ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಹೆಲ್ಮೆಟ್ ಇಲ್ಲದೆಯೆ ಸ್ಕೂಟರ್ ಅಥವಾ ಮೋಟಾರ್‍‍ಸೈಕಲ್ ಚಲಾಯಿಸುವುದು ತಪ್ಪೆಂದು ಟ್ರಾಫಿಕ್ ಪೊಲೀಸರು ಹಿಡಿದರೆ ಅದು ಒಂದು ರೀತಿಯ ನ್ಯಾಯ. ಆದ್ರೆ ಸೈಕಲ್‍‍ಗೂ ಕೂಡಾ ಹೆಲ್ಮೆಟ್ ಇಲ್ಲಾ ಅಂತ ಪೊಲೀಸರು ನಿಮ್ಮನ್ನು ಹಿಡಿದರೆ ಅಂತಾ ಪರಿಸ್ಥಿತಿಯನ್ನು ನೀವೇನು ಮಾಡುವಿರಿ.?

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ರಸ್ತೆಯಲ್ಲಿ ಸೈಕಲ್ ಚಲಾಯಿಸಲು ಇಲ್ಲಿ ಡ್ರೈವಿಂಗ್ ಲೈಸನ್ಸ್ ಇರ್ಬೇಕಂತೆ. ದೇಶದಲ್ಲಿನ ಬೇರಾವ ರಾಜ್ಯದಲ್ಲು ಈ ನಿಯಮ ಜಾರಿ ಇಲ್ಲವಾದ್ರು ಕೇರಳದಲ್ಲಿನ ಕಾಸರ್‍‍ಗೋಡ್‍ನಲ್ಲಿ ಈ ನಿಯಮವಿದೆ. ಅಷ್ಟೆ ಅಲ್ಲಾ ಸೈಕಲ್‍‍ನಲ್ಲಿ ಓವರ್‍‍ಸ್ಪೀಡಿಂಗ್ ಮಾಡಿದರೂ ಇಲ್ಲಿ ತಪ್ಪಂತೆ..

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಹೌದು, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾದ ಉತ್ತರ ಪ್ರದೇಶ ಮೂಲದ ಕಾಸಿಂ‍‍ರವರನ್ನು ಕಂಬಾಲದಲ್ಲಿನ ಹೆದ್ದಾರಿ ಪೊಲೀಸರು ಸೈಕಲ್‍ನಲ್ಲಿ ಹೋಗುತ್ತಿದ್ದಾಗ ಹಿಡಿದು, ಹೆಲ್ಮೆಟ್ ಹಾಗು ಲಸನ್ಸ್ ಇಲ್ಲದಿರುವ ಕಾರಣ ಮತ್ತು ಓವರ್ ಸ್ಪೀಡಿಂಗ್ ಮಾಡಿದ್ದಾರೆಂದು ದಂಡ ವಿಧಿಸಲಾಗಿದೆ.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಹೆದ್ದಾರಿ ರಸ್ತೆಯ ಮೇಲೆ ಸೈಕಲ್‍ನಲ್ಲಿ ಬರುತ್ತಿದ್ದ ಕಾಸಿಂರನ್ನು ಹಿಡಿದು ಓವರ್ ಸ್ಪೀಡಿಂಗ್ ಮಾಡಿರುವುದಾಗಿ ರೂ.2000 ಸಾವಿರದ ದಂಡವನ್ನು ವಿಧಿಸಿದ್ದಾರೆ. ಪಾಪ ದಿನಕ್ಕೆ ರೂ.400 ಸಂಪಾದಿಸುತ್ತಿದ್ದ ಕಾಸಿಂ ಹತ್ತಿರ ಅಷ್ಟು ದುಡ್ಡು ಹೇಗೆ ಇರುತ್ತೆ.?

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಕಾಸಿಂ ಅವರು ಕೂಲಿ ಕೆಲಸ ಮಾಡಿ ಜೀವನ ಕಳೆಯುತ್ತಿರುವ ವ್ಯಕ್ತಿಯೆಂದು ತಿಳಿದು, ಹಿಂದೆ ನೀಡಿದ ರಶೀದಿಯನ್ನು ರದ್ದುಗೊಳಿಸಿ, ಸೈಕಲ್‍ನ ಚಕ್ರಗಳನ್ನು ಚಪ್ಪಟೆಯಾಗೊಳಿಸಿರುವುದಾಗಿ ಅವರಿಗೆ ರೂ.500 ದಂಡವನ್ನು ವಿಧಿಸಿ ರಸೀದಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಆದರೆ ಕಾಸಿಂರಿಗೆ ನೀಡಿದ ರಸೀದಿಯಲ್ಲಿ ಸ್ಥಳಿಯ ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲಾ ಸ್ವಾಮಿ ಸೈಕಲ್‍‍ಗೆ ಅದೆಂತಹ ನೋಂದಣಿ ಸಂಖ್ಯೆ.? ಇನ್ನು ಉಲ್ಲೇಖಿಸಲಾಗಿದ್ದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದರೆ ಅದು ಒಂದು ಹೆಣ್ಣಿನ ಸ್ಕೂಟರ್‍‍ದಂತೆ.!

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಕಳೆದ ಬುಧವಾರ ಅಕ್ಟೋಬರ್ 3,2018 ರಂದು ಈ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದ್ದು, ಕಾಸಿಂ ಅವರು ನಡೆದ ಘಟನೆಯ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅಲ್ಲಿನ ಪೊಲೀಸರು ಯಾವ ರೀತಿಯಲ್ಲಿ ತಮ್ಮನ್ನು ದೋಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ವಿಡಿಯೋನಲ್ಲಿ ಕಾಸಿಂರವರು "ನಾನು ದಿನನಿತ್ಯ ಅದೇ ದಾರಿಯಲ್ಲಿ ನನ್ನ ಸೈಕಲ್‍ನ ಮೇಲೆ ಪ್ರಯಾಣಿಸುತ್ತೇನೆ ಅದನ್ನು ಪೊಲೀಸರು ಕೂಡಾ ನೋಡಿದ್ದಾರೆ. ಆದರೆ ಇಂದು ನನ್ನನ್ನು ತಡೆದು ಮೊದಲಿಗೆ ರೂ.2000 ದಂಡವನ್ನು ವಿಧಿಸಿ, ನನ್ನನ್ನು ಪರಿಶೀಲಿಸಿದ ನಂತರ ರೂ.2000 ರಸೀದಿಯನ್ನು ರದ್ದು ಮಾಡಿ ಕೊನೆಗೆ ರೂ.500 ದಂಡದ ರಸೀದಿಯನ್ನು ನೀಡಿದ್ದಾರೆ. ಎಂದು ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಧ್ಯಕ್ಕೆ ಈ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ಅಲ್ಲಿನ ಜಿಲಾಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಜಿಲ್ಲಾಧಿಕಾರಿಯ ಮುಖ್ಯಸ್ಥರು ಈ ಘಟನೆಯ ಕುರಿತಾಗಿ ತನಿಖೆಯಾಗಬೇಕೆಂದು ಆದೇಶಿಸಿದ್ದು, ಸ್ಥಳಿಯ ಮಾಧ್ಯಮ ವರದಿಗಳ ಪ್ರಕಾರ ತನಿಖೆಯಲ್ಲಿ ಎಸ್‍ಐ ತಪ್ಪಿತಸ್ಥರನ್ನು ಕಂಡುಹಿಡಿದಿದ್ದಾರೆ ಮತ್ತು ಇಲಾಖೆ ಇಂದ ನೀಡಲಾದ ಕ್ರಮವನ್ನು ಎದುರಿಸಬೇಕಾಗುತ್ತದೆ.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಇದು ಹೆಲ್ಮೆಟ್ ಇಲ್ಲಾ ಅಂತಾ ಮತ್ತೆ ಓವರ್ ಸ್ಪೀಡಿಂಗ್ ಕಾರಣಕ್ಕೆ ಟ್ರಾಫಿಕ್ ಪೋಲಿಸರು ಕಾಸಿಂರವರ ಸೈಕಲ್‍‍ಗೆ ನೀಡಿದ ದಂಡವಾದರೆ, ಇನ್ನು ಗೋವಾನಲ್ಲಿ ಸೀಟ್ ಬೆಲ್ಟ್ ಧರಿಸಲಿಲ್ಲವೆಂದು ಬೈಕ್ ಸವಾರನಿಗೆ ರಸೀದಿಯನ್ನು ನೀಡಿದ್ದಾರೆ. ಈ ಕುರಿತಾದ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಸೀಟ್ ಬೆಲ್ಟ್ ಹಾಕಿಲ್ಲವೆಂದು ರಾಯಲ್ ಎನ್‌ಫೀಲ್ಡ್ ಸವಾರನಿಗೆ ದಂಡ ಹಾಕಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಾರಣಾಂತರಗಳಿಂದ ಆ ವ್ಯಕ್ತಿ ಹೆಲ್ಮೆಟ್ ಹಾಕದೇ ಬೈಕ್ ಚಾಲನೆ ಮಾಡ್ತಾ ಇದ್ದ. ಇದನ್ನು ನೋಡಿದ ಟ್ರಾಫಿಕ್ ಪೊಲೀಸರು ಬೈಕ್ ಸವಾರನನ್ನು ತಡೆದು ದಂಡ ಹಾಕಿಯೇ ಬಿಟ್ರು.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಇನ್ನು ಕಾನೂನು ಪ್ರಕಾರ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವುದು ಅಪರಾಧವೇ ಸರಿ. ಹೀಗಾಗಿ ಬೈಕ್ ಸವಾರನ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರು.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಆದ್ರೆ ದಂಡ ವಸೂಲಿ ಮಾಡಿದ ನಂತರ ಪೊಲೀಸ್ ನೀಡಿದ ರಶೀದಿ ನೋಡಿ ಬೈಕ್ ಸವಾರ ಕಂಗಾಲಾಗಿದ್ದ. ರಶೀದಿಯಲ್ಲಿ ನಮೂದಿಸಲಾಗಿದ್ದ ವಿವರಣೆಗಳು ಬೈಕ್ ಸವಾರನಿಗೆ ನಗೆ ತರಿಸಿದ್ದು ಮಾತ್ರ ಸುಳ್ಳಲ್ಲ.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಯಾಕೇಂದ್ರೆ ಪೊಲೀಸರು ಹೆಲ್ಮೆಟ್ ಹಾಕದ ಹಿನ್ನೆಲೆ ದಂಡ ವಸೂಲಿ ಮಾಡಿದ್ದಾರು ರಶೀದಿಯಲ್ಲಿ ಮಾತ್ರ ಸೀಟ್ ಬೆಲ್ಟ್ ಧರಿಸಿಲ್ಲವೆಂದೂ ನಮೂದಿಸಿ ಜಾಣ ಕುರುಡತನ ಪ್ರದರ್ಶನ ಮಾಡಿದ್ದರು.

ಹೆಲ್ಮೆಟ್ ಇಲ್ಲ ಅಂತ ಸೈಕಲ್ ಸವಾರನನ್ನು ಹಿಡಿದ ಪೊಲೀಸರು. ಮುಂದೇನಾಯ್ತು.?

ಅಂದಹಾಗೆ ಇದೆಲ್ಲಾ ನಡೆದಿದ್ದು ಗೋವಾದಲ್ಲಿ. ಅಘನಾಶಿನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತದೊಂದು ಹಾಸ್ಯಭರಿತ ಪ್ರಸಂಗ ನಡೆದಿದ್ದು, ಪೊಲೀಸರು ನೀಡಿದ ರಶೀದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತೋಷ್ ನಾಯಕ್ ಎಂಬಾತನಿಗೆ ಈ ರೀತಿ ದಂಡ ವಿಧಿಸಿದ್ದ ಪೊಲೀಸರು, ಹೆಲ್ಮೆಟ್ ಬದಲಿಗೆ ಸೀಟ್ ಬೆಲ್ಟ್ ಧರಿಸಿಲ್ಲವೆಂದು ದಂಡವಸೂಲಿ ಮಾಡಿ ನಗೆಪಾಟಲಿಗೆ ಈಡಾಗಿದ್ದಾರೆ.

Most Read Articles

Kannada
English summary
Man Booked For 'Over Speeding' A Bicycle And Riding Without Helmet In Kerala. Really!
Story first published: Monday, October 8, 2018, 15:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X