ತೆರಿಗೆ ವಂಚನೆ; ಮಹೇಂದ್ರ ಸಿಂಗ್ ಧೋನಿಗೆ ಕಂಟಕ?

By Nagaraja

ಸದ್ಯ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ಬ್ಯೂಸಿಯಾಗಿರುವ ಮಹೇಂದ್ರ ಸಿಂಗ್ ಧೋನಿ ಮಗದೊಂದು ಕಂಟಕಕ್ಕೆ ಸಿಲುಕಿದ್ದಾರೆ. ರಾಂಚಿ ಸಾರಿಗೆ ಇಲಾಖೆ ಕಚೇರಿಯ ಎಡವಟ್ಟಿನಿಂದಾಗಿಮಹೇಂದ್ರ ಸಿಂಗ್ ಧೋನಿ ಅವರ ಕೋಟಿ ಬೆಲೆ ಬಾಳುವ ಹಮ್ಮರ್ ಎಚ್2 ವಾಹನವು ಸ್ಕಾರ್ಪಿಯೊ ಎಂಬ ಹೆಸರಿನಲ್ಲಿ ದಾಖಲಾತಿಗೊಂಡಿದ್ದು, ಭಾರಿ ತೆರಿಗೆ ವಂಚನೆ ದಾಖಲಾಗಿದೆ.

Also Read: ಧೋನಿ ಮೊದಲ ಬೈಕ್ ರಿಪೇರಿ ಮಾಡಲು ಯಾರಿಂದ ಸಾಧ್ಯ?

ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ರಾಂಚಿ ಸಾರಿಗೆ ಇಲಾಖೆಯು ಧೋನಿ ವಾಹನವು ತಪ್ಪಾಗಿ ಸ್ಕಾರ್ಪಿಯೊ ಎಂದು ದಾಖಲಾಗಿದ್ದು, ಈಗ ಏಕಕಾಲಿಕ ತೆರಿಗೆ ಮತ್ತು ದಂಡ ಪಾವತಿಸುವಂತೆ ಸೂಚಿಸಿದೆ.

ಏನಿದು ಘಟನೆ?

ಏನಿದು ಘಟನೆ?

ಮಹೇಂದ್ರ ಸಿಂಗ್ ಧೋನಿ ಅವರು ವಿದೇಶದಿಂದ ಆಮದು ಮಾಡಿರುವ ಮಾಡಿರುವ ಕೋಟಿ ಬೆಲೆ ಬಾಳುವ ಹಮ್ಮರ್ ಕಾರನ್ನು ರಾಂಚಿ ಜಿಲ್ಲಾ ಸಾರಿಗೆ ಇಲಾಖೆಯು 2009ನೇ ಇಸವಿಯಲ್ಲಿ ದಾಖಲಾತಿ ಮಾಡಿಕೊಂಡಿತ್ತು.

ತೆರಿಗೆ ವಂಚನೆ; ಮಹೇಂದ್ರ ಸಿಂಗ್ ಧೋನಿಗೆ ಕಂಟಕ?

ಬಳಿಕ 2012ನೇ ಸಾಲಿನಲ್ಲಿ ತೆರಿಗೆ ನವೀಕರಿಸುವಾಗ ಅಲ್ಲಿನ ಉದ್ಯೋಗಿಗಳ ಕಣ್ತಪ್ಪಿನಿಂದಾಗಿ ಹಮ್ಮರ್ ಎಂಬುದರ ಬದಲಾಗಿ ಸ್ಕಾರ್ಪಿಯೊ ಹೆಸರಿನಲ್ಲಿ ದಾಖಲಾತಿ ನಡೆದಿತ್ತು.

ತೆರಿಗೆ ವಂಚನೆ; ಮಹೇಂದ್ರ ಸಿಂಗ್ ಧೋನಿಗೆ ಕಂಟಕ?

ವಿಶ್ವದ ಅತಿ ದುಬಾರಿ ಕ್ರೀಡಾಪಟುಗಳಲ್ಲಿ ಓರ್ವರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ಅಮೆರಿಕದಿಂದ ಆಮದು ಮಾಡಲಾಗಿರುವ ಹಮ್ಮರ್ ಎಚ್2 75 ಲಕ್ಷ ರು.ಗಳಿಂದ ಒಂದು ಕೋಟಿ ರುಪಾಯಿಗಳ ವರೆಗೆ ಬೆಲೆ ಬಾಳುತ್ತಿದೆ.

ತೆರಿಗೆ ವಂಚನೆ; ಮಹೇಂದ್ರ ಸಿಂಗ್ ಧೋನಿಗೆ ಕಂಟಕ?

2011ರ ಮೋಟಾರು ವಾಹನ ಕಾಯ್ದೆಯಲ್ಲಿ ತೆರಿಗೆ ಪಾವತಿಯನ್ನು ಏಕಕಾಲಿಕವಾಗಿ ಜಾರಿಗೆ ತರಲಾಯಿತು. ಇದರಂತೆ ಧೋನಿ ಈಗ ಹೆಚ್ಚುವರಿ ದಂಡ ಹೊರತಾಗಿ ಗಾಡಿಯ ಒಟ್ಟು ಮೊತ್ತದ ಶೇಕಡಾ 4ರಷ್ಟು ಅಂದರೆ ಸರಿ ಸುಮಾರು 4 ಲಕ್ಷ ರುಪಾಯಿಗಳನ್ನು ಪಾವತಿಸಬೇಕಾಗಿದೆ.

ತೆರಿಗೆ ವಂಚನೆ; ಮಹೇಂದ್ರ ಸಿಂಗ್ ಧೋನಿಗೆ ಕಂಟಕ?

ಸಾರಿಗೆ ಇಲಾಖೆಯ ಪ್ರಕಾರ 2010ರ ವರೆಗೆ ಧೋನಿ ತೆರಿಗೆ ಪಾವತಿ ಮಾಡಿದ್ದಾರೆ. ಈಗ ಏಕಕಾಲಿಕ ತೆರಿಗೆ ಮತ್ತು ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗಿದೆ ಎಂದಿದೆ.

ತೆರಿಗೆ ವಂಚನೆ; ಮಹೇಂದ್ರ ಸಿಂಗ್ ಧೋನಿಗೆ ಕಂಟಕ?

ಆನ್ ಲೈನ್ ನಲ್ಲಿ ಧೋನಿ ಹಮ್ಮರ್ ಕಾರಿನ ವಿವರಗಳನ್ನು ದಾಖಲಿಸುವ ವೇಳೆ ಎಡವಟ್ಟು ಸಂಭವಿಸಿದೆ. ವಿದೇಶದಿಂದ ಆಮದು ಮಾಡಲಾದ ಹಮ್ಮರ್ ದೇಶೀಯ ವಾಹನಗಳ ಪಟ್ಟಿಯಲ್ಲಿರಲಿಲ್ಲ. ಇದರಿಂದಾಗಿ ತಪ್ಪು ಸಂಭವಿಸಿದ್ದು, ಹಮ್ಮರ್ ಕಾರನ್ನು ಸ್ಕಾರ್ಪಿಯೊ ವಿಭಾಗದಲ್ಲಿ ಸೇರಿಸಲಾಗಿತ್ತು.

ಇವನ್ನೂ ಓದಿ

ಕೂಲ್ ಕಪ್ತಾನ ಧೋನಿಯ ಪವರ್ ಫುಲ್ ಕಾರು ಕಲೆಕ್ಷನ್

Most Read Articles

Kannada
English summary
MS Dhoni will have to pay a one-time tax and penalty for his Hummer H2
Story first published: Friday, March 18, 2016, 13:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X