ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ರಂಗದವರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚಾಗೇ ಇರುತ್ತೆ. ಸಿನಿಮಾ ನಟಿಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸಿನಿಮಾ ಸೆಲಬ್ರಿಟಿಗಳಿಗೆ ಟ್ರೆಂಡ್ ಆಗಿದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಇತ್ತೀಚೆಗೆ ಮಲಯಾಳಂ ಚಿತ್ರರಂಗದ ಖ್ಯಾತ ಹಾಸ್ಯ ನಟ ಹರೀಶ್ ಕನರನ್ ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ಹಾಸ್ಯ ಪಾತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ನಟ ಹರೀಶ್ ಕನರನ್ ಬಹುಬೇಗ ಮಲಯಾಳಿಗಳ ಅಚ್ಚುಮೆಚ್ಚಿನವರಾದರು. ಹೊಸ ವಾಹನವನ್ನು ಖರೀದಿಸಿದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟ ಕುಟುಂಬದವರ ಜೊತೆ ತೆರಳಿ ಈ ಹೊಸ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಹೊಸ ಕಾರನ್ನು ವಿತರಣೆ ಪಡೆದುಕೊಳ್ಳುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಟ ಹರೀಶ್ ಹಂಚಿಕೊಂಡಿದ್ದಾರೆ. ಇದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ, ಜೀಪ್ ಲೈಫ್ ಮತ್ತು ನ್ಯೂಕಾರ್ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರಗಳ ಕೆಳಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಇದಕ್ಕೂ ಮೊದಲು, ನಟ ಜೀಪ್ ಕಂಪಾಸ್ ಹೊಂದಿದ್ದರು. ಹರೀಶ್ ಎರಡನೇ ಬಾರಿ ಕಂಪಾಸ್ ಎಸ್‍ಯುವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮೊದಲ ಜೀಪ್ ಕಂಪಾಸ್ ಅನ್ನು ಹರೀಶ್ ಅವರು 2018 ರಲ್ಲಿ ಖರೀದಿಸಿದ್ದರು. ಈಗ ಹೊಸದಾಗಿ ಖರೀದಿಸಿದ ಜೀಪ್ ಕಂಪಾಸ್ ಎಸ್‍ಯುವಿಯು ಹಲವು ನವೀಕರಣಗಳನ್ನು ಪಡೆದುಕೊಂಡ ಫೇಸ್‌ಲಿಫ್ಟ್ ಮಾದರಿಯಾಗಿದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ನಟ ಹರೀಶ್ ಕನರನ್ ಖರೀದಿಸಿದ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಜೀಪ್ ಕಂಪನಿಯು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಿತು. ಈ ಹೊಸ ಜೀಪ್ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಆಂತರಿಕ ಮತ್ತು ಬಾಹ್ಯ ನವೀಕರಣಗಳೊಂದಿಗೆ ಪರಿಚಯಿಸಿದ್ದರು.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಈ ಹೊಸ ಜೀಪ್ ಕಂಪಾಸ್ ಎಸ್‍ಯುವಿಯು ಸ್ಪೋರ್ಟ್ಸ್, ಲಾಂಗಿಟ್ಯೂಡ್, ಲಿಮಿಟೆಡ್, ಲಿಮಿಟೆಡ್ (ಒ),ಮತ್ತು ಹೊಸದಾಗಿ ಸೇರಿಸಲಾದ ಟಾಪ್-ಎಂಡ್ ಮಾಡೆಲ್ ಎಸ್ ಎಂಬ ವೆರಿಯೆಂಟ್ ಗಳಲ್ಲಿ ಲಭ್ಯವಿದೆ. ಮೂರು ವರ್ಷಗಳ ಬಳಿಕ ಜೀಪ್ ಕಂಪಾಸ್ ಮಿಡ್-ಲೈಫ್ ನವೀಕರಣವನ್ನು ಪಡೆದುಕೊಂಡಿತ್ತು,

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಂಡ 2021ರ ಜೀಪ್ ಕಂಪಾಸ್ ಎಸ್‍ಯುವಿಯ ವಿನ್ಯಾಸದ ಬಗ್ಗೆ ಹೇಳುದಾದರೆ, ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದ್ದರೆ, ಫೀಚರ್ ಗಳ ವಿಭಾಗದಲ್ಲಿ ಗಣನೀಯ ನವೀಕರಣಗಳನ್ನು ಪಡೆದುಕೊಂಡಿದೆ. ಹೊರಗಿನ ನವೀಕರಣಗಳು ಹತ್ತಿರದಿಂದ ಗಮನಿಸಿದರೆ ಮಾತ್ರ ತಿಳಿದುಬರುತ್ತದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಈ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯ ಒಳಭಾಗದಲ್ಲಿ ಸೂಕ್ಷ್ಮ ನವೀಕರಣಗಳು ಮತ್ತು ಬದಲಾವಣೆಗಳನ್ನು ಒಳಗೊಂಡಿದೆ. ಜೀಪ್ ಕಂಪಾಸ್‌ನ ಕ್ಯಾಬಿನ್ ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ. ಈ ಎಸ್‍ಯುವಿಯ ಒಳಭಾಗದಲ್ಲಿ ಹಲವಾರು ಪ್ರೀಮಿಯಂ ಫೀಚರ್ ಗಳನ್ನು ಒಳಗೊಂಡಿವೆ. ಇದರಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆಯೊಂದಿಗೆ 10.1-ಇಂಚಿನ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಂ ಹೊಂದಿರುವ ಎಫ್‌ಸಿಎಯ ಹೊಸ ಯುಕನೆಕ್ಟ್ 5 ತಂತ್ರಜ್ಞಾನವನ್ನು ಒಳಗೊಂಡಿದೆ. ಇದ್ದರಿಂದ ಇದು ಈಗ ವಾಯ್ಸ್ ಕಮಾಂಡ್ ಅಸಿಸ್ಟ್ ಮತ್ತು ಓವರ್-ದಿ-ಏರ್ (ಒಟಿಎ) ಅಪ್‌ಡೇಟ್‌ ಫೀಚರ್ ಗಳನ್ನು ಒಳಗೊಂಡಿವೆ. ಹಿಲ್ ಅಸಿಸ್ಟ್ (ಎಚ್‌ಎ) ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಎಂಬ ಮೋಡ್ ಗಳನ್ನು ಈ ಕಂಪಾಸ್ ಫೇಸ್‌ಲಿಫ್ಟ್ ಎಸ್‍ಯುವಿಯು ಪಡೆದುಕೊಂಡಿದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಇನ್ನು ಜೀಪ್ ಕಂಪನಿಯು ಕಂಪಾಸ್ ಮಾಡೆಲ್ ಎಸ್ ವೆರಿಯಂಟ್ ಅನ್ನು ಇತ್ತೀಚೆಗೆ ನವೀಕರಿಸಿದೆ. ಈ ವೆರಿಯೆಂಟ್ ನಲ್ಲಿ ಹೊಸ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಆಟೋಮ್ಯಾಟಿಕ್ ವೆಂಟಿಲೇಟೆಡ್ ಡ್ರೈವರ್ ಸೀಟ್‌ನೊಂದಿಗೆ ನವೀಕರಿಸಿದ್ದಾರೆ. ಈ ಮಾಡೆಲ್ ಎಸ್ (ಒ 2) ವೆರಿಯೆಂಟ್ ಐದನೇ ತಲೆಮಾರಿನ ಆರ್ 1 ಹೈ 10.1 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಪಡೆಯುತ್ತದೆ. ಇದು ಈಗ ನ್ಯಾವಿಗೇಷನ್ ಸಿಸ್ಟಂ ಜೊತೆಗೆ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಹೊಂದಿಕೊಳ್ಳುತ್ತದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಜೊತೆಗೆ ಫೋನ್, ಮೀಡಿಯಾ, ರೇಡಿಯೋ, ಕ್ಲೈಮೇಂಟ್ ಕಂಟ್ರೋಲ್ ಮತ್ತು ಸಂಚರಣೆಗಳ ಹ್ಯಾಂಡ್ಸ್-ಫ್ರೀ ಕಾರ್ಯಾಚರಣೆಗಾಗಿ ಯುನಿಟ್ ವಾಯ್ಸ್ ಕಾಮೆಂಡ್ ಗಳನ್ನು ಬೆಂಬಲಿಸುತ್ತದೆ.ಈ ಹೊಸ ಇನ್ಫೋಟೈನ್‌ಮೆಂಟ್ ಯುನಿಟ್ 6 ಜಿಬಿ RAM ಮತ್ತು 40 ಕೆ ಎಂಐಪಿಎಸ್ ಚಿಪ್‌ಸೆಟ್‌ನೊಂದಿಗೆ ಬರುತ್ತದೆ, ಇದು ಹಳೆಯ ಯುನಿಟ್ ಗಿಂತ ವೇಗವಾಗಿದೆ ಎಂದು ಹೇಳಲಾಗಿದೆ. ಮಾಡೆಲ್ ಎಸ್ ವೆರಿಯೆಂಟ್ O2) ಕ್ಯಾಬಿನ್ ತಾಪಮಾನ 26.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾದಾಗ ಆನ್ ಆಗುವ ಆಟೋಮ್ಯಾಟಿಕ್ ವೆಂಟಿಲೇಟೆಡ್ ಡ್ರೈವರ್ ಸೀಟ್‌ ಅನ್ನು ಪಡೆದುಕೊಂಡಿದೆ.

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಹೊಸ ಜೀಪ್ ಕಂಪಾಸ್ ಎಸ್‍ಯುವಿಯಲ್ಲಿ ಹೊಸದಾಗಿ 1.4 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಕೂಡ ಅಳವಡಿಸಲಾಗಿದೆ. ಇದರಲ್ಲಿ 1.4 ಲೀಟರ್ ಟರ್ಬೊ-ಪೆಟ್ರೋಲ್ 163 ಬಿಹೆಚ್‌ಪಿ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಿದರೆ, 2.0 ಲೀಟರ್ ಡೀಸೆಲ್ ಎಂಜಿನ್ 173 ಬಿಹೆಚ್‌ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ,

ಐಷಾರಾಮಿ ಜೀಪ್ ಕಂಪಾಸ್ ಎಸ್‍ಯುವಿ ಖರೀದಿಸಿದ ಖ್ಯಾತ ಹಾಸ್ಯ ನಟ

ಈ ಎರಡು ಎಂಜಿನ್‌ಗಳು ಸ್ಟ್ಯಾಂಡರ್ಡ್‌ ಆಗಿ ಆರು-ಸ್ಪೀಡ್ ಮ್ಯಾನ್ಯುವಲ್‌ ಗೇರ್ ಬಾಕ್ಸ್ ನೊಂದಿಗೆ ಬರುತ್ತವೆ. ಕಂಪಾಸ್ ಪೆಟ್ರೋಲ್ ಏಳು-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆಯುತ್ತದೆ ಮತ್ತು ಡೀಸೆಲ್ ಒಂಬತ್ತು-ಸ್ಪೀಡ್ ಟಾರ್ಕ್ ಕರ್ನವಾಟರ್ ಆಯ್ಕೆಯನ್ನು ಪಡೆಯುತ್ತದೆ. ಇನ್ನು ಜೀಪ್ ಕಂಪನಿಯು ಹೊಸ 7-ಸೀಟರ್ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಜೀಪ್ ಮೆರಿಡಿಯನ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಿದೆ, ಭಾರತದಲ್ಲಿ ಈ ಎಸ್‍ಯುವಿಯು 2022ರ ಮಧ್ಯದಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
Mollywood actor hareesh kanaran bought new jeep compass suv details
Story first published: Tuesday, December 7, 2021, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X