ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವಿನ್ ಪೌಲಿ

ನಿವಿನ್ ಪೌಲಿ ಮಲಯಾಳಂ ಚಿತ್ರರಂಗದ ಜನಪ್ರಿಯ ನಟ. ಈ ನಟ ಕಡಿಮೆ ಅವಧಿಯಲ್ಲೇ ಮಲಯಾಳಿಗಳ ಮನದಲ್ಲಿ ನೆಲೆಯೂರಿರುವ ನಟ. ಈ ನಟನಿಗೆ ಪ್ರೇಮಂ' ಚಿತ್ರದ ಬಳಿಕ ಕರ್ನಾಟಕದಲ್ಲಿಯೂ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಇದೀಗ ನಟ ನಿವಿನ್ ಪೌಲಿ ಅವರು ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರನ್ನು ಖರೀದಿಸಿದ್ದಾರೆ. ಇನ್ನು ಮಲಯಾಳಂ ಜನಪ್ರಿಯ ನಟರಾದ ಮೋಹನ್ ಲಾಲ್, ಸುರೇಶ್ ಗೋಪಿ ಮತ್ತು ಫಹಾದ್ ಫಾಜಿಲ್ ಅವರು ಕೂಡ ಈ ಟೊಯೊಟಾ ವೆಲ್‌ಫೈರ್ ಕಾರನ್ನು ಹೊಂದಿದ್ದಾರೆ. ನಟ ಈ ಕಾರನ್ನು ಕೊಚ್ಚಿಯಲ್ಲಿರುವ ಟೊಯೊಟಾ ಡೀಲರ್ ಶಿಪ್ ಖರೀದಿಸಿದ್ದಾರೆ. ನಟ ಖರೀದಿಸಿದ ಟೊಯೊಟಾ ವೆಲ್‌ಫೈರ್ ಕಾರು ಕಪ್ಪು ಬಣ್ಣವನ್ನು ಹೊಂದಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ನಟ ನಿವಿನ್ ಪೌಲಿ ಅವರು ಪ್ರೇಮಂ ಜೊತೆ 1983' ಮತ್ತು 'ಆಕ್ಷನ್ ಹೀರೋ ಬಿಜು' ನಂತಹ ಹಲವಾರು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ನಟ ಖರೀದಿಸಿದ ಟೊಯೊಟಾ ವೆಲ್‌ಫೈರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.90.80 ಲಕ್ಷವಾಗಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಜಪಾನ್ ಮೂಲದ ವಾಹನ ತಯಾರಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು ವೆಲ್‌ಫೈರ್ ಆಗಿದೆ. ಈ ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಈ ಟೊಯೊಟಾ ವೆಲ್‌ಫೈರ್‌ ಬಗ್ಗೆ ಹೇಳುವುದಾದರೆ, ಈ ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ, ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಈ ವೆಲ್‌ಫೈರ್‌ ಕಾರಿನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ. ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಈ ಐಷಾರಾಮಿ ವೆಲ್‌ಫೈರ್‌ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಇದರೊಂದಿಗೆ ಈ ಎಂಪಿವಿಯಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಸುರಕ್ಷತೆಗಾಗಿ ಈ ಐಷಾರಾಮಿ ವೆಲ್‌ಫೈರ್‌ ಕಾರಿನಲ್ಲಿ, 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ. ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ನೀಡಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಇನ್ನು ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ 20 ವರ್ಷಗಳ ನಂತರ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) 20 ಲಕ್ಷ (2 ಮಿಲಿಯನ್) ಯುನಿಟ್ ಸಂಚಿತ ಮಾರಾಟದ ಮೈಲಿಗಲ್ಲನ್ನು ತಲುಪಿದೆ ಎಂದು ಘೋಷಿಸಿದೆ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಅನ್ನು 1997 ರಲ್ಲಿ ಸಂಯೋಜಿಸಲಾಯಿತು. ಕಂಪನಿಯ ಮೊದಲ ಸ್ಥಾವರವು 1999 ರಲ್ಲಿ ಆನ್‌ಲೈನ್‌ಗೆ ಬಂದಿತು, ನಂತರ 2000 ರಲ್ಲಿ ಟೊಯೊಟಾ ಕ್ವಾಲಿಸ್ ಬಿಡುಗಡೆಯಾಯಿತು. ಮೊದಲ ಸ್ಥಾವರವು ಎರಡನೆಯಿಂದ ಸೇರಿಕೊಂಡಿತು, ಇದು ಬಿಡದಿಯಲ್ಲಿ 2010 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಎರಡೂ ಸ್ಥಾವರಗಳು 3.10 ಲಕ್ಷ ಯೂನಿಟ್‌ಗಳವರೆಗಿನ ಸಂಚಿತ ವಾರ್ಷಿಕ ಉತ್ಪಾದನಾ ಸಾಮರ್ಥ್ಯ. ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ನಂತಹ ಮಾದರಿಗಳಿಂದ ಬಲವಾದ ಪ್ರದರ್ಶನಗಳ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅದರ ಬಲವಾದ ಮಾರಾಟವು ಬಂದಿದ್ದು, ಇದು ಎಸ್‍ಯುವಿ ಮತ್ತು ಎಂಪಿವಿ ವಿಭಾಗಗಳಲ್ಲಿ ಬ್ರಾಂಡ್ ಅನ್ನು ಸ್ಥಾಪಿಸಲು ಸಹಾಯ ಮಾಡಿತು. ಇನ್ನು ಗ್ಲಾಂಝಾ ನೊಂದಿಗೆ ಹೆಚ್ಚು ಸಮೂಹ-ಮಾರುಕಟ್ಟೆ ವಿಭಾಗಗಳಲ್ಲಿ ಸಹಾಯ ಮಾಡಿದೆ. ಹ್ಯಾಚ್‌ಬ್ಯಾಕ್ ಮತ್ತು ಅರ್ಬನ್ ಕ್ರೂಸರ್ ಸಬ್-ಕಾಂಪ್ಯಾಕ್ಟ್ ಎಸ್‌ಯುವಿ ಹೊಸ ಗ್ರಾಹಕರನ್ನು ಬ್ರ್ಯಾಂಡ್‌ಗೆ ಆಕರ್ಷಿಸುವ ಮತ್ತು ನಿರಂತರ ಮಾರಾಟಕ್ಕೆ ಸಾಕ್ಷಿಯಾಗುವ ಎರಡೂ ಮಾದರಿಗಳು ಯಶಸ್ಸನ್ನು ಹೊಂದಿವೆ ಎಂದು ಟೊಯೊಟಾ ಹೇಳಿದೆ.

ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಖರೀದಿಸಿದ 'ಪ್ರೇಮಂ' ಖ್ಯಾತಿಯ ನಟ ನಿವೀನ್ ಪೌಲಿ

ಈ ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ. ಈ ಐಷಾರಾಮಿ ಟೊಯೊಟಾ ವೆಲ್‌ಫೈರ್ ಕಾರು ಸೆಲಬ್ರಿಟಿಗಳ ಮೆಚ್ಚಿನ ಅಯ್ಕೆಗಳಲ್ಲಿ ಒಂದಾಗಿದೆ.

Most Read Articles

Kannada
English summary
Malayalam actor nivin pauly buys new toyota velfire luxury mpv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X