Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿದೇಶಿಗಳಲ್ಲೂ ಸದ್ದು ಮಾಡಲಿದೆ 'ಮೇಕ್ ಇನ್ ಇಂಡಿಯಾ' ನಿರ್ಮಾಣದ ಟ್ರೈನ್ 18..
ದೇಶದ ಅತಿ ವೇಗದ ರೈಲು ಎಂದು ಬಿಂಬಿತವಾಗಿರುವ ಟ್ರೈನ್ 18 ಇದೇ ತಿಂಗಳು ಅಧಿಕೃತವಾಗಿ ಸೇವೆ ಆರಂಭಿಸಲಿದ್ದು, ರೈಲ್ವೆ ಸೇವೆಗಳಲ್ಲಿ ಹೊಸ ಸಂಚಲನಕ್ಕೆ ಸೃಷ್ಠಿಸಿರುವುದಲ್ಲದೇ ಟ್ರೈನ್ 18ನಲ್ಲಿರುವ ಅತ್ಯಾಧುನಿಕ ಸೌಲಭ್ಯಗಳು ಈಗಾಗಲೇ ಸಾಕಷ್ಟು ಆಕರ್ಷಣೆಗೆ ಕಾರಣವಾಗಿವೆ.

ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ ಹಲವು ಅತ್ಯಾಧುನಿಕ ಸಾರಿಗೆ ಸೌಲಭ್ಯಗಳನ್ನು ಆರಂಭಿಸುವ ಗುರಿಹೊಂದಿದೆ. ಇದರಲ್ಲಿ ಸದ್ಯಕ್ಕೆ ಹಳಿಗಿಳಿಯಲು ಸಜ್ಜಾಗಿರುವ ಟ್ರೈನ್ 18 ಭಾರೀ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ರೈಲಿನ ಸೇವೆ ಆರಂಭವಾಗುವ ಮುನ್ನವೇ ವಿದೇಶಿಗಳಲ್ಲೂ ಟ್ರೈನ್ 18 ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಹೌದು, ದೇಶದ ಆಧುನಿಕ ಎಂಜಿನ್ ರಹಿತ ರೈಲು ಎಂಬ ಖ್ಯಾತಿ ಹೊಂದಿರುವ ಟ್ರೈನ್-18 ತನ್ನ ಸ್ಪೀಡ್ ಗೆ ಸಂಬಂಧಿಸಿದಂತೆ ಕಳೆದ ತಿಂಗಳ ಹಿಂದಷ್ಟೇ ಪರೀಕ್ಷಾರ್ಥ ಸಂಚಾರದ ವೇಳೆ ಹೊಸ ದಾಖಲೆ ನಿರ್ಮಿಸಿತ್ತು. ಗಂಟೆಗೆ ಬರೋಬ್ಬರಿ 180 ಕಿ.ಮೀ ವೇಗದಲ್ಲಿ ಚಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ಹೊಸ ಆವಿಷ್ಕಾರಕ್ಕೆ ಮತ್ತೊಂದು ಮುನ್ನುಡಿ ಬರೆದಿದೆ.

ಸದ್ಯ ಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರತಿ ಗಂಟೆಗೆ 130 ಕಿ.ಮಿ ವೇಗದೊಂದಿಗೆ ಭಾರತದಲ್ಲಿರುವ ಚಲಿಸುತ್ತಿರುವ ಅತಿ ವೇಗದ ರೈಲು ಎನ್ನುವ ಖ್ಯಾತಿ ಹೊಂದಿದ್ದು, ಇದೀಗ ಟ್ರೈನ್ 18 ರೈಲು ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯದೊಂದಿಗೆ ಶತಾಬ್ದಿ ರೈಲನ್ನು ಹಿಂದಿಕ್ಕಿದೆ.

ಈ ಮೂಲಕ ದೇಶದಲ್ಲಿ ವೇಗದ ರೈಲು ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಟ್ರೈನ್ 18 ಮಾದರಿಯು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಇದೇ ತಿಂಗಳ ಕೊನೆಯಲ್ಲಿ ಹೊಸ ರೈಲಿನ ಸೇವೆಗೆ ಪ್ರಧಾನಿ ನರೇಂದ್ರ ಮೋದಿಯವರು ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ದೆಹಲಿ ಟು ವಾರಣಾಸಿ ಮಾರ್ಗದಲ್ಲಿ ಟ್ರೈನ್ 18 ಸಂಚಾರಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಈ ನಡುವೆ ವಿದೇಶಿದಲ್ಲೂ ಟ್ರೈನ್ 18 ಕುರಿತಾಗಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಅಗ್ಗದ ಬೆಲೆಯಲ್ಲಿ ನಿರ್ಮಾಣವಾಗಿರುವ ಟ್ರೈನ್ 18 ಮಾದರಿಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಆಸಕ್ತಿ ತೊರುತ್ತಿವೆಯೆಂತೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೆಂದ್ರ ರೈಲ್ವೆ ಮಂಡಳಿಯು ಪೆರು, ಮಲೇಷಿಯಾ, ಸಿಂಗಾಪುರ್, ಇಂಡೋನೆಷ್ಯಾ ಮತ್ತು ಮಧ್ಯಪ್ರಾಚ್ಯ ಆಫ್ರಿಕನ್ ರಾಷ್ಟ್ರಗಳು ಟ್ರೈನ್ 18 ಖರೀದಿಗೆ ಆಸಕ್ತಿ ತೊರಿವೆ ಎನ್ನಲಾಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಇದು ಎಂದಿದೆ.

ವಿಶೇಷ ಅಂದ್ರೆ ಭಾರತದಲ್ಲಿ ನಿರ್ಮಾಣಗೊಂಡಿರುವ ಟ್ರೈನ್ 18 ಕೇವಲ 100 ಕೋಟಿ ನಿರ್ಮಾಣಗೊಂಡಿದ್ದರೂ ಇದು ವಿದೇಶಿಗಳಲ್ಲಿ ನಿರ್ಮಾಣವಾಗಬೇಕಾದ್ರೆ ಕನಿಷ್ಠ ಅಂದ್ರು 250 ಕೋಟಿ ಖರ್ಚಾಗಲಿದೆಯೆಂತೆ. ಹೀಗಾಗಿ ಭಾರತದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗಿರುವ ಟ್ರೈನ್ 18 ಖರೀದಿಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದೆ.

ಸದ್ಯಕ್ಕೆ ಭಾರತದಲ್ಲಿನ ಬೇಡಿಕೆಯನ್ನು ಪೂರ್ಣಗೊಳಿಸಲು ನಿರ್ಧರಿಸಿರುವ ರೈಲ್ವೆ ಮಂಡಳಿಯು ತದನಂತರವಷ್ಟೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಬಗ್ಗೆ ಸುಳಿವು ನೀಡಿದ್ದು, ಮುಂದಿನ ತಿಂಗಳು ನಡೆಯಲಿರುವ ಇಂಟರ್‌ನ್ಯಾಷನಲ್ ಹೈ ಸ್ಪೀಡ್ ರೈಲ್ ಅಸೋಸಿಯೇಷನ್ ಸಮ್ಮೆಳನದ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯ ಟ್ರೈನ್ 18 ಬೇಡಿಕೆಯನ್ನು ಹೆಚ್ಚಿಸಲಿದೆ.

ಹೊಸ ರೈಲು ನಿರ್ಮಾಣಕ್ಕೆ 100 ಕೋಟಿ ವೆಚ್ಚ!
ಟ್ರೈನ್ 18 ರೈಲು ಯೋಜನೆಯನ್ನು ಪೂರ್ಣಗೊಳಿಸಲು ಬರೋಬ್ಬರಿ ರೂ. 100 ಕೋಟಿ ಖರ್ಚು ಮಾಡಲಾಗಿದ್ದು, ಅತ್ಯಾಧುನಿಕ ಎಂಜಿನ್ ಮಾದರಿ, ಐಷಾರಾಮಿ ಸೌಲಭ್ಯ ಹೊಂದಿರುವ ಹೊಸ ರೈಲ್‌ನ್ನು ಕೇವಲ 18 ತಿಂಗಳಿನಲ್ಲಿ ನಿರ್ಮಾಣ ಮಾಡಲಾಗಿದೆ.
MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್)ನಲ್ಲಿ ಟ್ರೈನ್ 18 ಮಾದರಿಯನ್ನು ನಿರ್ಮಾಣ ಮಾಡಿರುವ ಕೇಂದ್ರ ರೈಲ್ವೆ ಮಂಡಳಿಯು ಮುಂಬರುವ ದಿನಗಳಲ್ಲಿ ಇದೇ ಘಟಕವನ್ನು ವಿಸ್ತರಣೆ ಮಾಡುವ ಮೂಲಕ ವಿದೇಶಿ ಮಾರುಕಟ್ಟೆಗಳ ಬೇಡಿಕೆಯನ್ನು ಇಲ್ಲಿಂದಲೇ ಪೂರೈಕೆ ಮಾಡುವ ಗುರಿಹೊಂದಿದೆ.

ಹೊಸ ರೈಲಿನಲ್ಲಿ ಒಟ್ಟು 16 ಬೋಗಿಗಳಿದ್ದು, ಇವುಗಲ್ಲಿ 52 ಆಸನಗಳ ಹೊಂದಿರುವ ಎರಡು ಎಕ್ಸಿಕ್ಯುಟಿವ್ ಬೋಗಿಗಳನ್ನು ನೀಡಲಾಗಿದೆ. ಉಳಿದವು 78 ಆಸನಗಳ ಸಾಮಾನ್ಯ ಬೋಗಿಗಳಿದ್ದು, ಸಂಪೂರ್ಣ ಹವಾನಿಯಂತ್ರಣ, ಸಿಸಿಟಿವಿ ಸೌಲಭ್ಯ, ಜಿಪಿಎಸ್ ಆಧರಿತ ಮಾಹಿತಿ ಫಲಕ, ಸ್ವಯಂ ಚಾಲಿತ ಬಾಗಿಲು ಸೌಲಭ್ಯ ಪಡೆದಿದೆ.
MOST READ: ಮಹೀಂದ್ರಾ ಅಲ್ಟುರಾಸ್ ಜಿ4 ಕಾರಿಗೆ ಹೊಸ ಹೆಸರು ನೀಡಿದ್ರೆ 2 ಕಾರು ಫ್ರೀ ಅಂತೆ..!

ಹಾಗೆಯೇ ಪ್ರತಿ ಎರಡು ಬೋಗಿಗಳ ನಡುವೆ ಮೋಟಾರೈಸ್ಡ್ ಎಂಜಿನ್ ಅಳವಡಿಕೆ ಮಾಡಿರುವುದಿಂದ ರೈಲು ಅತಿ ವೇಗವಾಗಿ ಚಲಿಸಲು ಸಾಧ್ಯವಾಗಿದೆ. ಜೊತೆಗೆ ಕ್ಷಣಾರ್ಧದಲ್ಲಿ ನಿಲ್ಲುವ ಸಾಮರ್ಥ್ಯವನ್ನೂ ಕೂಡಾ ಹೊಂದಿದ್ದು, ಆಗಬಹುದಾದ ರೈಲು ದುರಂತಗಳಿಗೆ ಇದರಿಂದ ತಪ್ಪಿಸಬಹುದಾಗಿದೆ.

ಇದಲ್ಲದೇ ದೀರ್ಘಾವಧಿ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹೊಸ ರೈಲಿನಲ್ಲಿ ವಿಶೇಷ ಮನೋರಂಜನಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವೈ ಫೈ, ವ್ಯಾಕ್ಯೂಮ್ ಟಾಯ್ಲೆಟ್, ಲಗೇಜ್‌ಗೆ ಪ್ರತ್ಯೇಕ ಜಾಗ ಮೀಸಲು, ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.
MOST READ: ಇನ್ಮುಂದೆ ಹೊಸ ಅನುಭವದೊಂದಿಗೆ ಮಾರುತಿ ಸುಜುಕಿ ಕಾರುಗಳನ್ನು ಖರೀದಿಸಿ..!

ಒಟ್ಟಿನಲ್ಲಿ ಪ್ರಾಯೋಗಿಕ ಓಡಾಟದಲ್ಲೇ ಹೊಸ ನೀರಿಕ್ಷೆ ಹುಟ್ಟುಹಾಕಿರುವ ಟ್ರೈನ್ 18 ಮಾದರಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಲಿದ್ದು, 2019ರ ಕೊನೆಯಲ್ಲಿ ದೇಶದ ಇತರೆ ಮೆಟ್ರೋ ನಗರಗಳ ನಡುವಿನ ಸಂಪರ್ಕಕ್ಕೂ ಇವು ಲಭ್ಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗಿದೆ.
Source: NDTV