ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಗುಜರಾತ್‍‍ನ ರಾಜ್‍‍ಕೋಟ್ ಮೂಲದ ಗೋವಿಂದ್‍ ಭಾಯ್ ಹಂಸ್‍ ರಾಜ್ ಪರ್ಸಾನಾರವರು ಇತ್ತೀಚಿಗೆ ಹೊಸ ಮರ್ಸಿಡಿಸ್ ಬೆಂಝ್ ಜಿ‍ಎಲ್‍‍ಸಿ 220 ಡಿ 4ಮ್ಯಾಟಿಕ್ ಎಸ್‍‍ಯು‍‍ವಿಯನ್ನು ಖರೀದಿಸಿದ್ದರು. ಈ ಎಸ್‍‍ಯುವಿಗಾಗಿ ರೂ.63 ಲಕ್ಷಗಳನ್ನು ನೀಡಿದ್ದರ ಜೊತೆಗೆ, 0007 ನಂಬರ್ ಪಡೆಯಲು ಹೆಚ್ಚುವರಿಯಾಗಿ ರೂ.19 ಲಕ್ಷ ಪಾವತಿಸಿದ್ದಾರೆ.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಈ ನಂಬರ್ ಪ್ಲೇಟ್ ಖರೀದಿಯೊಂದಿಗೆ ಅವರು ಗುಜರಾತ್‌ನಲ್ಲಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಪಡೆಯಲು ದುಬಾರಿ ಬೆಲೆ ನೀಡಿದ ದಾಖಲೆಯನ್ನು ಮುರಿದಿದ್ದಾರೆ. 0007 ನಂಬರ್ ಪಡೆದ ಗೋವಿಂದ್‌ಭಾಯ್ ಅವರು ಬಾಂಡ್ ಅಭಿಮಾನಿ ಆಗಿರಬಹುದು, ಅದಕ್ಕಾಗಿ ಅವರು ಈ ನಂಬರ್ ಪಡೆಯಲು ರೂ.19 ಲಕ್ಷ ಪಾವತಿಸಿದ್ದಾರೆ ಎಂದು ಕೆಲವರು ಅಭಿಪ್ರಾಯ ಪಡಬಹುದು.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಆದರೆ ಅದು ನಿಜವಲ್ಲ. 7ನೇ ನಂಬರ್ ಗೋವಿಂದ್ ಭಾಯ್‍‍ರವರ ಅದೃಷ್ಟದ ಸಂಖ್ಯೆಯಾಗಿದೆ. ಗುಜರಾತಿ ಭಾಷೆಯಲ್ಲಿ 7 ಎಂದು ಬರೆದಾಗ ಗಣೇಶನಂತೆ ಕಾಣುತ್ತದೆ. ಗೋವಿಂದ್ ಭಾಯ್‍‍ರವರು ಒಳ್ಳೆಯ ಸುದ್ದಿಗಳ ಭಗವಂತನಾದ ಗಣೇಶನ ಆರಾಧಕರಾಗಿದ್ದಾರೆ.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಆದರೆ ಗೋವಿಂದ್ ಭಾಯ್‍‍ರವರ ದುರದೃಷ್ಟವೋ ಏನೋ, ರೂ.19 ಲಕ್ಷ ಪಾವತಿಸಿ ಅವರ ಅದೃಷ್ಟ ಸಂಖ್ಯೆಯನ್ನು ಪಡೆದ ನಂತರ, ಗುಜರಾತಿ ಭಾಷೆಯಲ್ಲಿ ನಂಬರ್ ಪ್ಲೇಟ್ ಹೊಂದುವುದು ಕಾನೂನಿಗೆ ವಿರುದ್ಧವಾದುದು ಎಂದು ತಿಳಿದು ಬಂದಿದೆ.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಅದೇ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದ ರಾಜ್‍‍ಕೋಟ್‍‍ನವರೇ ಆದ ಉಪೇಂದ್ರ ಚುಡಾಸಾಮ ಎಂಬ ವ್ಯಕ್ತಿ ತಮ್ಮ ರೇಂಜ್ ರೋವರ್ ಕಾರಿಗಾಗಿ ರೂ.8.53 ಲಕ್ಷ ಪಾವತಿಸಿ ಜಿಜೆ 03 ಎಲ್‌ಬಿ 0001 ಫ್ಯಾನ್ಸಿ ನಂಬರ್‌ ಪಡೆದಿದ್ದಾರೆ. ಎರಡನೇ ಬಾರಿಗೆ ಚುಡಾಸಾಮ ಅವರು 1ನೇ ನಂಬರ್‌ ಪಡೆಯಲು ಹೆಚ್ಚು ಹಣವನ್ನು ಪಾವತಿಸಿದ್ದಾರೆ.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಭಾರತೀಯರು ಫ್ಯಾನ್ಸಿ ನಂಬರ್ ಪ್ಲೇಟ್‍‍ಗಳನ್ನು ಇಷ್ಟಪಡುತ್ತಾರೆ. 1,7,9,11 ಮತ್ತು 99 ರಂತಹ ಸಂಖ್ಯೆಗಳಿಗೆ ವಿಶೇಷ ಒಲವು ತೋರುತ್ತಾರೆ. ಕೆಲವರು ತಮ್ಮ ಜನ್ಮದಿನಗಳು, ವಿವಾಹ ವಾರ್ಷಿಕೋತ್ಸವಗಳು ಅಥವಾ ಮಕ್ಕಳ ಜನ್ಮ ದಿನಾಂಕಗಳು ಇತ್ಯಾದಿಗಳಿಗೆ ಹೊಂದಿಕೆಯಾಗುವ ರಿಜಿಸ್ಟ್ರೇಷನ್ ನಂಬರ್‍‍ಗಳನ್ನು ಪಡೆಯಲು ಹೆಚ್ಚು ಹಣವನ್ನು ಪಾವತಿಸುತ್ತಾರೆ.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಈ ವರ್ಷದ ಆರಂಭದಲ್ಲಿ ಕೇರಳ ಮೂಲದ ಉದ್ಯಮಿಯೊಬ್ಬರು ಪೋರ್ಷೆ 718 ಬಾಕ್ಸ್‌ಸ್ಟರ್ ಕಾರ್ ಅನ್ನು ರೂ.1.2 ಕೋಟಿ ನೀಡಿ ಖರೀದಿಸಿದ್ದನ್ನು ಗಮನಿಸಬಹುದು. ಈ ಕಾರು ಖರೀದಿಸಿದ್ದ ಕೊಚ್ಚಿಯ ಔಷಧಿ ವಿತರಕ ಕೆ ಎಸ್ ಬಾಲಗೋಪಾಲ್ ಅವರು, ಈ ಕಾರಿನ ನಂಬರ್ ಪ್ಲೇಟ್‌ಗಾಗಿ, ಭಾರತದಲ್ಲಿಯೇ ಇದುವರೆಗಿನ ದುಬಾರಿ ಬೆಲೆ ಎಂದು ಹೇಳಲಾದ, ರೂ.31 ಲಕ್ಷ ನೀಡಿದ್ದರು.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

2012ರಲ್ಲಿ ಹರಿಯಾಣದ ವ್ಯಕ್ತಿಯೊಬ್ಬರು ತಮ್ಮ ಮರ್ಸಿಡಿಸ್ ಬೆಂಜ್ ಎಸ್-ಕ್ಲಾಸ್‌ ಕಾರಿಗಾಗಿ ಫ್ಯಾನ್ಸಿ ನಂಬರ್‌ ಪ್ಲೇಟ್‌ ಪಡೆಯಲು ರೂ.26 ಲಕ್ಷ ಪಾವತಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು. ಬ್ರಿಟಿಷ್ ಉದ್ಯಮಿ ಹಾಗೂ ಖಾನ್ ಡಿಸೈನ್ ಮಾಲೀಕ ಅಫ್ಜಲ್ ಖಾನ್‍‍ರವರು ಪ್ರಪಂಚದ ಅತ್ಯಂತ ದುಬಾರಿ ಬೆಲೆಯ ನಂಬರ್ ಪ್ಲೇಟ್ ಖರೀದಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಫ್ಯಾನ್ಸಿ ನಂಬರ್‍‍‍ಗಾಗಿ 19 ಲಕ್ಷ ತೆತ್ತ ಮರ್ಸಿಡಿಸ್ ಮಾಲೀಕ

ಎಫ್ 1 ನಂಬರ್ ಪ್ಲೇಟ್ ಪಡೆಯಲು ಖಾನ್‍‍ರವರು ರೂ.132 ಕೋಟಿ ಪಾವತಿಸಿದ್ದರು. ಈ ನಂಬರ್ ಪ್ಲೇಟ್ ಫಾರ್ಮುಲಾ 1 ಮೋಟರ್‌ಸ್ಪೋರ್ಟ್‌ಗಳನ್ನು ಪ್ರತಿನಿಧಿಸುವುದಲ್ಲದೆ ಅದರ ದ್ವಿಸಂಖ್ಯೆಯಿಂದಾಗಿ ಪ್ರಸಿದ್ಧವಾಗಿದೆ. ಈ ನಂಬರ್ ಪ್ಲೇಟ್ ಅನ್ನು ಖಾನ್‍‍ರವರು ತಮ್ಮ ಹಳದಿ ಬಣ್ಣದ ಬುಗಾಟ್ಟಿ ವೇರಾನ್‌ ಕಾರಿನಲ್ಲಿ ಅಳವಡಿಸಿದ್ದಾರೆ.

Most Read Articles

Kannada
English summary
Mercedes owner pays Rs 19 L for No 7 - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X