ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು!

ಕೇರಳದ ಕೋಯಿಕೋಡ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಕೋಯಿಕೋಡ್‌ ವಿಮಾನ ನಿಲ್ದಾಣದಲ್ಲಿದ್ದ ಅಪಾಯಕಾರಿ ರನ್‌ವೇ ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಟೇಬಲ್ ಟಾಪ್ ರನ್‌ವೇ ಹೊಂದಿದ್ದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಘಟನೆ ನಂತರ ಜನರು ಟೇಬಲ್ ಟಾಪ್ ರನ್‌ವೇ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಟೇಬಲ್ ಟಾಪ್ ರನ್‌ವೇಗಳು ಎಂದರೆ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸಾಮಾನ್ಯವಾಗಿ ಹೆಚ್ಚಿನ ರನ್‌ವೇಗಳು ಸಮತಟ್ಟಾಗಿರುತ್ತವೆ. ಆದರೆ ಟೇಬಲ್ ಟಾಪ್ ರನ್‌ವೇಗಳನ್ನು ಬೆಟ್ಟಗಳ ಮೇಲೆ ನಿರ್ಮಿಸಲಾಗಿರುತ್ತದೆ. ಈ ಕಾರಣಕ್ಕೆ ಟೇಬಲ್ ಟಾಪ್ ರನ್‌ವೇಗಳಲ್ಲಿ ಲ್ಯಾಂಡಿಂಗ್ ಹಾಗೂ ಟೀಕ್ ಆಫ್ ಗಳು ಅಪಾಯವನ್ನು ಎದುರಿಸುತ್ತವೆ.

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಕೋಯಿಕೋಡ್‌ನಂತೆ ವಿಶ್ವದ ವಿವಿಧ ವಿಮಾನ ನಿಲ್ದಾಣಗಳು ಅತ್ಯಂತ ಅಪಾಯಕಾರಿ ರನ್‌ವೇಗಳನ್ನು ಹೊಂದಿವೆ. ಈ ರನ್‌ವೇಗಳಲ್ಲಿ, ವಿಮಾನಗಳು ಲ್ಯಾಂಡಿಂಗ್ ಹಾಗೂ ಟೀಕ್ ಆಫ್ ಆಗುವಾಗ ಮೈ ಜುಮ್ಮೆನಿಸುತ್ತದೆ.ಈ ಲೇಖನದಲ್ಲಿ ವಿಶ್ವದ ವಿವಿಧ ಅಪಾಯಕಾರಿ ವಿಮಾನ ನಿಲ್ದಾಣಗಳು ಹಾಗೂ ರನ್‌ವೇಗಳ ಬಗೆಗಿನ ಮಾಹಿತಿಯನ್ನು ತಿಳಿದುಕೊಳ್ಳೊಣ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಕೊರ್ಚೆವೆಲ್ ವಿಮಾನ ನಿಲ್ದಾಣ, ಫ್ರಾನ್ಸ್

ಇದು ವಿಶ್ವದಲ್ಲಿಯೇ ಅತಿ ಚಿಕ್ಕ ರನ್‌ವೇ ಹೊಂದಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ಈ ವಿಮಾನ ನಿಲ್ದಾಣದ ರನ್‌ವೇಯ ಉದ್ದ ಕೇವಲ 537 ಮೀಟರ್. ಆಲ್ಪ್ಸ್ ಪರ್ವತಗಳಲ್ಲಿ ಹಾರಾಡಲು ಬಯಸುವವರಿಗಾಗಿ ಈ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ.

ಚಿತ್ರ ಕೃಪೆ: Hugues Mitton/ Wiki Commons

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಲುಕ್ಲಾ ವಿಮಾನ ನಿಲ್ದಾಣ, ನೇಪಾಳ

ಲುಕ್ಲಾ ವಿಮಾನ ನಿಲ್ದಾಣವು ನೇಪಾಳದ ಸೋಲುಕುಂಬು ಜಿಲ್ಲೆಯಲ್ಲಿದೆ. ಈ ವಿಮಾನ ನಿಲ್ದಾಣವನ್ನು 2008ರ ಜನವರಿಯಲ್ಲಿ ಟೆನ್ಜಿಂಗ್-ಹಿಲರಿ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಯಿತು. ಹಿಮಾಲಯ ಪರ್ವತವನ್ನು ಮೊದಲ ಬಾರಿಗೆ ಏರಿದ ಟೆನ್ಜಿಂಗ್-ಹಿಲರಿ ಅವರ ಗೌರವಾರ್ಥ, ಅವರುಗಳ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ.

ಚಿತ್ರ ಕೃಪೆ: Smallufo/ Wiki Commons

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಈ ವಿಮಾನ ನಿಲ್ದಾಣವನ್ನು ಎವರೆಸ್ಟ್ ಶಿಖರಕ್ಕೆ ಭೇಟಿ ನೀಡುವವರು ಬಳಸುತ್ತಾರೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ. ವಿಮಾನ ನಿಲ್ದಾಣವು ಸುಮಾರು 8,000 ಅಡಿ (2,438 ಮೀಟರ್) ಎತ್ತರದಲ್ಲಿದೆ. ಇದರ ರನ್‌ವೇ ತುಂಬಾ ಚಿಕ್ಕದಾಗಿದ್ದು, ಯಾವುದೇ ಅತ್ಯಾಧುನಿಕ ವಾಯು ಸಂಚಾರ ನಿಯಂತ್ರಣ ಸೌಲಭ್ಯಗಳು ಇಲ್ಲಿಲ್ಲ.

ಚಿತ್ರ ಕೃಪೆ: enrique galeano morales/ Wiki Commons

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಟಾಂಕಾಂಟಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೊಂಡುರಾಸ್

ಡೊಂಗೊಂಡಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಹೊಂಡುರಾಸ್‌ನ ರಾಜಧಾನಿಯಾದ ತೆಗುಸಿಗಲ್ಪಾದ ಕೇಂದ್ರದಿಂದ 6 ಕಿ.ಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವನ್ನು ಸಾರ್ವಜನಿಕರಿಗೆ ಮಾತ್ರವಲ್ಲದೇ ಮಿಲಿಟರಿ ಉದ್ದೇಶಗಳಿಗೂ ಬಳಸಲಾಗುತ್ತದೆ. ಜನಪ್ರಿಯ ಟಿವಿ ಕಾರ್ಯಕ್ರಮವೊಂದರಲ್ಲಿ ಈ ವಿಮಾನ ನಿಲ್ದಾಣವನ್ನು ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಉಲ್ಲೇಖಿಸಲಾಗಿದೆ.

ಚಿತ್ರ ಕೃಪೆ: Joao Carlos Medau/ Wiki Commons

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಕಾಂಗೊನ್ಹಾಸ್ ವಿಮಾನ ನಿಲ್ದಾಣ, ಬ್ರೆಜಿಲ್

ಕಾಂಗೊನ್ಹಾಸ್ ವಿಮಾನ ನಿಲ್ದಾಣ ಬ್ರೆಜಿಲ್ ನ ಸಾವ್ ಪಾಲೊದಲ್ಲಿದೆ. ಈ ವಿಮಾನ ನಿಲ್ದಾಣವನ್ನು ಸಾವೊ ಪಾಲೊ ವಿಮಾನ ನಿಲ್ದಾಣವೆಂದೂ ಸಹ ಕರೆಯಲಾಗುತ್ತದೆ. ಈ ವಿಮಾನ ನಿಲ್ದಾಣ ಬ್ರೆಜಿಲ್‌ನ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಜಾರುವ ರನ್‌ವೇಯಿಂದಾಗಿ ಈ ವಿಮಾನ ನಿಲ್ದಾಣವನ್ನು ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣವೆಂದು ಪರಿಗಣಿಸಲಾಗಿದೆ.

ಕೋಯಿಕೋಡ್‌ ವಿಮಾನ ನಿಲ್ದಾಣದಂತಿರುವ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಿವು

ಈ ರನ್‌ವೇಯಿಂದಾಗಿ ಅನೇಕ ಅಪಘಾತಗಳು ಸಂಭವಿಸಿವೆ. ಈ ವಿಮಾನ ನಿಲ್ದಾಣವು ಹೆಚ್ಚುವರಿ ಮಳೆನೀರನ್ನು ಸಂಗ್ರಹಿಸಲು ಸೌಲಭ್ಯಗಳನ್ನು ಅಳವಡಿಸಿ ವಿಮಾನಗಳು ರನ್‌ವೇಗಳಿಗೆ ಅಪ್ಪಳಿಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Most Read Articles

Kannada
English summary
Most dangerous airports like Kozhikode airport. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X