ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಭಾರತದಲ್ಲಿ ಸಂಭವಿಸುವ ಬಹುತೇಕ ಅಪಘಾತಗಳು ದ್ವಿಚಕ್ರ ವಾಹನಗಳಿಂದ ಸಂಭವಿಸುತ್ತವೆ. ಅದರಲ್ಲೂ ಅಪ್ರಾಪ್ತ ವಯಸ್ಕರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವುದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಹೊಸ ಕಾನೂನಿನ ಅನ್ವಯ ಅಪ್ರಾಪ್ತ ವಯಸ್ಕರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಂತಿಲ್ಲ. ಒಂದು ವೇಳೆ ವಾಹನ ಚಾಲನೆ ಮಾಡಿ ಅಪಘಾತ ಸಂಭವಿಸಿದರೆ ಅಂತಹ ಅಪ್ರಾಪ್ತ ವಯಸ್ಕರ ಪೋಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಆದರೂ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಕಡಿಮೆಯಾಗಿಲ್ಲ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಸೈಬರಾಬಾದ್‌ನ ಸಂಚಾರಿ ಪೊಲೀಸರು ತಮ್ಮ ಯುಟ್ಯೂಬ್ ಚಾನೆಲ್'ನಲ್ಲಿ ವೀಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಅಪ್ರಾಪ್ತ ವಯಸ್ಕನೊಬ್ಬ ಸ್ಕೂಟರ್‌ನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಾ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಯೋ ವೃದ್ಧೆಯೊಬ್ಬರಿಗೆ ಗುದ್ದಿದ್ದಾನೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಈ ವೀಡಿಯೊದ ಆರಂಭದಲ್ಲಿ ವಯೋ ವೃದ್ಧೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಆ ವೇಳೆ ವೇಗವಾಗಿ ಬರುವ ಸ್ಕೂಟರ್ ಸವಾರ ಇತರ ವಾಹನಗಳನ್ನು ಹಿಂದಿಕ್ಕುವ ಭರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಯೋವೃದ್ಧೆಗೆ ಗುದ್ದಿದ್ದಾನೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಸ್ಕೂಟರ್ ಸವಾರನಿಗೆ ಸ್ಕೂಟರಿನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗದೆ, ಆ ವಯೋ ವೃದ್ಧೆಗೆ ಹಿಂಬದಿಯಿಂದ ಗುದ್ದಿದ್ದಾನೆ. ಗುದ್ದಿದ್ದ ನಂತರ ಅವರಿಗೆ ಏನಾಗಿದೆ ಎಂದು ಸಹ ನೋಡದೇ ಸ್ಥಳದಿಂದ ಪರಾರಿಯಾಗಿದ್ದಾನೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಅಲ್ಲಿದ್ದವರು ಆ ವಯೋ ವೃದ್ಧೆಯ ನೆರವಿಗೆ ಧಾವಿಸಿದ್ದಾರೆ. ಪೊಲೀಸರ ಪ್ರಕಾರ ಆ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಸ್ಕೂಟರ್ ಸವಾರ ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಹೊಂದಿರಲಿಲ್ಲವೆಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಪೊಲೀಸರು ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿಯ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ. ಬಂಧಿತರಿಬ್ಬರು ಕಂಬಿಗಳ ಹಿಂದೆ ಇರುವ ಫೋಟೋವನ್ನು ಪೊಲೀಸರು ಅಪ್ ಲೋಡ್ ಮಾಡಿದ್ದಾರೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಪೊಲೀಸರು ಸ್ಕೂಟರ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ಆರೋಪಿಯ ಪೋಷಕರು ಎಂಬುದು ಗಮನಾರ್ಹ. ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದ್ದರೂ ಈ ರೀತಿಯ ಪ್ರಕರಣಗಳು ಮರು ಕಳಿಸುತ್ತಲೇ ಇವೆ.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಈ ಹಿಂದೆ ತಮ್ಮ ಮಕ್ಕಳಿಗೆ ವಾಹನಗಳನ್ನು ನೀಡಿದ್ದ ಪೋಷಕರಿಗೆ ಪೊಲೀಸರು ಭಾರಿ ಪ್ರಮಾಣದ ದಂಡ ವಿಧಿಸಿದ್ದರು. ಕೆಲವು ಪೋಷಕರನ್ನು ಜೈಲಿಗೂ ಸಹ ಕಳುಹಿಸಿದ್ದರು. ಅಪ್ರಾಪ್ತ ವಯಸ್ಕರು ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಿ ಅಪಘಾತಗಳು ಸಂಭವಿಸಿದರೆ ಯಾವುದೇ ವಿಮಾ ಪಾಲಿಸಿಯು ನೆರವಿಗೆ ಬರುವುದಿಲ್ಲ.

ಈ ಹಿಂದೆ ಅಪ್ರಾಪ್ತ ಮಕ್ಕಳಿಗೆ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡಲು ಅವಕಾಶ ನೀಡಿದ್ದ ಪೋಷಕರನ್ನು ಹೊಣೆಗಾರರನ್ನಾಗಿ ಮಾಡುವಂತೆನ್ಯಾಯಾಲಯಗಳು ಪೊಲೀಸರಿಗೆ ಸೂಚನೆ ನೀಡಿದ್ದವು.

ವಯೋ ವೃದ್ಧೆಗೆ ಗುದ್ದಿ ಪರಾರಿಯಾದ ಅಪ್ರಾಪ್ತ ವಯಸ್ಕ ಸ್ಕೂಟರ್ ಸವಾರ

ಭಾರತದಲ್ಲಿ ಚಾಲನಾ ಪರವಾನಗಿ ಪಡೆಯಲು 18 ವರ್ಷ ವಯಸ್ಸಾಗಿರ ಬೇಕು. ಆದರೆ ಅದಕ್ಕೂ ಮುನ್ನ ಖಾಸಗಿ ಸ್ಥಳಗಳಲ್ಲಿ ವಾಹನ ಚಾಲನೆ ಮಾಡುವುದನ್ನು ಕಲಿಯ ಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಕಾನೂನು ಬಾಹಿರ.

Most Read Articles

Kannada
English summary
Minor scooter rider hits old lady and escapes. Read in Kannada.
Story first published: Tuesday, July 27, 2021, 21:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X