ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಹೊಸ ಮೋಟಾರ್ ವಾಹನ ಕಾಯ್ದೆಯನ್ನು ಜಾರಿಗೊಳಿಸಿ ಭಾರೀ ಪ್ರಮಾಣದ ದಂಡವನ್ನು ಭಾರತದಲ್ಲಿನ ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಿಸಲಾಗುತ್ತಿದೆ. ಭಾರೀ ಪ್ರಮಾಣದ ದಂಡವನ್ನು ವಿಧಿಸಿದ ಹಲವಾರು ಪ್ರಕರಣಗಳು ವರದಿಯಾಗುತ್ತಿವೆ.

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಆದರೆ ನಾವು ಈ ಲೇಖನದಲ್ಲಿ ಹೇಳುತ್ತಿರುವ ಪ್ರಕರಣ ನಡೆದಿರುವುದು ಹೊಸ ಕಾಯ್ದೆಯು ಜಾರಿಗೆ ಬರುವ ಮುನ್ನ. ಈ ಘಟನೆ ಕಳೆದ ತಿಂಗಳು ಆಗಸ್ಟ್ 27ರಂದು ನಡೆದಿದೆ. ಉತ್ತರ ಪ್ರದೇಶದ ಅಲಿಗಢದ ನಿವಾಸಿ ಪಿಯೂಶ್ ವರ್ಷ್ನೆ‍‍ರವರಿಗೆ ಹೆಲ್ಮೆಟ್ ಧರಿಸದೇ ಇರುವ ಕಾರಣಕ್ಕೆ ದಂಡ ವಿಧಿಸಲಾಗಿದೆ.

ಇದರಲ್ಲಿ ಏನು ವಿಶೇಷ ಅಂತೀರಾ ? ಅಂದ ಹಾಗೆ ಪಿಯೂಶ್‍‍ರವರು ಚಾಲನೆ ಮಾಡುತ್ತಿದ್ದುದು ಮಾರುತಿ ಸುಜುಕಿ ಕಂಪನಿಯ ಎಸ್-ಕ್ರಾಸ್ ಕಾರ್ ಅನ್ನು. ಹೊಸ ಕಾಯ್ದೆ ಜಾರಿಗೆ ಬರುವ ಮುಂಚೆ ಹಳೆ ಕಾಯ್ದೆ ಪ್ರಕಾರ ಪಿಯೂಶ್‍‍ರವರಿಗೆ ರೂ.500 ದಂಡ ವಿಧಿಸಲಾಗಿದೆ.

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ತಾವು ದ್ವಿಚಕ್ರ ವಾಹನ ಸವಾರಿ ಮಾಡದಿದ್ದರೂ, ತಮಗೆ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ದಂಡ ವಿಧಿಸಿರುವ ಪೊಲೀಸರ ಕ್ರಮವನ್ನು ಪ್ರತಿಭಟಿಸಿ ಪಿಯೂಶ್‍‍ರವರು ಈಗ ಪ್ರತಿದಿನ ಹೆಲ್ಮೆಟ್ ಧರಿಸಿ, ಕಾರ್ ಅನ್ನು ಚಲಾಯಿಸುತ್ತಿದ್ದಾರೆ. ಪಿಯೂಶ್‍‍ರವರು ದಂಡವನ್ನು ಪಾವತಿಸಿದರೆ ಇಲ್ಲವೇ ಎಂಬುದು ಖಚಿತವಾಗಿಲ್ಲ.

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಈ ಬಗ್ಗೆ ಮಾತನಾಡಿರುವ ಪಿಯೂಶ್‍‍ರವರು ಮತ್ತೊಮ್ಮೆ ದಂಡ ವಿಧಿಸಬಾರದೆಂಬ ಕಾರಣಕ್ಕೆ ಪ್ರತಿದಿನವೂ ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸುತ್ತಿರುವುದಾಗಿ ತಿಳಿಸಿದರು. ಪಿಯೂಶ್‍‍ರವರಿಗೆ ನೀಡಲಾಗಿರುವ ಚಲನ್‍‍ನಲ್ಲಿ ಕಾರಿನ ನಂಬರ್ ಅನ್ನು ನಮೂದಿಸಲಾಗಿದೆ. ಆದರೆ ಕಾರಿನ ಚಿತ್ರವನ್ನು ತೋರಿಸಿಲ್ಲ.

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಕಾರಿನ ಬದಲಿಗೆ ದ್ವಿಚಕ್ರ ವಾಹನದ ಫೋಟೊವನ್ನು ತೋರಿಸಲಾಗಿದೆ. ಈ ಚಿತ್ರದಲ್ಲಿರುವ ಬೈಕ್ ಸವಾರರು ಹೆಲ್ಮೆಟ್ ಇಲ್ಲದೇ ಸವಾರಿ ಮಾಡುತ್ತಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಈ ವೀಡಿಯೋ ಪೊಲೀಸ್ ಅಧಿಕಾರಿಗಳ ಗಮನಕ್ಕೂ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು ಈ ಚಲನ್ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಸಾಧ್ಯವಾದರೆ ಈ ದಂಡವನ್ನು ರದ್ದು ಪಡಿಸುವುದಾಗಿ ಹೇಳಿದ್ದಾರೆ.

MOST READ: ಹೊಸ ಟ್ರಾಫಿಕ್ ರೂಲ್ಸ್ ಎಫೆಕ್ಟ್: ಪೊಲೀಸಪ್ಪನಿಗೆ ಬಿತ್ತು ಭಾರೀ ದಂಡ..!

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಪೊಲೀಸರ ಪ್ರಕಾರ, ಆಪರೇಟರ್ ಕಣ್ತಪ್ಪಿನಿಂದಾಗಿ ಈ ರೀತಿಯ ಸಮಸ್ಯೆಗಳಾಗಿರುವ ಸಾಧ್ಯತೆಗಳಿವೆ. ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಮತ್ತೊಬ್ಬ ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಚಲನ್ ನೀಡಲಾಗಿತ್ತು. ತನಿಖೆಯ ನಂತರ ಈ ಸ್ಕೂಟರ್ ಕಾರಿನ ನಂಬರ್ ಪ್ಲೇಟ್ ಹೊಂದಿರುವುದು ಕಂಡು ಬಂದಿತ್ತು.

MOST READ: ಹೊಸ ನಿಯಮದಿಂದ ಟ್ರಾಕ್ಟರ್ ಡ್ರೈವರ್‍‍‍ಗೂ ಬಿತ್ತು ಭಾರೀ ದಂಡ..!

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಕಾರು ಚಾಲಕರು ಹೆಲ್ಮೆಟ್ ಧರಿಸಿಲ್ಲವೆಂದು ದಂಡ ವಿಧಿಸಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆಯೂ ಅನೇಕ ಕಾರು ಚಾಲಕರಿಗೆ ಈ ರೀತಿ ದಂಡ ವಿಧಿಸಲಾಗಿತ್ತು. ಸ್ಥಳದಲ್ಲಿಯೇ ಹೆಲ್ಮೆಟ್ ವಿಧಿಸದ ಕಾರಣ ನೀಡಿ ದಂಡ ವಿಧಿಸಲಾಗಿತ್ತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಕಳೆದ ವರ್ಷ, ಗೋವಾದ ಬೈಕ್ ಸವಾರನಿಗೆ ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ ದಂಡ ವಿಧಿಸಲಾಗಿತ್ತು. ಅದೂ ಸಹ ಬೈಕ್ ಅನ್ನು ಅಡ್ಡಗಟ್ಟಿ ಸ್ಥಳದಲ್ಲಿಯೇ ದಂಡದ ರಸೀದಿ ನೀಡಲಾಗಿತ್ತು. ಈ ರಸೀದಿಯ ಚಿತ್ರವನ್ನು ಅಪ್‍‍ಲೋಡ್ ಮಾಡಲಾಗಿತ್ತು. ನಂತರ ಈ ಚಿತ್ರವು ವೈರಲ್ ಆಗಿತ್ತು.

ಹೆಲ್ಮೆಟ್‍ ಹಾಕದ ಕಾರು ಚಾಲಕನಿಗೆ ಬಿತ್ತು ದಂಡ..!

ಭಾರತದ ಇತಿಹಾಸದಲ್ಲಿಯೇ ಇದುವರೆಗೂ ಕಂಡು ಕೇಳರಿಯದ ಪ್ರಮಾಣದಲ್ಲಿ ದಂಡವನ್ನು ವಿಧಿಸಲಾಗುತ್ತಿದೆ. ಹಲವು ಕಡೆ ಭಾರೀ ಪ್ರಮಾಣದ ದಂಡವನ್ನು ವಿಧಿಸಿರುವ ಪ್ರಕರಣಗಳು ವರದಿಯಾಗುತ್ತಿವೆ. ವಾಹನ ಸವಾರರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ, ಅಪಘಾತ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಭಾರತದ ರಸ್ತೆಗಳು ಪ್ರಪಂಚದಲ್ಲಿರುವ ಹದಗೆಟ್ಟ ರಸ್ತೆಗಳ ಪೈಕ್ ಒಂದೆನಿಸಿವೆ.

Most Read Articles

Kannada
English summary
Maruti S-Cross driver FINED for not wearing a helmet - Read in kannada
Story first published: Tuesday, September 10, 2019, 13:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X