ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಭಾರತದ ಅತಿ ಕಾರು ಉತ್ಪಾದನಾ ಕಂಪನಿಯು ತನ್ನ ಪ್ರಮುಖ ಉತ್ಪಾದನಾ ಘಟಕಗಳಿಂದ ದೇಶದ ವಿವಿಧಡೆಗೆ ಕಾರುಗಳ ಸಾಗಾಣಿಕೆಗೆ ರೈಲ್ವೆ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವ ಮೊದಲ ಕಾರು ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು 2.33 ಲಕ್ಷ ಕಾರುಗಳನ್ನು ರೈಲ್ವೆ ಮೂಲಕವೇ ಸಾಗಾಣಿಕೆ ಮಾಡಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ದೇಶಾದ್ಯಂತ ಸಾಗಾಣಿಕೆ ವೆಚ್ಚಗಳನ್ನು ತಗ್ಗಿಸಲು ರೈಲ್ವೆ ಸೇವೆಗಳನ್ನು ಪರಿಣಾಮಕಾರಿ ಬಳಕೆ ಮಾಡಲಾಗುತ್ತಿದ್ದು, ಮಾರುತಿ ಸುಜುಕಿ ಕಂಪನಿಯು ಸಹ ವರ್ಷದಿಂದ ವರ್ಷಕ್ಕೆ ವಾಹನಗಳ ಸಾಗಾಣಿಕೆ ಪ್ರಕ್ರಿಯೆಯನ್ನು ರೈಲ್ವೆ ಸೇವೆಗಳ ಮೂಲಕ ಕೈಗೊಳ್ಳುತ್ತಿದೆ. ಕಳೆದ ಎಂಟು ವರ್ಷಗಳಿಂದ ಭಾರತೀಯ ರೈಲ್ವೆ ಇಲಾಖೆಯೊಂದಿಗೆ ಮಹತ್ವದ ಒಪ್ಪಂದದೊಂದಿಗೆ ಕಾರು ಸಾಗಾಣಿಕೆಗೆ ಪರಿಣಾಮಕಾಗಿಯಾಗಿ ಬಳಸಿಕೊಳ್ಳುತ್ತಿದ್ದು, ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯೊಂದಿಗೆ ಅತಿ ಕಡಿಮೆ ಅವಧಿಯಲ್ಲಿ ತಲುಪುವಿಕೆ ಮತ್ತು ಹೆಚ್ಚಿನ ಲಾಭಾಂಶ ಕಂಡುಕೊಂಡಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು ದೇಶದ ಪ್ರಮುಖ ನಗರಗಳಿಗೆ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳಿಂದ 2.33 ಲಕ್ಷ ಕಾರುಗಳನ್ನು ಸಾಗಿಸುವ ಮೂಲಕ ಪರೋಕ್ಷವಾಗಿ 17.40 ಕೋಟಿ ಲೀಟರ್‌ನಷ್ಟು ಡೀಸೆಲ್ ಉಳಿತಾಯ ಮಾಡಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಕಂಪನಿಯ ಪ್ರಕಾರ, ಟ್ರಕ್‌‌ಗಳ ಮೂಲಕ 2.33 ಲಕ್ಷ ಕಾರುಗಳನ್ನು ರವಾನಿಸಿದ್ದರೆ ಟ್ರಕ್‌ಗಳು ಸುಮಾರು 1.56 ಲಕ್ಷಕ್ಕೂ ಹೆಚ್ಚು ಟ್ರಿಪ್‌ಗಳ ಮೂಲಕ 17.40 ಕೋಟಿ ಲೀಟರ್‌ನಷ್ಟು ಡೀಸೆಲ್ ಬಳಕೆ ಮಾಡುತ್ತಿದ್ದು, ಆದರೆ ರೈಲ್ವೆ ಸೇವೆಯಿಂದ ಡೀಸೆಲ್ ಬಳಕೆ ಪ್ರಮಾಣವು ಗಣನೀಯವಾಗಿ ತಗ್ಗಿರುವುದಲ್ಲದೆ ಹೆಚ್ಚಿನ ಲಾಭಾಂಶಕ್ಕೆ ಕಾರಣವಾಗಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಹೊಸ ಉಪಕ್ರಮ ಮೂಲಕ ಕಂಪನಿಯು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತಿದೆ ಎಂದಿರುವ ಮಾರುತಿ ಸುಜುಕಿಯು ಕಳೆದ 8 ವರ್ಷಗಳಲ್ಲಿ ರೈಲ್ವೆಯಿಂದ 11 ಲಕ್ಷ ಕಾರುಗಳನ್ನು ರವಾನಿಸುವ ಮೂಲಕ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು 4,800 ಮಿಲಿಯನ್ ಟನ್‌ಗಳಷ್ಟು ಕಡಿಮೆ ಮಾಡಿದೆ ಎಂದಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಪ್ರಸ್ತುತ, ಮಾರುತಿ ಸುಜುಕಿ ಕಂಪನಿಯು ತನ್ನ ಶೇಕಡಾ 15ರಷ್ಟು ವಾಹನಗಳನ್ನು ರೈಲ್ವೆ ಜಾಲದ ಮೂಲಕ ರವಾನಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಪಾಲನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಕಂಪನಿ ಹೇಳಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಮಾರುತಿ ಸುಜುಕಿಯು ಗುಜರಾತ್ ಮತ್ತು ಹರಿಯಾಣ ಸರ್ಕಾರದ ಸಹಾಯದಿಂದ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕಗಳಿಗೆ ರೈಲು ಮಾರ್ಗವನ್ನು ಹೊಂದಿರುವ ಮೊದಲ ಕಾರು ಕಂಪನಿ ಎಂಬ ಹೆಗ್ಗಳಿಕೆ ಹೊಂದಿದ್ದು, ಇದು ರೈಲ್ವೆ ಮೂಲಕ ವಾಹನಗಳ ರವಾನೆಯನ್ನು ಸುಲಭವಾಗುತ್ತಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಮಾರುತಿ ಸುಜುಕಿಯು 2013ರಲ್ಲಿ ತನ್ನ ವಾಹನಗಳಿಗೆ ಆಟೋಮೊಬೈಲ್ ಫ್ರೈಟ್ ಟ್ರೈನ್ ಆಪರೇಟರ್ ಪರವಾನಗಿಯನ್ನು ಪಡೆದ ಭಾರತದ ಮೊದಲ ವಾಹನ ತಯಾರಕ ಕಂಪನಿಯಾಗಿದ್ದು, ಹೆಚ್ಚಿನ ವೇಗದ ಮತ್ತು ಹೆಚ್ಚಿನ ಸಾಮರ್ಥ್ಯದ ರೈಲ್ವೇ ವ್ಯಾಗನ್‌ಗಳನ್ನು ಬಳಸಲು ಕಂಪನಿಗೆ ಅನುಮತಿ ನೀಡಲಾಗಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಭಾರತೀಯ ರೈಲ್ವೆ ಇಲಾಖೆಯು ಮಾರುತಿ ಸುಜುಕಿ ಕಂಪನಿಗೆ ಸದ್ಯ 41 ರೇಕ್‌ಗಳನ್ನು ಒದಗಿಸುತ್ತಿದ್ದು, ಇದರಲ್ಲಿ ಒಂದು ಬಾರಿಗೆ ಒಟ್ಟು 300 ಕಾರುಗಳನ್ನು ಸಾಗಾಣಿಕೆ ಮಾಡಬಹುದಾಗಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಮುಂಚೂಣಿ ಕಾಯ್ದುಕೊಂಡಿರುವ ಕಂಪನಿಯು ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಕಾರು ಮಾದರಿಗಳ ಮಾರಾಟವನ್ನು ಹೊಂದಿರುವ ಮಾರುತಿ ಸುಜುಕಿಯು ಟಾಪ್ 10 ಕಾರುಗಳ ಮಾರಾಟ ಪಟ್ಟಿಯಲ್ಲಿ ಬರೋಬ್ಬರಿ 7 ಕಾರು ಮಾದರಿಗಳೊಂದಿಗೆ ಮುಂಚೂಣಿಯಲ್ಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆಗಾಗಿ ಸಿದ್ದತೆ ನಡೆಸುತ್ತಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಕಿಯಾ ಸೆಲ್ಟೊಸ್ ಮತ್ತು ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿಯಾಗಿ ಮಾರುತಿ ಸುಜುಕಿ ಕಂಪನಿಯು ಹೊಸ ವಿಟಾರಾ ಬ್ರೆಝಾ ಕಾರು ಮಾದರಿಯನ್ನು ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಳಿಸುತ್ತಿದ್ದು, ಹೊಸ ಕಾರು ಮಾದರಿಯು ಇದೇ ತಿಂಗಳು 30ರಂದು ಬಿಡುಗಡೆಯಾಗಲಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಕಾರು ಮಾರಾಟದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಹೊಸ ವಿಟಾರಾ ಬ್ರೆಝಾ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಎಂಜಿನ್ ನವೀಕರಣದೊಂದಿಗೆ ಹೊಸ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಬಿಎಸ್-6 ಎಮಿಷನ್ ಜಾರಿ ನಂತರ ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಬದಲಾವಣೆ ಪರಿಚಯಿಸಿರುವ ಮಾರುತಿ ಸುಜುಕಿಯು ಪ್ರಮುಖ ಕಾರುಗಳ ಮಾದರಿಗಳ ಮಾರಾಟದ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಹೊಸ ಎಂಜಿನ್ ಆಯ್ಕೆಯೊಂದಿಗೆ ನವೀಕರಿಸಲಾದ ವಿನ್ಯಾಸಗಳು ಮತ್ತು ಪ್ರೀಮಿಯಂ ಫೀಚರ್ಸ್ ಗ್ರಾಹಕರನ್ನು ಸೆಳೆಯಲಿವೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಪ್ರಸ್ತುತ ಮಾರುಕಟ್ಟೆಯಲ್ಲಿ ವಿಟಾರಾ ಬ್ರೆಝಾ ಮಾದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.5-ಲೀಟರ್ ಕೆ15ಸಿ ಪೆಟ್ರೋಲ್ ಎಂಜಿನ್‌ ಆಯ್ಕೆ ನೀಡುತ್ತಿದ್ದು, ಇದು ಉತ್ತಮ ಇಂಧನ ದಕ್ಷತೆ ಹೊಂದಿದೆ. ಹೊಸ ತಲೆಮಾರಿನ ಆವೃತ್ತಿಯಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಮಾದರಿಯನ್ನು ಪರಿಚಯಿಸಲಾಗುತ್ತಿದ್ದು, ಸಿಎನ್‌ಜಿ ಆಯ್ಕೆ ಹೊಂದಿರುವ ಮೊದಲ ಎಸ್‌ಯುವಿ ಮಾದರಿಯಾಗಲಿದೆ.

ರೈಲ್ವೆ ಮೂಲಕ ಕಾರುಗಳ ಸಾಗಾಣಿಕೆಯಲ್ಲಿ ಮಾರುತಿ ಸುಜುಕಿ ಹೊಸ ದಾಖಲೆ

ಹಾಗೆಯೇ ಹೊಸ ಕಾರಿನಲ್ಲಿ ನವೀಕರಣಗೊಳಿಸಲಾದ ಎಂಜಿನ್ ಉನ್ನತೀಕರಣ ಸೇರಿದಂತೆ ಬದಲಾದ ಮುಂಭಾಗದ ವಿನ್ಯಾಸದೊಂದಿಗೆ ಎಲೆಕ್ಟ್ರಿಕ್ ಸನ್‌ರೂಫ್, ಗರಿಷ್ಠ ಸುರಕ್ಷತೆಗಾಗಿ ಹೈ ಎಂಡ್ ಮಾದರಿಗಳಲ್ಲಿ 6 ಏರ್‌ಬ್ಯಾಗ್ ಜೋಡಣೆ ಹೊಂದಿರಲಿದ್ದು, ಹೊಸ ಕಾರು ಮಾರುತಿ ಸುಜುಕಿ ಕಂಪನಿಗೆ ಮತ್ತಷ್ಟು ಬೇಡಿಕೆ ತಂದುಕೊಡಲಿದೆ.

Most Read Articles

Kannada
English summary
Maruti suzuki dispatches 2 33 lakh cars from railway freight services details
Story first published: Monday, June 13, 2022, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X