ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

By Manoj Bk

ಆಟೋ ಮೊಬೈಲ್ ಉದ್ಯಮವು ನಿರಂತರವಾಗಿ ಹೊಸತನವನ್ನು ನೀಡುತ್ತದೆ. ಕಾರು ತಯಾರಕ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಹಲವಾರು ಹೊಸ ತಂತ್ರಗಳನ್ನು ರೂಪಿಸುತ್ತವೆ. ಕಾರು ಖರೀದಿ ಮೇಲೆ ಗ್ರಾಹಕರಿಗೆ ರಿಯಾಯಿತಿ ನೀಡುವುದು ಹಳೆಯ ತಂತ್ರ. ಈಗ ಟ್ರೆಂಡ್ ಬದಲಾಗಿದ್ದು, ಕಂಪನಿಗಳು ಭಾರತದಲ್ಲಿ ಕಾರು ಮಾರಾಟಕ್ಕಾಗಿ ಹೊಸ ಯೋಜನೆಗಳನ್ನು ಪರಿಚಯಿಸಿವೆ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಈ ಯೋಜನೆಗಳು ಗ್ರಾಹಕರಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿವೆ. ಕಾರು ತಯಾರಕ ಕಂಪನಿಗಳ ಹೊಸ ಯೋಜನೆಯೆಂದರೆ ಗುತ್ತಿಗೆ (ಲೀಸ್) ಆಧಾರದ ಮೇಲೆ ಕಾರುಗಳನ್ನು ಗ್ರಾಹಕರಿಗೆ ಗುತ್ತಿಗೆಗೆ ನೀಡುವುದು. ಕೆಲವು ಗ್ರಾಹಕರಿಗೆ ಕಾರುಗಳನ್ನು ಖರೀದಿಸುವುದು ಸೂಕ್ತವೋ ಅಥವಾ ಗುತ್ತಿಗೆಗೆ ಪಡೆಯುವುದು ಸೂಕ್ತವೋ ಎಂಬ ಗೊಂದಲವಿದೆ. ಈ ಲೇಖನದಲ್ಲಿ ಯಾವುದು ಸೂಕ್ತ ಎಂಬುದನ್ನು ನೋಡೋಣ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕಾರ್ ಲೀಸ್ ಎಂದರೇನು?

ಕಾರ್ ಅನ್ನು ಗುತ್ತಿಗೆಗೆ ಪಡೆಯುವುದು ಮನೆಗಳನ್ನು ಬಾಡಿಗೆಗೆ ಪಡೆದಂತೆ. ಹೊಸ ಕಾರ್ ಅನ್ನು ಖರೀದಿಸುವುದಾದರೆ ಮೊದಲು ಭಾರೀ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನಂತರ ಉಳಿದ ಹಣವನ್ನು ನಗದು ರೂಪದಲ್ಲಿ ಅಥವಾ ಬ್ಯಾಂಕ್ ಸಾಲದ ಮೂಲಕ ಪಾವತಿಸಬಹುದು. ಆದರೆ ಕಾರ್ ಗುತ್ತಿಗೆ ಯೋಜನೆಯಲ್ಲಿ ಈ ರೀತಿಯ ಯಾವುದೇ ತಲೆ ನೋವುಗಳಿರುವುದಿಲ್ಲ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕಾರ್ ಅನ್ನು ಲೀಸ್'ಗೆ ಪಡೆದಾಗ ಮುಂಚಿತವಾಗಿ ಪಾವತಿಸಬೇಕಾಗಿಲ್ಲ. ಕಾರ್ ಅನ್ನು ಲೀಸ್'ಗೆ ಪಡೆಯುವವರು ಆ ಕಾರಿಗೆ ಪ್ರತಿ ತಿಂಗಳು ಮಾಸಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ನಿರ್ವಹಣೆ, ನೋಂದಣಿ ಶುಲ್ಕ, ವಿಮಾ ನವೀಕರಣದಂತಹ ವೆಚ್ಚಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಹಾಗಾಗಿ ಈ ಯೋಜನೆಯು 2 - 3 ವರ್ಷಗಳಿಗೊಮ್ಮೆ ಕಾರು ಬದಲಾಯಿಸಬೇಕೆಂದು ಯೋಚಿಸುವವರಿಗೆ ಹಾಗೂ ನಿರ್ವಹಣಾ ವೆಚ್ಚ ಸೇರಿದಂತೆ ಯಾವುದೇ ರೀತಿಯ ವೆಚ್ಚವನ್ನು ಮಾಡಲು ಇಷ್ಟಪಡದವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ಒಂದು ನಾಣ್ಯದಲ್ಲಿ ಎರಡು ಮುಖಗಳಿರುವಂತೆ ಈ ಯೋಜನೆಯಲ್ಲಿಯೂ ಕೆಲವು ಸಾಧಕ - ಬಾಧಕಗಳಿವೆ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕಾರ್ ಅನ್ನು ಲೀಸ್'ಗೆ ಪಡೆಯುವುದರಿಂದ ಆಗುವ ಲಾಭಗಳು

ಕಾರ್ ಅನ್ನು ಲೀಸ್'ಗೆ ಪಡೆದರೆ ಕಾರು ಸಾಲಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಜೊತೆಗೆ ಲಕ್ಷಗಟ್ಟಲೇ ಸಾಲಕ್ಕೆ ಬಡ್ಡಿಯನ್ನು ಪಾವತಿಸಬೇಕಾಗಿಲ್ಲ. ಬದಲಿಗೆ ಪ್ರತಿ ತಿಂಗಳು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಾಲ ಪಡೆದು ಹೊಸ ಕಾರನ್ನು ಖರೀದಿಸಿದರೆ, ಅದಕ್ಕಾಗಿ ಪ್ರತಿ ತಿಂಗಳು ಇಎಂಐ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ ಲೀಸ್ ಮೂಲಕ ಪಡೆಯುವ ಕಾರಿಗೆ ಪಾವತಿಸುವ ಮಾಸಿಕ ಶುಲ್ಕವನ್ನು ಇಎಂಐಗಿಂತ ಕಡಿಮೆ ಇರುತ್ತದೆ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

2 - 3 ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಕಾರ್ ಅನ್ನು ಹೊಂದದಿರಲು ಆದ್ಯತೆ ನೀಡುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಕಾರ್ ಅನ್ನು ಎಷ್ಟು ಸಮಯ ಹೊಂದಿರುತ್ತಾರೋ ಅಷ್ಟು ಅವಧಿಗೆ ಪಾವತಿಸಿದರೆ ಸಾಕು. ಲೀಸ್ ಅವಧಿ ಮುಗಿದ ನಂತರ ಆ ಕಾರ್ ಅನ್ನು ಕಂಪನಿಗೆ ಹಿಂತಿರುಗಿಸಬಹುದು ಹಾಗೂ ಇನ್ನೊಂದು ಹೊಸ ಕಾರ್ ಅನ್ನು ಪಡೆಯಬಹುದು.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಅದೇ ರೀತಿ ಕಾರ್ ಅನ್ನು ಲೀಸ್'ಗೆ ಪಡೆದರೆ, ಸಂಬಂಧ ಪಟ್ಟ ಕಂಪನಿಯ ವಿತರಕರು ನಿರ್ವಹಣೆ ಹಾಗೂ ರಿಪೇರಿ ಕಾರ್ಯವನ್ನು ನೋಡಿಕೊಳ್ಳುತ್ತಾರೆ. ಇದರಿಂದ ಕಾಲಕಾಲಕ್ಕೆ ಸರ್ವೀಸ್ ಮಾಡಿಸುವ ಬಗ್ಗೆ ಚಿಂತಿಸುವಂತಿಲ್ಲ. ಇದರ ಜೊತೆಗೆ ಕಾರಿನ ಮರು ಮಾರಾಟದ ಬಗ್ಗೆ ಚಿಂತಿಸಬೇಕಾಗಿಲ್ಲ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕಾರ್ ಅನ್ನು ಲೀಸ್'ಗೆ ಪಡೆದರೆ ಅದರ ಮರುಮಾರಾಟ ಮೌಲ್ಯ ಹಾಗೂ ಮರು ಮಾರಾಟದ ಕಾರ್ಯವಿಧಾನಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಲೀಸ್ ಅವಧಿ ಮುಗಿದ ನಂತರ ಸಂಬಂಧ ಪಟ್ಟ ಕಂಪನಿಯ ಡೀಲರ್‌ಶಿಪ್‌ನಲ್ಲಿ ಕಾರ್ ಅನ್ನು ಹಸ್ತಾಂತರಿಸಿದರೆ ಮುಗಿಯಿತು.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕೆಲವೊಮ್ಮೆ ದುಬಾರಿ ಬೆಲೆಯ ಕಾರುಗಳನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಆ ಕಾರನ್ನು ಓಡಿಸುವುದು ಹಲವರ ಕನಸಾಗಿರುತ್ತದೆ. ನಿರ್ದಿಷ್ಟ ಅವಧಿಗೆ ಅಂತಹ ಕಾರುಗಳನ್ನು ಓಡಿಸಲು ಲೀಸ್ ಯೋಜನೆ ಸೂಕ್ತವಾಗಿದೆ. ಇವು ಕಾರುಗಳ ಲೀಸ್ ಯೋಜನೆಯಿಂದಾಗುವ ಕೆಲವು ಅನುಕೂಲಗಳು.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕಾರ್ ಲೀಸ್'ನಿಂದಾಗುವ ಅನಾನುಕೂಲಗಳು

ಯಾವುದಾದರೂ ಕಾರ್ ಅನ್ನು ಬಹಳ ಸಮಯದಿಂದ ಚಾಲನೆ ಮಾಡುತ್ತಿದ್ದರೆ, ಆ ಕಾರ್ ಅನ್ನು ತನ್ನ ಅಭಿರುಚಿಗೆ ತಕ್ಕಂತೆ ಮಾರ್ಪಡಿಸಲು ಬಯಸುವುದು ಸಹಜ. ಆದರೆ ಲೀಸ್ ಯೋಜನೆಯಲ್ಲಿ ಇದು ಸಾಧ್ಯವಿಲ್ಲ. ಲೀಸ್ ಯೋಜನೆಯಲ್ಲಿ ಪಡೆಯುವ ಕಾರ್ ಅನ್ನು ಕೇವಲ ಇಂಧನ ತುಂಬಿಸಿ ಚಾಲನೆ ಮಾಡಬಹುದು ಅಷ್ಟೇ. ಆ ಕಾರಿನಲ್ಲಿ ಬೇರೆ ಯಾವುದೇ ಬದಲಾವಣೆ ಮಾಡುವಂತಿಲ್ಲ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಲೀಸ್'ಗೆ ಪಡೆಯುವ ಕಾರುಗಳನ್ನು ಕೆಲವು ಕಿ.ಮೀಗಳವರೆಗೆ ಮಾತ್ರ ಚಾಲನೆ ಮಾಡಬಹುದು. ನಿರ್ದಿಷ್ಟ ಕಿ.ಮೀಗಳನ್ನು ಮೀರಿ ಚಾಲನೆ ಮಾಡುವಂತಿಲ್ಲ. ಜೊತೆಗೆ ಲೀಸ್ ಅವಧಿ ಮುಗಿದ ನಂತರ ಕಾರ್ ಅನ್ನು ಚಾಲನೆ ಮಾಡುವಂತಿಲ್ಲ. ಉದಾಹರಣೆ ನೀಡುವುದಾದರೆ ನೀವು ಕಾರೊಂದನ್ನು ಒಂದು ತಿಂಗಳು ಬಾಡಿಗೆಗೆ ಪಡೆಯುತ್ತೀರಿ ಎಂದು ಭಾವಿಸೋಣ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಆ ಕಾರಿನಲ್ಲಿ ನೀವು ಕೇವಲ 2 ಸಾವಿರ ಕಿ.ಮೀ ಚಲಿಸಬಹುದು ಎಂದು ಕಂಪನಿ ಹೇಳುತ್ತದೆ. ನೀವು ಕೇವಲ 15 ದಿನಗಳಲ್ಲಿ ಈ 2 ಸಾವಿರ ಕಿ.ಮೀ ಚಲಿಸಿದರೆ, ಉಳಿದ 15 ದಿನಗಳವರೆಗೆ ನೀವು ಕಾರನ್ನು ಹೊಂದಿದ್ದರೂ ಸಹ ಮತ್ತಷ್ಟು ಚಾಲನೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಚಲಿಸಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಲೀಸ್ ಅವಧಿ ಮುಗಿದು ಕಾರ್ ಅನ್ನು ಹಿಂತಿರುಗಿಸಿವಾಗ ನೀವು ಪ್ರಯಾಣಿಸುವ ಪ್ರತಿ ಹೆಚ್ಚುವರಿ ಕಿ.ಮೀಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ನೀವು ಎಷ್ಟು ಕಿ.ಮೀ ಪ್ರಯಾಣಿಸಬಹುದು ಎಂಬುದನ್ನು ಗುತ್ತಿಗೆಯ ನಿಯಮಗಳಲ್ಲಿ ನಿರ್ದಿಷ್ಟ ಪಡಿಸಲಾಗುತ್ತದೆ. ಆ ಮಿತಿಯನ್ನು ಮೀರಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಕಾರು ಖರೀದಿಸುವುದು ಸೂಕ್ತವೋ, ಲೀಸ್'ಗೆ ಪಡೆಯುವುದು ಸೂಕ್ತವೋ? ಇಲ್ಲಿದೆ ಉತ್ತರ...

ಕಾರ್ ಅನ್ನು ಲೀಸ್'ಗೆ ಪಡೆಯುವುದರಿಂದ ಕಾರಿನ ಮಾಲೀಕರಾಗಿರುವ ಅನುಭವವನ್ನು ಪಡೆಯುವುದಿಲ್ಲ. ಭಾರತದಲ್ಲಿ ಕಾರು ಖರೀದಿಸುವುದು ಸಣ್ಣ ವಿಷಯವಲ್ಲ. ಕಾರು ಖರೀದಿಸುವುದು ಹಲವರ ಕನಸು. ಆದರೆ ಕಾರ್ ಅನ್ನು ಲೀಸ್'ಗೆ ಮೂಲಕ ಈ ಕನಸು ನನಸಾಗುವುದಿಲ್ಲ. ಏಕೆಂದರೆ ಇದು ಬಾಡಿಗೆ ವಾಹನ. ನಾವು ಈ ಲೇಖನದಲ್ಲಿ ಕಾರುಗಳನ್ನು ಲೀಸ್'ಗೆ ಪಡೆಯುವ ಸಾಧಕ ಭಾದಕಗಳನ್ನು ತಿಳಿಸಿದ್ದೇವೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಯೋಚಿಸಿ, ನಿರ್ಧರಿಸಿ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Merits and demerits of leasing cars details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X