ಇಂಧನ ಕೊರತೆ ಹಿನ್ನೆಲೆ: ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಏರಿಕೆಯನ್ನು ಕಾಣುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಕರೋನಾ ವೈರಸ್‌ನಿಂದಾಗಿ ತತ್ತರಿಸಿರುವ ಜನರ ಮೇಲೆ ಮತ್ತೊಂದು ಬರೆಯನ್ನು ಎಳೆದಿದೆ.

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಜೊತೆಗೆ ವಾಹನಗಳ ಬಾಡಿಗೆ ಶುಲ್ಕವು ಸಹ ಹೆಚ್ಚುತ್ತದೆ. ಈಗ ದೇಶದಲ್ಲಿರುವ ರಾಜ್ಯ ಸರ್ಕಾರವೊಂದು ಪೆಟ್ರೋಲ್, ಡೀಸೆಲ್ ಸಂಗ್ರಹವನ್ನು ನಿಷೇಧಿಸಿದೆ. ಮಿಜೋರಾಂ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಸೊರಂ ಟಂಗಾ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ ಈ ಘೋಷಣೆ ಮಾಡಿದೆ. ಈ ರೀತಿಯ ಕ್ರಮಕ್ಕೆ ಮುಖ್ಯ ಕಾರಣ ಕರೋನಾ ವೈರಸ್.

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ದೇಶದಲ್ಲಿ ಕರೋನಾ ವೈರಸ್‌ನಿಂದಾಗಿ ಸುಮಾರು ಮೂರು ತಿಂಗಳಿಗೂ ಹೆಚ್ಚು ಕಾಲ ಬಹುತೇಕ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿದ್ದವು. ಇದರಿಂದಾಗಿ ದೇಶದ ಆರ್ಥಿಕತೆಯು ಹಲವು ವರ್ಷಗಳಷ್ಟು ಹಿಂದಕ್ಕೆ ಸರಿದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಲಾಕ್ ಡೌನ್ ನಿಂದಾಗಿ ಮಿಜೋರಾಂ ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಮಿಜೋರಾಂನಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ವಾಹನಗಳು ರಾಜ್ಯದಿಂದ ಹೊರ ಹೋಗುವುದನ್ನು ಹಾಗೂ ಒಳ ಬರುವುದನ್ನು ನಿಷೇಧಿಸಲಾಗಿದೆ.

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಇದರಿಂದಾಗಿ ಹಲವಾರು ಲಾರಿಗಳು ರಾಜ್ಯದ ಗಡಿ ಭಾಗದಲ್ಲಿ ಸಿಲುಕಿಕೊಂಡಿವೆ. ಇವುಗಳಲ್ಲಿ ಮಿಜೋರಾಂಗೆ ಪೆಟ್ರೋಲ್ ಡೀಸೆಲ್ ಸರಬರಾಜು ಮಾಡುವ ವಾಹನಗಳು ಸಹ ಸೇರಿಕೊಂಡಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಪೆಟ್ರೋಲ್, ಡೀಸೆಲ್ ಸರಬರಾಜು ಆಗದ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ಇಂಧನ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಮಿಜೋರಾಂ ಸರ್ಕಾರವು ಬ್ಯಾರೆಲ್‌ ಹಾಗೂ ಕ್ಯಾನ್ ಗಳಿಗೆ ಇಂಧನ ಮಾರಾಟ ಮಾಡುವುದನ್ನು ನಿಷೇಧಿಸಿದೆ.

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಇದರ ಜೊತೆಗೆ ವಾಹನಗಳಿಗೆ ಎಷ್ಟು ಲೀಟರ್ ಇಂಧನವನ್ನು ತುಂಬಬೇಕು ಎಂಬುದನ್ನು ಸಹ ನಿಗದಿಪಡಿಸಿದೆ. ಇದರಂತೆ ಸ್ಕೂಟರ್‌ಗಳಿಗೆ 3 ಲೀಟರ್ ಹಾಗೂ ಬೈಕ್‌ಗಳಿಗೆ 5 ಲೀಟರ್ ಎಂದು ನಿಗದಿಪಡಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಕಾರು ಹಾಗೂ ಟ್ರಕ್‌ಗಳಿಗೂ ಸಹ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಕಾರು ಹಾಗೂ ಲಘು ವಾಹನಗಳಿಗೆ 10 ಲೀಟರ್, ಸ್ವಲ್ಪ ದೊಡ್ಡ ವಾಹನಗಳಾದ ಮ್ಯಾಕ್ಸಿಕ್ಯಾಪ್, ಪಿಕ್-ಅಪ್ ಟ್ರಕ್ ಹಾಗೂ ಮಿನಿ ಟ್ರಕ್‌ಗಳಿಗೆ 20 ಲೀಟರ್, ಬಸ್ ಹಾಗೂ ಇನ್ನಿತರ ದೊಡ್ಡ ವಾಹನಗಳಿಗೆ 100 ಲೀಟರ್ ವರೆಗೆ ತುಂಬಿಸುವಂತೆ ಆದೇಶಿಸಲಾಗಿದೆ.

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಅಕ್ಕಿ, ಬೇಳೆಕಾಳುಗಳಂತಹ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಬಯಸಿದಷ್ಟು ಇಂಧನ ತುಂಬಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ಅಗತ್ಯವಸ್ತುಗಳ ಸರಬರಾಜಿನ ಮೇಲೆ ಯಾವುದೇ ಪರಿಣಾಮವಾಗಬಾರದು ಎಂಬುದು ಇದರ ಹಿಂದಿರುವ ಉದ್ದೇಶ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಯಾವುದೇ ಕಂಪನಿಯು ಪೆಟ್ರೋಲ್ ಅಥವಾ ಡೀಸೆಲ್ ಅನ್ನು ದೊಡ್ಡ ಡ್ರಮ್ ಹಾಗೂ ಕ್ಯಾನ್ ಗಳಲ್ಲಿ ಸಂಗ್ರಹಿಸಬಾರದು ಎಂದು ಸೂಚಿಸಲಾಗಿದೆ. ಇಂಧನ ಕೊರತೆ ಉಂಟಾಗಿರುವ ಕಾರಣಕ್ಕೆ ಮಿಜೋರಾಂನ ಹಲವು ಭಾಗಗಳಲ್ಲಿ ವಾಹನಗಳು ಕಿ.ಮೀಗಟ್ಟಲೇ ಸಾಲು ಗಟ್ಟಿ ನಿಲ್ಲುತ್ತಿವೆ.

ಇಂಧನ ಕೊರತೆ ಹಿನ್ನೆಲೆ, ಪೆಟ್ರೋಲ್ ಡೀಸೆಲ್ ಬಳಕೆಗೆ ಮಿತಿ ಹೇರಿದ ಸರ್ಕಾರ

ಹೆಚ್ಚಿನ ಸಂಖ್ಯೆಯ ಪೆಟ್ರೋಲ್ ಬಂಕ್ ಗಳು ಸ್ಟಾಕ್ ಇಲ್ಲ ಎಂಬ ಬೋರ್ಡ್ ಹಾಕಿವೆ ಎಂದು ಹೇಳಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ನಡುವೆ ಇಂಧನ ಕೊರತೆ ಉಂಟಾಗಿರುವುದು ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Mizoram Government fixes petrol diesel quantity for vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X