ಮನಾಲಿಯಲ್ಲಿ ಭೀಕರ ಪ್ರವಾಹ - ನದಿಯಲ್ಲಿ ಕೊಚ್ಚಿ ಹೋದ ವೊಲ್ವೊ ಬಸ್

ಕಳೆದ ತಿಂಗಳು ಕೇರಳ ಮತ್ತು ಕರ್ನಾಟಕದ ಕೊಡಗಿನಲ್ಲಿ ಭಾರೀ ಮಳೆಯಾದ ಕಾರಣ ಭೀಕರ ಪ್ರವಾಹ ಉಂಟಾಗಿತ್ತು. ಇದೀಗ ಪ್ರವಾಸಿತಾಣ ಮನಾಲಿಯಲ್ಲು ಭಾರೀ ಮಳೆಯಾಗುತ್ತಿರುವ ಕಾರಣ ಉಂಟಾದ ಪ್ರವಾಹದಿಂದ ಅಲ್ಲಿನ ಆಸ್ತಿ ಪಾಸ್ತಿ ಕೊಚ್ಚಿಹೋಗಿದ್ದು, ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಮನಾಲಿ ಮತ್ತು ಲೇಹ್ ಅನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಕನಿಷ್ಠ 48 ಗಂಟೆಗಳ ಕಾಲ ಭಾರೀ ಮಂಜು ಮತ್ತು ಸಾಕಷ್ಟು ಮಳೆಯಾಗುತ್ತಿರುವ ಕಾರಣದಿಂದ ಅಸ್ತವ್ಯಸ್ತವಾಗಿದ್ದು, ಸ್ಥಳೀಯರು ಮತ್ತು ಪ್ರವಾಸಿಗರು ದಿಕ್ಕು ತೋಚದಂತಾಗಿದ್ದಾರೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಭೀಕರ ಪ್ರವಾಹದಿಂದಾಗಿ ಬಿಯಾಸ್ ನದಿ ಉಕ್ಕಿ ಹರಿಯುತಿದ್ದು, ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ವೇಳೆ ನದಿ ದಡದಲ್ಲಿ ನಿಂತಿದ್ದ ಟೂರಿಸ್ಟ್ ಬಸ್ ಒಂದು ಕೊಚ್ಚಿಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಚಂಡೀಘಢ-ಮನಾಲಿ ಹೆದ್ದಾರಿಯ ಪಕ್ಕದಲ್ಲಿ ಹರಿಯುವ ಬಿಯಾಸ್ ನದಿಯು ಕಳೆದ ಕೆಲವು ದಿನಗಳಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಬಹುತೇಕ ಮಾರ್ಗಗಳು ಮುಚ್ಚಿಹೋಗಿವೆ.

MOST READ: ನಟ ದರ್ಶನ್ ಕಾರು ಅಪಘಾತ- ಪೊಲೀಸರಿಂದ ಸುಮೊಟೊ ಕೇಸ್..!

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಅದೃಷ್ಟವಶಾತ್ ಬಸ್‍‍ನಲ್ಲಿ ಪ್ರಯಾಣಿಕರು ಯಾರು ಇಲ್ಲವಾದ್ದರಿಂದ ಯಾವುದೇ ಪ್ರಾಣಹಾನಿ ಆಗಿಲ್ಲವೆಂದು ತಿಳಿದಿದ್ದು, ನದಿ ದಡದಲ್ಲಿ ಬಸ್ ಅನ್ನು ಪಾರ್ಕ್ ಮಾಡಿದ್ದಾಗ ಈ ಘಟನೆ ನಡೆದಿದೆ. ನದಿ ರಭಸವು ಭಾರೀ ಅನಾಹುತ ಸೃಷ್ಠಿಸಿದ್ದು, ಪ್ರವಾಸಿಗರು ದಿಕ್ಕುತೋಚದಂತಾಗಿದ್ದಾರೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ನದಿಯ ಪಕ್ಕದಲ್ಲೆ ಪಾರ್ಕ್ ಮಾಡಿದ್ದಾಗ ಈ ಘಟನೆ ನಡೆದಿದ್ದು, ನೀರಿನ ರಭಸಕ್ಕೆ ಭೂಕುಸಿತ ಉಂಟಾಗಿದೆ. ಈ ವೇಳೆ ನದಿಯ ದಡದಲ್ಲೆ ಇದ್ದ ಬಸ್ ನದಿಯಲ್ಲೆ ಕೊಚ್ಚಿಹೋಗಿದೆ. ಅದೃಷ್ಟವಶಾತ್, ಬಸ್ಸಿನ ಒಳಗೆ ಯಾರೊಬ್ಬರೂ ಇರಲಿಲ್ಲವಾದ ಕಾರಣ ಘಟನೆಯ ತೀವ್ರತೆಯು ಕಡಿಮೆಯಾಗಿದೆ ಎನ್ನಬಹುದು.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಕೇವಲ ವೊಲ್ವೊ ಬಸ್ ಅಷ್ಟೆ ಅಲ್ಲದೆ ಮನಾಲಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಾಹನಗಳು ನೀರಿನ ಸೆಳೆತಕ್ಕೆ ಸಿಲುಕಿಕೊಂಡಿದ್ದು, ಮಾರ್ಗಗಳು ಕಡಿತಗೊಂಡಿದ್ದರಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಹೀಗಾಗಿ ಹಿಮಾಚಲ ಪ್ರದೇಶದ ಸರ್ಕಾರವು ಹೆಚ್ಚುತ್ತಿರುವ ಮಳೆಯ ಕಾರಣದಿಂದಾಗಿ ಕುಲು ಮತ್ತು ಕಿನೌರ್‍ ಪ್ರದೇಶದಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದು, ಪ್ರವಾಹದಲ್ಲಿ ಸಿಲುಕಿಕೊಂಡಿರುವ ಸ್ಥಳೀಯರನ್ನು ಮತ್ತು ಪ್ರವಾಸಿಗರನ್ನು ರಕ್ಷಿಸಲು ವಿಶೇಷ ಕಾರ್ಯಾಚರಣೆ ಆರಂಭಿಸಿದೆ.

MOST READ: ಡೀಸೆಲ್ ಕಾರುಗಳಿಂತ ಹೆಚ್ಚು ಪೆಟ್ರೋಲ್ ಕಾರುಗಳ ಖರೀದಿಗೆ ಮುಗಿಬಿದ್ದ ಗ್ರಾಹಕರು..!

ಭೀಕರ ಮಳೆಯ ಕಾರಣದಿಂದಾಗಿ ನದಿಯಲ್ಲಿ ಟೂರಿಸ್ಟ್ ಬಸ್ ಕೊಚ್ಚಿಕೊಂಡು ಹೋದ ದೃಶ್ಯ ಇಲ್ಲಿದೆ ನೋಡಿ..

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಪ್ರವಾಸಿಗರೇ ಎಚ್ಚರ

ಒಂದು ವೇಳೆ ನೀವು ಕೂಡಾ ಉತ್ತರ ಭಾರತದ ಪ್ರವಾಸಿ ತಾಣಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ, ಮುಂದಿನ ಕೆಲದಿನಗಳವರೆಗೆ ಮುಂದೂಡುವುದು ಒಳಿತು.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಇತ್ತೀಚೆಗೆ ದೇಶದ ವಿವಿದೆಡೆ ಭೀಕರ ಪ್ರವಾಹ ಪರಿಸ್ಥಿತಿಗಳು ಎದುರಾಗುತ್ತಿದ್ದು, ಸಹಜವಾಗಿಯೇ ಮಳೆಯ ವೇಳೆಯಲ್ಲಿ ವಾಹನ ಚಾಲನೆ ಮಾಡುವುದು ದುಸ್ತರ. ಹಾಗಿರುವಾಗ ರಸ್ತೆಗಳಲ್ಲಿ ನೀರು ಕಟ್ಟಿ ನಿಂತರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಪ್ರಸ್ತುತ ಲೇಖನದಲ್ಲಿ ಪ್ರವಾಹದ ವೇಳೆಯಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳು ಹಾಗೂ ಸಲಹೆಗಳ ಬಗ್ಗೆ ನಾವಿಲ್ಲಿ ವಿವರಗಳನ್ನು ಕೊಡಲಿದ್ದೇವೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಸಂಚಾರ ಬೇಡ

ರಸ್ತೆಗಳಲ್ಲಿ ನೀರು ತಂಗಿರುವುದರಿಂದ ರಸ್ತೆಯ ಆಳವನ್ನು ಮನಗಾಣಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ನಾವು ನೀಡುವ ಮೊದಲನೇ ಸಲಹೆಯೆಂದರೆ ಪ್ರವಾಹದ ವೇಳೆಯಲ್ಲಿ ಸಾಧ್ಯವಾದಷ್ಟು ವಾಹನ ಸಂಚಾರವನ್ನು ತಪ್ಪಿಸಿರಿ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಎಂಜಿನ್‍ಗೆ ತಾಪತ್ರೆ

ನೀರು ಕಟ್ಟಿ ನಿಂತಿರುವ ಪ್ರಮಾಣವು ಅರ್ಧ ಅಡಿಗಿಂತಲೂ ಕೆಳಗಡೆಯಿದ್ದಲ್ಲಿ ಮಾತ್ರ ವಾಹನ ಚಾಲನೆ ಮಾಡುವ ಪ್ರಯತ್ನಕ್ಕೆ ಮುಂದಾಗಬಹುದು. ಇಲ್ಲವಾದ್ದಲ್ಲಿ ಕಾರಿನ ಎಂಜಿನ್ ಹಾಗೂ ಎಕ್ಸಾಸ್ಟ್ ಕೊಳವೆಗೂ ನೀರು ಪ್ರವೇಶಿಸುವ ಭೀತಿಯಿರುತ್ತದೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಕಾರು ಆಫ್ ಮಾಡಿಡಿ

ಹಾಗೊಂದು ವೇಳೆ ಕಾರಿನ ಎಂಜಿನ್ ಗೆ ನೀರು ಪ್ರವೇಶಿಸಿದೆ ಎಂಬ ಬಗ್ಗೆ ಆತಂಕ ಮೂಡಿದ್ದಲ್ಲಿ ತಕ್ಷಣ ಮಾಡಬೇಕಾದ ಕೆಲಸ ಕಾರನ್ನು ಆಫ್ ಮಾಡಿಡಿ. ಇದು ಹೆಚ್ಚುವರಿ ಹಾನಿಯನ್ನು ತಪ್ಪಿಸಲಿದೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಆಳವನ್ನು ಅರಿಯುವುದು ಹೇಗೆ?

ಇಲ್ಲಿ ಭಯ, ಆತಂಕಕ್ಕಿಂತಲೂ ಮಿಗಿಲಾಗಿ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು. ಪ್ರವಾಹ ಪೀಡಿತ ರಸ್ತೆಗಳಲ್ಲಿ ಆಳವನ್ನು ಅರಿಯಲು ನಿಮ್ಮ ಮುಂದೆ ಸಂಚರಿಸುವ ವಾಹನಗಳು ಅಥವಾ ಪಾದಚಾರಿಗಳನ್ನ ಸೂಕ್ಷ್ಮವಾಗಿ ಗಮನಿಸಿರಿ. ಇದರಿಂದ ರಸ್ತೆಯಲ್ಲಿರುವ ಸಣ್ಣ, ಪುಟ್ಟ ಗುಂಡಿಗಳಿಗೂ ಬೀಳದಂತೆ ತಡೆಯಬಹುದಾಗಿದೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಪರಿಸ್ಥಿತಿ ಕೈ ಮೀರಿದರೆ...

ಹಾಗೊಂದು ವೇಳೆ ನೀರಿನ ಪ್ರಮಾಣವು ಚಕ್ರದ ಮಟ್ಟಕ್ಕಿಂತಲೂ ಹೆಚ್ಚಾಗಿದ್ದಲ್ಲಿ ಅಂತಹ ರಸ್ತೆಗಳಲ್ಲಿ ಮುಂದಕ್ಕೆ ಚಲಿಸುವ ಪ್ರಯತ್ನಕ್ಕೆ ಹೋಗದಿರಿ. ಪರಿಸ್ಥಿತಿ ಕೈ ಮೀರುವುದಕ್ಕಿಂತಲೂ ಮುನ್ನ ಕಾರನ್ನು ರಿವರ್ಸ್ ತೆಗೆದು ಪರ್ಯಾಯ ಮಾರ್ಗ ಹಿಡಿಯಲು ಪ್ರಯತ್ನಿಸಿ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಫಸ್ಟ್ ಗೇರ್ ಮುಖ್ಯ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಚಲಿಸುವಾಗ ಯಾವತ್ತೂ ಫಸ್ಟ್ ಗೇರ್ ನಲ್ಲೇ ಪ್ರಯಾಣಿಸಿ. ಇದು ವಾಹನದ ಸ್ಥಿರತೆ ಕಾಪಾಡುವುದರೊಂದಿಗೆ ನಿಧಾನವಾಗಿ ಮುಂದಕ್ಕೆ ಚಲಿಸಲು ನೆರವಾಗಲಿದೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಸ್ಪೀಡಿಂಗ್ ಬೇಡ

ಫಸ್ಟ್ ಗೇರ್ ನಲ್ಲಿ ಚಲಿಸುವುದರ ಮೂಲಕ ಸ್ಪೀಡಿಂಗ್ ಅಪಾಯವನ್ನು ತಪ್ಪಿಸಬಹುದಾಗಿದೆ. ವೇಗವಾಗಿ ಚಲಿಸಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಗಾಬರಿಗೊಳಗಾಗದಿರಿ

ಈ ಮೊದಲು ತಿಳಿಸಿರುವಂತೆಯೇ ಪ್ರವಾಹಕ್ಕೆ ಸಿಕ್ಕಿ ಹಾಕಿಕೊಂಡ್ಡಲ್ಲಿ ಗಾಬರಿಗೊಳಗಾಗದಿರಿ. ಬದಲಾಗಿ ಧೈರ್ಯ ಮಾಡಿಕೊಂಡು ಸಮಯ ಚಿತ್ತದಿಂದ ಎದುರಾಗಿರುವ ಅಪಾಯದಿಂದ ಪಾರಾಗಲು ಪ್ರಯತ್ನಿಸಿ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಹೈಡ್ರೋಸ್ಟಾಟಿಕ್ ಲಾಕ್

ತಜ್ಞರ ಪ್ರಕಾರ ಕಾರು ಸಡನ್ ಹಾಗಿ ನೀರಲ್ಲಿ ಆಫ್ ಆದ್ದಲ್ಲಿ (ನೀರಿನ ಮಟ್ಟ ಜಾಸ್ತಿಯಿದ್ದಲ್ಲಿ) ಕಾರು ಸ್ಟ್ಯಾರ್ಟ್ ಮಾಡುವ ಪ್ರಯತ್ನಕ್ಕೆ ಹೋಗಬಾರದು. ಇದರಿಂದ ಹೈಡ್ರೋಸ್ಟಾಟಿಕ್ ಲಾಕ್ ತೊಂದರೆ ಎದುರಾಗುವ ಭೀತಿಯಿದೆ. ಇದರಿಂದ ರಿಪೇರಿ ಕೆಲಸಕ್ಕಾಗಿ ದುಂದು ವೆಚ್ಚವಾಗಲಿದೆ. ಇದರ ಬದಲು ಕಾರಿನಿಂದ ಹೊರಗಿಳಿದು ತಳ್ಳುವ ಪ್ರಯತ್ನಕ್ಕೆ ಮುಂದಾಗಬಹುದು.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ರಾತ್ರಿ ವೇಳೆಯ ಪ್ರಯಾಣ ಬೇಡ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ಚಾಲನೆ ಇನ್ನಷ್ಟು ಕಠಿಣವಾಗಲಿದೆ. ಹಾಗಾಗಿ ರಾತ್ರಿ ವೇಳೆಯ ಪ್ರಯಾಣವನ್ನು ತಪ್ಪಿಸಿರಿ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸಿ

ಇವೆಲ್ಲದಕ್ಕೂ ಮುಖ್ಯವಾಗಿ ರಸ್ತೆಯ ಮಧ್ಯ ಭಾಗದಲ್ಲಿ ಸಂಚರಿಸುವುದು ಹೆಚ್ಚು ಸೇಫ್ ಎನಿಸಿಕೊಳ್ಳಲಿದೆ. ಇದು ಬದಿಯಲ್ಲಿರುವ ಹೊಂಡ ಗುಂಡಿಗಳ್ನು ತಪ್ಪಿಸಲು ಸಹಕಾರಿಯಾಗಲಿದೆ.

ಮನಾಲಿಯಲ್ಲಿನ ಭೀಕರ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ವೊಲ್ವೊ ಬಸ್

ಚೆಕಪ್, ಸ್ನಾನ

ಅಂತಿಮವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಾಹನ ಚಾಲನೆ ಮಾಡಿದ್ದಲ್ಲಿ ತದಾ ಬಳಿಕ ಕಾರನ್ನೊಮ್ಮೆ ಚೆಕಪ್ ಮಾಡಿಸಿಕೊಳ್ಳಲು ಮರೆಯದಿರಿ.

Most Read Articles

Kannada
Read more on off beat volvo
English summary
Manali Floods: Tourist Bus Falls Into Beas River
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X