ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಇಂಡಿಯನ್ ಕ್ರಿಕೆಟ್ ಟೀಂನಲ್ಲಿ 'ದಿ ವಾಲ್' ಎಂದು ಜನಪ್ರಿಯತೆಯನ್ನು ಪಡೆದಿರುವ ರಾಹುಲ್ ದ್ರಾವಿಡ್ ಕೇವಲ ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲದೆಯೆ ತಂಬಾಕು ರಹಿತ ಭಾರತಕ್ಕಾಗಿ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಇವರ ಕನ್ನಡಾಭಿಮಾನಕ್ಕೆ ಮತ್ತು ಸರಳತೆಗೆ ಹಲವಾರು ಮಂದಿ ಇವರನ್ನು ಅನುಸರಿಸುತ್ತಿದ್ದಾರೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಸದ್ಯ ಅಂಡರ್ 19 ಇಂಡಿಯನ್ ಕ್ರಿಕೆಟ್ ಟೀಂ ಕೋಚ್ ಆಗಿರುವ ರಾಹುಲ್ ದ್ರಾವಿಡ್‍‍ರವರು ಈಗಾಗಲೇ ಹಲವಾರು ಬಾರಿ ಇವರ ಸರಳತೆಯ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಇನ್ನು ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಬರಲ್ಲ ಅಂತ ತಿರುಗಾಡುತ್ತಿರುವವರಿಗೆ ನೀವು ಎಷ್ಟು ಮಟ್ಟಿಗೆ ಏರಿದರು ಸಹ ನಿಮ್ಮ ಮಾತೃ ಭಾಷೆಯನ್ನು ಮರೆಯದಿರಿ ಎಂಬ ವಿಷಯಕ್ಕೂ ಸಹ ಈತ ಹಲವರಿಗೆ ಆದರ್ಶರಾಗಿದ್ದಾರೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್‍‍ರವರಿಗೆ ಕ್ರಿಕೆಟ್ ಮೇಲೆ ಎಷ್ಟು ಕ್ರೇಜ್ ಇದೆಯೊ ಕಾರುಗಳ ಮೇಲೆ ಕೂಡಾ ಅಷ್ಟೇ ಕ್ರೇಜ್ ಇದೆ ಅಂದರೆ ತಪ್ಪಾಗುವುದಿಲ್ಲ. ಈ ಮುನ್ನ ಹ್ಯುಂಡೈ ಟಕ್ಸನ್, ಆಡಿ ಕ್ಯೂ5 ಮತ್ತು ಬಿಎಂಡಬ್ಲ್ಯೂ-5 ಸಿರೀಸ್ ಎಂಬ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ ರಾಹುಲ್ ಇದೀಗ ಮತ್ತೊಂದು ಐಷಾರಾಮಿ ಕಾರು ಖರೀದಿ ಮಾಡಿ ಸುದ್ದಿಯಲ್ಲಿದ್ದಾರೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್‍‍ರವರು ಹೊಸ ಮರ್ಸಿಡೀಸ್-ಬೆಂಝ್ ಜಿಎಲ್ಇ ಐಷಾರಾಮಿ ಎಸ್‍ಯುವಿ ಕಾರನ್ನು ಖರೀದಿ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಕಾರು ರೂ. 61.75 ಲಕ್ಷ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್‍‍ರವರು ಕಾರು ಖರೀದಿಯ ನಂತರ ಕಾರಿನ ಒಳಭಾಗದಲ್ಲಿಯೇ ಕೂತು ಕೇಕ್ ಕಟ್ ಮಾಡುತ್ತಿರುವ ದೃಶ್ಯಗಳು ಕೂಡಾ ನೀವು ಕಾಣಬಹುದಾಗಿದೆ. ಇದರಿಂದ ಈ ಕಾರು ಕಾಣಲು ಕೇವಲ ಹಿರಭಾಗದಿಂದ ಮಾತ್ರವಲ್ಲ ಒಳಭಾಗದಲ್ಲಿಯೂ ಐಷಾರಾಮಿ ಲುಕ್ ಅನ್ನು ಪಡೆದಿದೆ ಎಂದು ನಾವು ತಿಳಿಯಬಹುದಾಗಿದೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಸದ್ಯ ಮಾರುಕಟ್ಟೆಯಲ್ಲಿ ಮರ್ಸಿಡೀಸ್-ಬೆಂಝ್ ಜಿಎಲ್ಇ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು, ಈ ಕಾರನ್ನು ಮೊನ್ನೆಯಷ್ಟೆ ಬಾಲಿವುಡ್ ಬೆಡಗಿ ಕಂಗಾನಾ ರಣಾವತ್ ಖರೀದಿಸಿದ್ದಾರೆ. ಇವರ ಜೊತೆಗೆ ಹುಮಾ ಖುರೇಶಿ, ಸಲ್ಮಾನ್ ಖಾನ್, ಶಾಹಿದ್ ಕಪೂರ್ ಕೂಡಾ ಈ ಕಾರನ್ನು ಖರೀದಿ ಮಾಡಿದ್ದಾರೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಈ ಎಸ್‍‍ಯು‍‍ವಿ ಸಾಮಾನ್ಯ ಜಿಎಲ್ಇ ಎಸ್‍‍ಯುವಿಗಿಂತ ಹೆಚ್ಚು ಸ್ಪೋರ್ಟಿ ಹಾಗೂ ಬಲಶಾಲಿಯಾದ ಆವೃತ್ತಿಯಾಗಿದೆ. ಜಿಎಲ್ಇ ಕ್ಲಾಸ್ ಅನ್ನು ಈ ಮೊದಲು ಎಂ ಕ್ಲಾಸ್ ಎಂದು ಕರೆಯಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಜಿಎಲ್ ಕ್ಲಾಸ್ ಎಸ್‌ಯುವಿ ಸೇರಿದಂತೆ ಹಲವಾರು ಎಸ್‍‍ಯು‍‍ವಿ ಸರಣಿಗಳ ಹೆಸರನ್ನು ಬದಲಾಯಿಸಲಾಗಿದೆ.

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಟ್ರೈ ಸ್ಟಾರ್ ಬ್ರ್ಯಾಂಡ್‌ಗಾಗಿ ಭಾರತದಲ್ಲಿ ಜನಪ್ರಿಯ ಉತ್ಪನ್ನವಾಗಿದ್ದ ಹಳೆಯ ಎಂ ಕ್ಲಾಸ್‌ನ ನವೀಕೃತ ಆವೃತ್ತಿಯಾಗಿ ಜಿಎಲ್‌ಇ ಅನ್ನು ಭಾರತಕ್ಕೆ ತರಲಾಯಿತು. ಈ ಎಸ್‍‍ಯು‍‍ವಿ ಪರಿಷ್ಕರಿಸಿದ ಗ್ರಿಲ್, ಹೊಸ ಹೆಡ್‌ಲ್ಯಾಂಪ್‌ ಹಾಗೂ ಹೊರಭಾಗದಲ್ಲಿ ಹೊಸ ಎಲ್‌ಇಡಿ ಟೇಲ್‌ಲೈಟ್‌ಗಳನ್ನು ಹೊಂದಿದೆ.

MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಇಂಟಿರಿಯರ್ ಬಗ್ಗೆ ಹೇಳುವುದಾದರೆ ಈ ಐಷಾರಾಮಿ ಎಸ್‍‍ಯುವಿಯಲ್ಲಿ ಮೆಮೊರಿ ಹೊಂದಿರುವ ಎಲೆಕ್ಟ್ರಿಕ್ ಸೀಟ್ ಅಡ್ಜಸ್ಟ್ ಮೆಂಟ್‍‍ಗಳು, ಕಮಾಂಡ್ ಇಂಟರ್‍‍ಫೇಸ್ ಹಾಗೂ ಐದು ವಿಧದ ಡ್ರೈವಿಂಗ್ ಮೋಡ್‌ಗಳಿವೆ. ಮರ್ಸಿಡಿಸ್ ಬೆಂಜ್ ಭಾರತದಲ್ಲಿ ಜಿಎಲ್ಇ ಎಸ್‍‍ಯು‍‍ವಿಯೊಂದಿಗೆ ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ. ಅವುಗಳಲ್ಲಿ ಎರಡು ಡೀಸೆಲ್‍ ಎಂಜಿನ್‍‍ಗಳಾಗಿವೆ. ಮೂಲ ಮಾದರಿಯು 2.1ಲೀಟರ್‍‍ನ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 201 ಬಿಎಚ್‌ಪಿ ಪವರ್ ಹಾಗೂ 500 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಎಕ್ಸ್‌ಪ್ರೆಸ್‌ವೇಗಳಲ್ಲಿ ಎದುರಾಗುವ ಅಪಾಯಕಾರಿ ಸಂಗತಿಗಳಿವು..!

ಮತ್ತೊಂದು ಐಷಾರಾಮಿ ಕಾರಿನ ಒಡೆಯರಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಮಧ್ಯಮ ಮಾದರಿಯು 3.0 ಲೀಟರ್‍‍ನ ವಿ6 ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 333 ಬಿಹೆಚ್‍‍ಪಿ ಪವರ್ ಹಾಗೂ 480 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಪ್ ಮಾದರಿಯ ವಾಹನವು 3.0ಲೀಟರ್ ವಿ6 ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 255 ಬಿಹೆಚ್‍‍ಪಿ ಪವರ್ 620 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಲ್ಲಾ ಎಂಜಿನ್‍‍ಗಳು 9ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿವೆ.

Most Read Articles

Kannada
English summary
Mercedes-Benz GLE Luxury SUV Added To Rahul Dravid Car Collection. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X