ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ವಿಪತ್ತುಗಳು ನಿಜ ಜೀವನದ ಹೀರೋಗಳು ಯಾರು ಎಂಬುದನ್ನು ತಿಳಿಸುತ್ತವೆ. ಯಾವುದೇ ಪ್ರತಿಫಲ ಬಯಸದೇ ಇತರರ ಹಿತಕ್ಕಾಗಿ ಕೆಲಸ ಮಾಡುವ ಜನರು ಉಳಿದವರ ಪಾಲಿಗೆ ದೇವರುಗಳಾಗುತ್ತಾರೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕೋವಿಡ್ 19 ವೈರಸ್ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಈ ಸಮಯದಲ್ಲಿ ಪಾಟ್ನಾದ ಗೌರವ್ ರಾಯ್ ನೂರಾರು ಜನರ ಪಾಲಿಗೆ ದೇವರಾಗಿದ್ದಾರೆ. ಐಸಿಯು ವಾರ್ಡ್‌ಗಳಲ್ಲಿ ಆಕ್ಸಿಜನ್ ಸಿಗದೇ ಹೆಣಗಾಡುತ್ತಿರುವವರಿಗೆ ಯಾವುದೇ ಪ್ರತಿಫಲ ಬಯಸದೇ ಅವರು ಆಕ್ಸಿಜನ್ ಪೂರೈಸುತ್ತಿದ್ದಾರೆ. ಇದಕ್ಕಾಗಿ ತಮ್ಮ ಬಳಿಯಿದ್ದ ಮಾರುತಿ ಸುಜುಕಿ ವ್ಯಾಗನ್ಆರ್ ಕಾರನ್ನು ಆಕ್ಸಿಜನ್ ಕ್ಯಾರಿಯರ್ ಆಗಿ ಬದಲಿಸಿದ್ದಾರೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಅವರ ಈ ವಿಶಿಷ್ಟ ಸೇವೆಯಿಂದಾಗಿ ಜನರು ಅವರನ್ನು ಆಕ್ಸಿಜನ್ ಮ್ಯಾನ್ ಎಂದು ಕರೆಯುತ್ತಿದ್ದಾರೆ. ದೇಶಾದ್ಯಂತ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಕ್ಸಿಜನ್ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಬಡವರಿಗೆ ನೆರವಾಗಲು ಆಕ್ಸಿಜನ್ ಪೂರೈಸುತ್ತಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಗೌರವ್ ರಾಯ್ ಆರಂಭದಲ್ಲಿ ಕೇವಲ 10 ಸಿಲಿಂಡರ್‌ಗಳ ಮೂಲಕ ಈ ಸೇವೆಯನ್ನು ಆರಂಭಿಸಿದರು. ಈಗ ಅವರು 254ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಹೊಂದಿದ್ದಾರೆ. ಅವರಿಗೆ ಕೆಲವು ಸ್ನೇಹಿತರು ಹಾಗೂ ದತ್ತಿ ಸಂಸ್ಥೆಗಳವರು 200ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ದಾನ ಮಾಡಿದ್ದಾರೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕೆಲವರು ಹಣಕಾಸಿನ ನೆರವನ್ನು ನೀಡಿದ್ದಾರೆ. ಗೌರವ್ ರಾಯ್ ತಮ್ಮ ಕೈಯಿಂದ ರೂ.3.15 ಲಕ್ಷ ಹಾಕಿದ್ದಾರೆ. ಅವರ ಸ್ನೇಹಿತರು ಹಾಗೂ ಇತರರು ರೂ.6 ಲಕ್ಷ ನೀಡಿದ್ದಾರೆ. ಅವರು ಈ ಸೇವೆಯನ್ನು ಉಚಿತವಾಗಿ ನೀಡುತ್ತಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಅನಿವಾರ್ಯವಾಗಿರುವವರಿಗೆ ಆದ್ಯತೆ ಮೇರೆಗೆ ಆಕ್ಸಿಜನ್ ನೀಡಲಾಗುತ್ತಿದೆ. ಕೆಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಲಿಂಡರ್‌ಗಳನ್ನು ಅಳವಡಿಸಿ ಆಕ್ಸಿಜನ್ ಒದಗಿಸಲಾಗುತ್ತಿದೆ. ಗೌರವ್ ರಾಯ್ ಕಳೆದ ಹತ್ತು ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ 191 ಆಕ್ಸಿಜನ್ ಸಿಲಿಂಡರ್‌ಗಳನ್ನು ಅಳವಡಿಸಿದ್ದಾರೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಅವರು ಮಾಡಿಫೈಗೊಂಡಿರುವ ತಮ್ಮ ಕಾರಿನ ಮೂಲಕ ಅಗತ್ಯವಿರುವವರಿಗೆ ಆಕ್ಸಿಜನ್ ತಲುಪಿಸುತ್ತಿದ್ದಾರೆ. ಆಕ್ಸಿಜನ್ ಜೊತೆಗೆ ಅಗತ್ಯವಿರುವವರಿಗೆ ಆಕ್ಸಿಜನ್ ಲೆವೆಲ್ ಹೆಚ್ಚಿಸುವ ಮಾಸ್ಕ್ ಅನ್ನು ಸಹ ನೀಡಲಾಗುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಆಕ್ಸಿಜನ್ ಸಿಲಿಂಡರ್‌ಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಅವರು ರೋಗಿಗಳಿಗೆ ಸಲಹೆ ನೀಡುತ್ತಾರೆ. ಗೌರವ್ ರಾಯ್‌ರವರಿಗೆ ಈ ರೀತಿಯ ಸೇವಾ ಮನೋಭಾವ ಬಂದಿರುವುದರ ಹಿಂದೆಯೂ ಆಸಕ್ತಿಕರ ಸಂಗತಿಯಿದೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಭಾರತದಲ್ಲಿ ಕೋವಿಡ್ 19 ವೈರಸ್ ಆರಂಭವಾದಾಗ ಹಲವಾರು ಜನರು ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದರು. ಅವರಲ್ಲಿ ಗೌರವ್ ರಾಯ್ ಸಹ ಒಬ್ಬರು. ಸ್ಥಳಾವಕಾಶದ ಕೊರತೆಯಿಂದ ಅವರನ್ನು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಆ ಸಮಯದಲ್ಲಿ ಮಲಗುವ ಕೋಣೆ ಮಾತ್ರವಲ್ಲದೆ ಆಕ್ಸಿಜನ್'ಗೂ ಸಹ ಕೊರತೆಯುಂಟಾಗಿತ್ತು. ಆಕ್ಸಿಜನ್ ಸಿಗದೇ ಗೌರವ್ ರಾಯ್ ನರಳಾಡಿದ್ದರು. ಈ ಪರಿಸ್ಥಿತಿ ಇತರರಿಗೆ ಬರಬಾರದು ಎಂದು ಗೌರವ್ ರಾಯ್ ಈ ಸೇವೆ ನೀಡಲು ಮುಂದಾಗಿದ್ದಾರೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಗೌರವ್ ರಾಯ್ ಮಾತ್ರವಲ್ಲದೇ ಅವರ ಪತ್ನಿಯೂ ಸಹ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಅವರಿಬ್ಬರೂ ಜತೆಗೂಡಿ ಆಕ್ಸಿಜನ್ ಅಗತ್ಯವಿರುವವರಿಗೆ ಆಕ್ಸಿಜನ್ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅವರು ಮಾಡಿಫೈ ಮಾಡಿರುವ ವ್ಯಾಗನ್ಆರ್ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.4,80,500ಗಳಾಗಿದೆ. ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಕಾರ್ ಅನ್ನು ಮೂರು ಎಂಜಿನ್ ಆಯ್ಕೆಗಳೊಂದಿಗೆ ಮಾರಾಟ ಮಾಡುತ್ತದೆ.

ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಇವುಗಳಲ್ಲಿ 1.0 ಲೀಟರ್ ಪೆಟ್ರೋಲ್ ಎಂಜಿನ್, 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಎಸ್ ಸಿಎನ್‌ಜಿ ಎಂಜಿನ್ ಆಯ್ಕೆಗಳು ಸೇರಿವೆ.ಮಾರುತಿ ಸುಜುಕಿ ಕಂಪನಿಯು ವ್ಯಾಗನ್ಆರ್ ಕಾರನ್ನು ಶೀಘ್ರದಲ್ಲಿಯೇ ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿದೆ.

Most Read Articles

Kannada
English summary
Man recovered from Corona virus providing oxygen cylinders to corona patients free of cost. Read in Kannada.
Story first published: Thursday, April 22, 2021, 14:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X