ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಐಷಾರಾಮಿ ಮನೆ, ದುಬಾರಿ ಕಾರುಗಳು. ಏಕೆಂದರೆ ಅವರ ಸಂಪಾದನೆಗೆ ಅನುಗುಣವಾಗಿ ವೆಚ್ಚಿಸಿ ಮನೆ, ಕಾರುಗಳನ್ನು ಖರೀದಿಸುತ್ತಾರೆ. ಆದರೆ ಹಣಗಳಿಕೆ ಕೋಟಿಗಳಲಿದ್ದು, ಸಿಂಪಲ್ ಆಗಿ ಬದುಕುವವರನ್ನು ನಾವು ನೊಡುವುದು ಅತಿ ವಿರಳ ಎಂದೇ ಹೇಳಬಹುದು.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ನಮ್ಮ ದೇಶದಲ್ಲಿ ಇಂತಹ ಕೆಲವರೇ ಸೆಲೆಬ್ರಿಟಿಗಳಿದ್ದಾರೆ, ರತನ್ ಟಾಟಾ ಅವರು ಇತ್ತೀಚೆಗೆ ಹಲವು ಬಾರಿ ಟಾಟಾ ನ್ಯಾನೋದಲ್ಲಿ ಪ್ರಯಾಣಿಸುತ್ತಾ ಕಾಣಿಸಿಕೊಂಡಿದ್ದರು. ರತನ್ ಟಾಟಾ ಅವರ ಬಗ್ಗೆ ಹೇಳುವುದು ಬೇಡ, ಇಡೀ ಜಗತ್ತಿಗೆ ಗೊತ್ತು ಅವರ ಸಿಂಪ್ಲಿಸಿಟ. ಆದರೆ ಇದೀಗ ಬಾಲಿವುಡ್‌ ನಟಿ ಶ್ರದ್ದಾ ಕಪೂರ್ ಮಾರುತಿ ಬ್ರೆಝಾದಲ್ಲಿ ಕಾಣಿಸಿಕೊಂಡು ಅಚ್ಚರಿಗೊಳಿಸಿದ್ದಾರೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಅಚ್ಚರಿ ಏಕೆಂದರೇ ಸಾಮಾನ್ಯವಾಗಿ ಬಾಲಿವುಡ್ ನಟ-ನಟಿಯರು ಸಿಂಪಲ್ ಜೀವನಕ್ಕೆ ಬಲು ದೂರವಿರುತ್ತಾರೆ. ಬಹುತೇಕ ಇವರೆಲ್ಲರೂ ಐಷಾರಾಮಿ ಜೀವನವನ್ನೇ ನಡೆಸುತ್ತಿದ್ದಾರೆ. ಹೀಗಿರುವಾಗ ನಟಿ ಶ್ರದ್ಧಾ ಸಣ್ಣ ಬ್ರೆಝಾದಲ್ಲಿ ಕಾಣಿಸಿಕೊಂಡಿರುವುದು ಅವರ ಸರಳತೆಯನ್ನು ತೋರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪ್ರಶಂಸಿಸುತ್ತಿದ್ದಾರೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಈ ವೀಡಿಯೊವನ್ನು ಕಾರ್ಸ್ ಫಾರ್ ಯೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ವೀಡಿಯೋದಲ್ಲಿ ಶ್ರದ್ಧಾ ಕಪೂರ್ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಿಂದ ಹೊರಬರುತ್ತಿರುವುದನ್ನು ಕಾಣಬಹುದು. ಅವರು ತಮ್ಮ ಮಾರುತಿ ಸುಜುಕಿ ವಿಟಾರಾ ಬ್ರೆಝಾ ಕಾರನ್ನು ಹತ್ತುವ ಮುಂಚೆ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡಿದ್ದಾರೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಬಳಿಕ ಅವರು ಹಿಂತಿರುಗಿ ತಮ್ಮ ಬ್ರೆಝಾ ಕಾರಿನಲ್ಲಿ ಕುಳಿತುಕೊಂಡು ಹೊರಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಜನ ಸಾಮಾನ್ಯರಂತೆ ಸಿಂಪಲ್ ಕಾರನ್ನು ಹೊಂದಿರುವ ಮೊದಲ ಬಾಲಿವುಡ್ ಸೆಲೆಬ್ರಿಟಿ ಶ್ರದ್ಧಾ ಕಪೂರ್ ಮಾತ್ರವಲ್ಲ. ಸಾರಾ ಅಲಿ ಖಾನ್ ಹೋಂಡಾ ಸಿಆರ್-ವಿ, ದಿಶಾ ಪಟಾನಿ ಷೆವರ್ಲೆ ಕ್ರೂಜ್ ಮತ್ತು ಹಳೆಯ ಜೆನ್ ಹೋಂಡಾ ಸಿವಿಕ್, ಸೋನಾಕ್ಷಿ ಸಿನ್ಹಾ ಹಳೆಯ ಜೆನ್ ಹ್ಯುಂಡೈ ಕ್ರೆಟಾ, ಮಲೈಕಾ ಅರೋರಾ ಖಾನ್ ಟೊಯೊಟಾ ಇನ್ನೋವಾ ಕ್ರಿಸ್ಟಾ ಹೊಂದಿದ್ದಾರೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಉಳಿದಂತೆ ಶ್ರದ್ಧಾ ಕಪೂರ್ ತಮ್ಮ ಗ್ಯಾರೇಜ್‌ನಲ್ಲಿ ಒಂದೆರಡು ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ. ಅವರು ಮರ್ಸಿಡಿಸ್-ಬೆಂಝ್ GLE, Audi Q7, BMW 7-ಸರಣಿಯ ಐಷಾರಾಮಿ ಸೆಡಾನ್ ಅನ್ನು ಹೊಂದಿದ್ದಾರೆ. ಇನ್ನು ವಿಡಿಯೋದಲ್ಲಿ ಕಂಡುಬರುವ ಮಾರುತಿ ಬ್ರೆಝಾ ಬಗ್ಗೆ ಮಾತನಾಡುವುದಾದರೆ ಇದು ಮೊದಲ ತಲೆಮಾರಿನ ಮಾದರಿಯಾಗಿದೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಇದು ಆರಂಭದಲ್ಲಿ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿತ್ತು. ಇದು ಫಿಯೆಟ್ ಮೂಲದ 1.3 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದೆ. ಬ್ರೆಝಾ ಎಂಜಿನ್ 89 Bhp ಮತ್ತು 200 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದು ಆರಂಭದಲ್ಲಿ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿತ್ತು.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ನಂತರದ ಹಂತದಲ್ಲಿ AMT ಅನ್ನು ಪರಿಚಯಿಸಲಾಯಿತು. ಮಾರುತಿ ಸುಜುಕಿ ನಂತರ BS6 ಪರಿವರ್ತನೆಯ ಭಾಗವಾಗಿ 1.3 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಿತು. ಈ ಸಮಯದಲ್ಲಿ ಮಾರುತಿ ತನ್ನ ಎಲ್ಲಾ ಮಾದರಿಗಳಿಂದ ಡೀಸೆಲ್ ಎಂಜಿನ್‌ಗಳನ್ನು ಸಂಪೂರ್ಣವಾಗಿ ಹೊರಹಾಕಿತು.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಮಾರುತಿ ವಿಟಾರಾ ಬ್ರೆಝಾ ನಂತರ 2020 ರಲ್ಲಿ ಮೈನರ್ ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿತು. ಇದನ್ನು 105 Ps ಮತ್ತು 137 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ನವೀಕರಿಸಲಾಗಿದೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತಿತ್ತು. 2022 ರಲ್ಲಿ ಮಾರುತಿ ಹೊಸ ಬ್ರೆಝಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ ಈ ಎಸ್‌ಯುವಿಯಿಂದ ವಿಟಾರಾ ಹೆಸರನ್ನು ತೆಗೆದುಹಾಕಲಾಯಿತು.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಇದನ್ನು ಈಗ ಸರಳವಾಗಿ ಬ್ರೆಝಾ ಎಂದು ಕರೆಯಲಾಗುತ್ತದೆ. ಇದು ಈಗ ನವೀಕರಿಸಿದ K15C ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ದೊಡ್ಡದಾದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟ್ ಮಾಡಿದ ಕಾರ್ ಫೀಚರ್ಸ್, ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಇದು ಈಗ ಹೆಚ್ಚು ಆಧುನಿಕ ಮತ್ತು ಪ್ರೀಮಿಯಂ ಆಗಿ ಕಾಣುತ್ತದೆ. ಮಾರುತಿಯಿಂದ ಎಲೆಕ್ಟ್ರಿಕ್ ಸನ್‌ರೂಫ್ ಅನ್ನು ಒದಗಿಸಿದ ಮೊದಲ ಕಾರು ಕೂಡ ಇದಾಗಿದೆ.

ಕೋಟಿಗಟ್ಟಲೇ ಸಂಪಾದನೆಯಿದ್ರು ಮಾರುತಿ ಬ್ರೆಝಾ ಅಂದ್ರೆ ಇಷ್ಟ: ಹಳೆಯ ಬ್ರೆಝಾದಲ್ಲಿ ಕಾಣಿಸಿಕೊಂಡ ನಟಿ

ಇದು HUD, ಸ್ವಯಂಚಾಲಿತ ಕ್ಲೈಮೆಟ್ ಕಂಟ್ರೋಲ್ ಮುಂತಾದ ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಮಾರುತಿ ಬ್ರೆಝಾ ಬೆಲೆಯು ರೂ. 7.99 ಲಕ್ಷದಿಂದ ಪ್ರಾರಂಭವಾಗಿ ರೂ. 13.96 ಲಕ್ಷದವರೆಗೆ (ಎಕ್ಸ್ ಶೋರೂಂ) ಇದೆ. ಮಾರುತಿ ಬ್ರೆಝಾ ಜನಪ್ರಿಯ ಸಬ್-4 ಮೀಟರ್ ಕಾಂಪ್ಯಾಕ್ಟ್ SUV ಆಗಿದ್ದು, ಈ ವಿಭಾಗದಲ್ಲಿ ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್ ಮತ್ತು ಟಾಟಾ ನೆಕ್ಸಾನ್‌ನಂತಹ ಕಾರುಗಳೊಂದಿಗೆ ಸ್ಪರ್ಧಿಸುತ್ತಿದೆ.

Most Read Articles

Kannada
English summary
Maruti Brezza is worth crores of money actress who appeared in the old Brezza
Story first published: Friday, September 23, 2022, 14:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X