ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಉದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಸದಾಕಾಲ ಸಕ್ರಿಯರಾಗಿರುತ್ತಾರೆ. ದೇಶದ ಹಾಗೂ ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುವ ಹೊಸ ಹೊಸ ಆವಿಷ್ಕಾರಗಳಿಗೆ ಸಂಬಂಧಿಸಿದ ಪೋಸ್ಟ್ ಗಳನ್ನು ಟ್ವೀಟ್ ಮಾಡುತ್ತಿರುತ್ತಾರೆ.

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಈಗ ಆನಂದ್ ಮಹೀಂದ್ರಾ ಅವರು ನೀರಿನ ಮೇಲೆ ಸೈಕ್ಲಿಂಗ್ ಮಾಡುವ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊವನ್ನು ಶ್ಲಾಘಿಸುವುದರ ಜೊತೆಗೆ ಸೈಕಲ್ ಬಳಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಆನಂದ್ ಮಹೀಂದ್ರಾ ಮಾಂತಾ 5 ಸೈಕಲ್ ಗಳಿಗೆ ಸಂಬಂಧಿಸಿದ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ಸೈಕಲ್ ರೀತಿಯ ಬೈಕಿನ ವಿಶೇಷತೆಯೆಂದರೆ ಅದು ದೋಣಿಯಂತೆ ನೀರಿನ ಮೇಲೆ ಚಲಿಸಬಲ್ಲದು.

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಸಾಮಾನ್ಯ ಸೈಕಲ್ ಗಳ ರೀತಿಯಲ್ಲಿ ಈ ಸೈಕಲ್ ನಲ್ಲಿಯೂ ಪ್ಯಾಡಲ್ ತುಳಿಯ ಬೇಕಾಗುತ್ತದೆ. ಪ್ಯಾಡಲ್ ತುಳಿದ ನಂತರ ಈ ಸೈಕಲ್ ನೀರಿನ ಮೇಲೆ ಚಲಿಸಲು ಶುರು ಮಾಡುತ್ತದೆ. ಶೇರ್ ಮಾಡಲಾದ ವೀಡಿಯೊದಲ್ಲಿ ಮಾಂತಾ 5 ಸ್ಥಾಪಕ ಗೈ ಹೊವಾರ್ಡ್-ವಿಲ್ಲೀಸ್ ಈ ಸೈಕಲ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಅವರು ನ್ಯೂಜಿಲೆಂಡ್ ಮೂಲದವರಾಗಿದ್ದು ಸೈಕ್ಲಿಂಗ್ ಹಾಗೂ ಸ್ವಿಮಿಂಗ್ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ಈ ಕಾರಣಕ್ಕೆ ಈ ಎರಡನ್ನೂ ಒಟ್ಟಿಗೆ ತರುವ ಪ್ರಯತ್ನ ಮಾಡಿದ್ದಾರೆ.

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಭೂಮಿಯ ಮೇಲೆ ಸೈಕಲ್ ಹೇಗೆ ಚಲಿಸುತ್ತದೆ ಎಂದು ಜನರಿಗೆ ತಿಳಿದಿದೆ. ಅದನ್ನೇ ನೀರಿನ ಮೇಲೆಯೂ ಮಾಡಿದರೆ ಜನರನ್ನು ಆಕರ್ಷಿಸಬಹುದು ಎಂದು ಗೈ ಹೊವಾರ್ಡ್ ಹೇಳಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಈ ಕಾರಣಕ್ಕೆ ಜನರನ್ನು ಹೊತ್ತುಕೊಂಡು ನೀರಿನ ಮೇಲೆ ಚಲಿಸಬಲ್ಲ ಮಾಂತಾ 5 ಹೈಡ್ರೋಫಾಯಿಲ್ ಬೈಕ್ ಅನ್ನು ಹೊರ ತಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಇದು ವಾಟರ್ ಸ್ಕೀಕಿಂಗ್‌ನಂತೆ ಖುಷಿ ನೀಡುತ್ತದೆ.

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಇದರಲ್ಲಿ ದೋಣಿಯ ಅಗತ್ಯವಿಲ್ಲದ ಕಾರಣ ಹೆಚ್ಚಿನ ತಾಲೀಮು ಸಿಗುತ್ತದೆ ಎಂದು ಹೇಳಿರುವ ಅವರು ತಾವು ಎರಡು ರೀತಿಯಲ್ಲಿ ಆಲೋಚಿಸುತ್ತಿರುವುದಾಗಿ ತಿಳಿಸಿದ್ದಾರೆ. ಜೆಟ್ ಸ್ಕೀ ಹೆಚ್ಚು ರೋಮಾಂಚನಕಾರಿಯೇ? ನಗರದಲ್ಲಿನ ಪ್ರವಾಹದ ಸಮಯದಲ್ಲಿ ಇದು ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆಯೇ? ಅಥವಾ ನೀರಿನ ಸೇತುವೆಗಳಿಲ್ಲದ ದೂರದ ಪ್ರದೇಶಗಳಲ್ಲಿ ಸಾರಿಗೆಯಾಗಿ ಪ್ರಯೋಜನಕಾರಿಯೇ ಎಂದು ಕೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಟ್ವಿಟರ್ ಬಳಕೆದಾರರು ಈ ಎರಡೂ ರೀತಿಯ ಪ್ರಶ್ನೆಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದನ್ನು ಸಾರಿಗೆಯಾಗಿ ಬಳಸುವ ಬಗ್ಗೆ ಮಾತನಾಡಿದರೆ, ಇನ್ನೂ ಕೆಲವರು ಇದನ್ನು ಪ್ರವಾಹದ ಸಮಯದಲ್ಲಿ ಸಹಾಯ ಮಾಡುವ ವಾಹನವಾಗಿ ಬಳಸಬಹುದೆಂದು ಹೇಳಿದ್ದಾರೆ.

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಹಾಗೆ ನೋಡಿದರೆ, ಈ ವಾಟರ್ ಸೈಕಲ್ ಅನ್ನು ಎರಡೂ ಸ್ಥಳಗಳಲ್ಲಿ ಸುಲಭವಾಗಿ ಬಳಸಬಹುದು. ಆದರೆ ಸಾಮಾನ್ಯ ಜನರಿಗೆ ಅದರ ಮಾರಾಟ ಹಾಗೂ ಬಿಡುಗಡೆಯ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆದರೆ ಒಂದು ವಿಷಯ ಸ್ಪಷ್ಟವಾಗಿದ್ದು, ಈ ವಾಟರ್ ಸೈಕಲ್ ಮೂಲಕ ಪ್ರಪಂಚದ ಅನೇಕ ಭಾಗಗಳಲ್ಲಿರುವ ಪ್ರಮುಖ ಸಮಸ್ಯೆಗಳನ್ನು ಬಗೆ ಹರಿಸಬಹುದು. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.

ನೀರಿನ ಮೇಲೆ ಸರಾಗವಾಗಿ ಚಲಿಸುತ್ತದೆ ಈ ವಾಟರ್ ಸೈಕಲ್

ಜನರನ್ನು ರಕ್ಷಿಸಲು ದೋಣಿಗಳನ್ನು ಬಳಸಲಾಗಿತ್ತು. ಈ ರೀತಿಯ ವಿಪತ್ತಿನ ಸಮಯದಲ್ಲಿ ಆಹಾರ, ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸಲು ಈ ವಾಟರ್ ಸೈಕಲ್ ಅನ್ನು ಬಳಸಬಹುದು.

Most Read Articles

Kannada
English summary
Manta 5 water bicycle moves on water easily. Read in Kannada.
Story first published: Tuesday, October 20, 2020, 20:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X