Just In
- 56 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 14 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 15 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 15 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Education
UGC Scholarship : ಯುಜಿಸಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
- News
ಆಗಸ್ಟ್ 17ರಂದು ಭಾರತದ ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಕಾರು ಮಾಲೀಕ ಮಾಡಿದ ಉಪಾಯ ಹೇಗಿದೆ ನೋಡಿ.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ನಾನಾ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ಜಾಗತಿಕ ತಾಪಮಾನ ವಿಪರೀತವಾಗಿ ಏರಿಕೆಯಾಗುಗುತ್ತಿರುವುದರಿಂದ ಮನೆ, ಕಛೇರಿ, ಕಾರ್ ಹೀಗೆ ನಾನಾ ಕಡೆಗಳಲ್ಲಿ ಸೆಕೆಯಿಂದಾಗಿ ಎಲ್ಲರಿಗೂ ಕಿರಿಕಿರಿಯಾಗುತ್ತಿರುವುದಂತೂ ನಿಜ. ಹೀಗಿರುವಾಗ ಇಲ್ಲೊಬ್ಬ ಕಾರ್ ಒಳಗಡೆ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಮಾಡಿದ ಒಂದು ವಿಶೇಷವಾದ ಐಡಿಯಾ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತನ್ನ ಕಾರಿನ ಹೊರಭಾಗದಲ್ಲಿ ಸಂಪೂರ್ಣವಾಗಿ ಸೆಗಣಿಯನ್ನು ಹಚ್ಚಿದ್ದು, ಬಿಸಿಲಿನ ಬೇಗೆಗೆ ಆ ವ್ಯಕ್ತಿ ಮಾಡಿದ ಉಪಾಯ ಎಲ್ಲರ ಗಮನ ಸೆಳೆದಿದೆ. ಪುಣೆ ಮೂಲದ ವ್ಯಕ್ತಿಯೊಬ್ಬ ತನ್ನ ಕಾರ್‌ಗೆ ವಿಶೇಷವಾದ ನೈಸರ್ಗಿಕ ಕೋಟಿಂಗ್ ಮಾಡಿದ್ದು, ಈಗಾಗಲೇ ಹಲವಾರು ವಾಹನಗಳಿಂದ ಬರುವ ಹೊಗೆಯಿಂದಾಗಿ ನಗರದಲ್ಲಿ ತಾಪಮಾನ ವಿಪರೀತವಾಗಿ ಹೆಚ್ಚಾಗಿದೆ.

ಬಿಸಿಲಿನ ಧಗೆ ಹೆಚ್ಚಾದಾಗ ಕಾರಿನಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಅದರಷ್ಟು ದೊಡ್ಡ ಹಿಂಸೆ ಬೇರೆ ಯಾವುದೂ ಅಲ್ಲ. ಇದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಆತ ತನ್ನ ಕಾರ್‌ನ ಹೊರಭಾಗದಲ್ಲಿ ಸಂಪೂರ್ಣವಾಗಿ ಹಸುಗಳ ಸೆಗಣಿಯನ್ನು ಮೆತ್ತಿದ್ದು, ಇದರಿಂದ ಕಾರ್ ಒಳಗಡೆ ಬಿಸಿ ಕಮ್ಮಿಯಾಗಿದೆ ಎಂದು ಹಂಚಿಕೊಂಡಿದ್ದಾನೆ.

ಕಾರಿನ ಹೊರಭಾಗದಲ್ಲಿ ದನದ ಸೆಗಣಿ ಹಚ್ಚಿಕೊಳ್ಳುವುದು ಇದೇ ಮೊದಲೇನಲ್ಲವಾಗಿದ್ದರೂ ಪುಣೆ ನಗರದಲ್ಲಿ ಇದು ಮೊಟ್ಟ ಮೊದಲ ಪ್ರಯತ್ನವಾಗಿದೆ.

ಇದಕ್ಕಿಂತಲೂ ಹಿಂದೆ ೨೦೧೯ ರಲ್ಲೂ ಅಹಮದಾಬಾದ್ ನಗರದಲ್ಲಿ ಟೊಯೋಟಾ ಕಾರಿನಲ್ಲಿ ಸಹ ಇದೇ ರೀತಿಯಲ್ಲಿ ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ಸೆಗಣಿಯನ್ನು ಹಚ್ಚಿ ಓಡಾಡುತ್ತಿದ್ದ ಫೋಟೋಗಳು ವೈರಲಾಗಿದ್ದವು.

ಇನ್ನು ಇದು ಅನೇಕರಿಗೆ ಹಾಸ್ಯಾಸ್ಪದವಾಗಿ ಕಂಡರೂ, ಸೆಗಣಿಗೆ ಸೂರ್ಯನಿಂದ ನೇರವಾಗಿ ಬರುವಂತಹ ಶಾಖವನ್ನು ತಡೆಯುವ ಸಾಮರ್ಥ್ಯವಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲದೇ ಇದ್ದರೂ, ಶಾಖವನ್ನು ದನದ ಸೆಗಣಿ ತಡೆಯುತ್ತದೆ ಎಂಬುದು ಹಲವರ ಅಭಿಪ್ರಾಯ. ಈ ಕುರಿತಾಗಿ ಪರ ವಿರೋಧ ಚರ್ಚೆಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುತ್ತವೆ.

ಸಾಧಾರಣವಾಗಿ ಮಣ್ಣಿನ ಮನೆಗಳ ಗೋಡೆ ಮತ್ತು ನೆಲಕ್ಕೆ ಸೆಗಣಿಯನ್ನು ಮೆತ್ತುವುದು/ಬಳಿಯುವುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ವಿಚಾರ. ಇದರಿಂದಾಗಿ ಮನೆಗೆ ಹೆಚ್ಚುವರಿಯಾದ ಥರ್ಮಲ್ ಪ್ರೊಟೆಕ್ಷನ್ ದೊರಕುತ್ತದೆ ಎಂಬುದು ಜನರ ನಂಬಿಕೆ. ಹಿಂದಿನ ಕಾಲದಲ್ಲಿ ಬೇಸಿಗೆಯ ಬಿಸಿ ಹೆಚ್ಚಾದಾಗ ಅದನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ನೆಲದ ಮೇಲೆ ತಣ್ಣೀರನ್ನು ಚಿಮುಕಿಸುತ್ತಿದ್ದರು.

ಏನೇ ಆದರೂ ದನದ ಸೆಗಣಿ ಬಳಸುವುದರಿಂದ ಶಾಖ ಕಮ್ಮಿಯಾಗುತ್ತದೆಯೋ ಅಥವಾ ಅಧಿಕವಾಗುತ್ತಿದೆಯೋ ಎಂಬುದು ಎರಡನೇ ವಿಷಯ. ಆದರೆ ಕಾರ್‌ನಲ್ಲಿ ಇದು ಎಷ್ಟರ ಮಟ್ಟಿಗೆ ಕೆಲಸಮಾಡುತ್ತದೆ ಮತ್ತು ಒಣಗಿದ ಸೆಗಣಿಗೆ ಬೆಂಕಿ ಹಚ್ಚಿಕೊಳ್ಳುವ ಸಾಧ್ಯತೆಯೂ ಸಹ ಹೆಚ್ಚು. ಹೀಗಿರುವಾಗ ಸೆಗಣಿಯನ್ನು ಕಾರ್‌ಗೆ ಹಚ್ಚಿಕೊಂಡು ಬಿಸಿಲಲ್ಲಿ ತಿರುಗಾಡುವುದು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದೂ ಕೂಡ ಯೋಚನೆ ಮಾಡಬೇಕಾದ ವಿಚಾರವೇ. ಯಾವುದಾದರೂ ಸಂಧರ್ಭದಲ್ಲಿ ಅಕಸ್ಮಾತಾಗಿ ಕಾರಿನ ಹೊರಭಾಗದಲ್ಲಿ ಬೆಂಕಿಯೇನಾದರು ತಾಗಿದರೆ ಮುಂದೆ ಆ ಕಾರು ಹೊತ್ತಿ ಉರಿಯುವುದಂತೂ ಖಚಿತ.

ಇನ್ನು ಕಾರಿನ ಹೊರಭಾಗದಲ್ಲಿ ಸೆಗಣಿಯನ್ನು ಹಚ್ಚಿ ಓಡಿಸುವುದರಿಂದ ಬೆಂಕಿಯ ಅವಘಡದ ಸಾಧ್ಯತೆ ಹೆಚ್ಚು ಎಂಬುದು ಮಾತ್ರವಲ್ಲದೆ ಕಾರಿನ ಗುಣಮಟ್ಟಕ್ಕೆ ಇದು ಒಂದು ಸವಾಲಾಗಲೂಬಹುದು. ಯಾಕೆಂದರೆ ಅಧಿಕ ಕಾಲ ಸೆಗಣಿ ಹಚ್ಚುವುದರಿಂದ ಕಾರ್‌ನ ಬಣ್ಣದಲ್ಲಿ ಯಾವ ರೀತಿಯಾಗಿ ಪರಿಣಾಮ ಬೀರುತ್ತದೆ ಎಂಬ ಶಂಕೆ ಮೂಡುವುದಂತೂ ಖಂಡಿತ. ಒಂದು ಬಾರಿ ಕಾರಿನ ಬಣ್ಣವೇನಾದರೂ ಮಾಸಿದರೆ ಮುಂದೆ ಮರು ಪೈಂಟ್ ಮಾಡಲು ಪೈಂಟ್‌ನ ಗುಣಮಟ್ಟಕ್ಕೆ ಅನುಸಾರವಾಗಿ ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಒಟ್ಟಾರೆಯಾಗಿ ಈ ಬಿಸಿಲಿನ ಬೇಗೆಯ ಸಮಸ್ಯೆಗಳಿಂದ ನೈಸರ್ಗಿಕವಾಗಿ ಹೊರಬರಲು ಈ ರೀತಿಯ ವೀಶೇಷ ಐಡಿಯಾಗಳನ್ನು ತರುವುದು ಶ್ಲಾಘನೀಯವೇ. ಆದರೆ ಅದನ್ನು ಕಣ್ಣುಮುಚ್ಚಿಕೊಂಡು ಹಿಂಬಾಲಿಸುವುದಕ್ಕೂ ಮುನ್ನ, ಸಾಮಾನ್ಯವಾದ ಕೆಲವೊಂದು ವಿಚಾರಗಳನ್ನು ಆಲೋಚನೆ ಮಾಡಿ ನಂತರ ಅಳವಡಿಸಿಕೊಳ್ಳುವುದು ಉತ್ತಮ.
Source: Rushlane