ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಎಲೆಕ್ಟ್ರಿಕ್ ವಾಹನಗಳ ಮೂಲಕ ನಗರಪ್ರದೇಶಗಳಲ್ಲಿಯೇ ಸುತ್ತಲು ಹಲವಾರು ವಾಹನ ಮಾಲೀಕರು ಇಂದಿಗೂ ಹಿಂದೇಟು ಹಾಕುವ ಪರಿಸ್ಥಿತಿಯಿರುವಾಗ ಎಲೆಕ್ಟ್ರಿಕ್ ವಾಹನದ ಮೂಲಕ ದೇಶದ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪುದೆಂದರೆ ಸಾಮಾನ್ಯದ ಮಾತಲ್ಲ. ಆದರೆ ಮನಸ್ಸು ಮಾಡಿದರೆ ಯಾವುದು ಕೂಡಾ ಅಸಾಧ್ಯವಿಲ್ಲ ಎನ್ನುವುದನ್ನು ಸಾಬೀತುಪಡಿಸಿರುವ ಮಂಗಳೂರಿನ ಬೈಕ್ ರೈಡರ್ ಗಿರೀಶ್ ಸೇಠ ಹೊಸ ದಾಖಲೆಗೆ ಕಾರಣರಾಗಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಪ್ರತಿಯೊಬ್ಬ ಬೈಕ್ ರೈಡರ್‌ಗಳಿಗೂ ಜೀವನದಲ್ಲಿ ಒಮ್ಮೆಯಾದರೂ ದೇಶದ ತುತ್ತತುದಿಗಳಾದ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಪ್ರವಾಸ ಮಾಡುವ ಮಹಾದಾಸೆ ಇದ್ದೆಇರುತ್ತದೆ. ಆದರೆ ಹಲವರಿಗೆ ಇದು ಕಷ್ಟಸಾಧ್ಯ ಎಂದರೆ ತಪ್ಪಾಗುವುದಿಲ್ಲ. ಹಲವಾರು ಸವಾಲುಗಳನ್ನು ಹೊಂದಿರುವ ಈ ಪ್ರಯಾಣದಲ್ಲಿ ವೃತ್ತಿಪರ ಬೈಕ್ ರೈಡರ್ ಆಗಿರುವ ಗಿರೀಶ್ ಸೇಠ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಇ ಸ್ಕೂಟರ್ ಮೂಲಕ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಬೌನ್ಸ್ ನಿರ್ಮಾಣದ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಕನ್ಯಾಕುಮಾರಿ ಟು ಕಾಶ್ಮೀರ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಒಟ್ಟು 4,340 ಕಿ.ಮೀ ಪ್ರಯಾಣಿಸುವ ಮೂಲಕ ಜಗತ್ತಿನ ಅತ್ಯಂತ ಎತ್ತರದ ಮೋಟಾರ್ ಸಂಚಾರಿ ಪ್ರದೇಶವಾಗಿರುವ ಲಡಾಕ್‌ನ ಖರ್ದುಂಗ್‌ ಲಾ ಪಾಸ್ (Khardung La pass) ತಲುಪಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಗಿದ್ದ ಇವಿ ಸ್ಕೂಟರ್ ಸವಾರಿಯು 19 ದಿನಗಳಲ್ಲಿ ಲಡಾಕ್‌ನ ಖರ್ದುಂಗ್‌ ಲಾ ಪಾಸ್ ತಲುಪಿದ್ದು, ಇವಿ ಸ್ಕೂಟರ್ ಸವಾರಿಗಾಗಿ ಬೈಕರ್ ಗಿರೀಶ್ ಅವರು ಒಟ್ಟು ಆರು ಬ್ಯಾಟರಿ ಪ್ಯಾಕ್ ಮೂಲಕ ಗುರಿ ತಲುಪಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಇವಿ ಸ್ಕೂಟರ್‌ನಲ್ಲಿರುವ ಸ್ಟ್ಯಾಂಡರ್ಡ್ ಬ್ಯಾಟರಿ ಜೊತೆಗೆ ಐದು ಹೆಚ್ಚುವರಿ ಬ್ಯಾಟರಿ ಪ್ಯಾಕ್ ಮೂಲಕ ಪ್ರಯಾಣ ಆರಂಭಿದ್ದ ಬೈಕರ್ ಗಿರೀಶ್ ಅವರು ಒಟ್ಟಾರೆ ಪ್ರಯಾಣದಲ್ಲಿ 83 ಬಾರಿ ಬ್ಯಾಟರಿ ರೀಚಾರ್ಜ್‌ ಮಾಡಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಪ್ರಯಾಣದ ಸಂದರ್ಭದಲ್ಲಿ ಒಟ್ಟು 11 ರಾಜ್ಯಗಳನ್ನು ಹಾಯ್ದು ಹೋಗುವ ಮೂಲಕ ದಿನಂಪ್ರತಿ ಸರಾಸರಿ 250 ಕಿ.ಮೀ ಪ್ರಯಾಣಿಸಿದ್ದಾರೆ. ಪ್ರತಿ ಬ್ಯಾಟರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ(ಪವರ್ ಮೋಡ್) ಮೈಲೇಜ್ ಹಿಂದಿರುಗಿಸಿದ್ದು, ಒಟ್ಟು ಆರು ಬ್ಯಾಟರಿ ಪ್ಯಾಕ್ ಸಹಾಯದಿಂದ ನಿಗದಿತ ದೂರವನ್ನು ಅತಿ ಕಡಿಮೆ ಅವಧಿಯಲ್ಲಿ ತಲುಪಲಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ದಿನದ ಸವಾರಿ ಗುರಿ ತಲುಪಿದ ನಂತರ ಬ್ಯಾಟರಿ ರೀಚಾರ್ಜ್ ಮಾಡುತ್ತಿದ್ದ ಗಿರೀಶ್ ಅವರು ಮತ್ತೆ ತಮ್ಮ ಪ್ರಯಾಣವನ್ನು ಮುಂದುವರಿಸುತ್ತಿದ್ದರು. ಹೀಗೆ 19 ದಿನಗಳ ಕಾಲ ಹಲವಾರು ಸವಾಲುಗಳೊಂದಿಗೆ ಖರ್ದುಂಗ್‌ ಲಾ ಪಾಸ್ ತಲುಪಿದ್ದು, ಹವಾಮಾನ ವೈಪರೀತ್ಯವನ್ನು ಎದುರಿಸಿ ಗುರಿತಲುಪಿರುವುದು ಸಾಮಾನ್ಯವಾದ ಸಾಧನೆಯಲ್ಲ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ರೂಬಿ ಹೆಸರಿನೊಂದಿಗೆ ಸಾರಥಿಯಾಗಿದ್ದ ಬೌನ್ಸ್ ಇನ್ಫಿನಿಟಿ ಇ1 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಹವಾಮಾನ ವೈಪರೀತ್ಯದ ನಡುವೆಯೂ ಉತ್ತಮ ಕಾರ್ಯಕ್ಷಮತೆ ಪ್ರದರ್ಶಿಸಿದ್ದು, ಕಾರ್ಗಿಲ್‌ನಿಂದ ಲೇಹ್‌ ಮಾರ್ಗದಲ್ಲಿನ ಪ್ರಯಾಣವನ್ನು ಯಾವುದೇ ತೊಂದರೆಯಿಲ್ಲದೆ ತುಲುಪಿಸಿದ್ದರೆ ಬಗ್ಗೆ ಬೈಕರ್ ಗಿರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ವಿಕೇಂಡ್ ಆನ್ ವ್ಹೀಲ್ಸ್ ಯುಟ್ಯೂಬ್ ಚಾನೆಲ್ ಮೂಲಕ 'ನೆವರ್ ಔಟ್ ಆಫ್ ಫ್ಯಾಶನ್' ಸರಣಿಯ ಅಡಿಯಲ್ಲಿ ಗಿರೀಶ್ ಅವರು ಈಗಾಗಲೇ ಹಲವಾರು ಕ್ಲಾಸಿಕ್ ವಾಹನಗಳ ಬಗ್ಗೆ ಸಕ್ರಿಯವಾಗಿ ವ್ಲಾಗ್ ಮಾಡಿದ್ದಾರೆ. ಅದೃಷ್ಟವಶಾತ್ ಇತ್ತೀಚಿಗೆ ಸಂಭವಿಸಿದ ಹೃದಯಾಘಾತದಿಂದ ಬಳಲಿದ ಗಿರೀಶ್ ಅವರು ಕೆಲವು ತಿಂಗಳು ಕಾಲ ವಿಶ್ರಾಂತಿ ತೆಗೆದುಕೊಂಡು ಕೆ2ಕೆ ರೈಡಿಗೆ ನಿರ್ಧರಿಸಿದ್ದರು.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಡಿಸೆಂಬರ್ 2021ರಲ್ಲಿ ನಡೆದಿದ್ದ IBW (ಇಂಡಿಯಾ ಬೈಕ್ ವೀಕ್) ನಲ್ಲಿ ಹಾಜರಾಗಲು ಬೈಕ್ ವ್ಲಾಗ್ ಸರಣಿಯನ್ನು ಪುನಾರಂಭಿಸಿ ರಿಕ್ಲೈಮಿಂಗ್ ಮೈಸೆಲ್ಫ್ ರೈಡ್ ಕೈಗೊಂಡಿದ್ದರು. ಈ ವೇಳೆ ವೃತ್ತಿ ಜೀವನದಲ್ಲಿ ಸವಾಲಿನ ಕೆಲಸ ಮಾಡಬೇಕೆಂಬ ಹಂಬಲದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇವಿ ಸ್ಕೂಟರ್ ಮೂಲಕ ಸವಾರಿ ಮಾಡುವ ಪ್ರತಿಜ್ಞೆ ಮಾಡಿದ್ದರು.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಗುರಿಸಾಧನೆಗಾಗಿ ಎಲ್ಲಾ ರೀತಿಯ ತಯಾರಿ ನಡೆಸಿ ಕೆಲವು ದಿನಗಳ ಹಿಂದೆ ಕನ್ಯಾಕುಮಾರಿಯಿಂದ ರೈಡ್ ಆರಂಭಿಸಿ ಖರ್ದುಂಗ್‌ ಲಾ ಪಾಸ್ ತಲುಪಿದ್ದು, ಕೆ2ಕೆ ಗುರಿಸಾಧನೆಯ ಬಗ್ಗೆ ಗಿರೀಶ್ ಅವರು 'ಮನಸ್ಸು ಮಾಡಿ ದೇಹಕ್ಕೆ ತರಬೇತಿ ನೀಡಿದರೆ ಏನನ್ನು ಬೇಕಾದರೂ ಸಾಧಿಸಬಹುದು' ಎನ್ನುವ ಸಂದೇಶ ನೀಡಿದ್ದಾರೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧ್ಯತೆ

ಬೈಕರ್ ಗಿರೀಶ್ ಅವರ ಇವಿ ಸ್ಕೂಟರ್ ಮೂಲಕ ಜಗತ್ತಿನ ಅತ್ಯಂತ ಎತ್ತರದ ಮೋಟಾರ್ ಸಂಚಾರಿ ಪ್ರದೇಶವಾದ ಖರ್ದುಂಗ್‌ ಲಾ ಪಾಸ್ ತುಲುಪಿದ ಮೊದಲ ರೈಡರ್ ಎನ್ನುವ ಪ್ರಶಂಸೆಗೆ ಪಾತ್ರವಾಗಿದ್ದು, ಇವರ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ದೊರೆಯುವುದು ಬಹುತೇಕ ಖಚಿತವಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿಗಾಗಿ ಈಗಾಗಲೇ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಪ್ರಶಸ್ತಿ ಪ್ರಕಟವಾಗುವ ನೀರಿಕ್ಷೆಯಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಇನ್ನು ಬೌನ್ಸ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಯಲ್ಲಿ 2kWh ಲೀಥಿಯಂ ಅಯಾನ್ ಬ್ಯಾಟರಿ ಅಳಡಿಸಿದ್ದು, ಅತ್ಯುತ್ತಮ ರೈಡಿಂಗ್ ಸೌಲಭ್ಯದೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ(ಇಕೋ ಮೋಡ್) ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್

ಹೊಸ ಇವಿ ಸ್ಕೂಟರ್‌ನಲ್ಲಿ ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಮೂಲಕ ಕೇವಲ 8 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ ಸೊನ್ನೆಯಿಂದ 40 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಪ್ರತಿ ಗಂಟೆಗೆ ಗರಿಷ್ಠ 65 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಡ್ರ್ಯಾಗ್ ಮತ್ತು ರಿವರ್ಸ್ ರೈಡ್ ಮೋಡ್ ನೀಡಲಾಗಿದೆ.

Most Read Articles

Kannada
English summary
Mangalore vlogger girish shet achieves kanyakumari to kashmir ride on ev scooter
Story first published: Monday, August 8, 2022, 19:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X