ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಐರನ್ ಮ್ಯಾನ್ ಹಾಲಿವುಡ್‍‍ನ ಜನಪ್ರಿಯ ಸಿನಿಮಾಗಳಲ್ಲಿ ಒಂದು. ಸೂಪರ್ ಹೀರೊವೊಬ್ಬ ಜಗತ್ತನ್ನು ತನ್ನ ಅಮಾನುಷ ಶಕ್ತಿಯಿಂದ ಹೇಗೆ ಕಾಪಾಡುತ್ತಾನೆ ಎಂಬುದು ಈ ಚಿತ್ರದ ಹೈಲೆಟ್. ಈ ಚಿತ್ರದಲ್ಲಿ ಆಕ್ಷನ್ ಹಾಗೂ ಸಾಹನ ದೃಶ್ಯಗಳಿಗೆ ಯಾವುದೇ ಕೊರತೆಯಿಲ್ಲ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ಸಿನಿಮಾದಲ್ಲಿ ಬಳಕೆಯಾಗಿರುವ ಟೆಕ್ನಾಲಜಿಯು ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಈ ಸಿನಿಮಾದಲ್ಲಿರುವ ಪ್ರತಿಯೊಂದು ದೃಶ್ಯವು ಅದ್ಭುತವಾಗಿದೆ. ಈ ಕಾರಣಕ್ಕೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗೆ ಈ ಸಿನಿಮಾಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ಸಿನಿಮಾದಲ್ಲಿ ಐರನ್‍‍ಮ್ಯಾನ್ ಫ್ಲೈಯಿಂಗ್ ಕಾಸ್ಟ್ಯೂಮ್ ಧರಿಸಿರುತ್ತಾನೆ. ಇದರಿಂದಾಗಿ ಇಡೀ ವಿಶ್ವವನ್ನು ಹಾರಾಡುತ್ತಾ ಸಂಚರಿಸಲು ಸಾಧ್ಯವಾಗುತ್ತದೆ. ಈ ಕಾಸ್ಟ್ಯೂಮ್ ಫೈರ್‍ಆರ್ಮ್ ಹಾಗೂ ಇತರ ಮಿಷನ್‍‍ಗಳನ್ನು ದೂರದಿಂದಲೇ ಕಂಟ್ರೋಲ್ ಮಾಡುತ್ತದೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ರೀತಿಯ ಕಾಸ್ಟ್ಯೂಮ್ ಅನ್ನು ನಿಜ ಜೀವನದಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ಜನರ ಅಭಿಪ್ರಾಯ. ಆದರೆ ವಿನ್ಸ್ ರೆಫಾಟ್ ಎಂಬ ಯುವಕ ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇವರು ಮನುಷ್ಯ ಹಾರಾಡಲು ಸಾಧ್ಯವಾಗುವಂತಹ ಕಾಸ್ಟ್ಯೂಮ್ ಅನ್ನು ವಿನ್ಯಾಸಗೊಳಿಸಿ ಅದರಿಂದ ಯಶಸ್ವಿಯಾಗಿ ಹಾರಾಟವನ್ನು ನಡೆಸಿದ್ದಾರೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ವಿನ್ಸ್ ರೆಫಾಟ್‍‍ರವರನ್ನು, ಜೆಟ್‍‍ಮ್ಯಾನ್ ಎಂದು ಕರೆಯಲಾಗುತ್ತದೆ. ಈ ಜೆಟ್ ಕಾಸ್ಟ್ಯೂಮ್ ಅನ್ನು ಧರಿಸಿ ಇವರು 1,800 ಮೀಟರ್ ಅಂದರೆ 6,000 ಅಡಿಗಳಷ್ಟು ಎತ್ತರವನ್ನು ಹಾರಿದ್ದಾರೆ. ಇದರಿಂದ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ಘಟನೆ ದುಬೈನಲ್ಲಿ ನಡೆದಿದೆ. ಇದರ ವೀಡಿಯೊವನ್ನು ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ರೆಫಾಟ್‍‍ರವರು ಜೆಟ್ ಕಾಸ್ಟ್ಯೂಮ್ ಅನ್ನು ಧರಿಸಿ ಪ್ಲೇನ್‍‍ಗಳಿಗೆ ಸರಿಸಮನಾದ ವೇಗದಲ್ಲಿ ಹಾರುತ್ತಿದ್ದಾರೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ಕಾಸ್ಟ್ಯೂಮ್‍‍ನಲ್ಲಿ ಕೇವಲ ಒಬ್ಬರು ಮಾತ್ರ ಚಲಿಸಬಹುದು. ಪ್ಯಾರಾಗ್ಲೈಡರ್ ಸಿಸ್ಟಂ ರೀತಿಯಲ್ಲಿ ವಿನ್ಯಾಸಗೊಂಡಿರುವ ಈ ಕಾಸ್ಟ್ಯೂಮ್‍‍ನ ಎರಡು ತುದಿಗಳಲ್ಲಿ ಮಿನಿ ಜೆಟ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಇದರಿಂದಾಗಿ ಪ್ಲೇನ್‍‍ಗಳ ವೇಗದಲ್ಲಿ ಚಲಿಸಲು ಸಾಧ್ಯವಾಗಿದೆ. ಇದರಲ್ಲಿರುವ ವಿಂಗ್‍‍ಗಳನ್ನು ಕಾರ್ಬನ್ ಫೈಬರ್‍‍ನಿಂದ ತಯಾರಿಸಲಾಗಿರುವ ಕಾರಣ ಕಡಿಮೆ ತೂಕವನ್ನು ಹೊಂದಿದೆ. ಆದರೆ ಮಿನಿ ಜೆಟ್ ಎಂಜಿನ್‍‍ನ ದಕ್ಷತೆ ಕಡಿಮೆಯಾಗಿಲ್ಲ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ಎಂಜಿನ್‍‍ನ ಸಹಾಯದಿಂದ ಗಾಳಿಯಲ್ಲಿ ಹಾರಿ, ಪ್ಯಾರಾಚೂಟ್‍‍ಗಳ ನೆರವಿಲ್ಲದೇ ಸುರಕ್ಷಿತವಾಗಿ ಲ್ಯಾಂಡ್ ಆಗಬಹುದು. ಈ ಎಂಜಿನ್ 450 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ. ರೆಫಾಟ್‍‍ರವರು ಈ ಕಾಸ್ಟ್ಯೂಮ್ ಧರಿಸಿ ದುಬೈನ ಅತಿ ದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಹಾರಾಟ ನಡೆಸಿದ್ದಾರೆ.

ಕಳೆದ ವರ್ಷ ಇದೇ ತಂಡದ ಸದಸ್ಯರು ಚೀನಾದಲ್ಲಿರುವ ಎತ್ತರದ ಪರ್ವತಗಳ ಮೇಲೆ ಹಾರಾಟ ನಡೆಸಿದ್ದರು. ರೆಫಾಟ್‍‍ರವರು ದುಬೈನಲ್ಲಿ ಹಾರಾಟ ನಡೆಸುವ ಮೂಲಕ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಗಾಳಿಯಲ್ಲಿ ಆರು ಸಾವಿರ ಅಡಿ ಎತ್ತರ ಹಾರಿ ಹೊಸ ವಿಶ್ವ ದಾಖಲೆ ..!

ಈ ವೀಡಿಯೊ ಇನ್ಸ್ಟಾ ಗ್ರಾಂನಲ್ಲಿ ವೈರಲ್ ಆಗಿದೆ. ಫ್ರಾನ್ಸ್ ದೇಶದ ವಿನ್ಸ್ ರೆಫಾಟ್‍‍ರವರು ಈ ಹಿಂದೆಯೂ ಇಂತಹ ಸಾಹಸಗಳಲ್ಲಿ ಭಾಗಿಯಾಗಿದ್ದರು. 400 ಕಿ.ಮೀ ವೇಗದಲ್ಲಿ ಗಾಳಿಯಲ್ಲಿ ಹಾರಾಡುವುದು ಕಡಿಮೆ ಸಾಧನೆಯಲ್ಲ. ಈ ಕಾರಣಕ್ಕೆ ಇವರನ್ನು ಜೆಟ್‍‍ಮ್ಯಾನ್ ಎಂದು ಕರೆಯಲಾಗುತ್ತಿದೆ.

Most Read Articles

Kannada
English summary
Man reaches 6000 feet height with flying suit creates world record. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X