ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಮಗದೊಂದು ಅತ್ಯಾಕರ್ಷಕ ಮೋಜಿನ ವಿಹಾರ ನೌಕೆಯನ್ನು ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಒಡಿಸ್ಸೀ ಅನಾವರಣಗೊಳಿಸಿದೆ.

By Nagaraja

ವಾಹನೋದ್ಯಮದ ವಿವಿಧ ಕ್ಷೇತ್ರಗಳಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿರುವ ಮಹೀಂದ್ರ ಸಂಸ್ಥೆಯೀಗ ಐಷಾರಾಮಿ ವಿಹಾರ ನೌಕಾ ವಿಭಾಗಕ್ಕೂ ಕಾಲಿಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಹೀಂದ್ರ ಸಂಸ್ಥೆಯ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಆನಂದ್ ಮಹೀಂದ್ರ, ಅತಿ ನೂತನ ಐಷಾರಾಮಿ ವಿಹಾರ ನೌಕೆಯನ್ನು ಅನಾವರಣಗೊಳಿಸಿದ್ದಾರೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಮಹೀಂದ್ರದ ಓಡಿಸ್ಸೀ ವಿಭಾಗವು 55 ಉದ್ದದ ವಿಹಾರ ನೌಕೆಯನ್ನು ನಿರ್ಮಿಸಿದ್ದು, ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲಾಗಿದೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಮೇಡ್ ಇನ್ ಇಂಡಿಯಾ ಮಹೀಂದ್ರ ಒಡಿಸ್ಸೀ ಐಷಾರಾಮಿ ವಿಹಾರ ನೌಕೆಗೆ ವಿವಿಧ ಮೂಲಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ವಾಣಿಜ್ಯ ಬೋಟಿಂಗ್ ವಿಭಾಗದಲ್ಲೂ ಮಹೀಂದ್ರ ತನ್ನ ಸಾನಿಧ್ಯವನ್ನು ಮತ್ತಷ್ಟು ಬಲಪಡಿಸಿದ್ದು, ಕಳೆದೊಂದು ದಶಕದಿಂದಲೂ ನಾವೀನ್ಯ ಬೋಟ್ ನಿರ್ಮಾಣದಲ್ಲಿ ಕಾರ್ಯ ಮಗ್ನವಾಗಿದ್ದವು.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಮಹೀಂದ್ರ ಒಡಿಸ್ಸೀ ವಿಹಾರ ನೌಕೆಯು 9.90 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದ್ದು, ಗ್ರಾಹಕರ ವೈಯಕ್ತಿಕ ಬೇಡಿಕೆಗಳಿಗೆ ಮನೆ ಹಾಕಲಾಗಿದೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಮಹೀಂದ್ರ ಒಡಿಸ್ಸೀ ಈಗಾಗಲೇ ಮೂರು ವಿಧದ ಮೋಜಿನ ವಿಹಾರ ನೌಕೆಗಳನ್ನು ಹೊಂದಿದೆ. ಇವುಗಳಲ್ಲಿ 22 ಅಡಿ ಉದ್ದದ ಎಂಒ 22, 33 ಅಡಿ ಉದ್ದದ ಎಂಒ 33 ಮತ್ತು 35 ಅಡಿ ಉದ್ದದ ಎಂಒ 35 ಸೇರಿವೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಈ ಪೈಕಿ 22 ಮತ್ತು 33 ಅಡಿ ಉದ್ದದ ಫೈಬರ್ ಗ್ಲಾಸ್ ಪವರ್ ಬೋಟ್ ಗಳನ್ನು 2009ರ ಮುಂಬೈ ಅಂತರಾಷ್ಟ್ರೀಯ ಬೋಟ್ ಶೋದಲ್ಲಿ ಅನಾವರಣಗೊಳಿಸಲಾಗಿತ್ತು. ಇದು ಗಂಟೆಗೆ ಗರಿಷ್ಠ 42 ಹಾಗೂ 40 ನಾಟಿಕಲ್ ಮೈಲು ವೇಗದಲ್ಲಿ ಸಂಚರಿವ ಸಾಮರ್ಥ್ಯ ಹೊಂದಿದೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಮತ್ತಷ್ಟು ದೊಡ್ಡದಾದ 35 ಅಡಿ ಉದ್ದದ ವಿಹಾರ ನೌಕೆಯು 'ವಿ' ಟ್ರೈಹೆಡ್ರಲ್ ಹಲಗೆಯನ್ನು ಪಡೆಯಲಿದ್ದು, 311 ಅಶ್ವಶಕ್ತಿ ಉತ್ಪಾದಿಸುವ ಯಾನ್ಮರ್ ಡೀಸೆಲ್ ಎಂಜಿನ್ ಪಡೆದಿದೆ. ಇದು ಗಂಟೆಗೆ 30 ನಾಟಿಕಲ್ ಮೈಲು ವೇಗದಲ್ಲಿ ಸಂಚರಿಸಲಿದೆ.

ದೇಶದ ಹೆಮ್ಮೆಯ 'ಮೇಡ್ ಇನ್ ಇಂಡಿಯಾ' ಮಹೀಂದ್ರ ವಿಹಾರ ನೌಕೆ ಅನಾವರಣ

ಬರೋಬ್ಬರಿ 600 ಲೀಟರ್ ಇಂಧನ ಟ್ಯಾಂಕ್ ನಿಂದ ಜೋಡಿಸಲ್ಪಟ್ಟಿರುವ ಎಂಒ35, 12 ಪ್ರಯಾಣಿಕರನ್ನು ಆರಾಮದಾಯಕವಾಗಿ ಸಾಗಿಸುವಷ್ಟು ಸಮರ್ಥವೆನಿಸಿಕೊಂಡಿದೆ.

Most Read Articles

Kannada
English summary
Mahindra's Luxurious 'Made In India' Odyssea 55-Foot Yacht Revealed
Story first published: Tuesday, December 13, 2016, 16:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X