ಲಾಕ್‍ಡೌನ್: ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಸೋಂಕನ್ನು ಹರಡದಂತೆ ತಡೆಗಟ್ಟಲು ಭಾರತದಾದ್ಯಂತ ಮಾರ್ಚ್ 25ರಿಂದ 21 ದಿನಗಳ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ದೇಶದ ಜನರ ಹಿತದೃಷ್ಟಿಯಿಂದ ಈ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಜೀವನೋಪಾಯಕ್ಕಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ಅನೇಕ ಜನರಿದ್ದಾರೆ. ಅಂತಹವರು ಹಠಾತ್ ಆಗಿ ಲಾಕ್‌ಡೌನ್‌ ಜಾರಿಗೊಳಿಸಿದ ಕಾರಣಕ್ಕೆ ತಮ್ಮ ಮನೆಗೆ ಹೋಗಲು ಸಾಧ್ಯವಾಗಲಿಲ್ಲ.

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಲಾಕ್‌ಡೌನ್‌ ವೇಳೆಯಲ್ಲಿ ಬೇರೆ ಊರಿನಲ್ಲಿ ಸಿಲುಕಿದ್ದ ತನ್ನ ಮಗನನ್ನು ಜೊತೆಗೆ ಕರೆದೊಯ್ಯಲು ಹೈದರಾಬಾದ್ ಮಹಿಳೆಯೊಬ್ಬರು ಸ್ಕೂಟರ್‌ನಲ್ಲಿ 1,400 ಕಿ.ಮೀ ಪ್ರಯಾಣ ಬೆಳೆಸಿದ್ದ ಘಟನೆ ಇತ್ತೀಚಿಗೆ ವರದಿಯಾಗಿತ್ತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಅದೇ ರೀತಿಯ ಮತ್ತೊಂದು ಪ್ರಕರಣ ಈಗ ವರದಿಯಾಗಿದೆ. 21 ದಿನಗಳ ಲಾಕ್ ಡೌನ್ ಘೋಷಣೆಯಾದ ನಂತರ 24 ವರ್ಷದ ಯುವಕನೊಬ್ಬ ಸೈಕಲ್‌ನಲ್ಲಿಯೇ ತನ್ನ ಊರನ್ನು ತಲುಪಿದ್ದಾನೆ.

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಯುವಕ ಮುಂಬೈನಿಂದ 1,800 ಕಿ.ಮೀ ದೂರದಲ್ಲಿರುವ ಒಡಿಶಾದ ಜಾಜಾಪುರ ಜಿಲ್ಲೆಗೆ ಪ್ರಯಾಣಿಸಿದ್ದಾನೆ. ವರದಿಗಳ ಪ್ರಕಾರ, ಮಹೇಶ್ ಜೆನಾ ಎಂಬ ಈ ಯುವಕ ಜಾಜಾಪುರ ಜಿಲ್ಲೆಯ ಬಾದಾಸೌರ್ ಗ್ರಾಮಕ್ಕೆ ಸೇರಿದವನು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ ಯುವಕ ಕೆಲಸ ಹುಡುಕಿಕೊಂಡು ತನ್ನ ಹಳ್ಳಿಯಿಂದ ಮುಂಬೈಗೆ ಬಂದಿದ್ದ. ಮುಂಬೈಯಲ್ಲಿ ಮನೆ ಕಟ್ಟುವ ಕೆಲಸ ಮಾಡುತ್ತಿದ್ದ. ಈ ವೇಳೆ ಮುಂಬೈ ನಗರದಲ್ಲಿ ಲಾಕ್ ಡೌನ್ ಘೋಷಿಸಲಾಯಿತು.

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಈ 24 ವರ್ಷದ ಯುವಕನ ಬಳಿ ಹೆಚ್ಚು ಹಣವಿರಲಿಲ್ಲ. ಈ ಕಾರಣಕ್ಕೆ ಅವನಿಗೆ ತಾನು ಮುಂಬೈನಲ್ಲಿ ವಾಸವಿದ್ದ ಮನೆಯ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗಲಿಲ್ಲ. ಹಣಕಾಸಿನತೊಂದರೆಯಿಂದಾಗಿ ಮಹೇಶ್ ಏಪ್ರಿಲ್ 2ರಂದು ತನ್ನ ಗ್ರಾಮಕ್ಕೆ ಹೋಗಲು ನಿರ್ಧರಿಸಿದನು.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮಹೇಶ್ ತನ್ನ ಬಳಿಯಿದ್ದ ಕೆಲವು ನೂರು ರೂಪಾಯಿಗಳೊಂದಿಗೆ ತನ್ನ ಪ್ರಯಾಣವನ್ನು ಆರಂಭಿಸಿದನು. ರೈಲು ಹಾಗೂ ಬಸ್ಸುಗಳ ಸೇವೆ ಇಲ್ಲದ ಕಾರಣಕ್ಕೆ ಮಹೇಶ್ ತನ್ನ ಸೈಕಲ್‌ನೊಂದಿಗೆ ಪ್ರಯಾಣವನ್ನು ಆರಂಭಿಸಿದ.

ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ತನ್ನ ಪ್ರಯಾಣದ ಸಮಯದಲ್ಲಿ, ಮಹೇಶ್ ಪ್ರತಿದಿನ ಸುಮಾರು 10-12 ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿ, ದಿನಕ್ಕೆ ಸುಮಾರು 230 ಕಿ.ಮೀ ದೂರ ಕ್ರಮಿಸಿದ್ದಾನೆ. ದಾರಿಯುದ್ದಕ್ಕೂ ಪೊಲೀಸರು ಹಾಗೂ ಸ್ಥಳೀಯರು ಸಹಾಯ ಮಾಡಿದ್ದಾರೆ ಎಂದು ಮಹೇಶ್ ಹೇಳಿದ್ದಾನೆ. ಮಹೇಶ್ ಏಪ್ರಿಲ್ 9ರಂದು ತನ್ನ ಮನೆ ತಲುಪಿದ್ದಾನೆ.

Most Read Articles

Kannada
English summary
Man cycles 1800km from Mumbai to Odisha during lockdown. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X