Just In
Don't Miss!
- News
ಮರ್ಯಾದೆ ಇದ್ದರೆ ಜನತೆ ಕ್ಷಮೆ ಕೇಳಿ: ಸಿದ್ದು ವಿರುದ್ದ ಸೊಗಡು ಶಿವಣ್ಣ ವಾಗ್ದಾಳಿ
- Movies
ಬಾಲಿವುಡ್ ನಲ್ಲಿ ಬರ್ತಿದೆ ಕನ್ನಡದ 'ಯು ಟರ್ನ್': ನಾಯಕಿ ಇವರೇ
- Technology
ಜಿ-ಮೇಲ್ ಬಳಕೆದಾರರಿಗೆ ಹೊಸ ಫೀಚರ್ಸ್ ಪರಿಚಯಿಸಿದ ಗೂಗಲ್!
- Lifestyle
2019ರಲ್ಲಿ ತುಂಬಾ ಸದ್ದು ಮಾಡಿದ ಟ್ವೀಟ್, ಹ್ಯಾಶ್ಟ್ಯಾಗ್, ಇಮೋಜಿಗಳು ಇವೇ ನೋಡಿ
- Travel
ಬೀಚ್ಗೆ ಹೋಗುವ ಮುನ್ನ ಈ ಸಂಗತಿಗಳು ನೆನಪಿನಲ್ಲಿರಲಿ
- Sports
ಕ್ರಿಕೆಟ್ನಿಂದ ದೂರವಿರುವ ಧೋನಿ ಸೈನಿಕರಿಗಾಗಿ ಮಾಡುತ್ತಿರೋದೇನು!
- Finance
ಗುಡ್ ರಿಟರ್ನ್ ವೃತ್ತಿ ಮಾರ್ಗದರ್ಶಿ: ಅಡುಗೆ ಕಾಂಟ್ರ್ಯಾಕ್ಟ್ ಬಗ್ಗೆ ಇಂಚಿಂಚು ಮಾಹಿತಿ
- Education
HAL Recruitment 2019: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜಾತಿ ಸ್ಟಿಕ್ಕರ್ ಹೊಂದಿದ್ದ ವಾಹನಗಳಿಗೆ ಬಿತ್ತು ದಂಡ
ಈ ವರ್ಷದ ಜುಲೈ ತಿಂಗಳಿನಲ್ಲಿ, ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಪೊಲೀಸರು ಎರಡು ದಿನಗಳ ಕಾಲ ವಿಶೇಷ ಕಾರ್ಯಾಚರಣೆ ನಡೆಸಿ 1,500 ಜನರಿಗೆ ದಂಡ ವಿಧಿಸಿದ್ದರು. ನಂಬರ್ ಪ್ಲೇಟ್‍ಗಳ ಮೇಲೆ ಜಾತಿಯ ಸ್ಟಿಕ್ಕರ್ ಹಾಗೂ ಬೇರೆ ರೀತಿಯ ಫಲಕಗಳನ್ನು ಹೊಂದಿದ್ದ ವಾಹನಗಳಿಗೆ ದಂಡ ವಿಧಿಸಲಾಗಿತ್ತು.

ನೋಯ್ಡಾ ಪೊಲೀಸರು ಮತ್ತೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಒಂದೇ ದಿನದಲ್ಲಿ 250ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಿದ್ದಾರೆ. ನೋಯ್ಡಾ ಪೊಲೀಸರು ಅಕ್ರಮ ಬರಹ ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದರು.

ಜನಪ್ರಿಯ ಬಾಲಿವುಡ್ ಚಿತ್ರ ದಬಾಂಗ್ ಸೇರಿದಂತೆ ವಿವಿಧ ರೀತಿಯ ಬರಹಗಳನ್ನು ಹೊಂದಿದ್ದ ವಾಹನಗಳಿಗೆ ದಂಡ ವಿಧಿಸಲಾಯಿತು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕಾರಣಕ್ಕೆ ಈ ವಿಶೇಷ ಕಾರ್ಯಾಚರಣೆಗೆ ದೀಪಾವಳಿಗೂ ಮುನ್ನವೇ ಚಾಲನೆ ನೀಡಲಾಯಿತು.

ಯಾವುದೇ ರೀತಿಯ ಬರಹಗಳು ವಾಹನದ ನಂಬರ್ ಪ್ಲೇಟ್‍ನಲ್ಲಿ ಮಾತ್ರ ಇರಬೇಕಾಗಿಲ್ಲ, ವಾಹನದ ವಿಂಡ್‌ಸ್ಕ್ರೀನ್‌ನಲ್ಲಿದ್ದರೂ ದಂಡ ವಿಧಿಸಲಾಯಿತು. ನೋಯ್ಡಾ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ವೈಭವ್ ಶರ್ಮಾರವರು ಮಾತನಾಡಿ, ನಂಬರ್ ಪ್ಲೇಟ್‌ಗಳಲ್ಲಿ ಆಕ್ರಮಣಕಾರಿ ಬರಹ ಅಥವಾ ಜಾತಿಗೆ ಸಂಬಂಧಪಟ್ಟ ಪದಗಳನ್ನು ಬರೆಯುವ ಅಭ್ಯಾಸವನ್ನು ನಿಲ್ಲಿಸಬೇಕಾಗಿದೆ.

ಇಂತಹ ಬರಹಗಳು ವಾಹನ ಚಾಲಕರಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತವೆ. ಅವು ರಸ್ತೆಯಲ್ಲಿ ಸಂಚರಿಸುವವರಿಗೆ ಕಿರಿಕಿರಿ ನೀಡುತ್ತವೆ. ಆದ್ದರಿಂದ ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದರು.

ವರದಿಗಳ ಪ್ರಕಾರ, ನೋಯ್ಡಾ ಪೊಲೀಸರು 250ಕ್ಕೂ ಹೆಚ್ಚು ಬೈಕ್ ಸವಾರರು ಹಾಗೂ ಕಾರು ಚಾಲಕರಿಗೆ ದಂಡ ವಿಧಿಸಿದ್ದಾರೆ. ಡ್ರೈವ್ ಅನ್ನು ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾ ಪ್ರದೇಶಗಳಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಾಚರಣೆಯು ಆಪರೇಷನ್ ಕ್ಲೀನ್‍ನ ಭಾಗವಾಗಿದ್ದು, ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿದೆ. ತಮ್ಮ ವಾಹನಗಳಲ್ಲಿ ಜಾತಿಗೆ ಸಂಬಂಧಪಟ್ಟ ಬರಹಗಳನ್ನು ಹೊಂದಿದ್ದ 113 ವಾಹನ ಚಾಲಕರಿಗೆ ದಂಡ ವಿಧಿಸಲಾಯಿತು.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಈ ಪೈಕಿ ನಗರ ಪ್ರದೇಶದಲ್ಲಿ 100 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 91 ಜನರ ವಿರುದ್ಧ ತಮ್ಮ ವಾಹನಗಳಲ್ಲಿ ಆಕ್ರಮಣಕಾರಿ ಪದಗಳನ್ನು ಪ್ರದರ್ಶಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 78 ವಾಹನ ಚಾಲಕರು ನಗರ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ.
MOST READ: ಮೈಲಿಗಲ್ಲುಗಳ ಬಣ್ಣದ ಹಿಂದಿರುವ ಕಾರಣಗಳೇನು ಗೊತ್ತಾ?

ಸಂಖ್ಯೆಗಳನ್ನು ಪದದಂತೆ ಕಾಣುವಂತೆ ನಂಬರ್ ಪ್ಲೇಟ್‍ಗಳನ್ನು ತಿದ್ದಿರುವುದಕ್ಕೆ 50 ಜನರಿಗೆ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ರಿಜಿಸ್ಟ್ರೇಶನ್ ಪ್ಲೇಟ್‍ಗಳಲ್ಲಿ ನಂಬರ್‌ದಾರ್ ಹಾಗೂ ಅಪ್ಪನ ಉಡುಗೊರೆ ಎಂಬ ವಿವಿಧ ರೀತಿಯ ಬರಹಗಳನ್ನು ಹೊಂದಿದ್ದವರಿಗೂ ದಂಡ ವಿಧಿಸಲಾಗಿದೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಪೊಲೀಸರು ಈ ದಂಡದ ದಾಖಲೆಯನ್ನು ತಮ್ಮ ಬಳಿ ಇಟ್ಟುಕೊಳ್ಳಲಿದ್ದಾರೆ. ಮೊದಲ ಬಾರಿಯ ಉಲ್ಲಂಘನೆಗೆ ರೂ.300 ದಂಡ ವಿಧಿಸಿದರೆ, ಎರಡನೇ ಬಾರಿಗೆ ರೂ.500 ದಂಡ ವಿಧಿಸಲಾಗುತ್ತದೆ. 138 ಬೈಕುಗಳು ಸೇರಿದಂತೆ ಇತರ 150 ವಾಹನಗಳಿಗೆ ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ.

ನಂಬರ್ ಪ್ಲೇಟ್‌ಗಳನ್ನು ಟ್ಯಾಂಪರ್ ಮಾಡುವುದು ಕಾನೂನುಬಾಹಿರವೆಂದು ಪೊಲೀಸರು ತಿಳಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ಹಾಗೂ 1989ರ ಮೋಟಾರು ವಾಹನ ಕಾಯ್ದೆಯ ನಿಯಮ 50 ಮತ್ತು 51 ರ ಅಡಿಯಲ್ಲಿ, ನಂಬರ್ ಪ್ಲೇಟ್‍ನಲ್ಲಿ ರಿಜಿಸ್ಟ್ರೇಶನ್ ನಂಬರ್ ಅನ್ನು ಹೊರತುಪಡಿಸಿ ಬೇರೆ ಯಾವುದೇ ಬರಹಗಳಿರಬಾರದು.

ಈ ಕಾರ್ಯಾಚರಣೆಯು ಮುಂದಿನ ಹಲವು ದಿನಗಳವರೆಗೂ ಮುಂದುವರೆಯಲಿದ್ದು, ಧಾರ್ಮಿಕ ಸ್ಲೋಗನ್‍ಗಳನ್ನು ತಮ್ಮ ವಾಹನಗಳಲ್ಲಿ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.