ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಸೂಪರ್ ಕಾರುಗಳು ಜೆಸಿಬಿಯಿಂದ ಪೀಸ್ ಪೀಸ್

ಫಿಲಿಪೈನ್ಸ್‌ನಲ್ಲಿ ನಡೆದ ಘಟನೆಯೊಂದು ಐಷಾರಾಮಿ ಕಾರು ಪ್ರಿಯರಿಗೆ ಆಘಾತವನ್ನುಂಟು ಮಾಡಿದೆ. ಕ್ರೇನ್‌ ಬಳಸಿ ಸುಮಾರು 1.2 ಮಿಲಿಯನ್ ಡಾಲರ್ ಮೌಲ್ಯದ ಸೂಪರ್ ಕಾರುಗಳನ್ನು ನಾಶಪಡಿಸಿದ ಘಟನೆ ಫಿಲಿಪೈನ್ಸ್‌ನಲ್ಲಿ ನಡೆದಿದೆ.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಈ ಕಾರುಗಳನ್ನು ಸರ್ಕಾರವೇ ನಾಶಪಡಿಸಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ನಾಶವಾದ ಎಲ್ಲಾ ಸೂಪರ್ ಕಾರುಗಳು ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದವು ಎಂದು ಹೇಳಲಾಗಿದೆ. ಈ ಕಾರಣಕ್ಕೆ ನಿನ್ನೆ ಫಿಲಿಪೈನ್ಸ್ ಸರ್ಕಾರವು ಈ ಎಲ್ಲಾ ಕಾರುಗಳನ್ನು ನಾಶಪಡಿಸಿದೆ.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಒಟ್ಟು 21 ಐಷಾರಾಮಿ ಹಾಗೂ ಸೂಪರ್ ಕಾರುಗಳು ನಾಶವಾಗಿವೆ ಎಂದು ವರದಿಗಳು ತಿಳಿಸಿವೆ. ಈ ಎಲ್ಲಾ ಸೂಪರ್ ಕಾರುಗಳನ್ನು ಒಂದೇ ಸ್ಥಳದಲ್ಲಿ ನಿಲ್ಲಿಸಿ, ಕ್ರೇನ್ ಮೂಲಕ ಒಂದೊಂದಾಗಿ ಎಲ್ಲಾ ಕಾರುಗಳನ್ನು ನಾಶಪಡಿಸಲಾಗಿದೆ.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಮೆಕ್ಲಾರೆನ್ 620 ಆರ್, ಪೋರ್ಷೆ 911, ಬೆಂಟ್ಲಿ ಫ್ಲೈಯಿಂಗ್ ಸ್ಪರ್, ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಕೆ, ಲೋಟಸ್ ಎಲೈಸ್, ಹ್ಯುಂಡೈ ಜೆನೆಸಿಸ್, ಟೊಯೊಟಾ ಸೋಲಾರಾ ಹಾಗೂ 14 ಮಿಟ್ಸುಬಿಷಿ ಜೀಪ್ ಸೇರಿದಂತೆ 21 ಕಾರುಗಳನ್ನು ಫಿಲಿಪೈನ್ಸ್ ಸರ್ಕಾರವು ನಾಶಪಡಿಸಿದೆ.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಪ್ರತಿಯೊಂದು ಕಾರುಗಳು ಕೋಟ್ಯಾಂತರ ರೂಪಾಯಿ ಬೆಲೆ ಹೊಂದಿವೆ ಎಂಬುದು ಗಮನಾರ್ಹ. ಈ ಕಾರುಗಳು ಫಿಲಿಪೈನ್ಸ್ ದೇಶದ ವಿವಿಧ ಭಾಗಗಳಲ್ಲಿ ಕಳ್ಳಸಾಗಣೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದವು.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಕಾರಣಕ್ಕೆ 2018ರಿಂದ 2020ರ ಅವಧಿಯಲ್ಲಿ ಅಧಿಕಾರಿಗಳು ಈ ಕಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಫಿಲಿಪೈನ್ಸ್ ಸರ್ಕಾರವು ಎಲ್ಲಾ ಐಷಾರಾಮಿ ಕಾರುಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರುಗಳನ್ನು ಫಿಲಿಪೈನ್ಸ್ ಸರ್ಕಾರ ನಾಶಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 17ಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ಫಿಲಿಪೈನ್ಸ್ ಸರ್ಕಾರವು ನಾಶಪಡಿಸಿತ್ತು.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಆಗ ಬಿಎಂಡಬ್ಲ್ಯು ಝಡ್ 1, ಫೆರಾರಿ 360 ಸ್ಪೈಡರ್ ಹಾಗೂ ಲ್ಯಾಂಬೊರ್ಗಿನಿ ಗಲ್ಲಾರ್ಡೊ ಕಾರುಗಳನ್ನು ನಾಶಪಡಿಸಲಾಗಿತ್ತು. ಈಗ ಮತ್ತೊಮ್ಮೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಕಾರುಗಳನ್ನು ನಾಶಪಡಿಸಲಾಗಿದೆ.

ಬಹು ಕೋಟಿ ಬೆಲೆಯ ಕಾರುಗಳನ್ನು ಕ್ರೇನ್ ಬಳಸಿ ನಾಶಪಡಿಸಿದ ಸರ್ಕಾರ

ಈ ವಿದ್ಯಮಾನವು ಫಿಲಿಪೈನ್ಸ್‌ನಲ್ಲಿ ಕಾಲಕಾಲಕ್ಕೆ ನಡೆಯುವ ಘಟನೆಯಾಗಿದೆ. ಆದರೆ ಭಾರತೀಯರಿಗೆ ಈ ಘಟನೆ ದೊಡ್ಡ ಸಂಗತಿಯಾಗಿದೆ. ಫಿಲಿಪೈನ್ಸ್‌ನಲ್ಲಿ ನಡೆದ ಈ ಘಟನೆ ಐಷಾರಾಮಿ ಕಾರು ಪ್ರಿಯರಿಗೆ ಆಘಾತವನ್ನುಂಟು ಮಾಡಿರುವುದು ಸುಳ್ಳಲ್ಲ.

Most Read Articles

Kannada
English summary
Million dollar worth super cars destroyed in Philippines. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X