ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಮಹಾಮಾರಿ ಕರೋನಾ ವಿರುದ್ಧದ ಹೋರಾಟಕ್ಕಾಗಿ ಆಟೋ ಉತ್ಪಾದನಾ ಕಂಪನಿಗಳು ಸರ್ಕಾರದ ಜೊತೆ ಕೈಜೋಡಿಸಿದ್ದು, ಭಾರೀ ಪ್ರಮಾಣದ ದೇಣಿಗೆ ನೀಡಿರುವುದಲ್ಲದೆ ವೈದ್ಯಕೀಯ ಉಪಕರಣಗಳ ಉತ್ಪಾದನೆಗೂ ಚಾಲನೆ ನೀಡುವ ಮೂಲಕ ವೈರಸ್ ವಿರುದ್ಧ ಹೋರಾಟದಲ್ಲಿ ತಮ್ಮದೆ ಆದ ವಿಶೇಷ ಪಾತ್ರವಹಿಸುತ್ತಿವೆ.

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ವೈರಸ್ ತೀವ್ರತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಅನ್ನು ಇದೀಗ ಮತ್ತೆ ಮುಂದುವರಿಸಲಾಗಿದ್ದು, ಈ ವೇಳೆ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಕಂಪನಿಗಳು ವೈದ್ಯಕೀಯ ಉಪಕರಣ ಉತ್ಪಾದನೆನೊಂದಿಗೆ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿವೆ. ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕೂಡಾ ಇದೀಗ ಕಾರು ಉತ್ಪಾದನೆ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ವೆಂಟಿಲೆಟರ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ.

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಆಧುನಿಕ ತಂತ್ರಜ್ಞಾನ ಪ್ರೇರಣೆಯ ಮೂರು ವೆಂಟಿಲೆಟರ್ ಮಾದರಿಗಳ ಪೋಟೋಟೈಪ್ ಮಾದರಿಗಳನ್ನು ಕೇವಲ 48 ಗಂಟೆಗಳಲ್ಲಿ ಅಭಿವೃದ್ದಿಗೊಳಿಸಿ ಬಹಿರಂಗಪಡಿಸಿದ್ದ ಮಹೀಂದ್ರಾ ಕಂಪನಿಯು ಇದೀಗ ಉತ್ಪಾದನಾ ಮಾದರಿಯ ಮಾಹಿತಿಯನ್ನು ಬಹಿರಂಗಪಡಿಸಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಫೋಟೋಟೈಪ್ ವೆಂಟಿಲೆಟರ್ ಮಾದರಿಗಳನ್ನು ಉತ್ಪಾದನಾ ಮಾದರಿಯನ್ನಾಗಿ ಸಿದ್ದಪಡಿಸಲು 18 ದಿನಗಳ ಕಾಲ 24X7 ಮಾದರಿಯಲ್ಲಿ ಕಾರ್ಯನಿರ್ವಹಿಸಿರುವ ಮಹೀಂದ್ರಾ ಕಂಪನಿಯ ಸಿಬ್ಬಂದಿಯು ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ವೆಂಟಿಲೆಟರ್ ಮಾದರಿಯನ್ನು ಹೊರತಂದಿದೆ.

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಕಳೆದ ತಿಂಗಳ ಕೊನೆಯಲ್ಲಿ ಮೂರು ವಿವಿಧ ಮಾದರಿಯ ಫೋಟೋಟೈಪ್ ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿ ಪ್ರದರ್ಶನ ಮಾಡಿದ್ದ ಮಹೀಂದ್ರಾ ಕಂಪನಿಯು ಇದೀಗ ಒಂದು ಫೋಟೋಟೈಪ್ ಮಾದರಿಯನ್ನು ಅಂತಿಮಗೊಳಿಸಿ ಉತ್ಪಾದನೆಗೆ ಚಾಲನೆ ನೀಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಹೊಸ ಮಾದರಿಯ ವೆಂಟಿಲೆಟರ್ ಸಾಧನಕ್ಕೆ ಏರ್ 100 ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಹೊಸ ಸಾಧನದ ಉತ್ಪಾದನೆಗೂ ಅನುಮೊದನೆ ಪಡೆದುಕೊಂಡಿದ್ದು, ಶೀಘ್ರದಲ್ಲೇ ಬೇಡಿಕೆ ಆಧಾರದ ಉತ್ಪಾದನೆಯನ್ನು ತೀವ್ರಗೊಳಿಸಲಿದೆ.

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಅತಿ ಕಡಿಮೆ ಬೆಲೆಗೆ ಏರ್ 100 ವೆಂಟಿಲೆಟರ್

ಹೌದು, ಸಾಮಾನ್ಯವಾಗಿ ಒಂದು ಸಾಮಾನ್ಯ ವೆಂಟಿಲೆಟರ್ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ರೂ. 3 ಲಕ್ಷದಿಂದ ರೂ. 7 ಲಕ್ಷ ಬೆಲೆ ಹೊಂದಿದ್ದು, ಮಹೀಂದ್ರಾ ಕಂಪನಿಯು ಹೊಸ ಏರ್ 100 ವೆಂಟಿಲೆಟರ್ ಸಾಧನವನ್ನು ಕೇವಲ ರೂ.7,500ಕ್ಕೆ ಒದಗಿಸಲು ಸಿದ್ದವಾಗಿದೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಮಹೀಂದ್ರಾ ಉತ್ಪಾದನೆ ಮಾಡಿರುವ ವೆಂಟಿಲೆಟರ್‌ಗಳು ಗಾತ್ರದಲ್ಲಿ ದೀರ್ಘ ಬಾಳಕೆಯ ವೆಂಟಿಲೆಟರ್‌ಗಳಿಂತಲೂ ತುಸು ಕಡಿಮೆ ಸಾಮಾರ್ಥ್ಯವನ್ನು ಹೊಂದಿರಲಿದ್ದು, ತುರ್ತು ಸಂದರ್ಭದಲ್ಲಿ ಇವುಗಳು ಸಾಕಷ್ಟು ಅನುಕೂಲಕರವಾಗಲಿವೆ.

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಜೊತೆಗೆ ಕೈಗೆಟುಕುವ ಬೆಲೆಗೆ ಲಭ್ಯವಾಗಲಿರುವ ಈ ವೆಂಟಿಲೆಟರ್‌ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೂಡಾ ಅಳವಡಿಕೆ ಮಾಡಿಕೊಳ್ಳಬಹುದಲ್ಲದೆ ಮನೆಗಳಲ್ಲಿರುವ ದೀರ್ಘ ಕಾಲದ ರೋಗಿಗಳ ಆರೈಕೆಗೂ ಕೂಡಾ ಬಳಕೆ ಮಾಡಬಹುದಾಗಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಅತಿ ಕಡಿಮೆ ಬೆಲೆಯಲ್ಲಿ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ಗಾತ್ರದಲ್ಲೂ ಕೂಡಾ ಗಮನಸೆಳೆಯುವ ಏರ್ 100 ವೆರಿಯೆಂಟರ್ ಮಾದರಿಗಳು 5ರಿಂದ 7 ಕೆ.ಜಿ ತೂಕವನ್ನು ಹೊಂದಿದ್ದು, ಮಹೀಂದ್ರಾ ನಿರ್ಮಾಣ ಮಾಡಿರುವ ಹೊಸ ವೆಂಟಿಲೆಟರ್‌ಗಳ ಹಿಂದೆ ಸುಮಾರು 10 ಜನ ವೈದ್ಯಕೀಯ ಮತ್ತು ಬಯೋಮೆಡಿಕಲ್ ಎಂಜಿನಿಯರ್‌ಗಳ ಸತತ ಪರಿಶ್ರಮವಿದೆ.

Most Read Articles

Kannada
English summary
Mahindra Low Cost Ventilators Gets Updated Features. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X