ಮಾನ್ಸೂನ್ ಟಿಪ್ಸ್: ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಈ ಸಲಹೆಗಳನ್ನು ತಪ್ಪದೇ ಅನುಸರಿಸಿ..

ಭಾರತದ ರಸ್ತೆಗಳಲ್ಲಿ ಬೇಸಿಗೆಯ ಸುಡು ಬಿಸಿಲಿನಲ್ಲಿ ಡ್ರೈವ್‌ ಮಾಡುವುದು ಸವಾಲಿನ ಕೆಲಸವೇ. ಆದರೆ ಮಳೆಗಾಲದಲ್ಲಂತೂ ಕಾರು ಚಲಾಯಿಸುವ ಕಷ್ಟ ಹತ್ತು ಪಟ್ಟು ಹೆಚ್ಚಾಗಿರುತ್ತದೆ. ಮಳೆಗಾಲದಲ್ಲಿ ಮಳೆ ಹೆಚ್ಚಾದಾಗ ಹೆಡ್‌ಲೈಟ್‌ ಹಾಕಿಕೊಂಡು ಕಾರು ಚಲಾಯಿಸಿದರೂ ಹಲವಾರು ಬಾರಿ ರಸ್ತೆ ಸರಿಯಾಗಿ ಕಾಣಿಸುವುದಿಲ್ಲ.ಟ್ರಾಫಿಕ್‌ ಜಾಮ್, ಕಾರು ಹಾಳಾಗುವುದು ಮುಂತಾದ ವಿಷಯಗಳು ಮಳೆಗಾಲದಲ್ಲಿ ಸಂಭವಿಸಿದರೆ ಅದರಷ್ಟು ಕಿರಿ ಕಿರಿ ಬೇರೊಂದಿಲ್ಲ.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಜತೆಗೆ ಅನೇಕ ಕಡೆಗಳಲ್ಲಿ ರಸ್ತೆಗಳು, ಗುಡ್ಡ ಕುಸಿತ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ನಾವು ವಾಹನದಲ್ಲಿ ಸಂಚರಿಸುವಾಗ ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ವೇಗವಾಗಿ ವಾಹನ ಚಲಾಯಿಸುವ ಅಭ್ಯಾಸ ಇರುವವರು, ಈಗತಾನೆ ಡೈವಿಂಗ್ ಕಲಿತವರು ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಅಂದರೆ ಮಳೆಗಾಲದಲ್ಲಿ ಓಡಾಡುವುದನ್ನೇ ನಿಲ್ಲಿಸಬೇಕು ಎನ್ನುವುದು ಇದರ ಅರ್ಥ ಅಲ್ಲ. ಬದಲಾಗಿ ಜೋರಾಗಿ ಬರುವ ಮಳೆಯ ನಡುವೆ ಎಚ್ಚರಿಕೆಯಿಂದ ಸಂಚರಿಸುವುದು ಸೂಕ್ತ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಮಳೆಗಾಲದಲ್ಲಿ ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ರಸ್ತೆಗಳ ಗುಂಡಿ, ಪ್ರವಾಹ, ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗುತ್ತದೆ.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಇನ್ನು ರಸ್ತೆಗಳಲ್ಲಿ ವಾಹನದ ಟೈರ್‌ಗಳು ಜಾರುವ ಸಾಧ್ಯತೆ ಇದ್ದು, ಬ್ರೇಕ್ ಹಾಕಿದರು ಬೈಕ್ ಮತ್ತು ಕಾರುಗಳು ಕೆಲವು ಸಂದರ್ಭಗಳಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಸಿಲುಕಬಹದು. ಹೀಗಾಗಿ ಮಳೆಗಾಲದಲ್ಲಿ ಸಂಚರಿಸುವ ಮುನ್ನ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ನಿಮ್ಮ ವಾಹನ ಸರ್ವೀಸ್ ಮಾಡಿಸಿ

ನೀವು ಘಾಟ್‌ಗಳಲ್ಲಿ ಗಾಡಿ ಚಾಲಾಯಿಸಲು ನಿರ್ಧರಿಸುವ ಮೊದಲು ನಿಮ್ಮ ವಾಹನವು ಅತ್ಯುನ್ನತ ಸ್ಥಿತಿಯಲ್ಲಿರಬೇಕು. ತೀರಾ ಇತ್ತೀಚೆಗೆ ತಮ್ಮ ಯಾವಾಗ ಸರ್ವಿಸ್‌ಗೆ ನೀಡಿದ್ದು, ಎಂಬುದನ್ನು ನೆನಪಿಸಿಕೊಳ್ಳಿ. ಒಂದು ವೇಳೆ ಹಲವು ತಿಂಗಳಿಂದ ವಾಹನವನ್ನು ಸರ್ವೀಸ್‌ಗೆ ನೀಡದೇ ಇದ್ದಲ್ಲಿ ಕೂಡಲೇ ಸರ್ವೀಸ್ ಮಾಡಿಸಿ.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಡ್ರೈವ್‌ ಮಾಡುವುದಕ್ಕೂ ಮುನ್ನ ತಮ್ಮ ವಾಹನ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಾಹನದ ಎಲ್ಲಾ ಭಾಗಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಿಕೊಳ್ಳಿ. ಅವುಗಳು ಸರಿಯಾದ ಸ್ಥಿತಿಯಲ್ಲಿಲ್ಲದಿದ್ದರೆ, ಅವುಗಳನ್ನು ಬದಲಾಯಿಸಿ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಗುಣಮಟ್ಟದ ಟೈರ್‌ಗಳನ್ನು ಬಳಸಿ

ಮಳೆಗಾಲದಲ್ಲಿ ಕಾರು ಚಲಾಯಿಸುವಾಗ ಸಂಭವಿಸುವ ಸಮಸ್ಯೆಗಳಲ್ಲಿ ಕಾರಿನ ಟೈರ್‌ಗೆ ಸಂಭಂಧಿಸಿದ ಸಮಸ್ಯೆಗಳೆ ಹೆಚ್ಚು. ಪಂಕ್ಚರ್‌ ಆಗುವುದು, ಹೆಚ್ಚು ಮಳೆಯಾದಾಗ ಟೈರ್‌ ಜಾರುವುದು ಹೀಗೆ ಹಲವಾರು ಸಮಸ್ಯೆಗಳು ಕಾರು ಓಡಿಸುವಾಗ ಸಂಭವಿಸುತ್ತದೆ. ಇಂತಹ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಟೈರ್ ಬದಲಾಯಿಸುವುದರಿಂಧ ಸಾಧ್ಯವಾಗುತ್ತದೆ.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಉತ್ತಮ ಗುಣಮಟ್ಟದ ಟೈರ್ ಗಳನ್ನು ಬಳಸುವುದರಿಂದ ಮಳೆಯಲ್ಲಿ ಒಳ್ಳೆಯ ರೋಡ್‌ ಗ್ರಿಪ್‌ ಸಿಗುತ್ತದೆ. ಇದರಿಂಧ ಎಷ್ಟೇ ಮಳೆಯಾದರೂ ಸಹ, ರಸ್ತೆಯಲ್ಲಿ ಟೈರ್ ಗಳು ಜಾರುವ ಸಾಧ್ಯತೆ ಕಡಿಮೆ ಇರುತ್ತದೆ. ಇನ್ನು ಈ ಟೈರ್ ಗಳನ್ನು ಸರಿಯಾದ ಸಮಯದಲ್ಲಿ ಅದರಲ್ಲಿನ ಗಾಳಿಯನ್ನು ಪರೀಕ್ಷಿಸುತ್ತಾ ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಾ ಹೋದರೆ,ಇವುಗಳು ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತದೆ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಉತ್ತಮ ಸ್ಥಿತಿಯಲ್ಲಿರಲಿ ಬ್ರೇಕ್‌ಗಳು

ವಾಹನ ಚಲಾವಣೆಯಲ್ಲಿ ಬ್ರೇಕ್‌ಗಳು ಒಂದು ಅವಿಭಾಜ್ಯ ಅಂಗ. ಇವುಗಳಿಲ್ಲದೇ ವಾಹನವನ್ನು ಚಲಾಯಿಸುವುದನ್ನೂ ಸಹ ಯೋಚನೆ ಮಾಡಲು ಸಾಧ್ಯವಿಲ್ಲ. ಅದರಲ್ಲೂ ಮಳೆಗಾಲದಲ್ಲಿ ವಾಹನ ಚಲಾಯಿಸುವುದಕ್ಕೂ ಮೊದಲು ಬ್ರೇಕ್‌ಗಳು ಉತ್ತಮ ಸ್ಥಿತಿಯಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಬೇಕು.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಯಾಕೆಂದರೆ ಮಳೆಗಾಲದಲ್ಲಿ ಬ್ರೇಕಿಂಗ್‌ನ ಅಂತರ ಹೆಚ್ಚಾಗಿರುತ್ತದೆ. ಒಂದು ವೇಳೆ ಅವುಗಳು ಸರಿಯಾಗಿ ಕೆಲಸ ಮಾಡದೇ ಅಥವಾ ಬ್ರೇಕ್‌ ಪ್ಯಾಡ್‌ಗಳೇನಾದರೂ ತೀರಾ ಸವೆದು ಹೋಗಿದ್ದರೆ, ಅದನ್ನು ಕೂಡಲೇ ಬದಲಾಯಿಸಬೇಕು. ಯಾಕೆಂದರೆ ಉತ್ತಮ ಸ್ಥಿತಿಯಲ್ಲಿರದ ಬ್ರೇಕ್‌ಗಳನ್ನು ಬಳಸುವುದರಿಂದ ಮಳೆಗಾಲದಲ್ಲಿ ಟೈರ್‌ಗಳಿಂದ ಅನಾಹುತ ತಪ್ಪಿದ್ದಲ್ಲ. ಆದ್ದರಿಂದ ಒಂದು ಉತ್ತಮ ರೈಡ್‌ಗೆ ಉತ್ತಮವಾದ ಬ್ರೇಕ್‌ಗಳು ಅತ್ಯಾವಶ್ಯಕ.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಅತಿವೇಗ ಬೇಡ

ವೇಗವಾಗಿ ಸಂಚರಿಸುವುದು ಮಳೆಗಾಲದಲ್ಲಿ ಮಾತ್ರವಲ್ಲ ಯಾವಾಗಲೂ ಒಳ್ಳೆಯದಲ್ಲ. ಅದರಲ್ಲೂ ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗಿದ್ದಾಗ ಎಲ್ಲಿ ಗುಂಡಿಗಳಿದೆ ಅಥವಾ ಎಲ್ಲಿ ಮ್ಯಾನ್ ಹೋಲ್‌ಗಳಿದೆ ಎಂದು ತಿಳಿಯುವುದಿಲ್ಲ.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಈ ಸಂದರ್ಭದಲ್ಲಿ ವೇಗವಾಗಿ ವಾಹನ ಚಲಾಯಿಸಿದರೆ, ಅಪಘಾತ ಸಂಭವಿಸಬಹುದು. ಅಲ್ಲದೆ ರಸ್ತೆಯಲ್ಲಿ ಟೈರ್‌ಗಳು ಸ್ಕಿಡ್ ಆಗುವ ಅಥವಾ ಜಾರುವ ಸಾಧ್ಯತೆಯೂ ಇದೆ. ಆದ್ದರಿಂದ ಮಳೆಗಾಲದಲ್ಲಿ ಅತಿಯಾದ ವೇಗ ಒಳ್ಳೆಯದಲ್ಲ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ವಾಹನಗಳ ನಡುವೆ ಅಂತರವಿರಲಿ

ರಸ್ತೆಯಲ್ಲಿ ಪ್ರಯಾಣಿಸುವಾಗ, ಮುಂದೆ ಇರುವ ವಾಹನಗಳ ನಡುವಿನ ಅಂತರವನ್ನು ಗಮನಿಸಬೇಕು. ಅದರಲ್ಲೂ ಮಳೆ ಬರುವಾಗ ತೀರ ಹತ್ತಿರಕ್ಕೆ ಹೋಗುವುದು ಒಳ್ಳೆಯದಲ್ಲ. ಕಾರಣ ಮಳೆ ಜೋರಾಗಿದ್ದಾಗ ಬ್ರೇಕ್‌ ಸರಿಯಾಗಿ ಕೆಲಸ ಮಾಡದೆ ಇರಬಹುದು. ಹೀಗಾಗಿ ಅಂತರ ಕಾಯ್ದುಕೊಳ್ಳುವುದರಿಂದ ಮುಂದಾಗುವ ಅನಾಹುತದಿಂದ ರಕ್ಷಿಸುತ್ತದೆ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ವೈಪರ್ ಬಳಸಿ

ಮಳೆಗಾಲದಲ್ಲಿ ವಾಹನಗಳ ವಿಂಡ್‌ಸ್ಕಿನ್ ಮೇಲೆ ಬೀಳುವ ನೀರನ್ನು ಆಗಾಗೆ ವೈಪ್ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ರಸ್ತೆ ಮಂಜಾಗಿ ಕಾಣುವುದು ಅಥವಾ ಸರಿಯಾಗಿ ರಸ್ತೆ ಗೋಚರಿಸದಿರುವ ಸಾಧ್ಯತೆ ಇದೆ. ಹೀಗಾಗಿ ಗ್ಲಾಸ್‌ನ ಮೇಲೆ ಬೀಳುವ ನೀರನ್ನು ಆಗಾಗೆ ತೆಗೆಯಿರಿ. ಮುಖ್ಯವಾಗಿ ವೈಪರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಿ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಹೆಡ್‌ ಲೈಟ್‌ಗಳನ್ನು ಬಳಸಿ

ಮಳೆಗಾಲದಲ್ಲಿ ಬೇಗನೆ ಕತ್ತಲೆಯಾಗುತ್ತದೆ. ಆದ್ದರಿಂದ ವಾಹನದ ಬೆಳಕಿನ ಬಗ್ಗೆ ಗಮನಹರಿಸಿ. ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪ್ರಯಾಣಿಸುವ ಮುನ್ನ ಪರಿಶೀಲಿಸುವುದು ಸೂಕ್ತ. ವಾಹನದಲ್ಲಿನ ಬಲ್ಬ್‌ಗಳು ಹಾಳಾದಾಗ ಅಪಘಾತವಾಗುವ ಸಾಧ್ಯತೆ ಹೆಚ್ಚು.

ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ವಿಪರೀತ ಮಳೆಯಾದಾಗ ಹೆಡ್‌ಲೈಟ್‌ಗಳನ್ನು ಬಳಸುವುದರಿಂದ ಮಂಜಿನಿಂದ ತುಂಬಿದ್ದರೂ, ಮುಂದೆಯಿಂದ ಬರುವ ವಾಹನಗಳಿಗೆ ನಮ್ಮ ವಾಹನವನ್ನು ಕೊಂಚ ಬೇಗ ಗುರುತಿಸಲು ಸಾಧ್ಯವಾಗುತ್ತದೆ.

ಹುಷಾರಾಗಿ ಓಡ್ರಪ್ಪಾ..! ಮಳೆಗಾಲದಲ್ಲಿ ಡ್ರೈವ್‌ ಮಾಡುವಾಗ ಅನುಸರಿಸಬೇಕಾದ ಟಿಪ್ಸ್‌ಗಳು

ಡ್ರೈವ್‌ಸ್ಪಾರ್ಕ್‌ ಅಭಿಪ್ರಾಯ

ಮಳೆಗಾಲದ ಸಂದರ್ಭದಲ್ಲಿ ಕೆಲವೊಮ್ಮೆ ವಾಹನ ಚಾಲನೆಯ ಚಾಲನೆಯ ಸಹವಾಸವೇ ಬೇಡ ಎನ್ನಿಸುತ್ತದೆ. ಆದರೆ ಮುನ್ನಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಮಳೆಗಾಲದಲ್ಲಿ ಚಾಲನೆ ವೇಳೆ ಎದುರಾಗಬಹುದಾದ ಸಂಭವನೀಯ ತೊಂದರೆಗಳನ್ನು ತಪ್ಪಿಸಬಹುದಾಗಿದ್ದು, ಸುರಕ್ಷಿತ ಪ್ರಯಾಣ ನಮ್ಮದಾಗುತ್ತದೆ.

Most Read Articles

Kannada
English summary
Mansoon car riding tips in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X