ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಭಾರತದ ವಾಹನ ಸವಾರರು ಹಲವಾರು ಕೆಟ್ಟ ಅಭ್ಯಾಸಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದೂ ಸಹ ಒಂದು. ಬೇಕಾಬಿಟ್ಟಿಯಾಗಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಅದರಲ್ಲೂ ಚಿಕ್ಕದಾಗಿರುವ ರಸ್ತೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತದೆ. ಆದರೆ ಈ ಟ್ರಾಫಿಕ್ ಜಾಮ್ ಬಗ್ಗೆ ಹೆಚ್ಚಿನ ಜನರು ತಲೆಕೆಡಿಸಿಕೊಳ್ಳುವುದೇ ಇಲ್ಲ. ತಪ್ಪು ಜಾಗದಲ್ಲಿ ವಾಹನಗಳನ್ನು ಪಾರ್ಕ್ ಮಾಡಿ ಜನರಿಗೆ ತೊಂದರೆಯಾದರೂ ಕ್ಯಾರೇ ಎನ್ನುವುದಿಲ್ಲ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಚಿಕ್ಕ ರಸ್ತೆಯಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡಿ ವಾಹನಗಳಿಗೆ ತೊಂದರೆಯುಂಟು ಮಾಡುತ್ತಿದ್ದ ಕಾರ್ ಅನ್ನು ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರು ಎತ್ತಿ ಪಕ್ಕಕ್ಕಿಟ್ಟ ಘಟನೆಯ ವೀಡಿಯೊವೊಂದು ವೈರಲ್ ಆಗಿದೆ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಈ ಘಟನೆ ನಡೆದಿರುವುದು ಪಂಜಾಬ್‍‍ನಲ್ಲಿ. ಈ ವೀಡಿಯೊವನ್ನು ಪೊಲೀಸ್ ಅಧಿಕಾರಿಯೊಬ್ಬರು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಮಹೀಂದ್ರಾ ಟಿಯುವಿ300 ಚಿಕ್ಕ ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ಕಾಣಬಹುದು.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ವಾಹನವು ಮುಂದಕ್ಕೆ ಹೋಗಲಾಗದೇ ಅಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಇದರಿಂದಾಗಿ ಮಹೀಂದ್ರಾ ಟಿಯುವಿ300 ಅನ್ನು ಚಲಾಯಿಸುತ್ತಿದ್ದವರು ಕಾರಿನಿಂದ ಹೊರಗಿಳಿದು ಯಾರೂ ನಿರೀಕ್ಷಿಸಿರದ್ದನ್ನು ಮಾಡುತ್ತಾರೆ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿಗೆ ಒರಗಿ ತನ್ನ ಕೈಗಳಿಂದ ಆ ಕಾರ್ ಅನ್ನು ಮೇಲಕ್ಕೆತ್ತಿ ಪಕ್ಕಕ್ಕೆ ಸರಿಸುತ್ತಾರೆ. ಮಹೀಂದ್ರಾ ಟಿಯುವಿ 300 ಕಾರು ಮುಂದಕ್ಕೆ ಚಲಿಸುವಷ್ಟು ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ಸರಿಸುತ್ತಾರೆ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಈ ಘಟನೆಯನ್ನು ನೋಡಿ ಸ್ಥಳದಲ್ಲಿದ್ದ ಜನರು ಆಶ್ಚರ್ಯಚಕಿತರಾಗುತ್ತಾರೆ. ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕನಿಗೆ ಥಮ್ಸ್ ಅಪ್ ಮಾಡುತ್ತಾನೆ. ಇದಾದ ನಂತರ ಮಹೀಂದ್ರಾ ಟಿಯುವಿ300 ಅಲ್ಲಿಂದ ಮುಂದೆ ಸಾಗುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಈ ವೀಡಿಯೊದಲ್ಲಿ ಕಂಡು ಬರುವ ಡಿಜೈರ್ ಹಳೆಯ ತಲೆಮಾರಿನ ಸೆಡಾನ್ ಕಾರ್ ಆಗಿದೆ. ಈಗ ಈ ಕಾರ್ ಅನ್ನು ಮಾರಾಟ ಮಾಡುತ್ತಿಲ್ಲ. ಒಬ್ಬನೇ ವ್ಯಕ್ತಿ ಇಡೀ ಕಾರ್ ಅನ್ನು ಎತ್ತಿ ಪಕ್ಕಕ್ಕೆ ತಳ್ಳಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಹೊಸ ಮಾರುತಿ ಸುಜುಕಿ ಡಿಜೈರ್ ಕಾರು ಹಾರ್ಟ್‍‍ಟೆಕ್ ಪ್ಲಾಟ್‌ಫಾರ್ಮ್ ಮೇಲೆ ತಯಾರಾಗಿದೆ. ಇದು ಕಡಿಮೆ ತೂಕವನ್ನು ಹೊಂದಿದೆ. ಇದಕ್ಕಿಂತ ಮುಂಚೆ ಮಾರುಕಟ್ಟೆಯಲ್ಲಿದ ಡಿಜೈರ್ ಕಾರು 1,070 ಕೆ.ಜಿ ತೂಕವನ್ನು ಹೊಂದಿತ್ತು. ಕೇವಲ ಕೈ, ಕಾಲುಗಳ ಮೂಲಕ ಕಾರ್ ಅನ್ನು ಪಕ್ಕಕ್ಕೆ ಸರಿಸುವುದು ಸಣ್ಣ ಸಾಧನೆಯಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಈ ರೀತಿಯಾಗಿ ಕಾರ್ ಅನ್ನು ಪಕ್ಕಕ್ಕೆ ತಳ್ಳುವ ವೀಡಿಯೊಗಳು ಪ್ರಪಂಚದಾದ್ಯಂತ ವೈರಲ್ ಆಗಿವೆ. ಆ ವೀಡಿಯೊಗಳಲ್ಲಿ ಬಲಶಾಲಿಗಳು ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಆದರೆ, ಸೆಡಾನ್ ಕಾರುಗಳನ್ನು ಪಕ್ಕಕ್ಕೆ ತಳ್ಳುವುದು ನಿಜಕ್ಕೂ ದೊಡ್ಡ ವಿಷಯ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಡಿಜೈರ್ ಕಾರ್ ಅನ್ನು ಪಕ್ಕಕ್ಕೆ ತಳ್ಳಿದ ಮಹೀಂದ್ರಾ ಟಿಯುವಿ300 ಕಾರಿನ ಮಾಲೀಕರ ಬಗ್ಗೆ ವಿವರಗಳು ತಿಳಿದು ಬಂದಿಲ್ಲ. ಅವರು ತಮ್ಮ ಶಕ್ತಿ, ಸಾಮರ್ಥ್ಯದ ಹಿಂದಿನ ರಹಸ್ಯವನ್ನು ತಿಳಿಸುತ್ತಾರೆಯೇ ಎಂಬುದನ್ನು ಕಾದು ನೋಡೋಣ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ತಮ್ಮ ವಾಹನಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ನಿಲ್ಲಿಸುವಾಗ ಯಾವಾಗಲೂ ಜಾಗರೂಕರಾಗಿರಬೇಕು. ಅನೇಕ ಪ್ರದೇಶಗಳಲ್ಲಿ ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಅನುಮತಿ ನೀಡದಿದ್ದರೂ, ವಾಹನ ಚಾಲಕರು ಅಲ್ಲಿಯೇ ವಾಹನಗಳನ್ನು ಪಾರ್ಕ್ ಮಾಡುತ್ತಾರೆ.

ನೋ ಪಾರ್ಕಿಂಗ್‍‍ನಲ್ಲಿದ್ದ ಕಾರನ್ನು ಬಾಹುಬಲಿ ಸ್ಟೈಲ್‍‍ನಲ್ಲಿ ಪಕ್ಕಕ್ಕೆ ಸರಿಸಿದ ಭೂಪ..!

ಅಕ್ರಮವಾಗಿ ನಿಲುಗಡೆ ಮಾಡಿರುವ ವಾಹನಗಳನ್ನು ಪೊಲೀಸರು ತೆರವುಗೊಳಿಸುತ್ತಿದ್ದರೂ ಸಹ, ಪದೇ ಪದೇ ಪಾರ್ಕಿಂಗ್‍ ಇಲ್ಲದ ಜಾಗಗಳಲ್ಲಿ ನಿಲ್ಲಿಸುತ್ತಲೇ ಇರುತ್ತಾರೆ. ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ದಾರಿ ಮಾಡಿಕೊಡುವುದು ಹಾಗೂ ಇತರರು ಸುಲಭವಾಗಿ ಹಾದುಹೋಗುವ ರೀತಿಯಲ್ಲಿ ವಾಹನವನ್ನು ನಿಲ್ಲಿಸುವುದು ಮುಖ್ಯ.

Most Read Articles

Kannada
English summary
Mahindra tuv300 driver lifts maruti suzuki dzire - Read in Kannada
Story first published: Friday, November 22, 2019, 18:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X