ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ದೇಶದೆಲ್ಲೆಡೆ ನಡೆಯುತ್ತಿರುವ ಅಪಘಾತಗಳನ್ನು ಕಡಿಮೆಗೊಳಿಸಲು ಸರ್ಕಾರ ಹಾಗು ಪೊಲೀಸ್ ಇಲಾಖೆಗಳು ಹಲವಾರು ಆದೇಷಗಳನ್ನು ನೀದುತ್ತಲೇ ಇದ್ದಾರೆ. ಆದರಲ್ಲಿ ಅಂಡರ್ ಏಜ್ ಡ್ರೈವಿಂಗ್ ಕೂಡಾ ಒಂದು.

By Rahul Ts

ದೇಶದೆಲ್ಲೆಡೆ ನಡೆಯುತ್ತಿರುವ ಅಪಘಾತಗಳನ್ನು ಕಡಿಮೆಗೊಳಿಸಲು ಸರ್ಕಾರ ಹಾಗು ಪೊಲೀಸ್ ಇಲಾಖೆಗಳು ಹಲವಾರು ಆದೇಶಗಳನ್ನು ನೀಡುತ್ತಲೇ ಇದ್ದಾರೆ. ಆದರಲ್ಲಿ ಅಂಡರ್ ಏಜ್ ಡ್ರೈವಿಂಗ್ ಕೂಡಾ ಒಂದು. 18 ವರ್ಷಕ್ಕಿಂತ ಕಡಿಮೆ ವಯಸಸ್ಸಿನವರು ರಸ್ತೆಯಲ್ಲಿ ವಾಹನ ಓಡಿಸಲು ಯಾವುದೇ ಕಾನೂನಿಲ್ಲ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಆದರೂ ಅಪ್ರಾಪ್ತರು ಗಾಡಿ ಚಲಾಯಿಸುತ್ತಿರುವುದರಿಂದ ಹಲವಾರು ಅಪಘಾತಗಳು ಸಂಭವಿಸುತ್ತಲೇ ಇದೆ. ಅಲ್ಲದೆ ಹೆಲ್ಮೆಟ್ ಧರಿಸಿ ಚಲಾಯಿಸುತ್ತಾರೋ ಅಂದ್ರೆ ಅದು ಕೂಡಾ ಇಲ್ಲ. ಅಪ್ರಾಪ್ತರಿಗೆ ರಸ್ತೆಯಲ್ಲಿ ಗಾಡಿ ಓಡಿಸಲು ಬಿಟ್ಟರೆಂದು ಕೆಲ ದಿನಗಳ ಹಿಂದಷ್ಟೆ ಹೈದ್ರಾಬಾದ್ ನಗರದಲ್ಲಿ ಸುಮಾರು 62 ಮಂದಿ ಪೋಷಕರಿಗೆ ಶಿಕ್ಷೆ ನೀಡಲಾಗಿತ್ತು.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಕೇರಳದಲ್ಲಿ ಕೂಡ ಇಂತಹ ಕಾನೂನು ಒಂದಿದ್ದು, ಅಲ್ಲಿ ಕೂಡಾ ಯಾವುದೇ ಪೋಷಕರು ತಮ್ಮ 18 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳಿಗೆ ರಸ್ತೆಯಲ್ಲಿ ವಾಹನ ಚಲಾಯಿಸಲು ಕೊಟ್ಟರೆ ಆ ಪೋಷಕರ ಲೈಸೆನ್ಸ್ ಅನ್ನು ಸ್ಥಳದಲ್ಲಿಯೆ ರದ್ದು ಮಾಡಲಾಗುತ್ತದೆ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಆದರೆ ಇಲ್ಲೊಬ್ಬ ತನ್ನ ಮಡದಿ ಮತ್ತು ತನ್ನ ಇನ್ನಿಬರು ಮಕ್ಕಳ ಜೊತೆ ಸ್ಕೂಟರ್‍‍ನಲ್ಲಿ ಪ್ರಯಾಣಿಸುತ್ತಿರುವಾಗ 5 ವರ್ಷದ ಮಗಳ ಕೈಗೆ ಸ್ಕೂಟರ್ ಚಲಾಯಿಸಲು ಬಿಟ್ಟಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಹೌದು, ಕೇರಳದ 'ಕೊಚಿ'ಗೆ ಸೇರಿದ ಕುಟುಂಬವೊಂದು ತಮ್ಮ ಜುಪಿಟರ್ ಸ್ಕೂಟರ್‍‍ನಲ್ಲಿ ಪ್ರಾಯಾಣಿಸುತ್ತಿದ್ದ ವೇಳೆ 5 ವರ್ಷದ ಬಾಲಕಿ ಕೈಗೆ ವಾಹನವನ್ನು ಚಲಾಯಿಸಲು ಬಿಟ್ಟಿದ್ದ. ಈ ಘಟನೆಯನ್ನು ಅದೇ ರಸ್ಥೆಯಲ್ಲಿ ಹೋಗುತ್ತಿದ್ದ ಕಾರಿನಲ್ಲಿ ಹೋಗುತ್ತಿದ್ದವರು ಈ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲಾಣದಲ್ಲಿ ಅಪ್‍‍ಲೋಡ್ ಮಾಡಿದ್ದಾರೆ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಪಕ್ಕದಲ್ಲೆ ವೀಡಿಯೊ ಮಾಡುತ್ತಿದ್ದ ವ್ಯಕ್ತಿಯು ಆ ಮಗುವಿನ ತಂದೆಗೆ ನೀವು ಮಾಡುತ್ತಿರುವು ತಪ್ಪು ಮತ್ತು ಇದರಿಂದ ಅಪಘಾತವು ಸಂಭವಿಸಬಹುದೆಂದು ಹೇಳಿದ್ದಾರೆ. ಮತ್ತು ಈ ವೀಡಿಯೊನಲ್ಲಿ ತಂದೆ ಮಾತ್ರ ಹೆಲ್ಮೆಟ್ ಧರಿಸಿರುವುದು ಹಾಗು ಮಡದಿ ಮತ್ತು ಇನ್ನಿಬ್ಬರು ಮಕ್ಕಳು ಹೆಲ್ಮೆಟ್ ಧರಿಸಿಲ್ಲದಿರುವುದನ್ನು ಸಹ ಕಾಣಬಹುದಾಗಿದೆ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಈ ಘಟನೆಯ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಪೊಲೀಸರಿಗು ಸಹ ಈ ಮಾಹಿತಿ ದೊರೆತಿದೆ. ಮಾಹಿತಿ ದೊರೆತ ನಂತರ ಅದೇ ಸಂಜೆ ವಾಹನ ಚಲಾಯಿಸಲು ಬಿಟ್ಟ ತಂದೆಯನ್ನು ಪತ್ತೆ ಹಚ್ಚಿದ ಕೇರಳ ಪೊಲೀಸರು ಆತನ ಲೈಸೆನ್ಸ್ ಅನ್ನೇ ರದ್ದು ಮಾಡಿದ್ದಾರೆ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಇನ್ನು ಆ ತಂದೆಯು ಒಂದು ವರ್ಷದ ವರೆಗು ಸಾರ್ವಜನಿಕ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ವಾಹನವನ್ನು ಚಲಾಯಿಸುವ ಹಾಗಿಲ್ಲ. ಕೊಚಿಯ ಎಡಪಲ್ಲಿ ಪೊಲೀಸ್ ಸ್ಟೇಷನ್ ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆಯನ್ನು ಶುರು ಮಾಡಿದ್ದು, ಆ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಸ್ಕೂಟರ್ ಚಾಲನೆ ವೇಳೆ ಈತ ಮಾಡಿದ ಕೆಲಸ ಎಷ್ಟರ ಮಟ್ಟಿಗೆ ಸರಿ.?

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಅಂಡರ್ ಏಜ್ ಡ್ರೈವಿಂಗ್ ಕಾನೂನಿನ ಪ್ರಕಾರ ತಪ್ಪು. ಹೀಗೆ ಮಾಡಿದಲ್ಲಿ ಆ ವ್ಯಕ್ತಿಯ ಪೋಷಕರು ಸರಿಯಾದ ಶೀಕ್ಷೆಗೆ ಗುರಿಯಾಗುತ್ತಾರೆ. ಯಾವುದೇ ತರಬೇತಿಯಿಲ್ಲದೇ ರಸ್ತೆಯಲ್ಲಿ ಅಪ್ರಾಪ್ತರಿಗೆ ವಾಹನ ಚಾಲಾಯಿಸಲು ಬಿಡುವುದು ಅವರಿಗೆ ಮಾತ್ರವಲ್ಲದೇ ರಸ್ತೆಯಲ್ಲಿನ ಪಾದಚಾರಿಗಳಿಗೆ ಮತ್ತು ಇನ್ನಿತರೆ ಚಾಲಕರಿಗೆ ಅಪಾಯಕಾರಿ. ಅಷ್ಟಕ್ಕೂ ಪೋಷಕರು ತಮ್ಮ ಮಕ್ಕಳಿಗೆ ವಾಹನ ಚಾಲನೆ ಮಾಡಿಸಲೇ ಬೇಕೆಂದಲ್ಲಿ, ಹಲಾವಾರು ಮಾರ್ಗಗಳಿವೆ. ಇದಕ್ಕೆಂದೆ ಪ್ರತ್ಯೇಕವಾದ ರೇಸಿಂಗ್ ಟ್ಯಾಕ್‍‍ಗಳು ಮತ್ತು ಗೋ ಕಾರ್ಟಿಂಗ್ ಸ್ಥಳಗಳಿವೆ.

Source : Asianet

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಮಗನನ್ನು ಕಳೆದುಕೊಂಡ ಈ ವ್ಯಕ್ತಿ ಮಾಡಿದ ಕಾರ್ಯವನ್ನ ನಾವೆಲ್ಲಾ ಮೆಚ್ಚಲೇಬೇಕು...

ಆಕಾಶ್ ಅಂಬಾನಿಗೆ ಗರ್ಲ್ ಫ್ರೆಂಡ್ ಕೊಡಿಸಿದ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ?

ಎಸ್‍‍ಯುವಿ ಪ್ರಿಯರಿಗೊಂದು ಸಿಹಿಸುದ್ಧಿ-ಮಾರಾಟಕ್ಕಿವೆ ಆರ್ಮಿ ಜಿಪ್ಸಿ..

ಸ್ಟೀರಿಂಗ್ ವ್ಹೀಲ್ ವಾಹನದ ಮಧ್ಯದಲ್ಲಿ ಏಕೆ ಇರುವುದಿಲ್ಲ ಗೊತ್ತಾ..??

ಕಾರಿನ ಎಸಿ ಆನ್‍ ಆಗಿದ್ದಾಗ ಇಂಜಿನ್ ಸ್ಟಾರ್ಟ್ ಮಾಡಿದರೆ ಏನಾಗುತ್ತೆ..?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಆ ವೀಡಿಯೊ ಇಲ್ಲಿದೆ ನೋಡಿ..

Most Read Articles

Kannada
English summary
Man allows 5-year old daughter to ride TVS Jupiter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X