ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಟಿವಿ ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ. ಇತ್ತೀಚಿಗೆ ಮಹಿಳೆಯರ ಜೊತೆಗೆ ಪುರುಷರು ಸಹ ಹೆಚ್ಚು ಹೆಚ್ಚು ಟಿವಿ ಧಾರಾವಾಹಿಗಳನ್ನು ನೋಡುತ್ತಿದ್ದಾರೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಲಾದ ಲಾಕ್‌ಡೌನ್ ಇದಕ್ಕೆ ಕಾರಣವಾಗಿರಬಹುದು. ಜನರು ಮನೆಯಲ್ಲಿ ಟಿವಿ ಧಾರಾವಾಹಿಗಳನ್ನು ನೋಡುವುದು ಅವರ ವೈಯಕ್ತಿಕ ಆಯ್ಕೆ. ಅವರ ಆಯ್ಕೆಗಳಿಗೆ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಕೊಯಮತ್ತೂರಿನಲ್ಲಿ ವ್ಯಕ್ತಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಧಾರಾವಾಹಿ ವೀಕ್ಷಿಸಿದ್ದಾರೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಅವರು ತಮ್ಮ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಾಗ ಧಾರಾವಾಹಿಯನ್ನು ವೀಕ್ಷಿಸಿದ್ದಾರೆ. ದ್ವಿಚಕ್ರ ವಾಹನ ಹಾಗೂ ಕಾರು ಸೇರಿದಂತೆ ಬಹುತೇಕ ಎಲ್ಲಾ ವಾಹನಗಳಲ್ಲಿ ಮೊಬೈಲ್ ಫೋನ್ ಇಡಲು ಪ್ರತ್ಯೇಕವಾಗಿ ಸ್ಟಾಂಡ್ ಅಳವಡಿಸಿಕೊಳ್ಳಬಹುದು.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಯಾವುದಾದರೂ ಹೊಸ ಸ್ಥಳಗಳಿಗೆ ವಾಹನಗಳಲ್ಲಿ ತೆರಳುವ ಜನರು ಈ ಸ್ಟಾಂಡ್'ನಲ್ಲಿ ತಮ್ಮ ಮೊಬೈಲ್'ಗಳನ್ನು ಇಟ್ಟು ಗೂಗಲ್ ಮ್ಯಾಪ್ ನೋಡುವ ಮೂಲಕ ತಾವು ತಲುಪ ಬೇಕಾಗಿರುವ ಸ್ಥಳಕ್ಕೆ ಹೋಗುತ್ತಾರೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಆದರೆ ಈ ವ್ಯಕ್ತಿಯು ಸಹ ತಮ್ಮ ದ್ವಿಚಕ್ರ ವಾಹನದಲ್ಲಿ ಮೊಬೈಲ್ ಫೋನ್ ಸ್ಟ್ಯಾಂಡ್‌ ಅಳವಡಿಸಿ ಕೊಂಡಿದ್ದಾರೆ. ದ್ವಿಚಕ್ರ ವಾಹನ ಚಾಲನೆ ಮಾಡುವ ವೇಳೆ ಈ ವ್ಯಕ್ತಿ ಗೂಗಲ್ ಮ್ಯಾಪ್ ನೋಡುವ ಬದಲು ಮೊಬೈಲ್ ಮೂಲಕ ಧಾರಾವಾಹಿ ವೀಕ್ಷಿಸಿದ್ದಾರೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ದ್ವಿಚಕ್ರ ವಾಹನ ಚಾಲನೆ ಮಾಡುತ್ತಾ ಧಾರಾವಾಹಿ ನೋಡುತ್ತಿರುವ ವ್ಯಕ್ತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೊಯಮತ್ತೂರು ಗಾಂಧಿಪುರಂ ಫ್ಲೈಓವರ್‌ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಈ ದ್ವಿಚಕ್ರ ವಾಹನದ ಹಿಂದೆ ಬರುತ್ತಿದ್ದ ಮತ್ತೊಂದು ವಾಹನದ ಚಾಲಕ ಈ ಘಟನೆಯನ್ನು ಚಿತ್ರೀಕರಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ವೀಡಿಯೊ ಫೇಸ್‌ಬುಕ್, ವಾಟ್ಸಾಪ್‌ ಸೇರಿದಂತೆ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಈ ವೀಡಿಯೊ ಕೊಯಮತ್ತೂರು ಪೊಲೀಸರ ಗಮನಕ್ಕೂ ಸಹ ಬಂದಿದೆ. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಧಾರಾವಾಹಿ ವೀಕ್ಷಿಸುವುದರಿಂದ ಅಪಘಾತವಾಗುವ ಸಾಧ್ಯತೆಗಳಿರುತ್ತವೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಈ ಕಾರಣಕ್ಕೆ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಲು ಕೊಯಮತ್ತೂರು ಪೊಲೀಸರು ಮುಂದಾಗಿದ್ದಾರೆ. ಕೊನೆಗೂ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಧಾರಾವಾಹಿ ವೀಕ್ಷಿಸಿದ ವ್ಯಕ್ತಿಯನ್ನು ಪತ್ತೆ ಹಚ್ಚಿದಾರೆ.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಪೊಲೀಸರ ತನಿಖೆ ವೇಳೆಯಲ್ಲಿ ಆ ವ್ಯಕ್ತಿಯ ಹೆಸರು ಮುತ್ತುಸ್ವಾಮಿ ಎಂದು ತಿಳಿದುಬಂದಿದೆ. ಆತನಿಗೆ ಪೊಲೀಸರು ರೂ. 1,200 ದಂಡ ವಿಧಿಸಿದ್ದಾರೆ. ಇಷ್ಟು ದಿನ ಮಹಿಳೆಯರು ಮಾತ್ರ ಧಾರಾವಾಹಿಗಳಿಗೆ ವ್ಯಸನಿಯಾಗಿರುತ್ತಾರೆ ಎಂದು ಹೇಳಲಾಗುತ್ತಿತ್ತು.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ದ್ವಿಚಕ್ರ ವಾಹನ ಚಾಲನೆ ಮಾಡುವಾಗಲೂ ಧಾರಾವಾಹಿ ವೀಕ್ಷಿಸಿದ ವ್ಯಕ್ತಿಯನ್ನು ನೆಟಿಜನ್‌ಗಳು ಕಾಲೆಳೆದಿದ್ದಾರೆ. ರಸ್ತೆಯಲ್ಲಿ ವಾಹನ ಚಾಲನೆ ಮಾಡುವ ವೇಳೆಯಲ್ಲಿ ಈ ರೀತಿಯ ತೊಡಗುವುದು ಅಪಾಯಕಾರಿ.

ಇದರಿಂದ ರಸ್ತೆ ಅಪಘಾತದ ಸಾಧ್ಯತೆಗಳು ಹೆಚ್ಚಾಗುತ್ತವೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಈ ರೀತಿ ವೀಡಿಯೋಗಳನ್ನು ವೀಕ್ಷಿಸಿದರೆವಾಹನ ಚಾಲನೆ ಮಾಡುವವರಿಗೆ ಮಾತ್ರವಲ್ಲದೆ ರಸ್ತೆಯಲ್ಲಿ ಪ್ರಯಾಣಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳಿಗೂ ಅಪಾಯವಾಗಬಹುದು.

ಪುರುಷನಿಗೂ ಬಂತು ಧಾರಾವಾಹಿ ನೋಡುವ ಖಯಾಲಿ, ಚಾಲನೆ ಮಾಡುತ್ತಲೇ ಧಾರಾವಾಹಿ ವೀಕ್ಷಿಸಿದ ಬೈಕ್ ಸವಾರ

ಈ ಕಾರಣಕ್ಕೆ ವಾಹನ ಚಾಲನೆ ಮಾಡುವಾಗ ರಸ್ತೆಯ ಬಗ್ಗೆ ಸಂಪೂರ್ಣ ಗಮನ ಹರಿಸಿ. ಜೊತೆಗೆ ಎಲ್ಲಾ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿ. ಇದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು. ಸಣ್ಣದೊಂದು ನಿರ್ಲಕ್ಷ್ಯ ಕೂಡ ದೊಡ್ಡ ಅಪಘಾತಕ್ಕೆ ಕಾರಣವಾಗಬಲ್ಲದು.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Man watches serial on mobile while riding bike. Read in Kannada.
Story first published: Tuesday, August 3, 2021, 10:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X