ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಮಾರುತಿ ಸುಜುಕಿ 800 ಕಾರು ಭಾರತೀಯರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಭಾರತದಲ್ಲಿ ಅನೇಕ ದಶಕಗಳ ಕಾಲ ಮಾರಾಟವಾಗುತ್ತಿತ್ತು. ಆದರೆ ಹಲವು ಕಾರಣಗಳಿಗಾಗಿ ಮಾರುತಿ ಸುಜುಕಿ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು.

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ದೇಶಾದ್ಯಂತ ಹಲವಾರು ಜನರು ಈ ಕಾರ್ ಅನ್ನು ಬಳಸಿದ್ದಾರೆ. ಅನೇಕರು ಇಂದಿಗೂ ಮಾರುತಿ ಸುಜುಕಿಯ ಹಳೆಯ ತಲೆಮಾರಿನ ಕಾರನ್ನು ಬಳಸುತ್ತಾರೆ. ಅದರಲ್ಲೂ ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಕಾರ್ ಅನ್ನು ಬಳಸುತ್ತಾರೆ. ಈ ಕಾರ್ ಅನ್ನು ಕೆಲವು ಯುವಕರು ಈಗ ತ್ರಿ ಚಕ್ರ ವಾಹನವನ್ನಾಗಿ ಮಾಡಿಫೈ ಮಾಡಿದ್ದಾರೆ. ಆ ಯುವಕರ ಪ್ರಯತ್ನದಿಂದ ಈ ಕಾರು ದೇಶದ ಮೊದಲ ಕಿರಿದಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಯುವಕರು ಮನರಂಜನೆಯ ಉದ್ದೇಶಕ್ಕೆ ಕಾರ್ ಅನ್ನು ಮಾಡಿಫೈಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಮನರಂಜನೆಯ ಉದ್ದೇಶಕ್ಕೆ ಈ ಕಾರ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಫೈಗೊಳಿಸಲಾಗಿದೆ. ಮಾಡಿಫೈ ಮಾಡಲಾದ ಕಾರಿನ ವೀಡಿಯೊವನ್ನು ಮ್ಯಾಗ್ನಾಡೋ 11ಯೂಟ್ಯೂಬ್ ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ . ಈ ವೀಡಿಯೊದಲ್ಲಿ ಕಾರ್ ಅನ್ನು ಮಾಡಿಫೈ ಮಾಡಿರುವುದನ್ನು ಹಂತ ಹಂತವಾಗಿ ತೋರಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಕಾರ್ ಅನ್ನು ಹೇಗೆ ಮಾಡಿಫೈಗೊಳಿಸಬಹುದು ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಮಾರುತಿ 800 ಕಾರಿಗೆ ವಿಭಿನ್ನವಾದ ಲುಕ್ ನೀಡಲು ಯುವಕರು ಕಾರಿನ ಅರ್ಧ ಭಾಗವನ್ನು ತೆಗೆದು ಹಾಕಿದ್ದಾರೆ. ಕಾರಿನ ಮುಂಭಾಗವನ್ನು ಉಳಿಸಿಕೊಂಡು ಹಿಂಭಾಗವನ್ನು ತೆಗೆದು ಹಾಕಲಾಗಿದೆ.

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ನಂತರ ಹಿಂಭಾಗಕ್ಕೆ ಮೂರನೇ ಚಕ್ರವನ್ನು ಸೇರಿಸಿ, ಕಾರಿಗೆ ಮೂರು ಚಕ್ರಗಳ ಆಟೋ ಲುಕ್ ನೀಡಲಾಯಿತು. ಮೂರನೇ ಚಕ್ರವಾಗಿ ದ್ವಿಚಕ್ರ ವಾಹನದ ಟಯರ್ ಹಾಗೂ ವ್ಹೀಲ್ ಅನ್ನು ಬಳಸಲಾಗಿದೆ. ಈ ಹಿಂದೆ ಯಾವುದೇ ಮಾರುತಿ 800 ಕಾರ್ ಅನ್ನು ಈ ರೀತಿ ಮಾಡಿಫೈ ಮಾಡಲಾಗಿರಲಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಅಂದ ಹಾಗೆ ಮಾರುತಿ 800 ಫ್ರಂಟ್-ವ್ಹೀಲ್ ಡ್ರೈವ್ ಕಾರ್ ಆಗಿದೆ. ಕಾರ್ ಅನ್ನು ಅರ್ಧಕ್ಕೆ ಕತ್ತರಿಸಿರುವುದರಿಂದ ಕಾರ್ ಅನ್ನು ಡ್ರೈವ್ ಮಾಡಲು ಯಾವುದೇ ತೊಂದರೆಯಾಗಿಲ್ಲ. ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ಯಾವುದೇ ವಾಹನಗಳನ್ನು ಮಾಡಿಫೈ ಮಾಡುವಂತಿಲ್ಲ.

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ತ್ರಿಚಕ್ರ ವಾಹನವಾಗಿ ಬದಲಾಗಿರುವ ಮಾರುತಿ 800 ಕಾರ್ ಅನ್ನು ಮತ್ತೆ ನಾಲ್ಕು ಚಕ್ರದ ಕಾರ್ ಆಗಿ ಮಾಡಲಾಗುವುದೆಂದು ಆ ಯುವಕರು ಹೇಳಿದ್ದಾರೆ. ಯಾವಾಗ ಬದಲಿಸಲಾಗುವುದೆಂದು ಹೇಳಿಲ್ಲ. ಆದರೆ ಖಂಡಿತವಾಗಿಯೂ ಹೊಸ ರೀತಿಯಲ್ಲಿ ಬದಲಿಸುವುದಾಗಿ ಹೇಳಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಸುರಕ್ಷತೆಯ ಕಾರಣದಿಂದಾಗಿ ಭಾರತೀಯ ಮೋಟಾರು ವಾಹನ ಕಾಯ್ದೆಯು ಯಾವುದೇ ವಾಹನಗಳನ್ನು ಮಾಡಿಫೈ ಮಾಡಲು ಅನುಮತಿ ನೀಡುವುದಿಲ್ಲ. ಯಾವುದೇ ವಾಹನವನ್ನು ಮಾಡಿಫೈ ಮಾಡಿದರೆ ಮಾಡಿಫೈಗೊಂಡ ನಂತರ ಸಮಸ್ಯೆಗಳು ಎದುರಾಗುತ್ತವೆ. ಈ ಕಾರಣಕ್ಕಾಗಿ ಭಾರತದಲ್ಲಿ ಮಾಡಿಫೈ ವಾಹನಗಳನ್ನು ನಿಷೇಧಿಸಲಾಗಿದೆ.

ಅರೈ ಹಾಗೂ ಐಗೇಟ್ ವ್ಯವಸ್ಥೆಗಳ ತಪಾಸಣೆಯ ನಂತರ ಈ ರೀತಿಯ ವಾಹನಗಳನ್ನು ಅಧಿಕೃತಗೊಳಿಸಬಹುದು. ಈ ವ್ಯವಸ್ಥೆಗಳು ಮಾಡಿಫೈಗೊಂಡ ವಾಹನಗಳು ಭಾರತದ ರಸ್ತೆಗಳಿಗೆ ಹೊಂದಿಕೊಳ್ಳುತ್ತವೆಯೇ ಎಂಬುದನ್ನು ಪರಿಶೀಲಿಸುತ್ತವೆ. ಹೊಂದಿಕೊಳ್ಳುವುದು ಖಚಿತವಾದರೆ ಮಾತ್ರ ಆ ವಾಹನಗಳನ್ನು ಆರ್‌ಟಿಒಗಳಲ್ಲಿ ರಿಜಿಸ್ಟರ್ ಮಾಡಲು ಅನುಮತಿ ನೀಡಲಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಮೂರು ಚಕ್ರದ ಆಟೋ ರೀತಿಯಲ್ಲಿ ಮಾಡಿಫೈಗೊಂಡ ಮಾರುತಿ 800 ಕಾರು

ಮಾಡಿಫೈ ಮಾಡಲಾದ ವಾಹನಗಳನ್ನು ಆರ್‌ಟಿಒಗಳ ಅನುಮತಿಯಿಲ್ಲದೆ ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಚಾಲನೆ ಮಾಡಿದರೆ ವಾಹನವನ್ನು ಜಪ್ತಿ ಮಾಡಿಕೊಳ್ಳುವುದರ ಜೊತೆಗೆ ದಂಡ ವಿಧಿಸಲು ಬಹುದು.

Most Read Articles

Kannada
English summary
Maruti 800 car modified into three wheeler. Read in Kannada.
Story first published: Thursday, May 28, 2020, 9:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X