ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಭಾರತವೂ ಸೇರಿದಂತೆ ವಿಶ್ವದಾದ್ಯಂತ ಜನರು ಕರೋನಾ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳತ್ತ ಮುಖ ಮಾಡಿದ್ದಾರೆ. ಆದರೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಜನರನ್ನು ಲಸಿಕಾ ಕೇಂದ್ರಗಳತ್ತ ಕರೆ ತರಲು ರಷ್ಯಾ ಸರ್ಕಾರವು ಹೊಸ ಮಾರ್ಗವನ್ನು ಹುಡುಕಿದೆ. ಕೋವಿಡ್ 19 ಲಸಿಕೆ ಪಡೆಯುವವರಿಗೆ ಮಾಸ್ಕೋ ಮೇಯರ್ ಉಚಿತ ಕಾರು ನೀಡುವುದಾಗಿ ಘೋಷಿಸಿದ್ದಾರೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಮಾಸ್ಕೋದಲ್ಲಿ ಲಸಿಕೆ ಪಡೆಯುವವರ ಪ್ರಮಾಣ ತೀರಾ ಕಡಿಮೆ ಸಂಖ್ಯೆಯಲ್ಲಿದೆ. ಈ ಬಗ್ಗೆ ರಷ್ಯಾ ಸರ್ಕಾರವು ಕಳವಳ ವ್ಯಕ್ತಪಡಿಸಿದೆ. ಮಾಸ್ಕೋದಲ್ಲಿ 1.2 ಮಿಲಿಯನ್ ಜನಸಂಖ್ಯೆ ಇದ್ದು, ಕೇವಲ ಒಂದು ಮಿಲಿಯನ್ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಇಂತಹ ಸಂದರ್ಭದಲ್ಲಿ ಜನರನ್ನು ಲಸಿಕೆ ಪಡೆಯುವಂತ ಉತ್ತೇಜಿಸಲು ಮಾಸ್ಕೋ ಮೇಯರ್ ಉಚಿತ ಕಾರು ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯನ್ವಯ ಲಸಿಕೆ ಪಡೆದ ನಂತರ ಜನರು ಕಾರು ಪಡೆಯಲು ಅರ್ಹರಾಗುತ್ತಾರೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಕರೋನಾ ಲಸಿಕೆ ಪಡೆದ 18 ವರ್ಷ ಮೇಲ್ಪಟ್ಟವರು ಈ ಯೋಜನೆಯನ್ವಯ ಕಾರು ಪಡೆಯಲು ಅರ್ಹರಾಗುತ್ತಾರೆ. ಲಸಿಕೆ ಪಡೆಯುವ ಜನರಿಗಾಗಿ ಲಕ್ಕಿ ಡ್ರಾಆಯೋಜಿಸಲಾಗುವುದು.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಈ ಲಕ್ಕಿ ಡ್ರಾದಲ್ಲಿ ಕಾರಿನ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ. ಕರೋನಾ ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳುವ ಜನರಿಗಾಗಿ ಜುಲೈ 11ರವರೆಗೆ ಈ ಲಕ್ಕಿ ಡ್ರಾ ಯೋಜನೆಯನ್ನು ನಡೆಸಲಾಗುತ್ತದೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಕಾರು ಪಡೆಯುವ ಆಸೆಯಿಂದಲಾದರೂ ಜನರು ಲಸಿಕೆ ಪಡೆಯಲು ತಮ್ಮ ಮನೆಗಳಿಂದ ಹೊರಬರುತ್ತಾರೆ ಎಂಬುದು ಅಲ್ಲಿನ ಸರ್ಕಾರದ ಆಶಾ ಭಾವನೆ. ಇದರಿಂದ ಲಸಿಕೆ ಗುರಿಯನ್ನು ಸಮಯಕ್ಕೆ ಪೂರೈಸಲಾಗುವುದು ಎಂದು ಮಾಸ್ಕೋ ಮೇಯರ್ ಆಶಿಸಿದ್ದಾರೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಮಾಸ್ಕೋದಲ್ಲಿ ಕೋವಿಡ್ 19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಾಸ್ಕೋ ನಗರವು ಕರೋನಾ ವೈರಸ್'ನಿಂದ ತತ್ತರಿಸಿದೆ. ಭಾನುವಾರ ಮಾಸ್ಕೋದಲ್ಲಿ ಒಟ್ಟು 7,704 ಹೊಸ ಪ್ರಕರಣಗಳು ವರದಿಯಾಗಿವೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ಈ ಪ್ರಮಾಣವು ರಷ್ಯಾದಲ್ಲಿ ಒಂದೇ ದಿನ ದಾಖಲಾದ ಅತಿ ಹೆಚ್ಚು ಪ್ರಕರಣಗಳ ಸಂಖ್ಯೆಯಾಗಿದೆ. ಇದೇ ವೇಳೆ ರಷ್ಯಾದಾದ್ಯಂತ ಭಾನುವಾರ 14,723 ಹೊಸ ಕರೋನಾ ಪ್ರಕರಣಗಳು ವರದಿಯಾಗಿವೆ.

ಕೋವಿಡ್ 19 ಲಸಿಕೆ ಪಡೆಯುವವರಿಗೆ ಸಿಗಲಿದೆ ಉಚಿತ ಕಾರು

ರಷ್ಯಾದಲ್ಲಿ ಜನರಿಗೆ ಮನೆಯಿಂದ ಕೆಲಸ ಮಾಡುವಂತೆ ಅಥವಾ ರಜೆ ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಕರೋನಾದಿಂದ ಸುರಕ್ಷಿತವಾಗಿರಲು ಸಾಧ್ಯವಾದಷ್ಟು ಬೇಗ ಲಸಿಕೆ ಪಡೆಯುವಂತೆ ಜನರಿಗೆ ಹೇಳಲಾಗಿದೆ. ರಷ್ಯಾ ಸರ್ಕಾರವು ಡಿಸೆಂಬರ್‌ನಿಂದ ಸ್ಪುಟ್ನಿಕ್ 5 ಲಸಿಕೆಯನ್ನು ನೀಡುತ್ತಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Moscow people to get free car for taking Covid 19 vaccine. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X