ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಮಲಯಾಳಂ ಸಿನಿಮಾರಂಗದ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ ಕಾರನ್ನು ಖರೀದಿಸಿದ್ದಾರೆ. 1980ರ ದಶಕದಿಂದಲೂ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ನಟ ಮೋಹನ್ ಲಾಲ್ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡು ಮಿಂಚುತ್ತಿದ್ದಾರೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ನಟ ಮೋಹನ್ ಲಾಲ್ ಅವರಿಗೆ ಕೇರಳದಲ್ಲಿ ಮಾತವಲ್ಲದೇ ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಮೋಹನ್​ಲಾಲ್​ ಸಿನಿಮಾ ಎಂದರೆ ಜನರು ಮುಗಿಬಿದ್ದು ವೀಕ್ಷಿಸುತ್ತಾರೆ. ಇವರ ಲೂಸಿಫರ್ ಬಾಕ್ಸಾಫೀಸ್ ಕೊಳ್ಳೆಹೊಡೆದ ಸೂಪರ್ ಹಿಟ್ ಚಿತ್ರವಾಗಿದೆ. ಇನ್ನು ಇವರ ದೃಶ್ಯಂ 2 ಕೂಡ ಸೂಪರ್ ಹಿಟ್ ಚಿತ್ರವಾಗಿದೆ. ಇಷ್ಟೇ ಅಲ್ಲದೇ ಇವರು ಗಾಯಕ ಹಾಗೂ ನಿರೂಪಕರಾಗಿ ಸಿನಿರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಟ ಮೋಹನ್ ಲಾಲ್ ತಮ್ಮ ಅಭಿನಯದಿಂದಲೇ ಮಲಯಾಳಂ ಮಾತ್ರವಲ್ಲದೆ ಇತರೆ ಭಾಷೆಯ ಸಿನಿ ರಸಿಕರ ಮನಗೆದ್ದಿದ್ದಾರೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಇನ್ನು ನಟ ಮೋಹನ್ ಲಾಲ್ ಅವರು ಬಳಿ ಈ ಮೊದಲೇ ಇನ್ನೋವಾ ಕಾರನ್ನು ಬಳಸುತ್ತಿದ್ದಾರೆ. . ಆದ್ದರಿಂದ, ಇದನ್ನು ಮೊದಲ ಇನ್ನೋವಾ ಎಂದು ಹೇಳಲು ಸಾಧ್ಯವಿಲ್ಲ, ಇನ್ನು ಟೊಯೊಟಾ ಕಂಪನಿಯ ಐಷಾರಾಮಿ ವಾಹನ ವೆಲ್‌ಫೇರ್ ಅನ್ನು ಮೋಹನ್ ಲಾಲ್ ಅವರು ಹೊಂದಿದ್ದಾರೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಇನ್ನು ನಟ ಮೋಹನ್ ಲಾಲ್ ಅವರು ಖರೀದಿಸಿದ ಇನೋವಾ ಕ್ರಿಸ್ಟಾ ಬಗ್ಗೆ ಹೇಳುವುದಾದರೆ, ಇದು ವಾಹನವು ಜಿಎಕ್ಸ್, ವಿಎಕ್ಸ್ ಮತ್ತು ಜೆಡ್ಎಕ್ಸ್ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಈ ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಕ್ರೊಮ್ ಸೌಲಭ್ಯ ಹೊಂದಿರುವ ಪಿಯಾನೊ ಬ್ಲ್ಯಾಕ್ ಬಣ್ಣದ ಟ್ರಾಪೆಜೊಡಿಯಲ್ ಫ್ರಂಟ್ ಗ್ರಿಲ್ ಮತ್ತು ಹೊಸ ವಿನ್ಯಾಸ ಫ್ರಂಟ್ ಬಂಪರ್ ಪ್ರಮುಖ ಆಕರ್ಷಣೆಯಾಗಿದೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಇನ್ನು ಈ ಕಾರಿನಲ್ಲಿ ಅಂಡ್ರಾಯಿಡ್ ಆಟೋ ಮತ್ತು ಆಟೋ ಕಾರ್‌ಪ್ಲೇ ಸರ್ಪೋಟ್ ಮಾಡುವ ಸ್ಮಾರ್ಟ್ ಪ್ಲೇಕಾಸ್ಟ್ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿದೆ. ಟಾಪ್ ಎಂಡ್ ಮಾದರಿಯಾದ ಜೆಡ್ಎಕ್ಸ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಕ್ಯಾಮೆಲ್ ಟಾನ್ ಕಲರ್ ಲೆದರ್ ಸೀಟುಗಳನ್ನು ನೀಡಿರುವುದು ಪ್ರೀಮಿಯಂ ಲುಕ್ ಹೆಚ್ಚಿಸಿದೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಇನೋವಾ ಕ್ರಿಸ್ಟಾ ಫೇಸ್‌ಲಿಫ್ಟ್ ಕಾರಿನಲ್ಲಿ ಟೊಯೊಟಾ ಕಂಪನಿಯು ಹಲವು ಹೊಸ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಹೊಸ ಕಾರಿನಲ್ಲಿ ಪ್ರಮುಖ ಬದಲಾವಣೆಗಾಗಿ ಕ್ರೊಮ್ ಸೌಲಭ್ಯ ಹೊಂದಿರುವ ಪಿಯಾನೊ ಬ್ಲ್ಯಾಕ್ ಬಣ್ಣದ ಟ್ರಾಪೆಜೊಡಿಯಲ್ ಫ್ರಂಟ್ ಗ್ರಿಲ್ ಮತ್ತು ಹೊಸ ವಿನ್ಯಾಸ ಫ್ರಂಟ್ ಬಂಪರ್ ಪ್ರಮುಖ ಆಕರ್ಷಣೆಯಾಗಿದೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಹಾಗೆಯೇ ಹೊಸ ಕಾರಿನಲ್ಲಿ ಬ್ಯಾನೆಟ್ ಹೊಂದಿಕೊಂಡಂತೆ ಫ್ರಂಟ್ ಗ್ರಿಲ್‌ನೊಳಗೆ ಸೇರ್ಪಡೆಯಾಗಿರುವ ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್, ಡೈಮಂಡ್ ಕಟ್ ಅಲಾಯ್ ವೀಲ್ಹ್ ಮತ್ತು ಹೊಸದಾದ ಬಣ್ಣದ ಆಯ್ಕೆ ಪಡೆದುಕೊಂಡಿದ್ದು, ಹೊಸ ಬಣ್ಣದ ಆಯ್ಕೆಯನ್ನು ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್ ಎಂದು ಹೆಸರಿಸಿದೆ. ಇದು ಕಾರಿನ ಪ್ರೀಮಿಯಂ ಸೌಲಭ್ಯಗಳಿಗೆ ಪೂರಕವಾದ ಹೊಸ ಬಣ್ಣ ಆಯ್ಕೆಯಾಗಿದ್ದು, ಹೊರಭಾಗದಂತೆ ಒಳಭಾಗದಲ್ಲೂ ಪ್ರಮುಖ ಬದಲಾವಣೆಗಳಾಗಿವೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಇನ್ನು ಈ ಕಾರಿನಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದೆ. ಹೊಸ ಎಮಿಷನ್ ನಂತರ 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿರುವ ಟೊಯೊಟಾ ಕಂಪನಿಯು 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಮಾತ್ರ ಮಾರಾಟ ಮಾಡುತ್ತಿದೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಪ್ರತಿ ವೆರಿಯೆಂಟ್‌ನಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಲಭ್ಯವಿದೆ.2.7-ಲೀಟರ್ ಪೆಟ್ರೋಲ್ ಮಾದರಿಯು 164-ಬಿಎಚ್‌ಪಿ, 245-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ 2.4-ಲೀಟರ್ ಡೀಸೆಲ್ ಎಂಜಿನ್ ಮಾದರಿಯು 160-ಬಿಎಚ್‌ಪಿ, 360-ಎನ್ಎಂ ಟಾರ್ಕ್ ಉತ್ಪಾಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಇಂಧನ ದಕ್ಷತೆಯಲ್ಲೂ ಸುಧಾರಣೆ ಕಂಡಿದೆ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಇನ್ನು ಭಾರತದಲ್ಲಿ ವರ್ಚುವಲ್ ಶೋರೂಂಗಳು ಗ್ರಾಹಕರಿಗೆ ನೇರವಾಗಿ ಶೋರೂಂ ಭೇಟಿಯಾದ ಅನುಭವವನ್ನೇ ನೀಡಲಿದ್ದು, ಹೊಸ ಮಾರಾಟ ಸೌಲಭ್ಯಕ್ಕೆ ಟೊಯೊಟಾ ಇಂಡಿಯಾ ಕಂಪನಿಯು ಕೂಡಾ ಇತ್ತೀಚೆಗೆ ಚಾಲನೆ ನೀಡಿದೆ. ಹೊಸ ವಾಹನಗಳಿಗಾಗಿ ಟೊಯೊಟಾ ಕಂಪನಿಯು ಪ್ರತ್ಯೇಕ ವೆಬ್‌ತಾಣವನ್ನು ತೆರೆದಿದ.

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ಕಾರು ಖರೀದಿದಾರರು ತಮ್ಮ ಇಷ್ಟದ ವಾಹನಗಳ ಬಗೆಗೆ ತಿಳಿದುಕೊಳ್ಳಲು ಶೋರೂಂಗೆ ನೇರ ಭೇಟಿ ನೀಡದೆ ಮನೆಯಲ್ಲೇ ಕುಳಿತು ಶೋರೂಂ ಮಾದರಿಯಲ್ಲೇ ವರ್ಚುವಲ್ ಶೋರೂಂ ಅನ್ನು ವೀಕ್ಷಿಸಿಬಹುದಾಗಿದೆ. 3ಡಿ ತಂತ್ರಜ್ಞಾನದ ಮೂಲಕ ನೀವು ಆಯ್ದಕೊಳ್ಳುವ ಕಾರಿನ ಸಂಪೂರ್ಣ ಮಾಹಿತಿಯನ್ನು ಪ್ರಸ್ತುತಪಡಿಸುತ್ತದೆ. ಇದು 360 ಡಿಗ್ರಿ ಮಾದರಿಯಲ್ಲಿ ಹೊಸ ಕಾರನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಬಹುದು,

ಹೊಸ Toyota Innova Crysta ಕಾರು ಖರೀದಿಸಿದ ನಟ ಮೋಹನ್ ಲಾಲ್

ವರ್ಚುವಲ್ ಶೋರೂಂನಲ್ಲಿ ಟೊಯೊಟಾ ನಿರ್ಮಾಣದ ಎಲ್ಲಾ ಕಾರು ಮಾದರಿಗಳು ವೀಕ್ಷಣೆಗೆ ಲಭ್ಯವಿದ್ದು, ಹೊಸ ವರ್ಚುವಲ್ ಪ್ಲ್ಯಾಟ್‌ಫಾರ್ಮ್ ಸದ್ಯ ಕೋವಿಡ್ ವೈರಸ್ ಪರಿಣಾಮ ಗ್ರಾಹಕರಿಗೂ ಮತ್ತು ಶೋರೂಂ ಸಿಬ್ಬಂದಿಯ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಕ್ರಮವಾಗಿದೆ.ಹೊಸ ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟವನ್ನು ಕೈಗೊಳ್ಳುತ್ತಿರುವ ಆಟೋ ಕಂಪನಿಗಳು ಸೋಂಕು ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ಇದರಿಂದ ವಾಹನ ಖರೀದಿಗೆ ಸುಲಭವಾಗುವಂತೆ ಆನ್‌ಲೈನ್ ವಾಹನ ಮಾರಾಟ ಮಳಿಗೆಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

Most Read Articles

Kannada
English summary
Mollywood superstar mohanlal bought new toyota innova crysta mpv details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X