ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !! ವಿಡಿಯೋ ನೋಡಿ

ನಮಗೆಲ್ಲರಿಗೂ ತಿಳಿದಿರುವಂತೆ ಆಂಬುಲೆನ್ಸ್ ಜೀವರಕ್ಷಕವಾಗಿ ಎಷ್ಟೋ ಮಂದಿ ಜನರ ಜೀವ ಉಳಿಸಿದೆ, ಆದ್ರೆ ಇಂತಹ ಆಂಬುಲೆನ್ಸ್ ಇಂದು ಮುಖ್ಯ ಉದ್ದೇಶ ಬಿಟ್ಟು ಬೇರೆಲ್ಲಾ ಕೆಲಸಗಳಿಗೆ ಉಪಯೋಗವಾಗುತ್ತಿರುವುದು ವಿಪರ್ಯಾಸ ಎನ್ನಬಹುದು.

By Girish

ನಮಗೆಲ್ಲರಿಗೂ ತಿಳಿದಿರುವಂತೆ ಆಂಬುಲೆನ್ಸ್ ಜೀವರಕ್ಷಕವಾಗಿ ಎಷ್ಟೋ ಮಂದಿ ಜನರ ಜೀವ ಉಳಿಸಿದೆ, ಆದ್ರೆ ಇಂತಹ ಆಂಬುಲೆನ್ಸ್ ಇಂದು ಮುಖ್ಯ ಉದ್ದೇಶ ಬಿಟ್ಟು ಬೇರೆಲ್ಲಾ ಕೆಲಸಗಳಿಗೆ ಉಪಯೋಗವಾಗುತ್ತಿರುವುದು ವಿಪರ್ಯಾಸ ಎನ್ನಬಹುದು.

ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !!

ಹೌದು, ಅಂಬುಲೆನ್ಸ್‌ನ ಸೈರನ್‌ ಕೇಳಿಸಿದ ತಕ್ಷಣ ನಾವೆಲ್ಲರೂ ನಮ್ಮ ರಸ್ತೆಯನ್ನು ಬಿಟ್ಟು ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಅನುಕೂಲ ಮಾಡಿಕೊಡುತ್ತೇವೆ, ಇದು ಸರ್ವೇಸಾಮಾನ್ಯವಾದ ಸಂಗತಿ. ಆದರೆ ಮುಂಬರುವ ದಿನಗಳಲ್ಲಿ ಆಂಬುಲೆನ್ಸ್ ಅನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ಬಂದೊದಗಿದೆ.

ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !!

ಕರ್ನಾಟಕ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಮತ್ತೊಂದು ಆ್ಯಂಬುಲೆನ್ಸ್‌ ದುರ್ಬಳಕೆ ಪ್ರಕರಣ ಬೆಳಕಿಗೆ ಬಂದಿದೆ. ಈ ದುರ್ಬಳಕೆ ಪ್ರಕರಣದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಹೆಚ್ಚು ಸದ್ದು ಮಾಡುತ್ತಿದೆ.

ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !!

ಸಾರ್ವಜನಿಕರ ಸಹಾನೂಭೂತಿಯನ್ನೇ ದುರುಪಯೋಗ ಪಡಿಸಿಕೊಂಡ ಕುಮಾರ್ ಹಾಸ್ಪಿಟಲ್ ಸಂಸ್ಥೆಗೆ ಸೇರಿದ ಆಂಬುಲೆನ್ಸ್‌ನ ಚಾಲಕನೊಬ್ಬನ ವಿರುದ್ಧ ಟ್ರಾಫಿಕ್‌ ಪೊಲೀಸರು ಕೆಂಡಾಮಂಡಲವಾದ ಘಟನೆ ಗುರುವಾರ ಮಲ್ಲೇಶ್ವರಂನಲ್ಲಿ ನಡೆದಿದೆ.

ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !!

ಮಲ್ಲೇಶ್ವರಂನ ಕುಮಾರ್ ಖಾಸಗಿ ಸಂಸ್ಥೆಗೆ ಸೇರಿದ ಆ್ಯಂಬುಲೆನ್ಸ್‌ ಇದಾಗಿದ್ದು, ಪರೀಕ್ಷೆ ಬರೆಯಲು ಹೊರಟಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಕೂರಿಸಿಕೊಂಡ ಆ್ಯಂಬುಲೆನ್ಸ್‌ ಚಾಲಕ ಸೈರನ್‌ ಹಾಕಿಕೊಂಡು ಪರೀಕ್ಷಾ ಕೇಂದ್ರದ ಕಡೆ ಸಂಚರಿಸುತ್ತಿದ್ದ ಎನ್ನಲಾಗಿದೆ.

ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !!

ಹೆಚ್ಚು ಸದ್ದು ಮಾಡುವ ಸೈರನ್‌ ಹಾಕಿಕೊಂಡು ಬರುತ್ತಿದ್ದ ಆಂಬುಲೆನ್ಸ್‌ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಇರುವುದು ಕಂಡು ಟ್ರಾಫಿಕ್‌ ಪೊಲೀಸರು ಪರಿಶೀಲನೆ ಮಾಡಿದಾದ ನಿಜ ಸಂಗತಿ ಹೊರಬಂದಿದೆ. ಈ ವೇಳೆ, ರೋಗಿ ಇಲ್ಲದೇ ಇದ್ದರೂ ಸೈರನ್‌ ಯಾಕೆ ಹಾಕುತ್ತಿದ್ದೀಯಾ? ಎಂದು ಸಾರ್ವಜನಿರಕ ಸಮ್ಮುಖದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಚಾಲಕನಿಗೆ 'ಎನೋ ಹುಡ್ಗೀರ್ನಾ ಕರ್ಕೊಂಡ್‌ ಹೋಗ್ಲಿಕ್ಕೆ ನಿನ್ಗೆ ಸೈರನ್‌ ಬೇಕಲ್ಲಾ...ಇನ್ನೆಲ್ಲಾದ್ರೂ ಹಿಂಗ್‌ ಮಾಡಿದ್ರೆ ಜೈಲ್‌ಗೇ ಕಳುಹಿಸ್ತೀನಿ ಹುಷಾರ್‌..' ಎಂದು ಎಚ್ಚರಿಕೆ ನೀಡಿದರು.

ರೋಗಿ ಬದಲು ಹೆಣ್ಣುಮಕ್ಕಳನ್ನು ಆಂಬುಲೆನ್ಸ್‌ನಲ್ಲಿ ಕೂರಿಸಿಕೊಂಡು ಬೆಂಗಳೂರು ಸುತ್ತಿದ ಭೂಪ !!

ನಂತರ, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರೂ ಸಹ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Most Read Articles

Kannada
English summary
An ambulance driver has been handed over to the police after he was found to have been misusing the siren to ferry students. This footage has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X