ಮಾರುತಿ ಸುಜುಕಿ ವ್ಯಾಗನ್ ಅರ್ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಸಾಮಾನ್ಯವಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ಹಿಡಿದು ದಂಡವನು ವಿಧಿಸಿ ಚಲನ್ ನೀಡಿರುವುದನ್ನು ನಾವು ಕಂಡಿದ್ದೇವೆ. ಅದಲ್ಲದೇ ಇ-ಚಲನ್ ಬಂದ ನಂತರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಲ್ಲಿ ಮನೆಗೆ ಚಲನ್ ಕಳುಹಿಸುವುದನ್ನು ಸಹ ನಾವು ನೋಡಿದ್ದೇವೆ. ಆದರೆ ಇಲ್ಲಿ ನಡೆದ ಘಟನೆ ಇವೆಲ್ಲದಕ್ಕಿಂತ ಭಿನ್ನವಾಗಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಅಂತ ಟಾಟಾ ನೆಕ್ಸಾನ್ ಕಾರು ಚಾಲಕನನ್ನ ಹಿಡಿದು ದಂಡ ಹಾಕಿರುವುದರ ಬಗ್ಗೆ ಈ ಹಿಂದೆ ನಾವು ನಿಮಗೆ ಮಾಹಿತಿಯನ್ನು ನೀಡಿದ್ದೇವು. ಆದರೆ ಇಲ್ಲಿ ನಡೆದ ಘಟನೆಯೆ ಬೇರೆ, ಹೆಲ್ಮೆಟ್ ಹಾಕಿಲ್ಲವೆಂದು ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಚಾಲಕಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಹೌದು, ಒಡಿಶಾದ ಕಟಕ್‍ನಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ರೂ.100 ದಂಡವನ್ನು ಕಟ್ಟಬೇಕಾಗಿ ಇ-ಚಲನ್ ಕಳುಹಿಸಲಾಗಿದೆ. ನಾವು ಹೇಳುತ್ತಿರುವುದು ಸುಳ್ಳೆಂದು ನೀವು ಭಾವಿಸಿದರೆ, ಇದಕ್ಕೆ ಸಾಕ್ಷಿ ಇಲ್ಲಿಯೆ ಇದೆ ನೋಡಿ. ಶ್ರದ್ಧ ದಾಸ್ ಎಂಬುವವರು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಇಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಏನಪ್ಪಾ ಅಂದ್ರೆ ಕಾರು ಚಾಲನೆ ವೇಳೆ ಹೆಲ್ಮೆಟ್ ಹಾಕಿಲ್ಲವೆಂದು ಇ-ಚಲನ್ ಪಡೆದಾಕೆ ನ್ಯಾಷನಲ್ ಲಾ ಉನಿವರ್ಸಿತಿ ವಿಧ್ಯಾರ್ಥಿನಿಯಾಗಿದ್ದು, ಇ-ಚಲನ್ ಅನ್ನು ಒಡಿಶಾನಲ್ಲಿನ ಕಟಕ್ ಸ್ಥಳೀಯ ಟ್ರಾನ್ಸ್ಪೋರ್ಟ್ ಆಫಿಸರ್ ರವಾನಿಸಲಾಗಿದೆ ಎಂದು ವರದಿಗಳು ಹೇಳುತ್ತಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಇ-ಚಲನ್ ಪಡೆದ ನಂತರ ಶ್ರದ್ಧ ದಾಸ್‍‍ರವರು ಆನ್‍‍ಲೈನ್‍ನಲ್ಲಿ ಇದರ ಬಗ್ಗೆ ಪರಿಶೀಲಿಸಿದಾಗ, ಅಲ್ಲಿ ಅವರು ಪಡೆದ ಇ-ಚಲನ್ ಹೆಲ್ಮೆಟ್ ಧರಿಸಲಿಲ್ಲ ಎಂಬ ಅಂಶವನ್ನು ಉಲ್ಲೇಖಿಸಲಾಗಿತ್ತು. ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಚಾಲನೆ ಮಾಡುವ ವೇಳೆ ಈ ಘಟನೆಯು ಸಂಭವಿಸಿದೆ ಎಂದು ಕೂಡಾ ಉಲ್ಲೇಖಿಸಲಾಗಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ನಂತರ ಶ್ರದ್ದರವರು ತಾನಗೆ ನೀಡಿದ ಇ-ಚಲನ್‍ನ ಕುರಿತಾಗಿ ಸ್ಥಳೀಯ ಆರ್‍‍ಟಿಒ ಅನ್ನು ಪ್ರಶ್ನಿಸಿದಾಗ ಅವರು, ನಮ್ಮಿಂದ ತಪ್ಪಾಗಿದೆಯೆಂದು ಒಪ್ಪೊಕೊಂಡು, ಇ-ಚಲನ್ ನೀಡುವ ಮುನ್ನ ನಾವು ಉಲ್ಲಂಘನೆಯನ್ನು ಸರಿಯಾಗಿ ಆಯ್ಕೆ ಮಾಡಬೇಕಾಗಿತ್ತು ಎಂದು ಹೆಳಿದ್ದಾರೆ. ಅಸಲಿಗೆ ಕಾರು ಚಾಲಕಿಯು ಸೀಟ್ ಬೆಲ್ಟ್ ಧರಿಸದ ಕಾರಣದ ಬದಲಿಗೆ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ರಹಿತ ಚಾಲನೆ ಎಂದು ಉಲ್ಲೇಖಿಸಲಾಗಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಆದರೂ ಸಹ ಇಂತಹ ಘಟನೆಗಳು ಹೊಸತೇನಲ್ಲ ಬಿಡಿ. ಇದು ಗೋಪ ಕುಮಾರ್‍‍ರವರ ಕಾರ್ ಡ್ರೈವಿಂಗ್ ವೇಳೆ ಹೆಲ್ಮೆಟ್ ಹಾಕಿಲ್ಲವೆಂದು ಬಂದ ಇ-ಚಲನ್ ವಿಚಾರವಾದರೆ, ಮತ್ತೊಂದು ಕಡೆ ಹೆದ್ದಾರಿಯ ಮೇಲೆ ಸೈಕಲ್‍ನಲ್ಲಿ ಹೋಗುತ್ತಿದ್ದವನನ್ನು ಅಲ್ಲಿದ್ದ ಪೊಲೀಸರು ತಡೆದು ಓವರ್ ಸ್ಪೀಡಿಂಗ್ ಮತ್ತು ಹೆಲ್ಮೆಟ್ ಹಾಕಿಲ್ಲವೆಂದು ದಂಡ ವಿಧಿಸಿದ್ದೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಹೆಲ್ಮೆಟ್ ಇಲ್ಲದೆಯೆ ಸ್ಕೂಟರ್ ಅಥವಾ ಮೋಟಾರ್‍‍ಸೈಕಲ್ ಚಲಾಯಿಸುವುದು ತಪ್ಪೆಂದು ಟ್ರಾಫಿಕ್ ಪೊಲೀಸರು ಹಿಡಿದರೆ ಅದು ಒಂದು ರೀತಿಯ ನ್ಯಾಯ. ಆದ್ರೆ ಸೈಕಲ್‍‍ಗೂ ಕೂಡಾ ಹೆಲ್ಮೆಟ್ ಇಲ್ಲಾ ಅಂತ ಪೊಲೀಸರು ನಿಮ್ಮನ್ನು ಹಿಡಿದರೆ ಅಂತಾ ಪರಿಸ್ಥಿತಿಯನ್ನು ನೀವೇನು ಮಾಡುವಿರಿ.?

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ರಸ್ತೆಯಲ್ಲಿ ಸೈಕಲ್ ಚಲಾಯಿಸಲು ಇಲ್ಲಿ ಡ್ರೈವಿಂಗ್ ಲೈಸನ್ಸ್ ಇರ್ಬೇಕಂತೆ. ದೇಶದಲ್ಲಿನ ಬೇರಾವ ರಾಜ್ಯದಲ್ಲು ಈ ನಿಯಮ ಜಾರಿ ಇಲ್ಲವಾದ್ರು ಕೇರಳದಲ್ಲಿನ ಕಾಸರ್‍‍ಗೋಡ್‍ನಲ್ಲಿ ಈ ನಿಯಮವಿದೆ. ಅಷ್ಟೆ ಅಲ್ಲಾ ಸೈಕಲ್‍‍ನಲ್ಲಿ ಓವರ್‍‍ಸ್ಪೀಡಿಂಗ್ ಮಾಡಿದರೂ ಇಲ್ಲಿ ತಪ್ಪಂತೆ..

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಹೌದು, ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾದ ಉತ್ತರ ಪ್ರದೇಶ ಮೂಲದ ಕಾಸಿಂ‍‍ರವರನ್ನು ಕಂಬಾಲದಲ್ಲಿನ ಹೆದ್ದಾರಿ ಪೊಲೀಸರು ಸೈಕಲ್‍ನಲ್ಲಿ ಹೋಗುತ್ತಿದ್ದಾಗ ಹಿಡಿದು ಹೆಲ್ಮೆಟ್ ಹಾಗು ಲೈಸೆನ್ಸ್ ಇಲ್ಲದಿರುವ ಕಾರಣ ಮತ್ತು ಓವರ್ ಸ್ಪೀಡಿಂಗ್ ಮಾಡಿದ್ದಾರೆಂದು ದಂಡ ವಿಧಿಸಲಾಗಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಹೆದ್ದಾರಿ ರಸ್ತೆಯ ಮೇಲೆ ಸೈಕಲ್‍ನಲ್ಲಿ ಬರುತ್ತಿದ್ದ ಕಾಸಿಂರನ್ನು ಹಿಡಿದು ಓವರ್ ಸ್ಪೀಡಿಂಗ್ ಮಾಡಿರುವುದಾಗಿ ರೂ.2000 ಸಾವಿರದ ದಂಡವನ್ನು ವಿಧಿಸಿದ್ದಾರೆ. ಪಾಪ ದಿನಕ್ಕೆ ರೂ.400 ಸಂಪಾದಿಸುತ್ತಿದ್ದ ಕಾಸಿಂ ಹತ್ತಿರ ಅಷ್ಟು ದುಡ್ಡು ಹೇಗೆ ಇರುತ್ತೆ.?

ಕಾಸಿಂ ಅವರು ಕೂಲಿ ಕೆಲಸ ಮಾಡಿ ಜೀವನ ಕಳೆಯುತ್ತಿರುವ ವ್ಯಕ್ತಿಯೆಂದು ತಿಳಿದು, ಹಿಂದೆ ನೀಡಿದ ರಶೀದಿಯನ್ನು ರದ್ದುಗೊಳಿಸಿ ಸೈಕಲ್‍ನ ಚಕ್ರಗಳನ್ನು ಚಪ್ಪಟೆಯಾಗೊಳಿಸಿರುವುದಾಗಿ ಅವರಿಗೆ ರೂ.500 ದಂಡವನ್ನು ವಿಧಿಸಿ ರಸೀದಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ಆದರೆ ಕಾಸಿಂರಿಗೆ ನೀಡಿದ ರಸೀದಿಯಲ್ಲಿ ಸ್ಥಳಿಯ ಪೊಲೀಸರು ವಾಹನದ ನೋಂದಣಿ ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲಾ ಸ್ವಾಮಿ ಸೈಕಲ್‍‍ಗೆ ಅದೆಂತಹ ನೋಂದಣಿ ಸಂಖ್ಯೆ.? ಇನ್ನು ಉಲ್ಲೇಖಿಸಲಾಗಿದ್ದ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದರೆ ಅದು ಮಹಿಳೆಯೊಬ್ಬರು ಸ್ಕೂಟರ್ ಎಂಬುದು ಪತ್ತೆಯಾಗಿತ್ತು.

ಹಲವಾರು ದಿನಗಳ ಹಿಂದೆ ಈ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದ್ದು, ಕಾಸಿಂ ಅವರು ನಡೆದ ಘಟನೆಯ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ಅಲ್ಲಿನ ಪೊಲೀಸರು ಯಾವ ರೀತಿಯಲ್ಲಿ ತಮ್ಮನ್ನು ದೋಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಮಾರುತಿ ಸುಜುಕಿ ಕಾರು ಚಾಲಕಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಪೊಲೀಸರು

ವಿಡಿಯೋನಲ್ಲಿ ಕಾಸಿಂರವರು "ನಾನು ದಿನನಿತ್ಯ ಅದೇ ದಾರಿಯಲ್ಲಿ ನನ್ನ ಸೈಕಲ್‍ನ ಮೇಲೆ ಪ್ರಯಾಣಿಸುತ್ತೇನೆ ಅದನ್ನು ಪೊಲೀಸರು ಕೂಡಾ ನೋಡಿದ್ದಾರೆ. ಆದರೆ ಇಂದು ನನ್ನನ್ನು ತಡೆದು ಮೊದಲಿಗೆ ರೂ.2000 ದಂಡವನ್ನು ವಿಧಿಸಿ, ನನ್ನನ್ನು ಪರಿಶೀಲಿಸಿದ ನಂತರ ರೂ.2000 ರಸೀದಿಯನ್ನು ರದ್ದು ಮಾಡಿ ಕೊನೆಗೆ ರೂ.500 ದಂಡದ ರಸೀದಿಯನ್ನು ನೀಡಿದ್ದಾರೆಂದು ಹೇಳಿಕೊಂಡಿದ್ದಾರೆ.

Most Read Articles

Kannada
English summary
Maruti Suzuki WagonR Driver Fined For Driving Without Helmet In Odisha. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X