ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ದೇಶದ ಅತಿ ಶ್ರೀಮಂತ ಉದ್ಯಮಿಗಳಲ್ಲಿ ಓರ್ವರಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರು ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮವಾಗಿ ನಿಂತಿದ್ದಾರೆ. ಹ್ಹಾಂ, ಅದೇಗೆ ಅಂತೀರಾ? ಈ ಸ್ಟೋರಿ ತಪ್ಪದೇ ಓದಿ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಝೆಡ್ ಪ್ಲಸ್ ಸೆಕ್ಯೂರಿಟಿ ಸುರಕ್ಷತೆಯನ್ನು ಪಡೆದುಕೊಂಡ ಕೆಲವೇ ಕೆಲವು ಉದ್ಯಮಿಗಳಲ್ಲಿ ಪ್ರಪಂಚದ ಅತಿ ದೊಡ್ಡ ಉದ್ಯಮ ಸಂಸ್ಥೆಯಾಗಿರುವ ರಿಲಯನ್ಸ್ ಕಂಪನಿಯ ಒಡೆಯ ಮುಕೇಶ್ ಅಂಬಾನಿ ಕೂಡ ಒಬ್ಬರು. ಅವರ ಬೆಂಗಾವಲು ಪಡೆಯು ದೇಶದ ಪ್ರಧಾನಿಗೆ ನೀಡುತ್ತಿರುವ ಭದ್ರತೆಗೆ ಸಮಾನಾಗಿದೆ ಅಂದ್ರೆ ನೀವು ನಂಬಲೇಬೇಕು.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಹೌದು, ತಮ್ಮ ಖಾಸಗಿ ಭದ್ರತೆಯ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೆ ಸಮವಾಗಿ ನಿಂತಿರುವ ಮುಕೇಶ್ ಅಂಬಾನಿಯವರು ಈ ಹಿಂದೆ ಅತಿ ದುಬಾರಿ ಹಾಗೂ ಅಷ್ಟೇ ಗರಿಷ್ಠ ಭದ್ರತೆಯನ್ನು ನೀಡಲು ಸಮರ್ಥವಾಗಿರುವ ಬಿಎಂಡಬ್ಲ್ಯು 7 ಸಿರೀಸ್ ಹೈ ಸೆಕ್ಯೂರಿಟಿ ಕಾರು ಖರೀದಿಸಿದ್ದರು. ಇದೀಗ ತಮ್ಮ ಭದ್ರತೆಯಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದಾರೆ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಭದ್ರತೆಗಾಗಿ ಪ್ರತಿ ತಿಂಗಳು ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಬಹುತೇಕರಿಗೆ ಗೊತ್ತಿರುವ ವಿಚಾರ. ಕಳೆದ ತಿಂಗಳ ಹಿಂದಷ್ಟೇ ತಮ್ಮ ಪುತ್ರರ ಭದ್ರತೆಗಾಗಿಯೇ ನೂತನ ಲ್ಯಾಂಡ್ ರೋವರ್ ಮತ್ತು ರೇಂಜ್ ರೋವರ್ ಕಾರುಗಳನ್ನು ಖರೀದಿಸಿದ್ದ ಮುಕೇಶ್ ಅಂಬಾನಿಯವರು ಇದೀಗ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ದಾರೆ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಹೌದು, ಉದ್ಯಮಿ ಮುಕೇಶ್ ಅಂಬಾನಿಯವರ ಭದ್ರತೆಗಾಗಿ ಈಗಾಗಲೇ ಜೆಡ್ ಪ್ಲಸ್ ಸುರಕ್ಷತೆಯಿದ್ದು, ಮೂಲಗಳ ಪ್ರಕಾರ ಕೇವಲ ಸುರಕ್ಷತೆಗಾಗಿಯೇ ಪ್ರತಿ ವರ್ಷ ಬರೋಬ್ಬರಿ 30 ಕೋಟಿ ಖರ್ಚು ಮಾಡುತ್ತಿರುವ ಅಂಬಾನಿ ಕುಟುಂಬವು ಇದೀಗ ಮತ್ತೊಂದು ಐಷಾರಾಮಿ ಭದ್ರತಾ ಕಾರು ಮಾದರಿಯನ್ನು ಖರೀದಿ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಕೇವಲ ಸೆಕ್ಯೂರಿಟಿ ಗಾರ್ಡ್‌ಗಳು ಬಳಕೆ ಮಾಡಲೆಂದೇ ಹತ್ತಾರು ಲ್ಯಾಂಡ್ ರೋವರ್ & ರೇಂಜ್ ರೋವರ್ ಕಾರುಗಳನ್ನು ನೀಡಿರುವ ಮುಕೇಶ್ ಅಂಬಾನಿಯವರು ಸ್ವಂತಕ್ಕೆ ಓಡಾಡುವ ಕಾರು ಹೇಗಿರಬಹುದು ಎಂದು ನೀವು ಉಹಿಸಲು ಕಷ್ಟ ಸಾಧ್ಯ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಈಗಾಗಲೇ ವಿಶ್ವದರ್ಜೆ ಸುರಕ್ಷೆ ಹೊಂದಿರುವ ಹಲವು ಐಷಾರಾಮಿ ಕಾರುಗಳನ್ನು ಹೊಂದಿರುವ ಮುಖೇಶ್ ಅಂಬಾನಿಯವರು ಸಂದರ್ಭಕ್ಕೆ ತಕ್ಕಂತೆ ವಿವಿಧ ಮಾದರಿಯ ಸುರಕ್ಷಾ ಸೌಲಭ್ಯವುಳ್ಳ ಕಾರುಗಳನ್ನು ಬಳಕೆ ಮಾಡುತ್ತಿದ್ದು, ಇದೀಗ ವಿಶ್ವದ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಮರ್ಸಿಡಿಸ್ ಬೆಂಝ್ ಡಬ್ಲ್ಯು221 ಎಸ್ ಗಾರ್ಡ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಜರ್ಮನ್ ಬ್ರಾಂಡ್ ಮರ್ಸಿಡಿಸ್ ಬೆಂಝ್ ಸಂಸ್ಥೆಯು ವಿಶೇಷವಾಗಿ ವಿವಿಐಪಿ ವ್ಯಕ್ತಿಗಳಿಗಾಗಿಯೇ ಅತಿಹೆಚ್ಚು ಸುರಕ್ಷಾ ಸೌಲಭ್ಯಗಳನ್ನು ಒದಗಿಸಿ ಡಬ್ಲ್ಯು221 ಎಸ್ ಗಾರ್ಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಬಾಂಬ್ ದಾಳಿ, ಅಗ್ನಿಅವಘಡಗಳಿಂದ ಸಂಪೂರ್ಣ ಸುರಕ್ಷತೆಯನ್ನು ಪಡೆದಿರುತ್ತೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

2017ರಲ್ಲೇ ಡಬ್ಲ್ಯು221 ಎಸ್ ಗಾರ್ಡ್ ಕಾರಿಗೆ ಬುಕ್ಕಿಂಗ್ ಮಾಡಿದ್ದ ಮುಕೇಶ್ ಅಂಬಾನಿಯವರಿಗೆ ಇದೀಗ ಹೊಸ ಕಾರನ್ನು ಒದಗಿಸಲಾಗಿದ್ದು, ಬುಕ್ಕಿಂಗ್ ಮಾಡಿದ ಒಂದೂವರೆ ವರ್ಷದ ನಂತರ ನೀಡಲಾಗಿದೆ. ಕಾರಣ, ಬುಕ್ಕಿಂಗ್ ನಂತರವೇ ಕಾರು ಉತ್ಪಾದನೆಯನ್ನು ಆರಂಭಿಸುವ ಮರ್ಸಿಡಿಸ್ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಕಾರಿನ ಡಿಸೈನ್ ಮತ್ತು ಒಳಭಾಗದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡುತ್ತೆ.

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಹೀಗಾಗಿ ಅಂಬಾನಿ ಗ್ಯಾರೇಜ್ ಸೇರಿರುವ ಹೊಸ ಡಬ್ಲ್ಯು221 ಎಸ್ ಗಾರ್ಡ್ ಕಾರು ಕೂಡಾ ವಿಶ್ವದರ್ಜೆಯ ಹಲವಾರು ಸುರಕ್ಷಾ ಮಾದರಿಗಳನ್ನು ಅಳವಡಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಈ ಕಾರು ಚಕ್ರಗಳಲ್ಲಿ ಏರ್ ಇಲ್ಲದ್ದಿದ್ದರೂ ಪ್ರತಿ ಗಂಟೆಗೆ 80 ಕಿ.ಮಿ ವೇಗದಲ್ಲಿ ಚಲಿಸುವ ಗುಣವೈಶಿಷ್ಟ್ಯತೆಯನ್ನು ಪಡೆದುಕೊಂಡಿವೆ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಇದರೊಂದಿಗೆ ಕಾರಿನ ಬೆಲೆಯು ಕೂಡಾ ತುಸು ದುಬಾರಿ ಎನ್ನಿಸಲಿದ್ದು, ಸಾಮಾನ್ಯ ಮಾದರಿಯ ಡಬ್ಲ್ಯು221 ಎಸ್ ಗಾರ್ಡ್ ಕಾರಿನ ಬೆಲೆಯೇ ರೂ. 8 ಕೋಟಿಯಿಂದ 9 ಕೋಟಿಯಾಗುತ್ತೆ. ಹೀಗಿರುವಾಗ ಮುಕೇಶ್ ಅಂಬಾನಿಯವರು ಕಾರನ್ನು ವಿಶೇಷ ಸುರಕ್ಷಾ ಸೌಲಭ್ಯಗಳಿಂದ ಮಾಡಿಫೈ ಮಾಡಿಸಲಾಗಿದ್ದು, ಹೆಚ್ಚುವರಿ ಎರಡೂವರೆಯಿಂದ ಮೂರು ಕೋಟಿ ರೂಪಾಯಿ ಬೆಲೆ ಪಡೆದಿರುತ್ತೆ.

Source: Su Lats

Most Read Articles

Kannada
English summary
Mukesh Ambani’s most EXPENSIVE car is here, & it’s an ULTRA safe Mercedes Benz S-Guard. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X