ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ವಿಶ್ವದ ನಂಬರ್ ಒನ್ ಶ್ರೀಮಂತರಾದ ಜನಪ್ರಿಯ ಇ ಕಾಮರ್ಸ್ ಕಂಪನಿಯಾದ ಅಮೆಜಾನ್‌ನ ಮುಖ್ಯಸ್ಥರಾದ ಜೆಫ್ ಬೆಜೋಸ್, ಬ್ಲೂ ಆರಿಜಿನ್ ಎಂಬ ಬಾಹ್ಯಾಕಾಶ ಕಂಪನಿಯನ್ನು ನಡೆಸುತ್ತಿದ್ದಾರೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಈ ಕಂಪನಿಯು ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಗುರಿಯನ್ನು ಹೊಂದಿದೆ. ಕಂಪನಿಯ ಮೊದಲ ಬಾಹ್ಯಾಕಾಶ ಯಾನವು ಜುಲೈ 20ರಂದು ನಡೆಯಲಿದೆ ಎಂದು ವರದಿಯಾಗಿದೆ. ಬ್ಲೂ ಆರಿಜಿನ್ ಕಂಪನಿಯು ಹೊಸ ಶೆಫರ್ಡ್ ಬೂಸ್ಟರ್ ಅನ್ನು ಆರಂಭಿಸಲು ಯೋಜಿಸಿದೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಈ ಮೊದಲ ಯಾನದಲ್ಲಿ ಜೆಫ್ ಬೆಜೋಸ್ ತನ್ನ ಸಹೋದರ ಮಾರ್ಕ್ ಜೊತೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಈ ಪ್ರವಾಸದಲ್ಲಿ ಅವರ ಜೊತೆಗೆ ಮತ್ತೊಬ್ಬ ವ್ಯಕ್ತಿ ಪ್ರಯಾಣಿಸಲಿದ್ದಾರೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಆ ಮತ್ತೊಬ್ಬ ವ್ಯಕ್ತಿಗಾಗಿ ಬ್ಲೂ ಆರಿಜಿನ್ ಕಳೆದ ಒಂದು ತಿಂಗಳಿನಿಂದ ಬಿಡ್ಡಿಂಗ್ ನಡೆಸುತ್ತಿದೆ. ಸುಮಾರು 140 ದೇಶಗಳ ಸಾವಿರಾರು ಜನರು ಈ ಬಿಡ್ಡಿಂಗ್'ನಲ್ಲಿ ಭಾಗವಹಿಸಿದ್ದರು. ಈ ಬಿಡ್ಡಿಂಗ್'ನ ಆರಂಭಿಕ ಬೆಲೆಯನ್ನು ರೂ.20 ಕೋಟಿಗಳಿಗೆ ನಿಗದಿಪಡಿಸಲಾಗಿತ್ತು.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಒಂದು ತಿಂಗಳ ಅವಧಿಯಲ್ಲಿ ಹರಾಜು ಪ್ರಕ್ರಿಯೆಯು 5 ಮಿಲಿಯನ್ ಡಾಲರ್ ಅಂದರೆ ರೂ.36 ಕೋಟಿ 61 ಲಕ್ಷಗಳವರೆಗೆ ನಡೆಯಿತು. ಹರಾಜಿನ ಕೊನೆಯ ದಿನವಾದ ಜೂನ್ 12ರಂದು ಈ ಮೊತ್ತವು 5 ಪಟ್ಟು ಹೆಚ್ಚಾಗಿದೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ವ್ಯಕ್ತಿಯೊಬ್ಬರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರೊಂದಿಗೆ ಬಾಹ್ಯಾಕಾಶಯಾನ ಕೈಗೊಳ್ಳಲು 28 ಮಿಲಿಯನ್ ಡಾಲರ್ ಅಂದರೆ ಸುಮಾರು ರೂ.205 ಕೋಟಿ ಬಿಡ್ ಮಾಡಿದ್ದಾರೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಈ ಮೊತ್ತಕ್ಕಿಂತ ಯಾರೂ ಹೆಚ್ಚು ಬಿಡ್ ಮಾಡದ ಕಾರಣ ಬ್ಲೂ ಆರಿಜಿನ್ ಈ ಸ್ಥಾನವನ್ನು ಅವರಿಗೆ ಕಾಯ್ದಿರಿಸಿದೆ. ಬಿಡ್ ಮಾಡಿದವರ ಹೆಸರು ಹಾಗೂ ಇನ್ನಿತರ ವಿವರಗಳನ್ನು ಬ್ಲೂ ಒರಿಜಿನ್ ಇನ್ನೂ ಬಿಡುಗಡೆಗೊಳಿಸಿಲ್ಲ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಜುಲೈ 5ರಂದು ಅಮೆಜಾನ್ ಸಿಇಒ ಸ್ಥಾನದಿಂದ ಕೆಳಗಿಳಿಯುತ್ತಿರುವ ಜೆಫ್ ಬೆಜೋಸ್, ತಮ್ಮ ಕಂಪನಿಗಳ ಹೊಸ ತಲೆಮಾರಿನ ಅಭಿವೃದ್ಧಿ ಯೋಜನೆಗಳತ್ತ ಗಮನ ಹರಿಸಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಬಾಹ್ಯಾಕಾಶಯಾನ ಕೈಗೊಳ್ಳುವುದು ಅವರ ಬಾಲ್ಯದ ಕನಸಾಗಿತ್ತು. ಭವಿಷ್ಯದಲ್ಲಿ ಬಾಹ್ಯಾಕಾಶಯಾನ ಯೋಜನೆಗಳನ್ನು ಆರಂಭಿಸುವ ಪ್ರಯತ್ನಗಳನ್ನು ಅವರು ಈಗಾಗಲೇ ಆರಂಭಿಸಿದ್ದಾರೆ.

ಹತ್ತು ನಿಮಿಷದ ಪ್ರಯಾಣಕ್ಕಾಗಿ ನಡೆಯಿತು ರೂ.205 ಕೋಟಿ ಬಿಡ್ಡಿಂಗ್

ಮುಂದಿನ ತಿಂಗಳು ತನ್ನ ಮೊದಲ ಬಾಹ್ಯಾಕಾಶ ಯಾನವನ್ನು ಆರಂಭಿಸಲಿರುವ ಅವರ ಬ್ಲೂ ಒರಿಜಿನ್ ಕಂಪನಿಯನ್ನು ಸುಮಾರು 20 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಈ ಬಾಹ್ಯಾಕಾಶ ಯಾನದ ಅವಧಿ ಕೇವಲ 10 ನಿಮಿಷ ಎಂಬುದು ಗಮನಿಸಬೇಕಾದ ಸಂಗತಿ.

Most Read Articles

Kannada
English summary
Man does 28 million dollars bidding for space trip with Jeff Bezos. Read in Kannada.
Story first published: Tuesday, June 15, 2021, 9:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X