Just In
- 1 hr ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 1 hr ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 3 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 4 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Sports
ಐಪಿಎಲ್ 2021: ಅತಿ ದೊಡ್ಡ ಮೈಲಿಗಲ್ಲು ಮುಟ್ಟಲು ವಿರಾಟ್ ಕೊಹ್ಲಿ ಮತ್ತಷ್ಟು ಸನಿಹ
- News
ಸರ್ಕಾರಗಳಿಗೆ ವರದಾನವಾಗುತ್ತಿದೆ ಫೇಸ್ಬುಕ್ ನೀತಿಯಲ್ಲಿನ ಲೋಪ
- Finance
ಸತತ 15ದಿನಗಳಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ವ್ಯತ್ಯಾಸವಿಲ್ಲ
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸನ್ನಿ ಲಿಯೋನ್ ಪತಿಯ ಕಾರಿನ ನಂಬರ್ ಬಳಸಿ ಸಿಕ್ಕಿ ಬಿದ್ದ ಐಷಾರಾಮಿ ಕಾರು ಮಾಲೀಕ
ಕೆಲವು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಖ್ಯಾತ ಉದ್ಯಮಿ ರತನ್ ಟಾಟಾ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ತನ್ನ ಕಾರಿನಲ್ಲಿ ಬಳಸಿ ಸಿಕ್ಕಿ ಬಿದ್ದಿದ್ದರು. ಇದೇ ರೀತಿಯ ಮತ್ತೊಂದು ಘಟನೆ ಮುಂಬೈನಿಂದಲೇ ವರದಿಯಾಗಿದೆ.

ಈ ಘಟನೆಯಲ್ಲಿ ನಟಿ ಸನ್ನಿ ಲಿಯೋನ್ ಅವರ ಪತಿಯ ಕಾರಿನ ನೋಂದಣಿ ಸಂಖ್ಯೆಯನ್ನು ಬಳಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸನ್ನಿ ಲಿಯೋನ್ ಅವರ ಕಾರು ಚಾಲಕ ಈ ಕಾರಿನ ನೋಂದಣಿ ಸಂಖ್ಯೆಯನ್ನು ಗಮನಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ 38 ವರ್ಷದ ವ್ಯಕ್ತಿಯನ್ನು ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನ ಹೆಸರು ಪಿಯೂಷ್ ಸೇನ್ ಎಂದು ತಿಳಿದುಬಂದಿದೆ. ಆತ ತನ್ನ ಕಾರಿನಲ್ಲಿ ಸನ್ನಿ ಲಿಯೋನ್ ರವರ ಪತಿಯ ಮರ್ಸಿಡಿಸ್ ಬೆಂಝ್ ಕಾರಿನ ನೋಂದಣಿ ಸಂಖ್ಯೆಯನ್ನು ಬಳಸುತ್ತಿದ್ದ. ಆದರೆ ಪಿಯೂಷ್ ಸೇನ್ ಯಾವ ಕಾರು ಬಳಸುತ್ತಿದ್ದ ಎಂಬ ಬಗ್ಗೆ ಪೊಲೀಸರು ನಿಖರವಾದ ಮಾಹಿತಿ ನೀಡಿಲ್ಲ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪೊಲೀಸರು ಮರ್ಸಿಡಿಸ್ ಬೆಂಝ್ ಎಂದಷ್ಟೇ ಉಲ್ಲೇಖಿಸಿದ್ದಾರೆ. ಅಂದ ಹಾಗೆ ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ವೆಬರ್ ಅವರು ಮರ್ಸಿಡಿಸ್ ಬೆಂಝ್ ಜಿಎಲ್ 350 ಕಾರ್ ಅನ್ನು ಬಳಸುತ್ತಿದ್ದಾರೆ. ಸನ್ನಿ ಲಿಯೋನ್-ಡೇನಿಯಲ್ ವೆಬರ್ ದಂಪತಿಗಳು ಬಹುತೇಕ ಬಾರಿ ಈ ಕಾರಿನಲ್ಲಿಯೇ ಸಂಚರಿಸುತ್ತಾರೆ.

ಈ ಕಾರಿನ ನೋಂದಣಿ ಸಂಖ್ಯೆಯನ್ನೇ ಪಿಯುಷ್ ಸೇನ್ ತನ್ನ ಕಾರಿನಲ್ಲಿ ಬಳಸಿದ್ದಾನೆ. ಪಿಯೂಷ್ ಸೇನ್ ಎಷ್ಟು ದಿನಗಳಿಂದ ಈ ನೋಂದಣಿ ಸಂಖ್ಯೆಯನ್ನು ಬಳಸುತ್ತಿದ್ದ ಎಂಬುದನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ನೋಂದಣಿ ಸಂಖ್ಯೆ ತನ್ನ ಅದೃಷ್ಟದ ಸಂಖ್ಯೆಯಾಗಿದ್ದರಿಂದ ತಾನು ಈ ಸಂಖ್ಯೆಯನ್ನು ಬಳಸಿದ್ದಾಗಿ ಪಿಯೂಷ್ ಸೇನ್ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ. ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ವೆಬರ್, 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಇ-ಚಲನ್'ಗಳನ್ನು ಪಡೆದಿದ್ದರು.

ಪಿಯೂಷ್ ಸೇನ್ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಡೇನಿಯಲ್ ವೆಬರ್ ಅವರಿಗೆ ದಂಡ ವಿಧಿಸಿ ಇ ಚಲನ್ ನೀಡಲಾಗಿತ್ತು. ಪೊಲೀಸರಿಂದಬಂಧನಕ್ಕೊಳಗಾಗಿರುವ ಪಿಯೂಷ್ ಸೇನ್ ಮುಂಬೈನ ಕಲ್ಯಾಣ್ ಪ್ರದೇಶಕ್ಕೆ ಸೇರಿದವನು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪಿಯುಷ್ ಸೇನ್, ತನ್ನ ಕಾರಿನಲ್ಲಿ ಡೇನಿಯಲ್ ವೆಬರ್ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ಬಳಸುತ್ತಿರುವುದು ಅಂಧೇರಿಯಲ್ಲಿ ಸನ್ನಿ ಲಿಯೋನ್ ಕಾರು ಚಾಲಕಅಕ್ಬರ್ ಖಾನ್ ಅವರ ಕಣ್ಣಿಗೆ ಬಿದ್ದಿದೆ.

ಅಕ್ಬರ್ ಖಾನ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಿನ ತಪಾಸಣೆ ನಡೆಸಿದ ಪೊಲೀಸರು ದಾಖಲೆಗಳನ್ನು ತೋರಿಸುವಂತೆ ಕೇಳಿದ್ದಾರೆ. ಪಿಯೂಷ್ ಸೇನ್ ತನ್ನ ಕಾರಿನ ಅಸಲಿ ದಾಖಲೆಗಳನ್ನು ಕಾರಿನಲ್ಲಿ ಇಟ್ಟುಕೊಂಡಿದ್ದ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದಾಖಲೆಗಳಲ್ಲಿದ್ದ ನೋಂದಣಿ ಸಂಖ್ಯೆ ಪಿಯೂಷ್ ಸೇನ್ ತನ್ನ ಕಾರಿನಲ್ಲಿ ಬಳಸುತ್ತಿದ್ದ ನೋಂದಣಿ ಸಂಖ್ಯೆಗಿಂತ ಭಿನ್ನವಾಗಿತ್ತು. ಆಗ ಅಕ್ಬರ್ ಖಾನ್ ಡೇನಿಯಲ್ ವೆಬರ್ ಅವರಿಗೆ ಪೊಲೀಸರಿಗೆ ನೀಡಿರುವ ದೂರಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಡೇನಿಯಲ್ ವೆಬರ್ ತಮ್ಮ ಕಾರಿನ ದಾಖಲೆಗಳೊಂದಿಗೆ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ. ಪೊಲೀಸರು ಪಿಯೂಷ್ ಸೇನ್ ವಿರುದ್ಧ ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಭಾರತದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಹಿಂದೆ ರತನ್ ಟಾಟಾರವರ ಕಾರಿನ ನೋಂದಣಿ ಸಂಖ್ಯೆ ಬಳಸಿ ಸಿಕ್ಕಿಬಿದ್ದಿದ್ದ ಮಹಿಳೆ ತನ್ನ ರಾಶಿಗೆ ಅದೃಷ್ಟದಾಯಕವಾಗಿದ್ದ ಕಾರಣಕ್ಕೆ ರತನ್ ಟಾಟಾ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ಬಳಸಿದ್ದಾಗಿ ತಿಳಿಸಿದ್ದಳು.