ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ಕರೋನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಮಾರ್ಚ್ 25ರಂದು ಜಾರಿಯಾದ ಈ ಲಾಕ್‌ಡೌನ್ ಇನ್ನೂ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈ ಹಠಾತ್ ಲಾಕ್‌ಡೌನ್‌ನಿಂದಾಗಿ ಜನರು ತತ್ತರಿಸುವಂತಾಯಿತು.

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ಎಲ್ಲಕಿಂತ ಹೆಚ್ಚು ತೊಂದರೆಯನ್ನು ಅನುಭವಿಸಿದವರು ಕೂಲಿ ಕಾರ್ಮಿಕರು. ಅದರಲ್ಲೂ ಬೇರೆ ಊರುಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಹೆಚ್ಚು ತೊಂದರೆಯನ್ನು ಅನುಭವಿಸಿದರು. ಎರಡು ತಿಂಗಳಿನಿಂದ ಕೆಲಸವಿಲ್ಲದ ಕಾರಣಕ್ಕೆ ಲಕ್ಷಾಂತರ ಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ. ಕೆಲವು ಸ್ವಯಂಸೇವಕರು ಹಾಗೂ ದಾನಿಗಳು ಕಾರ್ಮಿಕರ ನೆರವಿಗೆ ಧಾವಿಸಿ ಅವರ ಹಸಿವು ನೀಗಿಸಲು ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ಆದರೆ ಪರಿಸ್ಥಿತಿ ಮತ್ತೆ ಮೊದಲಿನಂತಾಗಲು ಇನ್ನೂ ಹಲವಾರು ತಿಂಗಳುಗಳು ಬೇಕಾಗುತ್ತವೆ. ಈ ಕಾರಣಕ್ಕೆ ಬೇರೆ ಊರುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ರೈಲು ಶುಲ್ಕ ಭರಿಸಲು ಸಾಧ್ಯವಾಗದವರು ಕಾಲ್ನಡಿಗೆ ಮೂಲಕ ಇಲ್ಲವೇ ಸೈಕಲ್ ಮೂಲಕ ಸಾವಿರಾರು ಕಿ.ಮೀ ದೂರದಲ್ಲಿರುವ ತಮ್ಮ ಊರುಗಳನ್ನು ತಲುಪುತ್ತಿದ್ದಾರೆ.

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ಈ ರೀತಿ ತಮ್ಮ ಊರು ತಲುಪಿದ ಮೂವರು ವಲಸೆ ಕಾರ್ಮಿಕರು ಕಟಕ್ ನಗರದ ಹೆದ್ದಾರಿಯಲ್ಲಿದ್ದ ಸ್ವಯಂಸೇವಕರ ಕಣ್ಣಿಗೆ ಬಿದ್ದಿದ್ದಾರೆ. ಸ್ವಯಂಸೇವಕರು ಅವರನ್ನು ವಿಚಾರಿಸಿದಾಗ ತಾವು ಬೆಂಗಳೂರಿನಿಂದ ಓಡಿಶಾದ ಬರ್ಧಕ್ ಜಿಲ್ಲೆಗೆ ಹಿಂದಿರುಗುತ್ತಿರುವುದಾಗಿ ತಿಳಿಸಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ಸ್ವಯಂಸೇವಕರ ವಿಚಾರಣೆಯಲ್ಲಿ ಓಡಿಶಾದ ವಲಸೆ ಕಾರ್ಮಿಕ ಚಂದನ್, ಆತನ ಪತ್ನಿ ಹಾಗೂ ಸ್ನೇಹಿತ ತಪ್ಪನ್ ಬೆಂಗಳೂರಿನಿಂದ ವಾಪಸ್ ಬಂದಿರುವುದು ತಿಳಿದುಬಂದಿದೆ. ಲಾಕ್‌ಡೌನ್ ಮುಂದುವರೆದ ಕಾರಣ ಯಾವುದೇ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದರು.

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ಈ ಕಾರಣಕ್ಕೆ ತಮ್ಮ ಊರಿಗೆ ಮರಳಲು ನಿರ್ಧರಿಸಿದ್ದಾರೆ. ಆದರೆ ಊರಿಗೆ ಮರಳಲು ಹಣವಿರಲಿಲ್ಲ. ಈ ಕಾರಣಕ್ಕೆ ಚಂದನ್ ತನ್ನ ಪತ್ನಿಯ ತಾಳಿಯನ್ನು ರೂ.15 ಸಾವಿರಗಳಿಗೆ ಮಾರಾಟ ಮಾಡಿ ರೂ.5,000ಗಳ ಎರಡು ಸೈಕಲ್ ಖರೀದಿಸಿದ್ದಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸೈಕಲ್ ಖರೀದಿಸಿ ಊರು ತಲುಪಲು ಪತ್ನಿಯ ತಾಳಿ ಮಾರಿದ ವಲಸೆ ಕಾರ್ಮಿಕ

ತಾಳಿ ಮಾರಿ ಖರೀದಿಸಿದ ಸೈಕಲ್‌ನಲ್ಲಿ ಚಂದನ್, ಆತನ ಪತ್ನಿ ಹಾಗೂ ಸ್ನೇಹಿತ ತಪ್ಪನ್ ತಮ್ಮ ಊರಿಗೆ ಮರಳಿದ್ದಾರೆ. ಸೈಕಲ್‌ನಲ್ಲಿ ಬೆಂಗಳೂರಿನಿಂದ 1,600 ಕಿ.ಮೀ ದೂರದಲ್ಲಿರುವ ತಮ್ಮ ಊರು ತಲುಪಿದ್ದಾರೆ. ಸ್ವಯಂಸೇವಕರು ಅವರಿಗೆ ಆಹಾರದ ಕಿಟ್‌ಗಳನ್ನು ನೀಡಿದ್ದಾರೆ.

Most Read Articles

Kannada
English summary
Migrant worker buys cycle by selling wife mangalsutra rides from Bangalore to Odisha. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X