ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಆಫ್-ರೋಡ್ ಹಾಗೂ ಅಡ್ವೆಂಚರ್ ಪ್ರವಾಸಗಳು ವಾಹನ ಪ್ರಿಯರ ನೆಚ್ಚಿನ ಕ್ರೀಡೆಗಳಾಗಿವೆ. ಇದಕ್ಕಾಗಿಯೇ ಕೆಲವು ವಾಹನ ಪ್ರಿಯರು ತಮ್ಮ ರಜಾದಿನಗಳು ಹಾಗೂ ವೀಕ್ ಎಂಡ್ ಗಳನ್ನು ಆಫ್-ರೋಡ್ ಪ್ರವಾಸಗಳಲ್ಲಿ ಕಳೆಯುತ್ತಾರೆ.

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಕೆಲವೊಮ್ಮೆ ಆಫ್ ರೋಡ್ ಪ್ರವಾಸಗಳು ಅಪಾಯಕಾರಿಯಾಗಬಲ್ಲವು. ಆಫ್-ರೋಡ್ ಪ್ರವಾಸಗಳು ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ 4x4 ಸಾಮರ್ಥ್ಯದ ವಾಹನಗಳ ಮಾರಾಟವು ಹೆಚ್ಚಾಗುತ್ತಿದೆ. 4x4 ತಂತ್ರಜ್ಞಾನವನ್ನು ಹೊಂದಿರುವ ಮಹೀಂದ್ರಾ ಥಾರ್ ಎಸ್‌ಯುವಿಯು ತನಗಿಂತ ಹೆಚ್ಕು ಬೆಲೆಯನ್ನು ಹೊಂದಿರುವ ಕಾರನ್ನು ರಕ್ಷಿಸುತ್ತಿರುವ ಘಟನೆ ವರದಿಯಾಗಿದೆ.

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಮಾದರಿಯು ಮರುಭೂಮಿಯಲ್ಲಿ ಆಫ್ ರೋಡ್ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಮಹೀಂದ್ರಾ ಥಾರ್ ಕಾರಿನ ಮಾಲೀಕರು ಬೆಂಝ್ ಕಾರನ್ನು ತೊಂದರೆಯಿಂದ ಪಾರು ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವೀಡಿಯೊವನ್ನು ಲೋಕೇಶ್ ಸ್ವಾಮಿ ಎಂಬುವವರು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಈ ಘಟನೆ ರಾಜಸ್ಥಾನ ರಾಜ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಕೆಲ ಸ್ನೇಹಿತರು ತಮ್ಮ ದುಬಾರಿ ಕಾರುಗಳಲ್ಲಿ ಆಫ್ ರೋಡ್ ಪ್ರವಾಸಗಳಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇತ್ತೀಚಿಗಷ್ಟೇ ಮಹೀಂದ್ರಾ ಕಂಪನಿಯು ತನ್ನ ಥಾರ್ ಎಸ್‌ಯುವಿಯನ್ನು ಹಲವು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಗೊಳಿಸಿದೆ.

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಈ ಅಪ್‌ಡೇಟ್‌ಗಳ ನಂತರ ಈ ಎಸ್‌ಯುವಿಯು ಆಫ್-ರೋಡ್ ಪ್ರವಾಸಗಳಿಗೆ ಮಾತ್ರವಲ್ಲದೇ ಎಲ್ಲಾ ರೀತಿಯ ಬಳಕೆಗೆ, ಪ್ರವಾಸಗಳಿಗೆ ಸೂಕ್ತವಾಗಿದೆ. ಈ ಕಾರಣಕ್ಕೆ ಹೊಸ ಥಾರ್ ಎಸ್‌ಯುವಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆಯಲಾರಂಭಿಸಿದೆ. ಈ ವೀಡಿಯೊದಲ್ಲಿ ಕಂಡು ಬರುವ ಥಾರ್ ಹಳೆ ತಲೆಮಾರಿನ ಮಾದರಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಬೆಂಝ್ ಎಂಎಲ್ ಕ್ಲಾಸ್ ಐಷಾರಾಮಿ ಎಸ್‌ಯುವಿಯಾಗಿದೆ. ದುಬಾರಿ ಬೆಲೆಯನ್ನು ಹೊಂದಿರುವ ಈ ಎಸ್‌ಯುವಿಯು ತನ್ನ ನೋಟದಿಂದ ಜನರನ್ನು ಆಕರ್ಷಿಸುತ್ತದೆ. ಆದರೆ ಈ ಎಸ್‌ಯುವಿಯಲ್ಲಿ ಮರುಭೂಮಿಯಲ್ಲಿ ಸಾಗಲು ಬೇಕಾದ ಟಯರ್‌ಗಳು ಹಾಗೂ ಫೀಚರ್ ಗಳು ಇರದ ಕಾರಣ ಮರಳಿನಲ್ಲಿ ಸಿಲುಕಿಕೊಂಡಿದೆ.

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಇದರ ಜೊತೆಗೆ ಬೆಂಝ್ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕನಿಗೆ ಆಫ್-ರೋಡ್ ಗಳಲ್ಲಿ ಚಾಲನೆ ಮಾಡಿದ ಅನುಭವವಿಲ್ಲವೆಂದು ತಿಳಿದುಬಂದಿದೆ. ಬೆಂಝ್ ಎಂಎಲ್ ಎಸ್‌ಯುವಿಯು ಮರಳಿನಲ್ಲಿ ಸಿಲುಕಿಕೊಳ್ಳಲು ಇದು ಸಹ ಕಾರಣವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಸಾಮಾನ್ಯವಾಗಿ ದುಬಾರಿ ಬೆಲೆಯ ಕಾರುಗಳು ಎಲ್ಲಾ ರೀತಿಯ ರಸ್ತೆಗಳಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಮರ್ಸಿಡಿಸ್ ಬೆಂಝ್ ಎಂಎಲ್ ಕಾರು ಸಹ ಇದರಿಂದ ಹೊರತಾಗಿಲ್ಲ.

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಆದರೆ ಅದರಲ್ಲಿರುವ ಫೀಚರ್ ಗಳನ್ನು ಬಳಸುವುದು ಹೇಗೆ ಎಂಬುದು ಚಾಲಕನಿಗೆ ತಿಳಿದಿರ ಬೇಕು. ವಾಹನವು ಯಾವ ರೀತಿಯ ಫೀಚರ್ ಗಳನ್ನು ಹೊಂದಿದ್ದರೂ, ಅದನ್ನು ನಿರ್ವಹಿಸುವ ಸಾಮರ್ಥ್ಯ ಚಾಲಕನಿಗೆ ಇರಬೇಕು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಮಹೀಂದ್ರಾ ಥಾರ್ ಎಸ್‌ಯುವಿಯಲ್ಲಿ ಆಫ್-ರೋಡ್ ಪ್ರಯಾಣಕ್ಕಾಗಿಯೇ ಕೆಲವು ಫೀಚರ್ ಗಳನ್ನು ನೀಡಲಾಗಿದೆ. ಥಾರ್ ಎಸ್‌ಯುವಿಯ ಟಯರ್, ಎಂಜಿನ್ ಹಾಗೂ ವ್ಹೀಲ್ ಬೇಸ್ ಅನ್ನು ಹೆಚ್ಚಿಸಲಾಗಿದೆ.

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಈ ಕಾರಣಕ್ಕೆ ಮರಳಿನಲ್ಲಿ ಸಿಲುಕಿದ್ದ ಮರ್ಸಿಡಿಸ್ ಬೆಂಝ್ ಕಾರನ್ನು ಹೊರಕ್ಕೆ ಎಳೆದಿದೆ. ತೊಂದರೆಯಲ್ಲಿ ಸಿಲುಕಿರುವ ವಾಹನಗಳನ್ನು ಥಾರ್ ಎಸ್‌ಯುವಿಯು ಪಾರು ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದುಬಾರಿ ಬೆಲೆಯ ಕಾರನ್ನು ರಕ್ಷಿಸಿದ ಮಹೀಂದ್ರಾ ಥಾರ್ ಎಸ್‌ಯುವಿ

ಈ ಹಿಂದೆಯೂ ಥಾರ್ ಎಸ್‌ಯುವಿಯನ್ನು ಇದೇ ರೀತಿ ವಿವಿಧ ರಕ್ಷಣಾ ಕಾರ್ಯಾಚರಣೆಗಳಿಗೆ ಬಳಸಲಾಗಿತ್ತು. ಮರ್ಸಿಡಿಸ್ ಬೆಂಝ್ ಕಂಪನಿಯು ಎಂಎಲ್ ಕಾರಿನ ಬದಲಿಗೆ ದೇಶಿಯ ಮಾರುಕಟ್ಟೆಯಲ್ಲಿ ಜಿಎಲ್ಇ ಹೆಸರಿನ ಕಾರುಗಳನ್ನು ಮಾರಾಟ ಮಾಡುತ್ತಿದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಈ ಕಾರುಗಳಲ್ಲಿ ಸಿಡಿಐ-ಸಾಮರ್ಥ್ಯದ 3.0-ಲೀಟರ್ ಡೀಸೆಲ್ ಎಂಜಿನ್‌ ಅಳವಡಿಸಿದೆ. ಈ ಎಂಜಿನ್ 251 ಬಿಹೆಚ್ ಪಿ ಪವರ್ ಹಾಗೂ 619 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.ಈ ಕಾರು ಎಲ್ಲಾ ನಾಲ್ಕು ವ್ಹೀಲ್ ಗಳಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಕಾರು ಹಲವಾರು ವಿಶೇಷ ಫೀಚರ್ ಗಳನ್ನು ಹೊಂದಿದೆ.

Most Read Articles

Kannada
English summary
Mahindra Thar SUV rescues Mercedes Benz ML Class SUV from sand. Read in Kannada.
Story first published: Saturday, October 24, 2020, 14:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X