ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.

ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ 'ಎಫ್1' ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು ಇದೀಗ 132 ಕೋಟಿ ಮೌಲ್ಯ ಹೊಂದಿದ್ದು, ಆಟೋ ಮೊಬೈಲ್ ಉದ್ಯಮದಲ್ಲೇ ಹೊಸ ಸಂಚಲನ ಸೃಷ್ಠಿಸಿದೆ.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

2008ರಿಂದ ಎಫ್1 ನಂಬರ್ ಪ್ಲೇಟ್ ಮಾಲೀಕನಾಗಿರುವ ಖಾನ್ ಡಿಸೈನ್ ಮಾಲೀಕ ಅಫ್ಜಲ್ ಖಾನ್ ಇದೀಗ ಅದೇ ನಂಬರ್ ಅನ್ನು ಮಾರಾಟ ಮಾಡುತ್ತಿದ್ದು, ಫ್ಯಾನ್ಸಿ ನಂಬರ್ ಪ್ಲೇಟ್‌ನ ಬೆಲೆಯನ್ನು 132 ಕೋಟಿಗೆ ನಿಗದಿಪಡಿಸಿದ್ದಾನೆ.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

F1 ಎಂಬುದು ಖಾನ್ ಅವರ ಫೇವರಿಟ್ ನಾವೆಲ್ಟಿ ಪ್ಲೇಟ್ ನಂಬರ್ ಆಗಿದ್ದು, ಇದು 109 ವರ್ಷಗಳ ಇತಿಹಾಸವನ್ನು ಹೊಂದಿದೆ. 2008ರಲ್ಲಿ ಖಾನ್ ಅವರು 4,40,000 ಬ್ರಿಟಿಷ್ ಪೌಂಡ್ ನೀಡಿ ( ಅಂದಾಜು 4.5 ಕೋಟಿ ರು.) ಖರೀದಿಸಿದ್ದರು.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಅಂದರೆ 10 ವರ್ಷದೊಳಗೆ 'F1' ನಾವೆಲ್ಟಿ ಪ್ಲೇಟ್ ಮೌಲ್ಯವು ಶೇ.33 ಪಟ್ಟು ದುಪ್ಪಟ್ಟುಗೊಂಡಿದೆ. ಈ ಎಫ್1 ನಂಬರ್ ಪ್ಲೇಟ್ ಅತಿ ದುಬಾರಿ ಬುಕಾಟಿ ವೆರೊನ್ ಹಾಗೂ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎರ್ ಮೆಕ್‌ಲ್ಯಾರೆನ್‌ನಲ್ಲಿ ಆಳವಡಿಸಲಾಗಿದೆ. ಇದರ ಜೊತೆಗೆ ಖಾನ್ ಅವರು '4HRH' ಮತ್ತು 'NO1' ನಂಬರ್‌ನ ಹೆಮ್ಮೆಯ ಮಾಲೀಕರೂ ಕೂಡಾ ಆಗಿದ್ದಾರೆ.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಅಂದಹಾಗೆ ಇದು ಮೊದಲ ಬಾರಿಯೇನಲ್ಲ. ಇಂತಹದ್ದೆ ಘಟನೆ ಈ ಹಿಂದೆ ಸಯೀದ್ ಖೋರಿ ಎಂಬ ಅಬುದಾಬಿ ಉದ್ಯಮಿ ಯುನೈಟೈಡ್ ಅರಬ್ ಎಮಿರೇಟ್ಸ್‌‌ಗೆ 70 ಕೋಟಿ ನೀಡಿ ರುಪಾಯಿ ನೀಡಿ '1' ಫ್ಯಾನ್ಸಿ ನಂಬರ್ ಖರೀದಿಸಿದ್ದರು. ಇದುವರೆಗೂ ಇದೇ ಜಗತ್ತಿನ ಅತಿ ದುಬಾರಿ ನಂಬರ್ ಪ್ಲೇಟ್ ಖರೀದಿಯಾಗಿತ್ತು.

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಆದರೆ ಇದನ್ನು ಹಿಂದಿಕ್ಕಿಲಿರುವ ಬ್ರಿಟನ್ ಜನಪ್ರಿಯ ಎಫ್1 ನಂಬರ್ ಪ್ಲೇಟ್ ಇದೀಗ 132 ಕೋಟಿ ಆರಂಭಿಕ ಬೆಲೆ ಹೊಂದಿದ್ದು, ಇದು ಹರಾಜು ವೇಳೆ ಇನ್ನು ಹೆಚ್ಚಾಗುವ ಸಾಧ್ಯತೆಗಳು ಕೂಡಾ ಇವೆ. ಇನ್ನು ಹೊಸ ಫ್ಯಾನ್ಸಿ ನಂಬರ್ ಖರೀದಿಸುವ ಕಾರು ಮಾಲೀಕನು ಮುಂದಿನ ಐದು ವರ್ಷಗಳ ಅವಧಿಗೆ ಆ ನಂಬರ್ ಮೇಲೆ ಅವರು ಅಧಿಕಾರ ಹೊಂದಿರುತ್ತಾರೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ತದನಂತರ ಅವರು ಹೆಚ್ಚುವರಿ ಮೊತ್ತಕ್ಕೆ ಮಾರಾಟ ಮಾಡಬಹುದಾಗಿದ್ದು, ಇಲ್ಲವೇ ಹೆಚ್ಚುವರಿ ಮೊತ್ತ ಪಾವತಿಸಿ ಅದೇ ನಂಬರ್ ಪ್ಲೇಟ್ ಅನ್ನು ಮುಂದುವರಿಸುವ ಅವಕಾಶ ಕೂಡಾ ಇರುತ್ತದೆ. ಆದ್ರೆ ಅದೇನೇ ಇರಲಿ ಒಂದು ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ನೂರಾರು ಕೋಟಿ ವ್ಯಯ ಮಾಡುವ ಜನ ಇದ್ದಾರೆ ಅಲ್ಲಾ ಅನ್ನೋದೆ ವಿಚಿತ್ರ ಅನಿಸುತ್ತೆ. ಆದ್ರೂ ಇದು ಸತ್ಯ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಮಾರಾಟಕ್ಕಿರುವ 132 ಕೋಟಿ ಮೌಲ್ಯದ ಈ ನಂಬರ್ ಪ್ಲೇಟ್‌ ವಿಶೇಷತೆ ಏನು?

ಇನ್ನೊಂದು ವಿಚಾರ ಅಂದ್ರೆ ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಬುಗಾಟಿಯು ಕೆಲದಿನಗಳ ಹಿಂದಷ್ಟೇ ಹೊಸ ಚಿರೊನ್ ಸ್ಪೋರ್ಟ್ ಕಾರನ್ನು ಬಿಡುಗಡೆಗೊಳಿಸಿದ್ದು, ಬರೋಬ್ಬರಿ 40 ಕೋಟಿ ಬೆಲೆ ಹೊಂದುವ ಮೂಲಕ ಜಗತ್ತಿನ ಸೂಪರ್ ಕಾರುಗಳಲ್ಲೇ ವಿಶೇಷ ಮಾದರಿ ಎನಿಸಿದೆ.

Most Read Articles

Kannada
Read more on fancy number number plate
English summary
World's Most Expensive Car Number Plate On Sale In UK For Rs 132 Crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X