ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಶೋರೂಂ ಮಾಲೀಕರಿಗೆ ವಂಚಿಸಿ ಕಾರುಗಳನ್ನು ಖರೀದಿಸಲು ಹಲವಾರು ಮಾರ್ಗಗಳಿವೆ. ಕೆಲವರು ಶೋರೂಂ ಮಾಲೀಕರನ್ನು ವಂಚಿಸಿ ಕಾರುಗಳನ್ನು ಖರೀದಿಸುವಲ್ಲಿ ಯಶಸ್ವಿಯಾದರೆ, ಇನ್ನೂ ಕೆಲವರು ವಂಚಿಸಲು ಹೋಗಿ ಸಿಕ್ಕಿ ಬೀಳುತ್ತಾರೆ.

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಇತ್ತೀಚೆಗೆ ನಡೆದ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಅಮೆರಿಕಾದ ಫ್ಲೋರಿಡಾ ನಿವಾಸಿಯೊಬ್ಬ ನಕಲಿ ಚೆಕ್ ನೀಡಿ ಪೋರ್ಷೆ ಕಾರು ಖರೀದಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ಕಾರು ಖರೀದಿಸಿದ ನಂತರ ನಕಲಿ ಚೆಕ್ ಮೂಲಕ ಐಷಾರಾಮಿ ವಾಚ್ ಖರೀದಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕ್ಯಾಸ್ಸಿ ವಿಲಿಯಂ ಕೆಲ್ಲಿ ಎಂಬ ವ್ಯಕ್ತಿ ಜುಲೈ 27ರಂದು ಫ್ಲೋರಿಡಾದಲ್ಲಿ ಹೊಸ ಪೋರ್ಷೆ 911 ಕಾರ್ ಅನ್ನು ನಕಲಿ ಚೆಕ್ ನೀಡುವ ಮೂಲಕ ಖರೀದಿಸಿದ್ದಾನೆ.

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಅವನು ತನ್ನ ಮನೆಯಲ್ಲಿಯೇ ಈ ನಕಲಿ ಚೆಕ್ ಅನ್ನು ಪ್ರಿಂಟ್ ಮಾಡಿದ್ದಾನೆ ಎಂಬುದೇ ವಿಶೇಷ. ಕೆಲ ಸಮಯದ ನಂತರ ಕಾರು ಶೋರೂಂನವರಿಗೆ ತಾವು ನಕಲಿ ಚೆಕ್ ನಿಂದಾಗಿ ಒಂದು ಕೋಟಿ ಕಳೆದು ಕೊಂಡು ಮೋಸ ಹೋಗಿರುವುದು ತಿಳಿದು ಬಂದಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಪೋರ್ಷೆ ಕಾರು ಶೋರೂಂ ಮಾಲೀಕರು ಕೌಂಟಿ ಶೆರಿಫ್‌ಗೆ 139,203.05 ಡಾಲರ್ (ಸುಮಾರು ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚು) ಮೊತ್ತದ ನಕಲಿ ಚೆಕ್ ನೀಡಿ ಪೋರ್ಷೆ ಕಾರು ಖರೀದಿಸಿದವನ ಬಗ್ಗೆ ದೂರು ನೀಡಿದ್ದಾರೆ.

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಪೊಲೀಸರು ನಕಲಿ ಚೆಕ್ ನೀಡಿದ ಕ್ಯಾಸ್ಸಿಯನ್ನು ಪತ್ತೆ ಮಾಡುವ ಉದ್ದೇಶದಿಂದ ಆತ ಹೊಸ ಪೋರ್ಷೆ ಕಾರಿನೊಂದಿಗಿರುವ ಫೋಟೋವನ್ನು ಬಿಡುಗಡೆಗೊಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಆತ ಒಂದು ದಿನದ ನಂತರ, ಮತ್ತೆ ನಕಲಿ ಚೆಕ್ ಬಳಸಿ ಐಷಾರಾಮಿ ರೋಲೆಕ್ಸ್ ವಾಚ್ ಖರೀದಿಸಲು ಮುಂದಾಗಿದ್ದಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಕ್ಯಾಸ್ಸಿ ಜುಲೈ 28ರಂದು 61,521 ಡಾಲರ್ ನ ನಕಲಿ ಚೆಕ್ ನೀಡಿ ವಾಚ್ ಖರೀದಿಸಲು ಮುಂದಾಗಿದ್ದ. ಆದರೆ ಬ್ಯಾಂಕಿನಲ್ಲಿ ಚೆಕ್ ಕ್ಲಿಯರ್ ಆಗುವವರೆಗೂ ವಾಚ್ ನೀಡುವುದಿಲ್ಲವೆಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಇದು ನಕಲಿ ಚೆಕ್ ಎಂದು ಹಾಗೂ ಕ್ಯಾಸ್ಸಿಯಿಂದ ಹಲವು ಬಾರಿ ಇದೇ ರೀತಿಯ ನಕಲಿ ಚೆಕ್ ಗಳನ್ನು ಪಡೆದಿರುವುದಾಗಿ ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ.

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಪೋರ್ಷೆ ಕಾರು ವಂಚನೆ ಪ್ರಕರಣದಲ್ಲಿ ಕ್ಯಾಸ್ಸಿಯನ್ನು ಹುಡುಕುತ್ತಿದ್ದ ಕೌಂಟಿ ಶೆರಿಫ್ ಗೆ, ವಾಚ್ ಮಳಿಗೆ ಸಿಬ್ಬಂದಿ ದೂರು ನೀಡಿದ್ದಾರೆ. ಕೌಂಟಿ ಶೆರಿಫ್ ಕಚೇರಿ ಸಿಬ್ಬಂದಿ ಕ್ಯಾಸ್ಸಿಯನ್ನು ಬಂಧಿಸಿದ್ದಾರೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ನಕಲಿ ಚೆಕ್ ನೀಡಿ ಐಷಾರಾಮಿ ಕಾರು ಖರೀದಿಸಿದ ಐನಾತಿ

ಕ್ಯಾಸ್ಸಿ ವಿಲಿಯಂ ಕೆಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ನಕಲಿ ಚೆಕ್‌ಗಳನ್ನು ತನ್ನ ಮನೆಯಲ್ಲಿಯೇ ಮುದ್ರಿಸಿದ್ದಾಗಿ ತಿಳಿಸಿದ್ದಾನೆ. ಇದು ಇಷ್ಟು ದೊಡ್ಡ ಅಪರಾಧವಾಗುತ್ತದೆ ಎಂದು ತಿಳಿದಿರಲಿಲ್ಲವೆಂದು ಕ್ಯಾಸ್ಸಿ ಹೇಳಿದ್ದಾನೆ.

ಮೂಲ: ಟೈಮ್ಸ್ ನೌ ನ್ಯೂಸ್

Most Read Articles

Kannada
English summary
Man purchased new Porsche super car with fake cheque. Read in Kannada.
Story first published: Wednesday, August 5, 2020, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X