125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಎಷ್ಟೇ ಬಾರಿ ಪ್ರಯಾಣಿಸಿದರೂ ರೈಲು ಪ್ರಯಾಣವು ಯಾವಾಗಲೂ ಆಸಕ್ತಿದಾಯಕವಾಗಿರುತ್ತದೆ. ಜೊತೆಗೆ ವಿಭಿನ್ನ ಅನುಭವವನ್ನು ನೀಡುತ್ತದೆ. ಭಾರತದ ರೈಲ್ವೆ ಇಲಾಖೆಯು ಸುಮಾರು 150 ವರ್ಷಗಳ ಇತಿಹಾಸವನ್ನು ಹೊಂದಿದೆ.

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ನಮ್ಮ ದೇಶಕ್ಕೆ ಬ್ರಿಟಿಷರು ನೀಡಿರುವ ಕೊಡುಗೆಗಳಲ್ಲಿ ರೈಲುಗಳು ಸಹ ಸೇರಿವೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶಕ್ಕೆ ರೈಲುಗಳು ನಿಧಾನವಾಗಿ ಕಾಲಿಟ್ಟವು. ಕೆಲವು ದೇಶಗಳಲ್ಲಿ ಸುರಂಗ ರೈಲು ಮಾರ್ಗಗಳು 100 ವರ್ಷಗಳಿಂದ ಬಳಕೆಯಲ್ಲಿವೆ. ಅಂತಹ ಒಂದು ಪುರಾತನ ಸುರಂಗ ರೈಲು ಮಾರ್ಗದ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಬುಡಾಪೆಸ್ಟ್ ಯುರೋಪಿಯನ್ ದೇಶ ಹಂಗರಿಯ ರಾಜಧಾನಿ. ಬುಡಾಪೆಸ್ಟ್ ನಗರದಲ್ಲಿರುವ ಸುರಂಗ ರೈಲು ಮಾರ್ಗವು ಸುಮಾರು 125 ವರ್ಷಗಳಷ್ಟು ಹಳೆಯದು. ಇದರ 125ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಆಚರಿಸಲಾಯಿತು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಮಿಲೇನಿಯಮ್ ಅಂಡರ್ ಗ್ರೌಂಡ್ ಎಂದು ಕರೆಯಲ್ಪಡುವ ಈ ರೈಲು ಸೇವೆಯನ್ನು 1896ರಲ್ಲಿ ಆರಂಭಿಸಲಾಯಿತು. ಮ್ಯಾಗಿಯರ್ಸ್ (ಇಂದಿನ ಹಂಗೇರಿಯನ್ನರು) ಪಶ್ಚಿಮಕ್ಕೆ ವಲಸೆ ಬಂದು ಹಂಗೇರಿಯಲ್ಲಿ ಆಶ್ರಯ ಪಡೆದ ಹಿನ್ನೆಲೆಯಲ್ಲಿ ಮಿಲೇನಿಯಮ್ ಎಂಬ ಹೆಸರು ಬಂದಿದೆ.

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

1896ನೇ ಇಸವಿಗೆ ಮ್ಯಾಗಿಯರ್ಸ್ ಹಂಗೇರಿಗೆ ಆಗಮಸಿ ಸಾವಿರ ವರ್ಷಗಳಾಗುತ್ತವೆ. ಇದನ್ನೇ ಮಿಲೇನಿಯಮ್ ಎಂದು ಕರೆಯಲಾಗುತ್ತದೆ. ಲಂಡನ್‌ನಲ್ಲಿ ಇದೇ ರೀತಿಯ ಹಳೆಯ ರೈಲು ಸುರಂಗ ಮಾರ್ಗವಿದೆ. ಹಂಗೇರಿಯಲ್ಲಿರುವ ಮಿಲೇನಿಯಮ್ ಅಂಡರ್ ಗ್ರೌಂಡ್ ವಿಶ್ವದ ಅತ್ಯಂತ ಹಳೆಯ ರೈಲು ಸುರಂಗ ಮಾರ್ಗವಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಈ ಸುರಂಗ ರೈಲು ಸೇವೆಯನ್ನು ಈಗಲೂ ಸಹ ಹಂಗೇರಿ ದೇಶದ ಜನ ಹಾಗೂ ವಿದೇಶಿ ಪ್ರವಾಸಿಗರು ಇಷ್ಟಪಡುತ್ತಾರೆ. ಜೊತೆಗೆ ಈ ಮಾರ್ಗವನ್ನು ಬಳಸುತ್ತಾರೆ. 2002ರಲ್ಲಿ ಈ ರೈಲನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿತು.

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಆರಂಭದಲ್ಲಿ ಈ ಸುರಂಗ ಮಾರ್ಗದಲ್ಲಿ ಕೇವಲ 4 ಕಿ.ಮೀಗಳ ರೈಲು ಸಂಚಾರವಿತ್ತು. 19ನೇ ಶತಮಾನದ ಅಂತ್ಯದಲ್ಲಿಯೇ ಈ ರೀತಿಯ ತಾಂತ್ರಿಕ ಮೈಲಿಗಲ್ಲನ್ನು ಸಾಧಿಸಿರುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಈ ಸುರಂಗ ಮಾರ್ಗದಲ್ಲಿ ಈಗ ಆಧುನಿಕ ರೈಲುಗಳನ್ನು ಪರಿಚಯಿಸಲಾಗಿದೆ. 1960ರವರೆಗೆ ಕಾರ್ಯನಿರ್ವಹಿಸುತ್ತಿದ್ದ 10.5 ಮೀಟರ್ ಉದ್ದದ ಬಾಕ್ಸ್‌ಕಾರ್ ಕೇವಲ 46 ಪ್ರಯಾಣಿಕರನ್ನು ಹೊತ್ತೊಯ್ಯ ಬಲ್ಲದು.

125ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಶ್ವದ ಪುರಾತನ ಸುರಂಗ ರೈಲು ಮಾರ್ಗ

ಕರೋನಾ ವೈರಸ್ ಮಹಾಮಾರಿಯ ಅಟ್ಟಹಾಸವು ಈ ರೈಲಿಗೂ ತಾಗಿದೆ. ಕರೋನಾ ವೈರಸ್ ಹರಡುವುದರಿಂದ ಮಿಲೇನಿಯಮ್ ಅಂಡರ್ ಗ್ರೌಂಡ್ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಚಿತ್ರ ಕೃಪೆ: ಆಲ್ಬರ್ಟ್ ಬಹ್ನ್

Most Read Articles

Kannada
English summary
Millennium underground railway celebrates 125th anniversary. Read in Kannada.
Story first published: Thursday, May 6, 2021, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X