, ಮಾಲೀಕನಿಗೆ ಸರ್ ನೀವು ಮೋಸ ಹೋಗಿದ್ದೀರು, ನಿಮಗೆ ಆ ಡೀಲರ್‍‍ಗಳು ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಇದರಿಂದ ಎಚ್ಚೆತ್ತುಕೊಂಡ ಸ್ಕಾರ್ಪಿಯೋ ಮಾಲೀಕನು ಸೆಪ್ಟೆಂಬರ್ 19, 2017 ರಂದು ಇ-ಕಂಪ್ಲೈಂಟ್ ಮಾಡಿದರು. ಇದಕ್ಕೆ ಪ್ರತ್ಯುತ್ತರವಾಗಿ ಡೀಲರ್ ಮತ್ತು ಉತ್ಪಾದಕರು ಈ ದೋಷವನ್ನು ನಮಗೆ ವರದಿ ಮಾಡಿಲ್ಲವೆಂದು ಹೇಳಿದ್ದಾರೆ. ಆಪಾದನೆಗಳನ್ನು ಸಾಬೀತುಪಡಿಸಲು ಯಾವುದೇ ಜಾಬ್ ಕಾರ್ಡ್ ಇಲ್ಲ ಎಂದು ಹೇಳಲಾಗಿದೆ.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಇಬ್ಬರ ವಾದಗಳನ್ನು ಕೇಳಿದ ನಂತರ ಜಿಲ್ಲೆಯ ಗ್ರಾಹಕರ ವಿವಾದಗಳ ಪರಿಹಾರ ವೇದಿಕೆ ದೂರಿನ ಆರೋಪಗಳು ದೂರುದಾರರ ಅಫಿಡವಿಟ್ ಮೂಲಕ ಬೆಂಬಲಿತವಾಗಿದೆ ಎಂದು ಹೇಳಿದ್ದಾರೆ. ಹಾಗೆಯೆ ವಾಹನ ಮಾಲೀಕನು ಕಳುಹಿಸಿದ ಈ-ಮೈಲ್‍ನಲ್ಲಿ 18 ದಿನಗಳ ನಂತರ ಆ ದೋಷವನ್ನು ಕಂಡುಹಿಡಿರುವುದಾಗಿ ಅಟ್ಯಾಚ್ ಮಾಡಲಾಗಿದೆ.

MOST READ: ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ದಾಖಲೆ ಮತ್ತು ಫೋಟೋವಿನ ಸಾಕ್ಷ್ಯದ ದೃಢೀಕರಣವು ಕಾರಿನ ಛಾವಣಿಯ ಮೇಲೆ ಬಣ್ಣ ಮತ್ತು ತುಕ್ಕು ರೀತಿಯ ನೋಟದಲ್ಲಿ ಕಠೋರತೆ ಕಂಡುಬಂದಿದೆ ಎಂದು ತೋರಿಸಿದೆ. ಛಾವಣಿಯ ಸಣ್ಣ ಭಾಗದಲ್ಲಿ ಬಣ್ಣದಲ್ಲಿ ಈ ಬಿರುಸುತನವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹೇಳಲಾಗುವುದಿಲ್ಲ ಅಥವಾ ದೂರುದಾರರಿಂದ ಸ್ವಯಂ ಉಲ್ಲಂಘನೆಯಾಗಿದೆ ಎಂದು ಹೇಳಲು ವೇದಿಕೆಯು ಹೇಳಿದೆ.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಇವುಗಳ ಪೈಕಿ ಡೀಲರ್‍‍ಗಳು ಕಾರನ್ನು ಮತ್ತೆ ಸಂಪೂರ್ಣವಾಗಿ ಪೆಯಿಂಟ್ ಮಾಡುವುದಾಗಿ ಹೇಳಿಕೊಂಡಿದ್ದು, ಇದಕ್ಕೆ ಸಮ್ಮತಿಸದ ವಾಹನ ಮಾಲೀಕ ಹೊಸ ಕಾರನ್ನು ನೀಡಬೇಕಾಗಿ ಆದೇಶ ಮಾಡಿದ್ದಾರೆ. ಆದರೆ ಸದ್ಯ ದೋಷವಿರುವ ಕಾರು ಈಗಾಗಲೇ 25,000 ಸಂಚರಿಸಿದ ಕಾರಣ ಹೊಸ ಕಾರನ್ನು ನೀಡಲು ಸಾಧ್ಯವಿಲ್ಲವೆಂದು ಹೇಳಲಾಗಿದೆ.

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಕೊನೆಯಲ್ಲಿ ಜಿಲ್ಲೆಯ ಗ್ರಾಹಕರ ವಿವಾದಗಳ ಪರಿಹಾರ ವೇದಿಕೆಯು ಸೇವೆ ಮತ್ತು ಅನ್ಯಾಯದ ವ್ಯವಾಹರಿಕ ಅಭ್ಯಾಸದಲ್ಲಿ ಕೊರತೆ ರೂ. 50,000 ದಂಡ ಮತ್ತು ಡೀಲರ್‍‍ಗಳು ನೀಡಲಾದ ಮಾನಸಿಕ ಸಂಕಟದ ಜೊತೆಗೆ ರೂ. 10,000 ದಂಡವನ್ನು ಗುರ್‍‍ಮೈಲ್ ಸಿಂಗ್ ಸೆಖೊನ್‍ಗೆ ಪಾವತಿಸಬೇಕಾಗಿ ಆದೇಶಿಸಲಾಗಿದೆ.

MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...

ತುಕ್ಕು ಹಿಡಿದಿದ್ದ ಕಾರನ್ನು ಮಾರಾಟ ಮಡಿದ್ದಕ್ಕೆ ಡೀಲರ್‍‍ಗೆ ಬಿತ್ತು ಭಾರೀ ಮೊತ್ತದ ದಂಡ

ಹೀಗಾಗಿರುವುದು ಇದೇನು ಮೊದಲನೆಯೆದಲ್ಲ ಇದಕ್ಕು ಮುನ್ನವೇ ಡೀಲರ್‍‍ಗಳು ಮತ್ತು ಸರ್ವೀಸ್ ಸೆಂಟರ್‍‍ನವರು ಯಾವ ರೀತಿ ತಮ್ಮ ಗ್ರಾಹಕರಿಗೆ ಟೋಪಿ ಹಾಕಿ ಸಿಕ್ಕಿಕೊಂಡಿದ್ದಾರೆ ಎಂಬುವ ಘಟನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಇನ್ನಾದರು ವಾಹನ ಖರೀದಿಸುವಾಗ ಇಂತಹ ವಿಚಾರಗಳು ಮತ್ತು ನಿಮ್ಮ ಹಣದ ಬಗ್ಗೆ ಗಮನವಿರಲಿ.

Source: ETAuto

Most Read Articles

Kannada
English summary
Mahindra Dealer Fined Rs.60,000 For Selling Rusted Mahindra Scorpio To The Customer. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X