ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

By Manoj Bk

ಜನರು ಯಾವುದಾದರೂ ಕಾರುಗಳನ್ನು ನೋಡಿದಾಗ ಆ ಕಾರು ಯಾವ ಕಂಪನಿಗೆ ಸೇರಿದ್ದು, ಆ ಕಾರಿನ ಮಾದರಿ ಯಾವುದು, ಆ ಕಾರಿನಲ್ಲಿ ಯಾವ ಯಾವ ಬಿಡಿ ಭಾಗಗಳನ್ನು ಅಳವಡಿಸಲಾಗಿದೆ ಎಂಬುದನ್ನು ಗಮನಿಸುತ್ತಾರೆ. ಆದರೆ ಬಹುತೇಕ ಬಾರಿ ಜನರು ಆ ಕಾರುಗಳಲ್ಲಿರುವ ಟಯರ್‌ಗಳನ್ನು ಗಮನಿಸುವುದಿಲ್ಲ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಕಾರು ಸೇರಿದಂತೆ ಯಾವುದೇ ವಾಹನವಿರಲಿ ಆ ವಾಹನಕ್ಕೆ ಟಯರುಗಳು ಬಹಳ ಮುಖ್ಯ. ಟಯರ್‌ಗಳಲ್ಲಿ ಏನಾದರೂ ಸಮಸ್ಯೆ ಕಂಡು ಬಂದರೆ ಮಾತ್ರ ವಾಹನ ಮಾಲೀಕರು ಅವುಗಳ ಬಗ್ಗೆ ಗಮನ ಹರಿಸುತ್ತಾರೆ. ಇಲ್ಲವಾದರೆ ಅವರ ಗಮನ ಟಯರ್‌ಗಳತ್ತ ಹೋಗುವುದಿಲ್ಲ. ಆದರೆ ತಂಡವೊಂದು ಟಯರ್‌ಗಳ ಮೇಲೆಯೇ ಗಮನ ಹರಿಸುತ್ತಿದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಈ ತಂಡವು ಪರಿಸರ ಕಾರ್ಯಕರ್ತರನ್ನು ಒಳಗೊಂಡಿದೆ. ಕೇವಲ ಅಮೆರಿಕಾದಲ್ಲಿಯೇ ಪ್ರತಿ ವರ್ಷ 300 ಮಿಲಿಯನ್ ಬಳಸಿದ ಟಯರ್‌ಗಳನ್ನು ಬಿಸಾಕಲಾಗುತ್ತದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಇಷ್ಟು ಭಾರೀ ಸಂಖ್ಯೆಯ ಟಯರುಗಳು ಎಲ್ಲಿಗೆ ಹೋಗುತ್ತವೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಹೀಗೆ ಬಳಸಿ ಬಿಸಾಕುವ ಹಳೆಯ ಟಯರ್‌ಗಳನ್ನು ಕೆಲವು ದೊಡ್ಡ ಪ್ರದೇಶಗಳಲ್ಲಿ ರಾಶಿ ಹಾಕಲಾಗುತ್ತದೆ. ಅಥವಾ ಕೆಲವೊಮ್ಮೆ ಸುಟ್ಟು ಹಾಕಲಾಗುತ್ತದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಇವೆರಡೂ ಕಾರ್ಯಗಳು ಪರಿಸರಕ್ಕೆ ಹಾನಿ ಕಾರಕವೆಂದು ಪರಿಸರ ಕಾರ್ಯಕರ್ತರು ಅಭಿಪ್ರಾಯ ಪಡುತ್ತಾರೆ. ಟಯರ್‌ಗಳನ್ನು ಸುಡುವುದರಿಂದ ಪರಿಸರಕ್ಕೆ ಹಾನಿಕಾರಕವಾದ ಅನಿಲಗಳು ಬಿಡುಗಡೆಯಾಗುತ್ತವೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಟಯರ್‌ಗಳು ಸುಲಭವಾಗಿ ಕೊಳೆಯುವುದಿಲ್ಲವಾದ್ದರಿಂದ ಅವುಗಳನ್ನು ದೊಡ್ಡ ಪ್ರದೇಶಗಳಲ್ಲಿ ರಾಶಿ ಹಾಕುವುದು ಸಹ ಹಾನಿಕಾರಕವಾಗಿದೆ. ಹಾಗೆಯೇ ಅವುಗಳನ್ನು ಇರಿಸಲು ದೊಡ್ಡ ಜಾಗವನ್ನು ಪತ್ತೆ ಹಚ್ಚುವುದು ಸಹ ಒಂದು ಸಮಸ್ಯೆಯಾಗಿದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಹಳೆಯ ಟಯರುಗಳು ಇಲಿಗಳು ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿ ಪರಿಣಮಿಸುತ್ತವೆ. ಇದು ರೋಗದ ಹರಡುವಿಕೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆಕಾರಣವಾಗಬಹುದು. ಹಿಂದಿನ ಕಾಲದಲ್ಲಿ ಹಳೆಯ ಟಯರುಗಳ ರಾಶಿಯು ಹಳೆಯ ಪರ್ವತಗಳಂತೆ ಕಂಡು ಬರುತ್ತಿದ್ದವು.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಇದು ಪರಿಸರಕ್ಕೆ ವಿವಿಧ ಸಮಸ್ಯೆಗಳನ್ನು ಉಂಟು ಮಾಡುತ್ತಿತ್ತು. ಆದರೆ ಈಗ ಸುಮಾರು 90% ನಷ್ಟು ಹಳೆಯ ಟಯರ್‌ಗಳನ್ನು ಯಶಸ್ವಿಯಾಗಿ ಮರುಬಳಕೆ ಮಾಡಲಾಗುತ್ತದೆ. ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಸುಮಾರು 240 ಮಿಲಿಯನ್ ಹಳೆಯ ಟಯರ್‌ಗಳನ್ನು ಮರುಬಳಕೆ ಮಾಡಲಾಗುತ್ತದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಜನರು ಹೊಸ ಟಯರ್‌ಗಳನ್ನು ಖರೀದಿಸಿದಾಗ ಅವರಿಂದ ಹಳೆಯ ಟಯರ್‌ಗಳನ್ನು ಸಂಗ್ರಹಿಸಲಾಗುತ್ತದೆ. ನಂತರ ಅವುಗಳನ್ನು ಮರುಬಳಕೆ ಮಾಡಲಾಗುತ್ತದೆ. ಟಯರ್‌ಗಳನ್ನು ಮರು ಬಳಕೆ ಘಟಕಗಳಿಗೆ ಕಳುಹಿಸಲಾಗುತ್ತದೆ. ನಂತರ ಇತರ ಹೊಸ ವಸ್ತುಗಳನ್ನು ತಯಾರಿಸಲಾಗುತ್ತದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಮರು ಬಳಕೆ ಟಯರುಗಳ ಮೂಲಕ ಲಭ್ಯವಾಗುವ ವಸ್ತುಗಳಿಂದ 100 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಟಯರ್‌ಗಳನ್ನು ಮರು ಬಳಕೆ ಮಾಡಿ ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಹಳೆಯ ಟಯರುಗಳನ್ನು ಮರು ಬಳಕೆ ಮಾಡುವ ಹಾಗೂ ಅವುಗಳಿಂದ ರಸ್ತೆ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳುವ ತಂತ್ರಜ್ಞಾನವು ಈಗ ಸದ್ಯಕ್ಕೆ ಇಂಗ್ಲೆಂಡ್ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಕೆಲವು ದೇಶಗಳಲ್ಲಿ ಹಳೆಯ ಟಯರುಗಳನ್ನು ಶಕ್ತಿಯನ್ನು ಉತ್ಪಾದಿಸಲು ಪರ್ಯಾಯ ಇಂಧನವಾಗಿ ಬಳಸಲಾಗುತ್ತದೆ.

ಮರು ಬಳಕೆಯಾಗುತ್ತಿವೆ 90% ಗೂ ಹೆಚ್ಚು ಹಳೆಯ ಟಯರ್‌ಗಳು

ಹಳೆಯ ಟಯರುಗಳು ಕಲ್ಲಿದ್ದಲುಗಿಂತ 25% ನಷ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇದು ಸಹ ಪರಿಸರಕ್ಕೆ ಹಾನಿಕಾರಕ ಎಂಬುದು ಗಮನಾರ್ಹ. ಇದೇ ವೇಳೆ ಕೆಲವರು ತಮ್ಮ ಹಳೆಯ ಟಯರ್‌ಗಳನ್ನು ಹೊಸ ರೀತಿಯಲ್ಲಿ ಬಳಸುತ್ತಿದ್ದಾರೆ. ಅಂದರೆ ಹಳೆಯ ಟಯರುಗಳಿಗೆ ಬಣ್ಣ ಬಳಿಯುವುದು, ಹೋಂ ಗಾರ್ಡನಿಂಗ್'ನಲ್ಲಿ ಬಳಸುವುದು ಸೇರಿದಂತೆ ಹಲವು ರೀತಿಯಲ್ಲಿ ಮರು ಬಳಕೆ ಮಾಡುತ್ತಿದ್ದಾರೆ.

Most Read Articles

Kannada
English summary
More than Ninety percent used tyres are being reused. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X