ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ಹೊಸ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಎಲ್ಲಾ ದಾಖಲೆಗಳು ಸರಿಯಿದ್ದರೂ ಏನಾದರೂ ಕಾರಣ ಹೇಳಿ ದಂಡ ವಿಧಿಸಲಾಗುತ್ತಿದೆ.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಲುಂಗಿ ಧರಿಸಿ ವಾಹನ ಚಲಾಯಿಸಿದರೆ, ಚಪ್ಪಲಿ ಧರಿಸಿ ವಾಹನ ಚಲಾಯಿಸಿದರೆ ಕೆಲವು ರಾಜ್ಯಗಳಲ್ಲಿ ದಂಡ ವಿಧಿಸಲಾಗುತ್ತಿದೆ. ಇತ್ತೀಚಿಗೆ ಸಾಮಾಜಿಕ ಜಾಲ ತಾಣಗಳಲ್ಲಿ, ಕೇಂದ್ರ ಸರ್ಕಾರವು ವಾಹನಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸದಂತೆ ಪೊಲೀಸ್ ಇಲಾಖೆಗೆ ಸೂಚಿಸಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಕುರಿತು ಟ್ವೀಟ್ ಮಾಡಿರುವ ನಿತಿನ್ ಗಡ್ಕರಿರವರು ಕೆಲವು ವದಂತಿಗಳು ಹಬ್ಬಿದ್ದು, ಅವುಗಳನ್ನು ನಂಬದಂತೆ ಸೂಚಿಸಿದ್ದಾರೆ.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಪೊಲೀಸರು ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಸವಾರಿ ಮಾಡುವವರು ಚಪ್ಪಲಿ ಧರಿಸಿ ಚಾಲನೆ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ ಎಂಬುದಾಗಿ ಕೆಲವು ಪೋಸ್ಟ್ ಗಳನ್ನು ಮಾಡಲಾಗಿತ್ತು. ಅರ್ಧ ಶರ್ಟ್ ಧರಿಸುವವರಿಗೆ ಹಾಗೂ ಧೋತಿಯಂತಹ ಸಾಂಪ್ರಾದಾಯಿಕ ಉಡುಗೆ ತೊಡುವವರಿಗೂ ದಂಡ ವಿಧಿಸಲಾಗುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಚಪ್ಪಲಿ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವ ಸವಾರರಿಗೆ ರೂ.1,000 ದಂಡ ವಿಧಿಸಲಾಗುವುದೆಂದು ಈ ಹಿಂದೆ ವರದಿಯಾಗಿತ್ತು. ಕೆಲ ದಿನಗಳ ಹಿಂದಷ್ಟೆ ಶರ್ಟ್ ಗುಂಡಿ ಹಾಕದೇ, ಚಪ್ಪಲಿ ಧರಿಸಿ ವಾಹನ ಚಲಾಯಿಸುತ್ತಿದ್ದ ಟ್ಯಾಕ್ಸಿ ಡ್ರೈವರ್‍‍ಗೆ ಜೈಪುರದಲ್ಲಿ ದಂಡ ವಿಧಿಸಲಾಗಿತ್ತು.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಹೊಸ ಮೋಟಾರು ಕಾಯ್ದೆಯ ಹಿಂದಿರುವ ರೂವಾರಿಯಾದ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿರವರು ಈ ಕುರಿತು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಅಸಂಬದ್ದವಾದ ದಂಡವನ್ನು ವಾಹನ ಸವಾರರಿಗೆ ವಿಧಿಸುವಂತಿಲ್ಲವೆಂದು ಹೇಳಿದ್ದಾರೆ.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ತಮ್ಮ ಟ್ವೀಟ್‍‍ನಲ್ಲಿ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿರುವ ಅವರು ಅರ್ಧ ಶರ್ಟುಗಳನ್ನು ಧರಿಸಿದರೆ, ಲುಂಗಿ ಅಥವಾ ಬನಿಯನ್ ಧರಿಸಿದರೆ, ಎಕ್ಸ್ ಟ್ರಾ ಬಲ್ಬ್ ಅನ್ನು ಕಾರಿನಲ್ಲಿ ಇಟ್ಟುಕೊಳ್ಳದಿದ್ದರೆ, ವಾಹನಗಳ ಗಾಜುಗಳನ್ನು ಗಲೀಜಾಗಿ ಇಟ್ಟುಕೊಂಡರೆ, ಚಾಲನೆ ಅಥವಾ ಸವಾರಿ ಮಾಡುವಾಗ ಚಪ್ಪಲಿ ಧರಿಸಿದರೆ ಯಾವುದೇ ದಂಡ ವಿಧಿಸುವಂತಿಲ್ಲವೆಂದು ತಿಳಿಸಿದ್ದಾರೆ.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಈ ರೀತಿಯಾಗಿ ಯಾವುದೇ ವಾಹನ ಚಾಲಕರು ವಾಹನ ಚಲಾಯಿಸದರೆ ಪೊಲೀಸರು ದಂಡ ವಿಧಿಸುವಂತಿಲ್ಲ. ಇದರಿಂದಾಗಿ ವಾಹನ ಸವಾರರು ನಿಶ್ಚಿಂತೆಯಿಂದ ಇರಬಹುದು. ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಕೆಲವು ಕಡೆ ವಾಹನದ ಬೆಲೆಗಿಂತ ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸಲಾಗಿದೆ. ಭಾರೀ ಪ್ರಮಾಣದ ದಂಡಕ್ಕೆ ಹೆದರಿಯಾದರೂ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿ ಎಂಬ ಕಾರಣಕ್ಕೆ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಈ ಬಗ್ಗೆ ಅರಿವಿರದ ಸಾರ್ವಜನಿಕರು, ಹೆಚ್ಚಿನ ಪ್ರಮಾಣದ ದಂಡ ವಿಧಿಸಿದ ಪೊಲೀಸರ ಜೊತೆಗೆ ವಾಗ್ವಾದಕ್ಕಿಳಿದ ಹಲವಾರು ಘಟನೆಗಳು ನಡೆದಿವೆ. ಗುಜರಾತ್, ರಾಜಸ್ತಾನ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ ರಾಜ್ಯಗಳು ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೊಳಿಸಿಲ್ಲ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಇದರ ಬದಲಿಗೆ ಈ ರಾಜ್ಯಗಳು ಹೊಸ ಕಾಯ್ದೆಯನ್ನು ಜಾರಿಗೊಳಿಸಲಿವೆ. ಹೆಚ್ಚಿನ ಪ್ರಮಾಣದ ದಂಡವನ್ನು ವಿಧಿಸುವುದರಿಂದ ಭ್ರಷ್ಟಾಚಾರದ ಪ್ರಮಾಣವು ಸಹ ಹೆಚ್ಚಾಗಲಿದೆ. ಭಾರೀ ಪ್ರಮಾಣದ ದಂಡ ವಿಧಿಸುವ ಬದಲು ಪೊಲೀಸರು ಭಾರೀ ಪ್ರಮಾಣದ ಲಂಚವನ್ನು ಪಡೆಯಲಿದ್ದಾರೆ ಎಂಬುದು ಈ ರಾಜ್ಯಗಳ ಅಭಿಪ್ರಾಯವಾಗಿದೆ.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ಕೆಲವು ದಿನಗಳ ಹಿಂದೆ, ಟಿವಿ ವಾಹಿನಿಯೊಂದು ಈ ಕುರಿತು ಸ್ಟಿಂಗ್ ಆಪರೇಷನ್ ನಡೆಸಿತ್ತು. ಅದರಲ್ಲಿ ಗಾಜಿಯಾಬಾದ್ ಕೋರ್ಟಿನಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಲಂಚ ಪಡೆಯುತ್ತಿರುವ ಹಗರಣವು ಬಯಲಿಗೆ ಬಂದಿತ್ತು.

ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ..!

ರೂ.15,000ದ ದಂಡವನ್ನು ಕಡಿಮೆ ಮಾಡಲು ರೂ.5,000 ಲಂಚಕ್ಕೆ ಒತ್ತಾಯಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಮುಂಬರುವ ದಿನಗಳಲ್ಲಿ ಭಾರೀ ಪ್ರಮಾಣದ ದಂಡವನ್ನು ವಿಧಿಸುವುದಕ್ಕೆ ಮೊದಲು ರಸ್ತೆಗಳನ್ನು ಸರಿ ಮಾಡಿ ವಾಹನ ಸವಾರರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವಂತಾಗಲಿ.

Most Read Articles

Kannada
English summary
No fine for wearing slippers while riding/driving says Gadkari - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X